09/03/2025
*ವೀರ ಯೋಧ ಯಾದವ ಫ್ರೆಂಡ್ಸ್* (ರಿ ) ಅಮ್ಮುಂಜೆ
ಇಂದು ನಡೆದ ಸಂಘದ 23ನೇ ವರ್ಷದ ಸ್ಥಾಪನ ದಿನ
ಹಾಗೂ
ಸಂಘದ ಸದಸ್ಯರಾದ ದಿ. ನವೀನ್ ಚೌಟ ಹಾಗೂ ದಿ. ಮಹಾಬಲ ಪೂಜಾರಿ ಯವರ ಶ್ರದ್ದಾಂಜಲಿ ಸಭೆ ಬಹಳ ಅರ್ಥ ಪೂರ್ಣವಾಗಿ ನಡೆಯಿತು..
ಜ್ಯೋತಿ ಬೆಳಗಿಸಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಉದ್ಘಾಟನೆ ಯಾಗಿ,
ಅಧ್ಯಕ್ಷತೆ ಉದಯ. ಕೆ ವಹಿಸಿದರು..
ಮುಖ್ಯ ಅತಿಥಿಯಾಗಿ ಉಮೇಶ್ ಬಾರಿಂಜೆ, ಕಿಶೋರ್ ಪಲ್ಲಿಪಾಡಿ, ಡಿಎ ಅಬೂಬಕ್ಕರ್,ಬಿ. ಜನಾರ್ಧನ ಅಮ್ಮುಂಜೆ, ಸತ್ಯಪ್ರಸಾದ್ ಭಾಗವಹಿಸಿದರು.
ಶ್ರದ್ದಾಂಜಲಿ ಭಾಷಣವನ್ನು ಸಂಘದ ಗೌರವ ಸಲಹೆಗಾರರಾದ
ಬಿ. ಜನಾರ್ಧನ ಅಮ್ಮುಂಜೆ ಅರ್ಥ ಪೂರ್ಣವಾಗಿ ವಿವರಿಸಿದರು..
ಕಿಶೋರ್ ಪಲ್ಲಿಪಾಡಿಯವರು
ಮುಖ್ಯವಾಗಿ ಒಂದು ಊರಿಗೆ ಸಂಘ ಸಂಸ್ಥೆಗಳ ಮಹತ್ವ ಹಾಗೂ ಸಂಘಟನೆಯ ಬಗ್ಗೆ ವಿವರಿಸಿದರು.
ಹಾಗೂ ಸಂಘದ ಸೇವಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ಸತ್ಯ ಪ್ರಸಾದ್ ಶೆಟ್ಟಿ ನೀಡಿದರು.. ನಂತರ ಡಿ. ಎ ಅಬೂಬಕ್ಕರ್ ಸಂಘ ನಡೆದು ಬಂದ ದಾರಿ ಹಾಗೂ ನಮ್ಮನ್ನು ಅಗಲಿದ 4 ಜನ ಸದಸ್ಯರನ್ನು ನೆನಪಿಸಿಕೊಂಡರು..
ಈ ಕಾರ್ಯಕ್ರಮದ ನಿರೂಪಣೆಯನ್ನು ನಮ್ಮ ಗೌರವ ಸಲಹೆಗಾರರಾದ ಡಿಎ ಹರೀಶ್ ರಾವ್ ನಿರ್ವಹಿಸಿದರು.ಕೊನೆಗೆ
ಧನ್ಯವಾದ ಸಂಘದ ಸದಸ್ಯರಾದ ಗೌರೀಶ್ ನಿರ್ವಹಿಸಿದರು..
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು ಜೊತೆಗೆ ವಿನಾಯಕ ಭಜನಾ ಮಂಡಳಿಯ ವಿದ್ಯಾರ್ಥಿಗಳು ಕಾರ್ಯಕ್ರಮದ ಜೊತೆಗಿದ್ದರು..
ಲಘು ಉಪಹಾರ ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು...