22/08/2023
*"ಡ್ರಕ್ಸ್ ವ್ಯಸನ ಮತ್ತು ಮಾರಾಟ ಜಾಲದ ವಿರುದ್ಧ ಪ್ರತಿ ಊರಿನ ನಾಗರೀಕರು ಜನಜಾಗೃತಿ ಅಭಿಯಾನ ಕೈಗೊಳ್ಳುವುದು ಅನಿವಾರ್ಯವಾಗಿದೆ"*
ಈ ಡ್ರಕ್ಸ್ ಜಾಲ ಎಂಬುವುದು ಕೇವಲ ಒಂದೆರಡು ಊರಿಗೆ ಸೀಮಿತವಾದ ಪಿಡುಗು ಅಲ್ಲ, ಇದು ದೇಶದ ಪ್ರತಿ ರಾಜ್ಯ,ಜಿಲ್ಲೆ, ಪಟ್ಟಣ, ಪಂಚಾಯತ್, ಗಲ್ಲಿ ಗಳಲ್ಲೂ ಹರಡಿಕೊಂಡಿರುವ ಸಾಮಾಜಿಕ ಪಿಡುಗು
ಅದರಲ್ಲೂ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಬೆಳೆದು ನಿಂತಿದೆ ಈ ಡ್ರಕ್ಸ್ ಜಾಲ. ಇದನ್ನು ವಿರೋಧಿಸಿ ಡ್ರಕ್ಸ್ ಮುಕ್ತ ಜಿಲ್ಲೆಯಾಗಿ ಪರಿವರ್ತಿಸಲು ಪೊಲೀಸ್ ಇಲಾಖೆಗೆ ಸಾತ್ ನೀಡಲು ಜವಾಬ್ದಾರಿಯುತ ನಾಗರೀಕರು ಮುಂದೆ ಬರಬೇಕು ಹಾಗೂ ತಮ್ಮ ತಮ್ಮ ಮೊಹಲ್ಲಾ, ಕೇರಿ, ಗಲ್ಲಿಗಳಲ್ಲಿ ಸಂಘಟಿತರಾಗಿ ಡ್ರಕ್ಸ್ ಜಾಲದ ವಿರುದ್ಧ ಜನಜಾಗೃತಿ ಮೂಡಿಸಿವ ಕಾರ್ಯಕ್ರಮ ನಡೆಸಬೇಕು
ಊರ ಜನರು ಸಂಘಟಿತರಾಗಿ ಡ್ರಕ್ಸ್ ವ್ಯಸನಿಗಳನ್ನು ಗುರುತಿಸಿ ಮನಪರಿವರ್ತನೆ ಮಾಡಿ ಆ ದುಷ್ಚಟದಿಂದ ಅವರನ್ನು ಮುಕ್ತರಾಗಿಸುವ ಶತ ಪ್ರಯತ್ನ ಮಾಡಬೇಕು. ನಮ್ಮ ಪ್ರಯತ್ನಕ್ಕೆ ವ್ಯಸನಿಗಳು ಬೆಲೆ ಕಲ್ಪಿಸದಿದ್ದರೆ ಮಾತ್ರ ಪೊಲೀಸರಿಗೆ ಒಪ್ಪಿಸಬೇಕು ಇಂತಹ ಕಾರ್ಯಗಳಿಂದ 5/6ತಿಂಗಳು ಗಳಲ್ಲಿ ಡ್ರಕ್ಸ್ ಮುಕ್ತ ನಾಡಾನ್ನಾಗಿ ಮಾಡಬಹುದು
"ಮುಗ್ದರನ್ನು ತಮ್ಮ ಮೋಸದ ಬಲೆಗೆ ಸಿಲುಕಿಸಿ ಜೇಬು ತುಂಬಿಸಿಕೊಳ್ಳುವ ಡ್ರಕ್ಸ್ ಪೆಡ್ಲರ್ ಗಳನ್ನು ಕ್ಷಮಿಸದಿರಿ"
ಬಹುತೇಕ ವ್ಯಸನಿಗಳು ಮೋಜು, ಮಸ್ತಿಯ ಗೋಜಿನಲ್ಲಿ ಡ್ರಕ್ಸ್ ಜಾಲಕ್ಕೇ ಬಲಿಯಾಗಿದ್ದಾರೆ. ಇಂತಹ ಯುವಕ, ಯುವತಿಯಾರನ್ನು ಟಾರ್ಗೆಟ್ ಮಾಡಿ ಡ್ರಕ್ಸ್ ಮಾರಾಟ ಮಾಡುವುದೇ ಪೆಡ್ಲರ್ ಗಳ ಕೆಲಸ ಈ ಪೆಡ್ಲರ್ ಗಳಿಗೆ ಸೀಮಿತ ಗುರುತು ಇರುವುದಿಲ್ಲ ಸಾಮಾನ್ಯ ವ್ಯಕ್ತಿಗಳಂತೆ ನಮ್ಮ ನಡುವೆಯೇ ಇದ್ದು, ಕದ್ದು ಮುಚ್ಚಿ ಡ್ರಕ್ಸ್ ಸಾಗಾಟ,ಮಾರಾಟ ನಡೆಸುತ್ತಾ ಜೇಬು ತುಂಬಿಸಿಕೊಳ್ಳುತ್ತಾರೆ ಈ ಬಗ್ಗೆ ಎಚ್ಚರ ವಹಿಸೋಣ
ದ. ಕ ಜಿಲ್ಲಾ ಪೊಲೀಸ್ ಇಲಾಖೆಯೂ ಡ್ರಕ್ಸ್ ಜಾಲದ ವಿರುದ್ಧ ರಾಜಿ ಇಲ್ಲದ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಡ್ರಕ್ಸ್ ದಂಧೆಕೋರರಿಗೆ ಎಂದಿಗೂ ಕ್ಷಮಿಸಬೇಡಿ