SP Chamarajanagar

SP Chamarajanagar ಚಾಮರಾಜನಗರ ಜಿಲ್ಲಾ ಪೊಲೀಸ್ ಘಟಕವು ಸಾಮಾಜಿಕ ಜಾಲತಾಣಗಳ ಮೂಲಕವು ಸಹ ಸದಾ ನಿಮ್ಮ ಸೇವೆಯಲ್ಲಿದೆ.

🚨ತುರ್ತು ಸಂದರ್ಭ ಯಾವುದೇ ಇರಲಿ 112 ಕರೆ ಮಾಡಿ 112 ಸಂಖ್ಯೆ ಗೆ ಕರೆ ಮಾಡಿ 🚨

ಈ ದಿನ ದಿನಾಂಕ:05-06-2026 ರಂದು ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು, ದಕ್ಷಿಣ ವಲಯ, ಮೈಸೂರು ರವರು ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿ, ಜಿಲ್ಲ...
05/06/2026

ಈ ದಿನ ದಿನಾಂಕ:05-06-2026 ರಂದು ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು, ದಕ್ಷಿಣ ವಲಯ, ಮೈಸೂರು ರವರು ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿ, ಜಿಲ್ಲಾ ಪೊಲೀಸ್ ಕಛೇರಿ ಸಭಾಂಗಣದಲ್ಲಿ ಚಾ. ನಗರ ಉಪವಿಭಾಗದ 'ಅಪರಾಧ ಪರಾಮರ್ಶೆ ಸಭೆ' ಕೈಗೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.

ಈ ದಿನ ದಿನಾಂಕ:05-06-2026 ರಂದು "ವಿಶ್ವ ಪರಿಸರ ದಿನಾಚರಣೆ-2026" ರ ಅಂಗವಾಗಿ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಮಾನ್ಯ ಪೊಲೀಸ್ ಮಹಾ ನಿರೀಕ್...
05/06/2026

ಈ ದಿನ ದಿನಾಂಕ:05-06-2026 ರಂದು "ವಿಶ್ವ ಪರಿಸರ ದಿನಾಚರಣೆ-2026" ರ ಅಂಗವಾಗಿ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು, ದಕ್ಷಿಣ ವಲಯ, ಮೈಸೂರು ರವರೊಂದಿಗೆ ಸಸಿ ನೆಡುವುದರ ಮೂಲಕ ಆಚರಣೆ ಮಾಡಲಾಯಿತು.

05/06/2026
ಈ ದಿನ ದಿನಾಂಕ 05-06-2026 ರಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನ, ಡಿ ಎ ಆರ್ ಕೇಂದ್ರಸ್ಥಾನ ಇಲ್ಲಿ  ವಾರದ ಕವಾಯತಿನ ಗೌರವ ವಂದನೆ ಸ್ವೀಕರಿಸಿ, ...
05/06/2026

ಈ ದಿನ ದಿನಾಂಕ 05-06-2026 ರಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನ, ಡಿ ಎ ಆರ್ ಕೇಂದ್ರಸ್ಥಾನ ಇಲ್ಲಿ ವಾರದ ಕವಾಯತಿನ ಗೌರವ ವಂದನೆ ಸ್ವೀಕರಿಸಿ, ಶಿಸ್ತು ಮತ್ತು ಸಂಯಮದಿಂದ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚನೆಗಳನ್ನು ನೀಡಲಾಯಿತು. ನಂತರ ಅಧಿಕಾರಿ/ಸಿಬ್ಬಂದಿರವರುಗಳ ಕುಂದುಕೊರತೆ ವಿಚಾರ ಮಾಡಲಾಯಿತು.

ಬೀಗ ಹಾಕಿದ ಮನೆಗಳ ಸುರಕ್ಷತೆ ಸಲುವಾಗಿ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (LHBS) ನೂತನ ಸುರಕ್ಷತಾ ಉಪಕ್ರಮದಡಿ ಇಂದು ಅಗರ - ಮಾಂಬಳ್ಳಿ ಪೊಲೀಸ್ ಠಾಣಾ...
04/06/2026

ಬೀಗ ಹಾಕಿದ ಮನೆಗಳ ಸುರಕ್ಷತೆ ಸಲುವಾಗಿ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (LHBS) ನೂತನ ಸುರಕ್ಷತಾ ಉಪಕ್ರಮದಡಿ ಇಂದು ಅಗರ - ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಲಾಕ್ಡ್ ಹೌಸ್ ಬೀಟ್ ಸಿಸ್ಟಂ ಜಾಗೃತಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿರುತ್ತಾರೆ.

ಇಂದು ಹನೂರು ಮತ್ತು ರಾಮಾಪುರ ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂದಿರವರು ವಿದ್ಯಾರ್ಥಿಗಳಿಗೆ “ತೆರೆದಮನೆ” ಕಾರ್ಯಕ್ರಮ ಆಯೋಜಿಸಿ ಠಾಣೆಯ ಪೋಕ್ಸೋ ಕ...
04/06/2026

ಇಂದು ಹನೂರು ಮತ್ತು ರಾಮಾಪುರ ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂದಿರವರು ವಿದ್ಯಾರ್ಥಿಗಳಿಗೆ “ತೆರೆದಮನೆ” ಕಾರ್ಯಕ್ರಮ ಆಯೋಜಿಸಿ ಠಾಣೆಯ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಮಾದಕ ದ್ರವ್ಯಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು, ಸೈಬರ್ ಅಪರಾಧಗಳು, ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಅರಿವು ಮೂಡಿಸಿರುತ್ತಾರೆ.

ದಿನಾಂಕ 04-06-2026 ರಂದು ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಚಾಮರಾಜನಗರ ಪಟ್ಟಣದ ಬಂಜಾರ ಶಾಲಾ ಮಕ್ಕಳಿಗೆ  ಜಿಬ್ರಾ ಕ್ರಾಸ್...
04/06/2026

ದಿನಾಂಕ 04-06-2026 ರಂದು ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಚಾಮರಾಜನಗರ ಪಟ್ಟಣದ ಬಂಜಾರ ಶಾಲಾ ಮಕ್ಕಳಿಗೆ ಜಿಬ್ರಾ ಕ್ರಾಸ್, ಟ್ರಾಫಿಕ್ ಸಿಗ್ನಲ್ ಮತ್ತು ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ.

ಈ ದಿನ ದಿನಾಂಕ:04-06-2026 ರಂದು ಚಾ. ನಗರ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆ ಅಪಘಾತ ಪ್ರಕರಣದಲ್ಲಿ ಅಪಘಾತ ನಡೆದ ಸ್ಥಳ ದೊಡ್ಡಮೂಡಹಳ್ಳಿ ಕ...
04/06/2026

ಈ ದಿನ ದಿನಾಂಕ:04-06-2026 ರಂದು ಚಾ. ನಗರ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆ ಅಪಘಾತ ಪ್ರಕರಣದಲ್ಲಿ ಅಪಘಾತ ನಡೆದ ಸ್ಥಳ ದೊಡ್ಡಮೂಡಹಳ್ಳಿ ಕ್ರಾಸ್ ಹತ್ತಿರದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತನಿಖೆಯ ಸಂಬಂಧ ತನಿಖಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಯಿತು.

Address

Chamrajnagar
Chamarajanagar
571313

Website

Alerts

Be the first to know and let us send you an email when SP Chamarajanagar posts news and promotions. Your email address will not be used for any other purpose, and you can unsubscribe at any time.

Share