K V Ramprasad

K V Ramprasad Chairman, Karnataka Arya Vysya Community Development Corporation, Government of Karnataka

ತ್ಯಾಗ, ಪ್ರೀತಿ, ಮತ್ತು ಮಮತೆಯ ಸಾಕಾರ ಮೂರ್ತಿ 'ಅಮ್ಮ'. ಜಗತ್ತನ್ನು ಸಲಹುವ ಶಕ್ತಿಯೇ ತಾಯಿ. ನಿಸ್ವಾರ್ಥ ಸೇವೆಯ ಮೂಲಕ ನಮ್ಮ ಬದುಕನ್ನು ರೂಪಿಸುವ...
10/05/2026

ತ್ಯಾಗ, ಪ್ರೀತಿ, ಮತ್ತು ಮಮತೆಯ ಸಾಕಾರ ಮೂರ್ತಿ 'ಅಮ್ಮ'. ಜಗತ್ತನ್ನು ಸಲಹುವ ಶಕ್ತಿಯೇ ತಾಯಿ. ನಿಸ್ವಾರ್ಥ ಸೇವೆಯ ಮೂಲಕ ನಮ್ಮ ಬದುಕನ್ನು ರೂಪಿಸುವ ಎಲ್ಲಾ ಮಾತೃ ಹೃದಯಗಳಿಗೆ ವಿಶ್ವ ತಾಯಂದಿರ ದಿನದ ಹೃತ್ಪೂರ್ವಕ ನಮನಗಳು.

#ತಾಯಂದಿರದಿನ

ಜನ ಸಾಮಾನ್ಯರಿಗೆ ಸದಾ ನೆರವಿನ ಹಸ್ತವಾಗಿ 'ಬಡವರ ಬಂಧು' ಎಂದೇ ಖ್ಯಾತಿ ಪಡೆದಿದ್ದ ಸಚಿವ ಡಿ. ಸುಧಾಕರ್ ಅವರು ನಿಧನದ ಸುದ್ದಿ ಬೇಸರ ತಂದಿದೆ. ಅವರ ...
10/05/2026

ಜನ ಸಾಮಾನ್ಯರಿಗೆ ಸದಾ ನೆರವಿನ ಹಸ್ತವಾಗಿ 'ಬಡವರ ಬಂಧು' ಎಂದೇ ಖ್ಯಾತಿ ಪಡೆದಿದ್ದ ಸಚಿವ ಡಿ. ಸುಧಾಕರ್ ಅವರು ನಿಧನದ ಸುದ್ದಿ ಬೇಸರ ತಂದಿದೆ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಅಭಿಮಾನಿಗಳು ಹಾಗೂ ಲಕ್ಷಾಂತರ ಕಾರ್ಯಕರ್ತರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ರಾಷ್ಟ್ರಗೀತೆಯ ಮೂಲಕ ದೇಶಭಕ್ತಿಯ ಚೈತನ್ಯವನ್ನು ಜಗತ್ತಿಗೆ ಸಾರಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಗುರು...
07/05/2026

ರಾಷ್ಟ್ರಗೀತೆಯ ಮೂಲಕ ದೇಶಭಕ್ತಿಯ ಚೈತನ್ಯವನ್ನು ಜಗತ್ತಿಗೆ ಸಾರಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಗುರುದೇವ Rabindranath Tagore ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.
ಅವರ ಸಾಹಿತ್ಯ ಮತ್ತು ಮಾನವೀಯ ಚಿಂತನೆಗಳು ಸದಾ ಸಮಾಜಕ್ಕೆ ಪ್ರೇರಣೆಯಾಗಿವೆ.

ದಿನಾಂಕ: 03/05/2026 ರಂದು ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು ವತಿಯಿಂದ ಪ್ರಪ್ರಥಮ ಬಾರಿಗೆ ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ...
04/05/2026

ದಿನಾಂಕ: 03/05/2026 ರಂದು ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು ವತಿಯಿಂದ ಪ್ರಪ್ರಥಮ ಬಾರಿಗೆ ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ 3 ದಿನಗಳ ಕಾಲ “ಚಿತ್ತಾರ - 2026” ಎಂಬ ಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ಪ್ರದರ್ಶನದಲ್ಲಿ ಉದಯೋನ್ಮುಖ ಹಾಗೂ ಖ್ಯಾತ ಆರ್ಯವೈಶ್ಯ ದೃಶ್ಯ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಕರ್ನಾಟಕದಾದ್ಯಂತ ಸುಮಾರು 35 ಜನ ಕಲಾವಿದರು ಭಾಗವಹಿಸಿ, 100 ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶನ ಮಾಡಿದರು.

ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಶ್ರೀ ಕೆ.ವಿ. ರಾಮ್ ಪ್ರಸಾದ್ ರವರು, ಅಧ್ಯಕ್ಷರು, ಕರ್ನಾಟಕ ಆರ್ಯವೈಶ್ಯ ಅಭಿವೃದ್ದಿ ನಿಗಮ, ಕುಟುಂಬ ಸಮೇತರಾಗಿ ಭಾಗವಹಿಸಿ ಕಲಾಕೃತಿಗಳನ್ನು ವೀಕ್ಷಿಸಿದರು. ಇದೇ ವೇಳೆ ಶ್ರೀ ನಟರಾಜ್ ರವರು, ಅಧ್ಯಕ್ಷರು, ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಅಶೋಕ ಟಿ.ಎನ್ ರವರು, ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ  ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳಾದ ಸಮರ್ಥ್ ಶಾಮನೂರು ಹಾ...
04/05/2026

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ
ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳಾದ ಸಮರ್ಥ್ ಶಾಮನೂರು ಹಾಗೂ ಉಮೇಶ್ ಮೇಟಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ಕನ್ಯಾಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿರುವ ವಾಸವಿ ಮಹಲ್‌ನಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ...
03/05/2026

ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ಕನ್ಯಾಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿರುವ ವಾಸವಿ ಮಹಲ್‌ನಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ವಿಶೇಷ ಸರ್ವಸದಸ್ಯರ ಸಭೆ ನಡೆಯಿತು.
ಈ ಸಭೆಯ ಮುಖ್ಯ ಉದ್ದೇಶ ನಮ್ಮ ನವಪೀಳಿಗೆಯ ಭವ್ಯ ಭವಿಷ್ಯ ನಿರ್ಮಾಣದ ದೃಷ್ಟಿಯಿಂದ ಮಹಾಸಭೆಯ ಉಪನಿಯಮಗಳು ಹಾಗೂ ಉದ್ದೇಶಗಳಲ್ಲಿ ಅಗತ್ಯವಾದ ತಿದ್ದುಪಡಿಗಳು ಮತ್ತು ಹೊಸ ಸೇರ್ಪಡೆಗಳನ್ನು ಕುರಿತು ಸಮಾಲೋಚನೆ ನಡೆಸಿ, ಅವುಗಳಿಗೆ ಅನುಮೋದನೆ ಪಡೆಯುವುದಾಗಿತ್ತು.
ಈ ವಿಶೇಷ ಸರ್ವಸದಸ್ಯರ ಸಭೆಯಲ್ಲಿ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಕೆ.ವಿ. ರಾಮ್ ಪ್ರಸಾದ್ ರವರು ಭಾಗವಹಿಸಿ, ಚರ್ಚೆ ಹಾಗೂ ವಿಮರ್ಶೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಬಳಿಕ ಮಾತನಾಡಿದ ಅವರು, ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಈ ತಿದ್ದುಪಡಿಗಳು ಮತ್ತು ಹೊಸ ಸೇರ್ಪಡೆಗಳು ಅತ್ಯವಶ್ಯಕವಾಗಿದ್ದು, ಎಲ್ಲರೂ ಸರ್ವಾನುಮತದಿಂದ ಅಂಗೀಕರಿಸಬೇಕೆಂದು ಮನವಿ ಮಾಡಿದರು.

ದಿನಾಂಕ: 30-೦4-2026 ರಂದು ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಆರ್ಯವೈಶ್ಯ ಪೀಠಾಧಿಪತಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವ...
02/05/2026

ದಿನಾಂಕ: 30-೦4-2026 ರಂದು ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಆರ್ಯವೈಶ್ಯ ಪೀಠಾಧಿಪತಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ವಾಸವಿ ನಗರೇಶ್ವರ ದೇವಸ್ಥಾನದ ವಿಗ್ರಹಗಳ ಪ್ರತಿಷ್ಠಾಪನಾ, ಕುಂಭಾಭಿಷೇಕ ಹಾಗೂ ಉದ್ಘಾಟನಾ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ಕೆ.ವಿ. ರಾಮ್ ಪ್ರಸಾದ್ ರವರು, ಅಧ್ಯಕ್ಷರು, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಭಾಗವಹಿಸಿದರು. ನಂತರ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವರ ಅಷ್ಟಬಂಧ ಪ್ರಾಣ ಪ್ರತಿಷ್ಠಾಪನೆ, ಶಿಖರ ಕಲಶ ಪ್ರತಿಷ್ಠಾಪನೆ, ಪ್ರತಿಷ್ಠಾ ಹೋಮ ಹಾಗೂ ತತ್ವಕಲಾ ಶಾಂತಿ ಹೋಮಗಳು ನೆರವೇರಿದವು.

ಈ ಮೂಲಕ ನೂತನವಾಗಿ ಶ್ರೀ ವಾಸವಿ ನಗರೇಶ್ವರ ದೇವಸ್ಥಾನದ ಕಾರ್ಯಕ್ರಮಗಳು ಭಕ್ತಿಪೂರ್ವಕವಾಗಿ ಮತ್ತು ವೈಭವಯುತವಾಗಿ ನೆರವೇರಿದವು.

International Labour Dayದೇಶದ ಪ್ರಗತಿ ಮತ್ತು ಸಮೃದ್ಧಿ ಕಾರ್ಮಿಕರ ಅಹೋರಾತ್ರಿ ಶ್ರಮ, ತ್ಯಾಗ ಮತ್ತು ನಿಷ್ಠೆಯ ಮೇಲೆ ನಿರ್ಮಿತವಾಗಿದೆ. ಸಮಾಜದ...
01/05/2026

International Labour Day

ದೇಶದ ಪ್ರಗತಿ ಮತ್ತು ಸಮೃದ್ಧಿ ಕಾರ್ಮಿಕರ ಅಹೋರಾತ್ರಿ ಶ್ರಮ, ತ್ಯಾಗ ಮತ್ತು ನಿಷ್ಠೆಯ ಮೇಲೆ ನಿರ್ಮಿತವಾಗಿದೆ. ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡುತ್ತಿರುವ ಎಲ್ಲಾ ಶ್ರಮಿಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ಎಲ್ಲಾ ಕಾರ್ಮಿಕ ಬಂಧುಗಳಿಗೆ ವಿಶ್ವ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಪರಿಶ್ರಮಕ್ಕೆ ಸದಾ ಗೌರವ, ಭದ್ರತೆ ಮತ್ತು ಸಮಾನ ಅವಕಾಶಗಳು ದೊರಕಲಿ.

ಮನುಕುಲದ ಕಲ್ಯಾಣಕ್ಕಾಗಿ ಭಗವಾನ್ ಬುದ್ಧರು ಪ್ರತಿಪಾದಿಸಿದ ಮೌಲ್ಯಗಳು, ನೀಡಿದ ಸಂದೇಶಗಳು ಸದಾ ಸಾರ್ವಕಾಲಿಕ. ಅವುಗಳ ಮಹತ್ವವನ್ನು ಸಾರೋಣ.
01/05/2026

ಮನುಕುಲದ ಕಲ್ಯಾಣಕ್ಕಾಗಿ ಭಗವಾನ್ ಬುದ್ಧರು ಪ್ರತಿಪಾದಿಸಿದ ಮೌಲ್ಯಗಳು, ನೀಡಿದ ಸಂದೇಶಗಳು ಸದಾ ಸಾರ್ವಕಾಲಿಕ. ಅವುಗಳ ಮಹತ್ವವನ್ನು ಸಾರೋಣ.

ಇಂದು ಕೋಲಾರ ಜಿಲ್ಲೆಯ ಮುಳಬಾಗಿಲಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ಬ್ರಹ್ಮ ರಥೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀ ಕೆ.ವಿ. ರಾಮ...
29/04/2026

ಇಂದು ಕೋಲಾರ ಜಿಲ್ಲೆಯ ಮುಳಬಾಗಿಲಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ಬ್ರಹ್ಮ ರಥೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀ ಕೆ.ವಿ. ರಾಮ್ ಪ್ರಸಾದ್ ರವರು, ಅಧ್ಯಕ್ಷರು, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಭಾಗವಹಿಸಿ ದೇವರ ದರ್ಶನ ಪಡೆದರು.
ನಂತರ ತಮ್ಮ ತಂದೆಯವರಾದ ಲೇಟ್ ಡಾ. ಕೆ.ವಿ. ವರದರಾಜಗುಪ್ತರವರ ಜ್ಞಾಪಕಾರ್ಥವಾಗಿ, ಮಕ್ಕಳು ಹಾಗೂ ಸಹೋದರರೊಂದಿಗೆ ಸೇರಿ ದೇವರನ್ನು ಹೊರುವವರಿಗೆ ಸಮವಸ್ತ್ರಗಳನ್ನು ವಿತರಿಸಿದರು.

ಸನ್ಮಾನ್ಯ ಶ್ರೀ ಕೆ.ವಿ. ರಾಮ್ ಪ್ರಸಾದ್ ರವರು, ಅಧ್ಯಕ್ಷರು, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಹಾಗೂ ಶ್ರೀ ನಂದನ್ ಕುಮಾರ್ ರವರು, ...
28/04/2026

ಸನ್ಮಾನ್ಯ ಶ್ರೀ ಕೆ.ವಿ. ರಾಮ್ ಪ್ರಸಾದ್ ರವರು, ಅಧ್ಯಕ್ಷರು, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಹಾಗೂ ಶ್ರೀ ನಂದನ್ ಕುಮಾರ್ ರವರು, ರಾಜ್ಯಾಧ್ಯಕ್ಷರು, ಕ.ಆ.ವೈ. ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ಇವರು ಇಂದು ಜಗನ್ಮಾತೆ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಿ ಜಯಂತಿ ಪ್ರಯುಕ್ತ ಸನ್ಮಾನ್ಯ ಶ್ರೀ ಎಂ.ಸಿ. ಸುಧಾಕರ್ ರವರು, ಮಾನ್ಯ ಉನ್ನತ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ, ಇವರನ್ನು ಅವರ ಸ್ವಗೃಹವಾದ ಡಾಲರ್ಸ್ ಕಾಲೋನಿಯಲ್ಲಿ ಭೇಟಿ ಮಾಡಿ ಶುಭಾಶಯಗಳನ್ನು ತಿಳಿಸಿದರು.

Address

Karnataka Regional Chapter Building, No:16-J, 1st Floor, Millers Tank Bed Area, Thimmaiah Road, Vasanthnagar
Bangalore
560052

Alerts

Be the first to know and let us send you an email when K V Ramprasad posts news and promotions. Your email address will not be used for any other purpose, and you can unsubscribe at any time.

Share

Category