Bidar Police

Bidar Police Contact information, map and directions, contact form, opening hours, services, ratings, photos, videos and announcements from Bidar Police, Government Organization, Sp Office, Mangalpet, Bidar.

"ಆಟೋದಲ್ಲಿ ಶಾಲಾ ಮಕ್ಕಳನ್ನು ಸಾಮರ್ಥ್ಯಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಪಾಯಕರ ಸ್ಥಿತಿಯಲ್ಲಿ ಕರೆದೊಯ್ಯುತ್ತಿರುವ ಕುರಿತು".         ಬೀದರ್ ಜಿಲ...
31/08/2024

"ಆಟೋದಲ್ಲಿ ಶಾಲಾ ಮಕ್ಕಳನ್ನು ಸಾಮರ್ಥ್ಯಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಪಾಯಕರ ಸ್ಥಿತಿಯಲ್ಲಿ ಕರೆದೊಯ್ಯುತ್ತಿರುವ ಕುರಿತು".

ಬೀದರ್ ಜಿಲ್ಲಾ ಪೊಲೀಸರಿಂದ ಆಟೋ ಚಾಲಕರಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಪೋಷಕರು ತಮ್ಮ ಮಕ್ಕಳನ್ನು ನಿಮ್ಮ ಮೇಲೆ ನಂಬಿಕೆಯನ್ನು ಇಟ್ಟುಕೊಂಡು ತಮ್ಮ ಆಟೋದಲ್ಲಿ ಶಾಲೆಗಳಿಗೆ ಕಳಿಸುತ್ತಿದ್ದು, ನಿಮ್ಮ ಒಂದು ತಪ್ಪಿನಿಂದ ಪೋಷಕರ ದುಃಖಕ್ಕೆ ಕಾರಣರಾಗದಿರಿ.
ಈ ಬಗ್ಗೆ ಬೀದರ ಪೊಲೀಸ್ ರಿಂದ ವಿಶೇಷ ಕಾರ್ಯಚರಣೆ ಮಾಡಿ ದಂಡ ವಿಧಿಸಿ ತಿಳುವಳಿಕೆ ನೀಡಿದರು ಸಹ ಕೆಲವು ಆಟೋ ಚಾಲಕರು ಪುನರ್ವರ್ತಿಸುತ್ತಿದ್ದಾರೆ. ಇನ್ನೂ ಮುಂದೆ ಹೆಚ್ಚುವರಿ ಮಕ್ಕಳನ್ನು ಕೂಡಿಸಿಕೊಂಡು ಹೋಗುವುದು ಗಮನಕ್ಕೆ ಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ವಾಹನ ಪರವಾನಿಗೆ ರದ್ದು ಮಾಡಲು ಶಿಫಾರಸ್ಸು ಮಾಡಲಾಗುವುದು. ಜನ ಸಾಮಾನ್ಯರ ಹಿತ ಹಾಗೂ ಸುರಕ್ಷತೆ ನಮ್ಮ ಹೊಣೆ.

ಬೀದರ ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

ಪ್ರದೀಪ್ ಗುಂಟಿ, ಐ.ಪಿ.ಎಸ್.,
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.

"ಕೆ.ಕೆ.ಆರ್.ಟಿ.ಸಿ ಬಸ್ ಚಾಲಕನು ಮೋಬಾಯಿಲ್ ಫೋನ್ ನೋಡುತ್ತಾ ಬಸ್ ಚಾಲನೆ ಮಾಡಿರುವ ಸಂಬಂಧ Using mobile Phone while driving ನೇದರ ಅಡಿಯಲ್ಲ...
28/08/2024

"ಕೆ.ಕೆ.ಆರ್.ಟಿ.ಸಿ ಬಸ್ ಚಾಲಕನು ಮೋಬಾಯಿಲ್ ಫೋನ್ ನೋಡುತ್ತಾ ಬಸ್ ಚಾಲನೆ ಮಾಡಿರುವ ಸಂಬಂಧ Using mobile Phone while driving ನೇದರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ”

ಕೆ.ಕೆ.ಆರ್.ಟಿ.ಸಿ. ಬಸ್ ಚಾಲಕನು ಮೋಬಾಯಿಲ್ ಫೋನದಲ್ಲಿ ವಿಡಿಯೋವನ್ನು ನೋಡುತ್ತಾ ಬಸನ್ನು ಚಾಲನೆ ಮಾಡುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತದೆ.

ಸದರಿ ವೈರಲ್ ಆಗಿರುವ ವಿಡಿಯೋ ಕುರಿತು ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಕೂಡಲೇ ಕಾರ್ಯಪ್ರವೃತರಾಗಿ, ಸತ್ಯಾಸತ್ಯೆಯ ಬಗ್ಗೆ ಪರಿಶೀಲನೆ ಮಾಡಿ, ಬಸ್ ಚಾಲಕನನ್ನು ಪತ್ತೆ ಮಾಡಿ, ಚಾಲಕನಿಗೆ ವಾಹನ ಚಾಲನೆ ಮಾಡುವಾಗ ಮೊಬಾಯಿಲ್ ಬಳಕೆಯಿಂದ ಆಗುವ ಅನಾಹುತಗಳ ಬಗ್ಗೆ ತಿಳಿ ಹೇಳಿ, ಚಾಲಕನ ವಿರುದ್ಧ Using mobile Phone while driving ನೇದರ ಅಡಿಯಲ್ಲಿ ಸ್ಥಳದಂಡ ಪ್ರಕರಣ ದಾಖಲಿಸಿ ರೂ. 5000/-ಗಳನ್ನು ದಂಡ ವಿಧಿಸಲಾಗಿರುತ್ತದೆ.

ಆದ್ದರಿಂದ ಜಿಲ್ಲೆಯ ಎಲ್ಲಾ ವಾಹನ ಚಾಲಕರುಗಳು, ತಮ್ಮ ವಾಹನವನ್ನು ಚಲಾಯಿಸುವಾಗ ಮೊಬಾಯಿಲ್ ಬಳಸಬಾರದು, ಒಂದು ವೇಳೆ ಕಂಡು ಬಂದರೆ ಕಾನೂನು ಪ್ರಕಾರ ಈ ಮೂಲಕ ಸೂಚಿಸಲಾಗಿರುತ್ತದೆ.

ಪ್ರಕರಣವನ್ನು ಶೀಘ್ರವಾಗಿ ಪತ್ತೆ ಮಾಡಿದ ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿರುತ್ತದೆ.

ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

ಪ್ರದೀಪ್ ಗುಂಟಿ, ಐ.ಪಿ.ಎಸ್.,
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.

*"ಬೀದರ ನಗರದಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಚಾಲಕರ ಮೇಲೆ ಪ್ರಕರಣ ದಾ...
28/08/2024

*"ಬೀದರ ನಗರದಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಚಾಲಕರ ಮೇಲೆ ಪ್ರಕರಣ ದಾಖಲಿಸಿರುವ ಬಗ್ಗೆ”*

ಆಟೋ ಚಾಲಕರು ತಮ್ಮ ಆಟೋಗಳಲ್ಲಿ ಸಾಮರ್ಥ್ಯಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಬಾರದೆಂದು ಈಗಾಗಲೇ ಸುಮಾರು ಸಲ ತಿಳಿ ಹೇಳಿದರು ಕೂಡಾ, ಕೆಲವು ಆಟೋ ಚಾಲಕರು ಇಂದು ಬೀದರ ನಗರದಲ್ಲಿ ತಮ್ಮ ಆಟೋಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದನ್ನು ಕಂಡು, ಶ್ರೀ ಬಾಪುಗೌಡ ಎಸ್. ಪಾಟೀಲ್ ಪಿ.ಐ. ಬೀದರ ಸಂಚಾರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಬೀದರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರನ್ನು ಒಳಗೊಂಡ ಒಂದು ತಂಡವನ್ನು ರಚಿಸಿ, ನಗರದ ವಿವಿಧ ಸ್ಥಳಗಳಲ್ಲಿ Special Driveನ್ನು ಮಾಡಿ, ರಸ್ತೆ ಸುರಕ್ಷತೆ ಕ್ರಮ ಕುರಿತು 10 ಪ್ರತ್ಯೆಕ ಪ್ರಕರಣಗಳನ್ನು ದಾಖಲು ಮಾಡಲಾಗಿರುತ್ತದೆ ಮತ್ತು ಚಾಲಕರ ಪಕ್ಕದಲ್ಲಿ ಹೆಚ್ಚುವರಿಯಾಗಿ ಅಳವಡಿಸಿರುವ ಸೀಟಗಳನ್ನು ತೆಗೆಯಿಸಿ, ಚಾಲಕರಿಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಕಟ್ಟೆಚ್ಚರ ನೀಡಲಾಗಿರುತ್ತದೆ.

ಆದ್ದರಿಂದ ಬೀದರ ಜಿಲ್ಲೆಯ ಎಲ್ಲಾ ಆಟೋ ಚಾಲರಕರು ಸಾಮರ್ಥ್ಯಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಬಾರದೆಂದು ಈ ಮೂಲಕ ಮತ್ತೊಮ್ಮೆ ಸೂಚಿಸಲಾಗಿರುತ್ತದೆ.

Special Drive ತಂಡದಲ್ಲಿ ಭಾಗವಹಿಸಿರುವ ಬೀದರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಶ್ಲಾಘಿಸಲಾಗಿರುತ್ತದೆ.

ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

*ಪ್ರದೀಪ್ ಗುಂಟಿ, ಐ.ಪಿ.ಎಸ್.,*
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.

*"ಬೀದರ್ ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ರಕ್ಷಾ ಬಂಧನ ಹಬ್ಬ ಆಚರಣೆ"*ಸಹೋದರ ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮತ್ತು ಸಹೋದರನು ಸಹೋದರಿ...
19/08/2024

*"ಬೀದರ್ ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ರಕ್ಷಾ ಬಂಧನ ಹಬ್ಬ ಆಚರಣೆ"*

ಸಹೋದರ ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮತ್ತು ಸಹೋದರನು ಸಹೋದರಿಯ ರಕ್ಷೆ, ಜೀವನ ಪರ್ಯಂತ ಯೋಗಕ್ಷೇಮ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕೆ ಪ್ರಾರ್ಥಿಸುವ ಹಬ್ಬವಾಗಿದ್ದರಿಂದ ಬೀದರ್ ಜಿಲ್ಲೆಯ ರಾಜಯೋಗಿಣಿ ಬಿ.ಕೆ ಗುರುದೇವಿ ಅಕ್ಕನವರು, ಪ್ರಜಾಪತಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಪಾವನಧಾಮ ಬೀದರ ಮತ್ತು ಶ್ರೀ ಚನ್ನಬಸವೇಶ್ವರ ಗುರುಕುಲ್ ಕಡ್ಯಾಳ ಶಾಲಾ ಮಕ್ಕಳು ಹಾಗೂ ಬೀದರ್ ಜಿಲ್ಲಾ ಕಚೇರಿಯ ಸಹೋದ್ಯೋಗಿ ಸಹೋದರಿಯೊಂದಿಗೆ ರಕ್ಷಾ ಬಂಧನ ಹಬ್ಬ ಆಚರಣೆ ಮಾಡಲಾಯಿತು.

ಅದರೊಂದಿಗೆ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಿದ್ದರಿಂದ ಬೀದರ್ ಜಿಲ್ಲೆಯ ಸಮಸ್ತ ಸಹೋದರಿಯರ ರಕ್ಷಣೆಯ ಜವಾಬ್ದಾರಿ ಇನ್ನೂ ಹೆಚ್ಚಾಗಿದ್ದರಿಂದ ಈ ಸಂದರ್ಭದಲ್ಲಿ ಸುರಕ್ಷತೆ ಮತ್ತು ರಕ್ಷಣೆಯ ಭರವಸೆ (promise) ನೀಡಲಾಯಿತು.

ಜಿಲ್ಲೆಯ ಸಮಸ್ತ ನಾಗರೀಕರ ರಕ್ಷಣೆ ಮತ್ತು ಸುರಕ್ಷತೆ ಒದಗಿಸುವುದು ನಮ್ಮ ಹೊಣೆ ಬೀದರ್ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

ಪ್ರದೀಪ್ ಗುಂಟಿ, ಐ.ಪಿ.ಎಸ್,
ಪೊಲೀಸ್ ಅಧೀಕ್ಷಕರು, ಬೀದರ.

*"ಧನ್ನೂರಾ  ಪೊಲೀಸರಿಂದ 9 ಲಕ್ಷಕ್ಕೂ ಅಧಿಕ ಮೌಲ್ಯದ ದ್ವಿಚಕ್ರ ವಾಹನ  ವಶ 3 ಜನ ಆರೋಪಿತರ ಬಂಧನ"*     ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಭಾಲ್ಕ...
18/08/2024

*"ಧನ್ನೂರಾ ಪೊಲೀಸರಿಂದ 9 ಲಕ್ಷಕ್ಕೂ ಅಧಿಕ ಮೌಲ್ಯದ ದ್ವಿಚಕ್ರ ವಾಹನ ವಶ 3 ಜನ ಆರೋಪಿತರ ಬಂಧನ"*

ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಭಾಲ್ಕಿ ಉಪ ವಿಭಾಗದ ಶ್ರೀ ಶಿವಾನಂದ್ ಪವಾಡ ಶೆಟ್ಟಿ, DySP ಭಾಲ್ಕಿ ರವರು ಶ್ರೀ ಗುರುಪಾದ, ಸಿಪಿಐ ಭಾಲ್ಕಿ ಗ್ರಾಮೀಣ ವೃತ್ತ ರವರ ನೇತೃತ್ವದಲ್ಲಿ ಶ್ರೀ, ವಿಶ್ವರಾಧ್ಯ, ಶ್ರೀ, ವೀರಶೆಟ್ಟಿ ಪಾಟೀಲ್, ಪಿಎಸ್ಐ ಧನ್ನೂರಾ ಪೊಲೀಸ್ ಠಾಣೆ ರವರನ್ನೊಳಗೊಂಡ ನೂರಿತ ಅಧಿಕಾರಿ ಸಿಬ್ಬಂದಿಯವರುಗಳ ಪ್ರತ್ಯೇಕವಾದ ತಂಡಗಳನ್ನು ರಚಿಸಿದ್ದು, ತಂಡವು ವೈಜ್ಞಾನಿಕವಾಗಿ ಮತ್ತು ಪೊಲೀಸ್ ಬಾತ್ಮಿದಾರರಿಂದ ಮಾಹಿತಿ ಪಡೆದು 16 ದ್ವಿಚಕ್ರ ವಾಹನಗಳು ಅಃಕಿ 9,15,000=00 ಮೌಲ್ಯದವುಗಳನ್ನು ವಶ ಪಡಿಸಿಕೊಂಡು ಮೂರು ಜನ ಆರೋಪಿತರನ್ನು ವಶಕ್ಕೆಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುತ್ತಾರೆ.

ಜಿಲ್ಲೆಯಲ್ಲಿ ಜರುಗಿದ ವಾಹನ ಕಳ್ಳತನ ಪ್ರಕರಣದ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಅಧಿಕಾರಿ ಸಿಬ್ನಂದಿಯವರುಗಳ ಪ್ರಶಂಸನೀಯ ಕಾರ್ಯಕ್ಕೆ ಶ್ಲಾಘಿಸಿಸಲಾಗಿದೆ.

ಜಿಲ್ಲೆಯಲ್ಲಿ ಪೊಲೀಸರಿಂದ ಅಪರಾಧ ನಿಯಂತ್ರಣ, ಕಳ್ಳತನ ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯಾಚರಣೆಯು ಮುಂದುವರೆಯುತ್ತದೆ.....

ಪ್ರದೀಪ್ ಗುಂಟಿ, ಐ.ಪಿ.ಎಸ್,
ಪೊಲೀಸ್ ಅಧೀಕ್ಷಕರು, ಬೀದರ.

*"ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯವರಿಂದ ಕಳ್ಳತನ ಪ್ರಕರಣದಲ್ಲಿ 14 ಲಕ್ಷಕ್ಕೂ ಅಧಿಕ ಮೌಲ್ಯದ ದ್ವಿಚಕ್ರ ವಾಹನ, ವಿದ್ಯುತ್ ತಂತಿ ವಶ & 7 ಜನ ಆರೋ...
16/08/2024

*"ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯವರಿಂದ ಕಳ್ಳತನ ಪ್ರಕರಣದಲ್ಲಿ 14 ಲಕ್ಷಕ್ಕೂ ಅಧಿಕ ಮೌಲ್ಯದ ದ್ವಿಚಕ್ರ ವಾಹನ, ವಿದ್ಯುತ್ ತಂತಿ ವಶ & 7 ಜನ ಆರೋಪಿತರ ಬಂಧನ."*

ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಹುಮನಾಬಾದ ಉಪ-ವಿಭಾಗದ ಡಿ.ಎಸ್.ಪಿ ಶ್ರೀ, ಜೆ.ಎಸ್ ನ್ಯಾಮೇಗೌಡ ರವರ ಮುಂದಾಳತ್ವದಲ್ಲಿ ಶ್ರೀ, ಅಲಿಸಾಬ, ಸಿ.ಪಿ.ಐ ಬಸವಕಲ್ಯಾಣ ರವರ ನೇತೃತ್ವದಲ್ಲಿ ಶ್ರೀ, ಅಂಬರೀಷ್ ವಾಗ್ಮೋಡೆ , ಪಿ.ಎಸ್.ಐ, ಶ್ರೀ, ಸುರೇಶ ಹಜ್ಜರಗಿ, ಪಿ.ಎಸ್.ಐ, ರವರನ್ನೊಳಗೊಂಡ ಪರಿಣಿತ ಅಪರಾಧ ವಿಭಾಗದ ಸಿಬ್ಬಂದಿಯವರಾದ ಶ್ರೀ, ವಿಜಯಕುಮಾರ, ಶ್ರೀ, ರಾಜಕುಮಾರ, ಶ್ರೀ, ವಿನೋದ,, ಶ್ರೀ, ಗೌಸೋದ್ದಿನ, ಶ್ರೀ, ಪ್ರಾನ್ಸಿಸ್, ಶ್ರೀ, ಸಿಮನ್, ಶ್ರೀ, ಪುಂಡಲಿಂಗ, ಶ್ರೀ, ಅಶೋಕ, ಶ್ರೀ, ನಾಗರಾಜ, ಶ್ರೀ, ಅಪ್ಪಾಸಾಬ ರವರ ಪ್ರತ್ಯೇಕವಾದ ತಂಡಗಳನ್ನು ರಚಿಸಿ ಸಿ.ಸಿ ಕ್ಯಾಮೆರಾ, ತಜ್ಞರ ಸಹಾಯದಿಂದ ಮತ್ತು ಪೊಲೀಸ್ ಮಾಹಿತಿದಾರಿಂದ ಮಾಹಿತಿ ಪಡೆದು ಕಳ್ಳತನದ ಒಟ್ಟು 17 ದ್ವಿ-ಚಕ್ರ ವಾಹನಗಳು, 250 kg ವಿದ್ಯುತ್ ತಂತಿ, ನಗದು ಹಣ ಹೀಗೆ ಒಟ್ಟು ಅ.ಕಿ ರೂ.14,72,000=00 ರೂಪಾಯಿ ಮೌಲ್ಯದವುಗಳನ್ನು ಜಪ್ತಿ ಮಾಡಿಕೊಂಡು 7 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಸಿರುತ್ತಾರೆ.

ಜಿಲ್ಲೆಯಲ್ಲಿ ಜರುಗಿದ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿ ಆರೋಪಗಳನ್ನು ಬಂಧಿಸಿದ ಅಧಿಕಾರಿ ಸಿಬಂದಿಯವರುಗಳ ಕಾರ್ಯಕ್ಕೆ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ಬೀದರ ರವರು ನಗದು ಬಹುಮಾನದೊಂದಿಗೆ ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿರುತ್ತಾರೆ.

ಜಿಲ್ಲೆಯಲ್ಲಿ ಪೊಲೀಸರಿಂದ ಅಪರಾಧ ನಿಯಂತ್ರಣ, ಕಳ್ಳತನ ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯಾಚರಣೆಯು ಮುಂದುವರೆಯುತ್ತದೆ...

ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ...

*"ಬೀದರ್ ನೆಹರು ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹಮ್ಮಿಕೊಂಡ ಪಥ ಸಂಚಲನ ಅಚ್ಚುಕಟ್ಟಾಗಿ ಶಿಸ್ತು ಬದ್ಧವಾಗಿ ನಡೆಸಿದ್ದ ತುಕಡ...
15/08/2024

*"ಬೀದರ್ ನೆಹರು ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹಮ್ಮಿಕೊಂಡ ಪಥ ಸಂಚಲನ ಅಚ್ಚುಕಟ್ಟಾಗಿ ಶಿಸ್ತು ಬದ್ಧವಾಗಿ ನಡೆಸಿದ್ದ ತುಕಡಿಗಳಿಗೆ ಅಭಿನಂದನೆಗಳು".*

ಇಂದು ದಿನಾಂಕ : 15-08-2024 ರಂದು ಬೀದರ್ ಜಿಲ್ಲೆಯ ನೆಹರು ಕ್ರೀಡಾಂಗಣದಲ್ಲಿ 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ಪೊಲೀಸ್ ಪಥ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪಥ ಸಂಚಲನದ ಮುಂದಾಳತ್ವವನ್ನು ವಹಿಸಿದ ಪರೇಡ್ ಕಮಾಂಡರ್ ರವರಾದ ಶ್ರೀ ಸುನಿಲ್ ಕೊಡ್ಲಿ, ಡಿ.ವೈ.ಎ.ಸ್ಪಿ ಡಿ.ಎ.ಆರ್ ಬೀದರ್ ರವರು ವಿಶೇಷ ಮುತುವರ್ಜಿವಹಿಸಿ, ಸತತ ಒಂದು ವಾರಗಳ ಕಾಲ ಸ್ವತಹ ಮುಂದೆ ನಿಂತು ಎಲ್ಲಾ 12 ತುಕಡಿಗಳ ಕವಾಯತನ್ನು ಪರಿಪೂರ್ಣವಾಗಿ ಬರುವವರೆಗೂ ಕವಾಯತು ರಿಹರ್ಸಲನ್ನು ಮಾಡಿಸಿ, ಇಂದು ಪಥ ಸಂಚಲನವನ್ನು ಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿ ಸಾರ್ವಜನಿಕರು ಚಪ್ಪಾಳೆ ತಟ್ಟುವಂತೆ ಕವಾಯತು ಪ್ರದರ್ಶನ ಮಾಡಿರುತ್ತಾರೆ, ಇದರ ಶ್ರೇಯಸನ್ನು ಪರೇಡ್ ಕಮಾಂಡರ್ ರವರಿಗೆ ಸಲ್ಲುತ್ತದೆ.

ಇವರ ಮುಂದಾಳತ್ವದಲ್ಲಿ ಒಟ್ಟು 12 ತುಕುಡಿಗಳು ಭಾಗವಹಿಸಿದ್ದು, ವಿವಿಧ ಘಟಕಗಳ ತುಕುಡಿಗಳ ಮುಂದಾಳತ್ವನ್ನು 01) ಶ್ರೀ ಭರತ, ಎ.ಆರ್.ಎಸ್.ಐ ಡಿ.ಎ.ಆರ್ ತುಕಡಿ 02) ಶ್ರೀ ಡಿ.ಎ. ಬಿರಾದರ ಆರ್.ಎಸ್.ಐ ಕೆ.ಎಸ್.ಆರ್.ಪಿ ತುಕಡಿ 03) ಶ್ರೀ ಸಿದ್ಧಲಿಂಗ, ಪಿ.ಎಸ್.ಐ ಚಿಂತಾಕಿ, ನಾಕಗರೀಕ ಪೊಲೀಸ್ ತುಕಡಿ 04) ಶ್ರೀ ಸಿದ್ಧೇಶ್ವರ ಗೇರಡೆ, ಪಿ.ಎಸ್.ಐ ಮನ್ನಳ್ಳಿ, ಸಂಚಾರ ಪೊಲೀಸ್ ತುಕಡಿ 05) ಶ್ರೀಮತಿ ನಂದಿನಿ, ಪಿ.ಎಸ್.ಐ ಮನ್ನಳ್ಳಿ, ಮಹಿಳಾ ಪೊಲೀಸ್ ತುಕಡಿ 06) ಶ್ರೀ ಟಿ. ಸೋಮನಾಥ, ಸಿನಿಯರ್ ಪ್ಲಟೂನ್ ಕಮಾಂಡರ್, ಗೃಹರಕ್ಷಕ ದಳ ತುಕಡಿ, 07) ಶ್ರೀ ಶಾಂತಕುಮಾರ, ಡಿ.ಆರ್.ಆಫ್.ಓ ಅರಣ್ಯ ಇಲಾಖೆ ತುಕಡಿ 08) ಕು. ಪೂಜಾ ಖರ್ಗೆ, ಅಬಕಾರಿ ನಿರೀಕ್ಷಕರು, ಅಬಕಾರಿ ಇಲಾಖೆ ತುಕಡಿ 09) ಶ್ರೀ ನವೀನಬಾಬು, ಅಗ್ನಿಶಾಮಕ ಠಾಣಾಧಿಕಾರಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ತುಕಡಿ 10) ಶ್ರೀ ನಿಂಗಪ್ಪ ಎಸ್. ಮನ್ನೂರ ಪಿ.ಎಸ್.ಐ ಬೆಮಳಖೇಡಾ, ವಿಶೇಷ ಘಟಕಗಳು (KSISF, Int, Prison) ತುಕಡಿ 11) ಕು. ಕುಮಾರ ರಾಜೇಶ ಸಿನಿಯರ್ ಅಂಡರ್ ಆಫಿಸರ್, ಸಿನಿಯರ್ ಎನ್.ಸಿ.ಸಿ ತುಕಡಿ 12) ಕು. ಕುಮಾರ ಶ್ರೀಧರ ಸರ್ಜೇಂಟ್, ಜೂನಿಯರ್ ಎನ್.ಸಿ.ಸಿ ರವರು ವಹಿಸಿಕೊಂಡಿರುತ್ತಾರೆ.

ಕವಾಯತ್ತಿನಲ್ಲಿ ಭಾಗವಹಸಿದ ಎಲ್ಲಾ ಸಮವಸ್ತ್ರಧಾರಿಗಳು ತಮ್ಮ‌ ಶಿಸ್ತನ್ನು ಪಥ ಸಂಚಲನದ ಮೂಲಕ ಪ್ರದರ್ಶನ ನೀಡಿದ್ದ ಎಲ್ಲಾ 12 ತುಕಡಿಯ ಅಧಿಕಾರಿ ಮತ್ತು ಸಿಬ್ಬಂದಿ ರವರಿಗೆ ಅಭಿನಂದನೆಗಳು.

*ಪ್ರದೀಪ್ ಗುಂಟಿ, ಐ.ಪಿ.ಎಸ್.,*
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.

"ಬೀದರ್ ಜಿಲ್ಲೆಯ ಸಮಸ್ತ ನಾಗರೀಕರಿಗೆ ಬೀದರ್ ಜಿಲ್ಲಾ ಪೊಲೀಸ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು"      ಭಾರತ ...
15/08/2024

"ಬೀದರ್ ಜಿಲ್ಲೆಯ ಸಮಸ್ತ ನಾಗರೀಕರಿಗೆ ಬೀದರ್ ಜಿಲ್ಲಾ ಪೊಲೀಸ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು"

ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಡಲೆಂದೇ ಹುಟ್ಟಿ ಭಾರತ ದೇಶವೇ ತಮ್ಮ ಕುಟುಂಬವೆಂದು ಭಾವಿಸಿ, ತಮ್ಮ ಕುಟುಂಬವನ್ನು ತೊರೆದು ಸ್ವಾತಂತ್ರ್ಯವನ್ನು ದೊರಕಿಸಿ, ತಮ್ಮ ಪ್ರಾಣವನ್ನೆ ಬಲಿದಾನ ನೀಡಿ, ನಮ್ಮ ನಿಮ್ಮಲ್ಲೆರನ್ನು ಸ್ವಾತಂತ್ರವಾಗಿ ಉಸಿರಾಡಿಸಲು ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಸಮಸ್ತ ಸ್ವಾತಂತ್ರ ಹೋರಾಟಗಾರರಿಗೆ ಈ ಸಂದರ್ಭದಲ್ಲಿ ನೆನೆಯುತ್ತಾ, ಅವರ ಈ ಬಲಿದಾನವನ್ನು ನಮಿಸಿ, ಬೀದರ ಜಿಲ್ಲೆಯ ಸಮಸ್ತ ನಾಗರೀಕರಿಗೆ, ಪೊಲೀಸ್ ಅಧಿಕಾರಿ/ಸಿಬ್ಬಂದಿ, ಲಿಪಿಕ ಸಿಬ್ಬಂದಿ ಹಾಗೂ ಜಿಲ್ಲೆಯ ಅಕ್ಷರ ಮಾಧ್ಯಮ, ದೃಶ್ಯ ಮಾಧ್ಯಮದವರಿಗೆ ಮತ್ತೊಮ್ಮೆ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು‌.

ತಮ್ಮೆಲ್ಲರ ಹಿತ ಬಯಸುವ ಬೀದರ್ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

ಪ್ರದೀಪ್ ಗುಂಟಿ, ಐ.ಪಿ.ಎಸ್.,
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.

"ನಮ್ಮ ಬೀದರ ಜಿಲ್ಲಾ ಪೊಲೀಸ್ ನಮ್ಮ ಹೆಮ್ಮೆ""ಆಟೋ ವಾಹನವು ಸಂಚಾರದ ಪ್ರಮುಖ ಸಾಧನವಾಗಿದ್ದು, ತುರ್ತು ಸಂದರ್ಭದಲ್ಲಿ ನೆನಪಿಗೆ ಬರುವುದು ಆಟೋ, ಬೀದ...
14/08/2024

"ನಮ್ಮ ಬೀದರ ಜಿಲ್ಲಾ ಪೊಲೀಸ್ ನಮ್ಮ ಹೆಮ್ಮೆ"

"ಆಟೋ ವಾಹನವು ಸಂಚಾರದ ಪ್ರಮುಖ ಸಾಧನವಾಗಿದ್ದು, ತುರ್ತು ಸಂದರ್ಭದಲ್ಲಿ ನೆನಪಿಗೆ ಬರುವುದು ಆಟೋ, ಬೀದರ್ ಆಟೋ ಚಾಲಕರು ಈ ಮೊದಲು ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದು, ಅದರಂತೆ ಸಹ ಮುಂದುವರಿಸಿಕೊಂಡು ಹೋಗುತ್ತಿದ್ದು ಈ ನಿಟ್ಟಿನಲ್ಲಿ ಆಟೋ ಚಾಲಕರ ಕುಂದು ಕೊರತೆಗಳನ್ನು ಆಲಿಸಲು ಮತ್ತು ಅವರಿಗೆ ಸಲಹೆ ಸೂಚನೆಗಳನ್ನು ನೀಡುವ ಸಲುವಾಗಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಟೋ ಚಾಲಕರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಚಾಲಕರು ನಗರದ ಸಂಚಾರ ವ್ಯವಸ್ಥೆ ಮತ್ತು ಸುಗಮ ಸಂಚಾರ ಶಿಸ್ತುಭದ್ಧವಾಗಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ಮತ್ತು ವಾಹನ ನಿಲುಗಡೆಗೆ ಸೂಚಿಸಿದ ಸ್ಥಳದಲ್ಲಿಯೇ ನಿಲ್ಲಿಸಿಸುವುದು. ಇಲ್ಲಿಯವರೆಗೆ 10 ಆಟೋ ನಿಲ್ದಾಣಗಳನ್ನು ಪೊಲೀಸರಿಂದ ನಿಗದಿಪಡಿಸಿದ್ದು, ಇನ್ನೂ ಆರು ಹೆಚ್ಚುವರಿಯಾಗಿ ಗುರುತಿಸಲಾಗುವುದು. ಸೂಚಿಸಿದ ಸ್ಥಳಗಳಲ್ಲಿ ವಾಹನಗಳನ್ನು ಅಚ್ಚುಕಟ್ಟಾಗಿ ನಿಲ್ಲಿಸಿ, ವಾಹನವನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ಕಾರಣಕ್ಕೂ ಪ್ರಯಾಣಿಕರನ್ನು ಸಾಗಿಸಬಾರದು. ಆಟೋದಲ್ಲಿ ಆರಕ್ಕಿಂತ ಹೆಚ್ಚಿನ ಮಕ್ಕಳಿಗೆ ಸಾಗಿಸಬಾರದು, ಗೂಡ್ಸ್ ಆಟೋಗಳಲ್ಲಿ ಪ್ರಯಾಣಿಕರನ್ನು ಸಾಗಿಸಬಾರದು. ಚಾಲಕರು ಆಟೋ ವಾಹನಗಳ Fitness Certificate, Insurance, ಮಾಲಿನ್ಯ ಪ್ರಮಾಣ ಪತ್ರ ಮತ್ತು ಚಾಲನೆ ಪರವಾನಿಗೆ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ.

ಚಾಲಕರು ತಪ್ಪದೇ ಸಂಚಾರಿ ನಿಯಮಗಳನ್ನು ಪಾಲಿಸಿ ತಮ್ಮ ಮತ್ತು ಇತರರ ಪ್ರಾಣ ಕಾಪಾಡುವುದು. ಜನ ಸಾಮಾನ್ಯರ ಪ್ರಾಣ ರಕ್ಷಣೆಯೇ ನಮ್ಮ ಮುಖ್ಯ ಗುರಿ.

ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.....

ಪ್ರದೀಪ ಗುಂಟಿ, ಐ.ಪಿ.ಎಸ್,
ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ,
ಬೀದರ.

“ಬೀದರ ಜಿಲ್ಲಾ ಪೊಲೀಸ್ ವತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವಂತಹ ಪೊಸ್ಟಗಳನ್ನು ಹರಿಬಿಡುವ...
04/08/2024

“ಬೀದರ ಜಿಲ್ಲಾ ಪೊಲೀಸ್ ವತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವಂತಹ ಪೊಸ್ಟಗಳನ್ನು ಹರಿಬಿಡುವವರಿಗೆ ಕಟ್ಟೆಚ್ಚರ”.

ಜಿಲ್ಲೆಯ ನಾಗರಿಕರೇ, ಜಿಲ್ಲೆಯ ಔರಾದ-ಬಿ ತಾಲೂಕಿನ ವ್ಯಕ್ತಿಯೊಬ್ಬ (ಆರೋಪಿ) ತನ್ನ ಮೊಬೈಲ್ ನಂಬರದಿಂದ ವಾಟ್ಸ್ ಆಪ್ ಗ್ರೂಪ್ ದಲ್ಲಿ ಒಂದು ಧರ್ಮದ ಬಗ್ಗೆ ಅಸಹನೆಯ ಭಾವ ಮೂಡಿಸುವಂತೆ ಮುಂಬಯಿಯಲ್ಲಿ ಜೂನ್ ತಿಂಗಳಲ್ಲಿ ಜರುಗಿದ ಘಟನೆಯನ್ನು ಆ ಧರ್ಮಕ್ಕೆ ಸಂಬಂಧವಿಲ್ಲದ ವಿಡಿಯೋದೊಂದಿಗೆ ಸುಳ್ಳು ಸಂದೇಶ ಹರಡಿಸಿ ಸಮಾಜದಲ್ಲಿ ಸೌಹಾರ್ದತೆಗೆ ಧಕ್ಕೆ ತರುವಂತಗಹ ಹಳೆ ವಿಡಿಯೋವನ್ನು ಹರಿಬಿಟ್ಟಿದ್ದರಿಂದ ಇವನ ವಿರುದ್ದ ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪಿ.ಎ.ಆರ್ ಸಂ: 22/2024, ಕಲಂ: 126 ಬಿ.ಎನ್.ಎಸ್.ಎಸ್ ಪ್ರಕಾರ ಕಾನೂನು ರಿತ್ಯ ಕ್ರಮ ಕೈಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟು ಸಮಾಜದಲ್ಲಿ ಅಶಾಂತಿ ಕೆದಡುವಂತಹ ಪೊಸ್ಟ್ ಗಳು ಹರಿ ಬಿಡುವುದು ಕಾನೂನಿನ ಅಡಿಯಲ್ಲಿ ಅಪರಾಧವಾಗಿದ್ದು, ಅಂಥವರ ವಿರುದ್ಧ ಈಗಾಗಲೇ ಜಿಲ್ಲೆಯಲ್ಲಿ ಪ್ರಕರಣಗಳು ದಾಖಲಿಸಿಕೊಳ್ಳಲಾಗುತ್ತಿದ್ದು, ಈ ಕುರಿತು ಜಿಲ್ಲಾ ಪೊಲೀಸರಿಂದ ಸಾಮಾಜಿಕ ಜಾಲತಾಣದಲ್ಲಿ ಅರಿವು ಮೂಡಿಸಲಾಗುತ್ತಿದೆ.

ಆದ್ದರಿಂದ ಯುವಕರು ಇಂಥಹ ಪೊಸ್ಟ್ಗಳನ್ನು ಹರಿಬಿಟ್ಟು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದೆಂದು ಬೀದರ ಜಿಲ್ಲಾ ಪೊಲೀಸ್ ರಿಂದ ಕಟ್ಟೆಚ್ಚರಿಸಲಾಗಿದೆ.

ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

ಪೊಲೀಸ್ ವರಿಷ್ಠಾಧಿಕಾರಿಗಳು,
ಬೀದರ್ ಜಿಲ್ಲೆ ಬೀದರ್.

Address

Sp Office, Mangalpet
Bidar
585401

Alerts

Be the first to know and let us send you an email when Bidar Police posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bidar Police:

Share