Madivala PS

Madivala PS Contact information, map and directions, contact form, opening hours, services, ratings, photos, videos and announcements from Madivala PS, Police station, Madiwala, Bangalore.

15/08/2026
ಆಸರೆ ಯೋಜನೆಯ ಅಂಗವಾಗಿ ಮಡಿವಾಳ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಿರಿಯ ನಾಗರಿಕರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ, ಸುರಕ್ಷತೆ ಹಾಗೂ ಯೋಗಕ್ಷೇಮ...
30/07/2026

ಆಸರೆ ಯೋಜನೆಯ ಅಂಗವಾಗಿ ಮಡಿವಾಳ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಿರಿಯ ನಾಗರಿಕರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ, ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ವಿಚಾರಿಸಿದರು. ಅಲ್ಲಿನ ಹಿರಿಯ ನಾಗರಿಕರಿಗೆ ಬಿಸ್ಕತ್ ಹಾಗೂ ಹಣ್ಣುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ ಧೈರ್ಯ ತುಂಬಿದರು. ಹಿರಿಯರ ಮುಖದಲ್ಲಿ ಸಂತಸ ಮೂಡಿಸಿದ ಈ ಸೇವಾ ಕಾರ್ಯವು ಮಾನವೀಯತೆ ಹಾಗೂ ಸಾಮಾಜಿಕ ಕಾಳಜಿಯ ಪ್ರತೀಕವಾಗಿದೆ.

ಮಡಿವಾಳ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋಗಿರುವ ಕುರಿತು ದೂರು ನೀಡಿದ ಸಾರ್ವಜನಿಕರ ಮನವಿಯನ್ನು ಪರಿಗಣಿಸಿ, ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬ...
30/07/2026

ಮಡಿವಾಳ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋಗಿರುವ ಕುರಿತು ದೂರು ನೀಡಿದ ಸಾರ್ವಜನಿಕರ ಮನವಿಯನ್ನು ಪರಿಗಣಿಸಿ, ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ತ್ವರಿತ ಕ್ರಮ ಕೈಗೊಂಡರು. ತಾಂತ್ರಿಕ ಮಾಹಿತಿಗಳ ನೆರವಿನಿಂದ ಕಳೆದುಹೋದ ಮೊಬೈಲ್ ಫೋನ್ ಅನ್ನು ಶೀಘ್ರವಾಗಿ ಪತ್ತೆಹಚ್ಚಿ, ಪರಿಶೀಲನೆ ನಡೆಸಿದ ನಂತರ ಅದರ ನೈಜ ಮಾಲೀಕರಿಗೆ ಹಸ್ತಾಂತರಿಸಲಾಯಿತು

27/07/2026

🌱 ಸದೃಢ ಮನಸ್ಸು. ಮಾದಕ ವಸ್ತು ಮುಕ್ತ ಜೀವನ. 💙

ಮಾನಸಿಕ ಒತ್ತಡ, ಆತಂಕ, ಖಿನ್ನತೆ ಅಥವಾ ಭಾವನಾತ್ಮಕ ಸಮಸ್ಯೆಗಳಿಗೆ ಮಾದಕ ವಸ್ತುಗಳು ಎಂದಿಗೂ ಪರಿಹಾರವಲ್ಲ. ಸಹಾಯ ಯಾವಾಗಲೂ ಲಭ್ಯವಿದೆ.

🧠 ಟೆಲಿ-ಮಾನಸ್ (Tele-MANAS) ಮಾನಸಿಕ ಆರೋಗ್ಯ ಸಹಾಯವಾಣಿ: 14416
☎️ ಉಚಿತ • ಗೌಪ್ಯ • ಪರಿಣಿತರಿಂದ ವೃತ್ತಿಪರ ಸಲಹೆ

📱 Tele-MANAS ಮೊಬೈಲ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ:
✅ ಉತ್ತಮ ಜೀವನಶೈಲಿ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ
✅ ಭಾವನಾತ್ಮಕ ಕ್ಷೇಮವನ್ನು ಉತ್ತಮಗೊಳಿಸಿಕೊಳ್ಳಿ
ನೀವು ಅಥವಾ ನಿಮ್ಮ ಪರಿಚಯದಲ್ಲಿರುವ ಯಾರಾದರೂ ಮಾನಸಿಕ ಒತ್ತಡ ಅಥವಾ ವ್ಯಸನ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರೆ, ಮೌನವಾಗಿರಬೇಡಿ.
ಸಹಾಯ ಕೇಳುವುದು ದೌರ್ಬಲ್ಯವಲ್ಲ, ಅದು ನಿಮ್ಮ ಶಕ್ತಿಯ ಸಂಕೇತ. 💙
Karnataka State Police BENGALURU CITY POLICE
#ಮಾದಕವಸ್ತುಮುಕ್ತಕರ್ನಾಟಕ #14416

27/07/2026

ಆಗ್ನೇಯ ವಿಭಾಗದ Hsrlayoutps Bcp ಪೊಲೀಸ್ ಠಾಣೆಯ ಅಧಿಕಾರಿಗಳು ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ 'ಆಸರೆ' ಸಮುದಾಯ ಪೊಲೀಸ್ ಯೋಜನೆಯಡಿ ಹಿರಿಯ ನಾಗರಿಕರ ನಿವಾಸಗಳಿಗೆ ಭೇಟಿ ನೀಡಿ, ಅವರ ಆರೋಗ್ಯ, ಯೋಗಕ್ಷೇಮ ಹಾಗೂ ಸುರಕ್ಷತೆಯ ಕುರಿತು ಆತ್ಮೀಯವಾಗಿ ವಿಚಾರಿಸಿದರು.

ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಆಲಿಸಿ, ಆರೋಗ್ಯ ತುರ್ತು ಪರಿಸ್ಥಿತಿಗಳು ಸೇರಿದಂತೆ ಯಾವುದೇ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆಯುವಂತೆ ತಿಳಿಸಿ, ಪೊಲೀಸ್‌ ಇಲಾಖೆ ಸದಾ ಅವರ ಅಗತ್ಯವಿರುವ ಎಲ್ಲ ಸಹಕಾರವನ್ನು ನಿರಂತರವಾಗಿ ಒದಗಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
Karnataka State Police BENGALURU CITY POLICE

27/07/2026

ಆಗ್ನೇಯ ವಿಭಾಗದ ರಾಣಿ ಚೆನ್ನಮ್ಮ ಪಡೆಯವರು Thilaknagar PS Bcp ವ್ಯಾಪ್ತಿಯ ಎಸ್‌ಎಸ್‌ಎಂಆರ್‌ವಿ ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ತಡೆಗಟ್ಟುವಿಕೆ, #ಬೇಡಾBro ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು, ಮಹಿಳಾ ಸುರಕ್ಷತೆ ಹಾಗೂ ಸ್ವಯಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.
ಹಾಗೂ ತುರ್ತು ಸಂದರ್ಭಗಳಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ KSP App, Dial 112 ಹಾಗೂ 1930 ಸೈಬರ್ ಸಹಾಯವಾಣಿ ಸಂಖ್ಯೆಗಳ ಬಳಕೆಯ ಕುರಿತು ಅರಿವು ಮೂಡಿಸಿದರು.
Karnataka State Police BENGALURU CITY POLICE

27/07/2026
27/07/2026

ಆಗ್ನೇಯ ವಿಭಾಗದ #ರಾಣಿ_ಚೆನ್ನಮ್ಮ_ಪಡೆಯವರು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಸರಗಳ್ಳತನ ತಡೆ ಮತ್ತು ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸಿದರು.

ಪೊಲೀಸ್ ಇಲಾಖೆಯ ವಿವಿಧ ಉಪಯುಕ್ತ ಸೇವೆಗಳನ್ನು ಸುಲಭವಾಗಿ ಪಡೆಯಲು ಕೆ.ಎಸ್.ಪಿ. (KSP) ಆಪ್ ಅನ್ನು ತಮ್ಮ ಮೊಬೈಲ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ಬಳಸುವಂತೆ ತಿಳಿಸಿ, ಅದರ ಉಪಯೋಗಗಳ ಬಗ್ಗೆ ತಮ್ಮ ಸ್ನೇಹಿತರು, ಕುಟುಂಬದವರಿಗೆ ತಿಳಿಸುವಂತೆ ಹಾಗೂ ತುರ್ತು ಸಂದರ್ಭಗಳಲ್ಲಿ #112 ತುರ್ತು ಸಹಾಯವಾಣಿಯನ್ನು ಬಳಸುವ ಕುರಿತು ಮಾಹಿತಿ ನೀಡಿರುತ್ತಾರೆ.
Karnataka State Police BENGALURU CITY POLICE
#ಜನಸ್ನೇಹಿಪೊಲೀಸ್ #ಮಹಿಳಾಸುರಕ್ಷತೆ

27/07/2026

🚨 ಪಾರ್ಟ್-ಟೈಮ್ ಉದ್ಯೋಗ SMS ವಂಚನೆಗಳಿಂದ ಎಚ್ಚರ! 📱⚠️

ಸುಲಭವಾಗಿ ಹಣ ಗಳಿಸುವ ಅವಕಾಶ ಎಂದು ಆಮಿಷವೊಡ್ಡುವ ನಕಲಿ SMS ಸಂದೇಶಗಳ ಮೂಲಕ ವಂಚಕರು ನಿಮ್ಮ ಹಣ ಹಾಗೂ ವೈಯಕ್ತಿಕ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಾರೆ.

✅ ಎಷ್ಟೇ ಆಕರ್ಷಕವಾಗಿ ಕಂಡರೂ ಪರಿಶೀಲಿಸದ (Unverified) ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಬೇಡಿ.
✅ ಅಪರಿಚಿತರೊಂದಿಗೆ ಯಾವುದೇ ಹಣಕಾಸಿನ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆಯಿಂದಿರಿ.
✅ ನಿಮ್ಮ ಬ್ಯಾಂಕ್ ಖಾತೆ ವಿವರಗಳು, OTP ಅಥವಾ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
✅ ಅನುಮಾನಾಸ್ಪದ ಸಂಖ್ಯೆಗಳನ್ನು ತಕ್ಷಣ ವರದಿ ಮಾಡಿ ಹಾಗೂ ಬ್ಲಾಕ್ ಮಾಡಿ.
📞 ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ www.cybercrime.gov.in ನಲ್ಲಿ ದೂರು ದಾಖಲಿಸಿ.
Karnataka State Police BENGALURU CITY POLICE
#1930

Address

Madiwala
Bangalore

Website

Alerts

Be the first to know and let us send you an email when Madivala PS posts news and promotions. Your email address will not be used for any other purpose, and you can unsubscribe at any time.

Shortcuts

Share

Category