ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್

  • Home
  • India
  • Bangalore
  • ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್

ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಪಂಚಮಸಾಲಿ ,ಗೌಡ ,ಮಲೈ ಗೌಡ ಮತ್ತು ದೀಕ್ಷಾ ಲಿಂಗಾಯತ್ ಸಮಾಜಗಳ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮೀಸಲಾತಿ

👆🚩🔥 *ಇಂಡಿಯಲ್ಲಿ ವಿದ್ಯಾರ್ಥಿ ನಿಲಯ ಶಾಖಾ ಪೀಠ ಹಾಗೂ ಸಮುದಾಯ ಭವನ ಕುರಿತು ಸಭೆ 30 march 2026 ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಜರುಗಿರುವ...
31/03/2026

👆🚩🔥 *ಇಂಡಿಯಲ್ಲಿ ವಿದ್ಯಾರ್ಥಿ ನಿಲಯ ಶಾಖಾ ಪೀಠ ಹಾಗೂ ಸಮುದಾಯ ಭವನ ಕುರಿತು ಸಭೆ 30 march 2026

ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಜರುಗಿರುವ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ-ಕೂಡಲಸಂಗಮ ಪೀಠದ ಶಾಖಾಮಠ ಸ್ಥಾಪನೆ ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜದ ಸಮುದಾಯ ಭವನ ನಿರ್ಮಾನ*. ಕುರಿತು ಜರುಗಿರುವ ಇಂಡಿ ತಾಲೂಕ ಸಮಸ್ತ ಲಿಂಗಾಯತ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆಯಲ್ಲಿ.
*ಪೂಜ್ಯ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾ ಸನ್ನಿಧಿ ಅವರು ಸಮಾಜ ಬಾಂಧವರಿಗೆ ಭೂದಾನವನ್ನು ಮಾಡಲು ಆದೇಶಿಸಿದಾಗ*.

*ಬಡ ಮಕ್ಕಳ ಉದ್ಧಾರಕ್ಕಾಗಿ ಉಚಿತ ವಸತಿ ನಿಲಯ ನಿರ್ಮಾಣಕ್ಕೆ* ಇಂಡಿ ತಾಲೂಕಿನ *ಸಾತಲಗಾಂವ ಗ್ರಾಮದ ಯುವ ಮುಖಂಡರಾದ ಶ್ರೀಯುತ ರಮೇಶ್ ಗೌಡ ಬಿರಾದಾರ*ಅವರು ಭೂದಾನವನ್ನು ಮಾಡಲು ಒಪ್ಪಿಕೊಂಡರು*.
*ಅವರ ಪರೋಪಕಾರದ ಕಾರ್ಯಕ್ಕಾಗಿ ಪೂಜ್ಯ ಜಗದ್ಗುರುಗಳ ಆಶೀರ್ವಾದದೊಂದಿಗೆ*
*ತಾಲೂಕ ಲಿಂಗಾಯತ ಪಂಚಮಸಾಲಿ ಸಮಸ್ತ ಸಮಾಜ ಬಾಂಧವರು ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು*
*ರಮೇಶಗೌಡರ ಭೂದಾನ ನಮ್ಮೆಲ್ಲರಿಗೂ ಪ್ರೇರಣೆ ಆಗಲಿ*
*ನಾವೆಲ್ಲರೂ ನಮ್ಮ ಸಮಾಜದ ಬಡ ವಿದ್ಯಾರ್ಥಿಗಳ ಉದ್ಧಾರಕ್ಕಾಗಿ ತನು ಮನ ದನದ ಮೂಲಕವಾಗಿ ಸಮಾಜ ಸೇವೆಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ*
ಜೈ ಬಸವಣ್ಣ
ಜೈ ರಾಣಿ ಚೆನ್ನಮ್ಮ ಜಿ
ಜೈ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾ ಸನ್ನಿಧಿ ಅವರಿಗೆ 👏👏👏👏

25/03/2026

👆🚩🔥 *ಮಹಾರಾಷ್ಟ್ರ ಲಿಂಗಾಯತ ಪಂಚಮಸಾಲಿ ಹಾಗೂ ಲಿಂಗಾಯತ ಉಪ ಸಮಾಜಗಳ ಮೀಸಲಾತಿಗಾಗಿ ಚಿಂತನಾ ಮಂಥನ ಸಮಾವೇಶದ ಪೂರ್ವಭಾವಿ ಸಭೆ ಸಾಂಗ್ಲಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ನೇರವರಿತು-*
ಈ ಸಭೆಯಲ್ಲಿ ರಾಜ್ಯ ಯುವ ಅಧ್ಯಕ್ಷ ಸಂಜಯ್ ಸಾಹುಕಾರ್ , ಕೇಂದ್ರ ಕೈಗಾರಿಕಾ ನಿಗಮ ಅಧ್ಯಕ್ಷ ಡಾ. ಅರಳಿ, ಸಾಂಗ್ಲಿ ಜಿಲ್ಲಾ ಸಂಘಟನೆಯ ಉಸ್ತುವಾರಿ ಉಮೇಶ್ ಪಾಟೀಲ್ , ಕೊಲ್ಲಾಪುರ ಸಂಘಟನೆಯ ಉಸ್ತುವಾರಿ ಕಿರಣ್ ಪಾಂಗ್ರೆ, ಸೊಲ್ಲಾಪುರ ಜಿಲ್ಲಾ ಯುವ ಅಧ್ಯಕ್ಷ ಸುರಾಜ್ , ರೋಹನ್, ನಿತಿನ್ ಪಾಟೀಲ್ , ರಾಜು ಚೌಗಲಾ ಮೊದಲಾದವರು ಉಪಸ್ಥಿತರಿದ್ದರು.

काल आमच्या सांगली धामणी येथील निवासस्थानी परमपूज्य जगद्गुरू श्री बसव जय मृत्युंजया महास्वामीजी, प्रमुख – पंचम पंचमशाली पीठ, Kudalasangama यांचे पावन आगमन लाभले, हा आमच्या कुटुंबीयांसाठी व समस्त समाजबांधवांसाठी अविस्मरणीय आणि परमभाग्याचा क्षण ठरला.

महाराजांचे विधिवत स्वागत करून पाद्यपूजन करण्याचा सन्मान आम्हाला लाभला. त्यांच्या पवित्र दर्शनाने संपूर्ण परिसर भक्तिमय आणि उत्साहपूर्ण झाला. त्यांनी आमच्या कुटुंबातील सदस्यांना व उपस्थित समाजबांधवांना आशीर्वाद देत धर्मरक्षणाची प्रेरणा दिली तसेच जगद्गुरु महात्मा Basavanna यांच्या समता, न्याय आणि कर्मयोगाच्या विचारांची पताका दृढपणे पुढे नेत असल्याचे प्रेरणादायी मार्गदर्शन केले.

कर्नाटक राज्यात पंचमशाली समाजाच्या शैक्षणिक प्रगतीसाठी व आरक्षण हक्कांसाठी त्यांनी उभारलेले प्रभावी आंदोलन आणि समाजातील वंचित घटकांना न्याय मिळवून देण्यासाठी केलेले अथक प्रयत्न पाहून आम्ही सर्वजण भारावून गेलो. धर्म व समाजरक्षणासाठी त्यांची संवेदनशीलता, कृतज्ञता आणि संघर्षशील नेतृत्व आम्हाला प्रेरणादायी वाटले. बसवेश्वर महाराजांच्या विचारांचा वसा खांद्यावर घेऊन ते ज्या सामर्थ्याने लढत आहेत, त्यातून आम्हालाही समाजकार्यासाठी नवी दिशा मिळाली.

महाराष्ट्रातील तमाम लिंगायत बांधवांच्या हक्कांसाठी आणि समाजहितासाठी शासनाच्या विविध विभागांमार्फत जे काही न्याय्य लाभ मिळवून द्यायचे आहेत, त्यासाठी आम्ही सदैव त्यांच्या विचारांशी निष्ठावंत राहून समाजकार्य करण्यास कटिबद्ध आहोत.

हा पवित्र योग घडवून आणण्यासाठी आमचे सन्मित्र किरण तांबिरे व राजू चौगुले यांचे मनःपूर्वक आभार. तसेच नूतन नगरसेवक म्हणून निवड झाल्याबद्दल सन्मानित झालेले सन्मित्र संजयजी तेलनाडे यांचेही अभिनंदन व शुभेच्छा. अल्पावधीत सूचना देऊनही आवर्जून उपस्थित राहिलेल्या सर्व समाजबांधवांचे मनःपूर्वक आभार.

कालचा हा कार्यक्रम अत्यंत भक्तिमय, प्रेरणादायी आणि समाजएकतेचा संदेश देणारा ठरला. अशा दिव्य क्षणांचे साक्षीदार होण्याचे भाग्य आम्हाला लाभले, याबद्दल आम्ही स्वतःला खरोखरच धन्य समजतो. 🙏

🚩🔥👆*ಕಾರಟಗಿಯಲ್ಲಿ ಪಂಚಮಸಾಲಿ ಸಮುದಾಯ ಭವನದ ಹಾಗೂ ಕಿತ್ತೂರು ರಾಣಿ ಚನ್ನಮ್ಮ  ವೃತ್ತದ ಅಡಿಗಲ್ಲು ಸಮಾರಂಭ ಯುಗಾದಿ ಶುಭ ಸಂದರ್ಭದಲ್ಲಿ 19 march ...
20/03/2026

🚩🔥👆*ಕಾರಟಗಿಯಲ್ಲಿ ಪಂಚಮಸಾಲಿ ಸಮುದಾಯ ಭವನದ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಅಡಿಗಲ್ಲು ಸಮಾರಂಭ ಯುಗಾದಿ ಶುಭ ಸಂದರ್ಭದಲ್ಲಿ 19 march 2026*

*ದಿವ್ಯ ಸಾನಿಧ್ಯ: : ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ*
*ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ , ಧರ್ಮಕ್ಷೇತ್ರ*
ಕೂಡಲಸಂಗಮ.
ಉದ್ಘಾಟನೆ:: ಶಿವರಾಜ ತಂಗಡಗಿ ಕರ್ಣಾಟಕ ಸರ್ಕಾರ ಸಚಿವರು ,
ಮಾಜಿ ಸಂಸದರುಗಳಾದ ಕರಡಿ ಸಂಗಣ್ಣ , ಶಿವರಾಮೇಗೌಡ , ಯುವ ನಾಯಕ ಡಾ ಬಸವರಾಜ ಕ್ಯಾವಟರ್ , ದಾಸೋಹ ಸಮಿತಿ ಅದ್ಯಕ್ಷ ಚನ್ನಬಸಪ್ಪ ಸುಂಕದ , ವಧು ವರ ಮಾಹಿತಿ ಕೇಂದ್ರದ ಅಧ್ಯಕ್ಷ ಆಮರೇಶ ಕುಳಗಿ , ಮುಖಂಡರುಗಳಾದ ಶಶಿಧರ ಗೌಡ , ಕಾರಟಗಿ ತಾಲೂಕು ಪಂಚಮಸಾಲಿ ಸಮಾಜ ಅಧ್ಯಕ್ಷ ಬಸವರಾಜ ಎತ್ತಿನ ಮನೆ, ಪಂಚಸೇನಾ ಅಧ್ಯಕ್ಷ ಶಿವಶರಣಪ್ಪ ಪೂಜೆ, ಪಂಪನಗೌಡ, ಜಂತಕಲ್ ಪಂಪನಗೌಡ , ಸಿದ್ದನಗೌಡ , ಮುಖಂಡರುಗಳಾದ ವಿರೂಪಾಕ್ಷಪ್ಪ ಕೆಂಡದ, ಗುಂಡಪ್ಪ ಕುಳಗಿ ಮೊದಲಾದವರು ಉಪಸ್ಥಿತರಿದ್ದರು.
Jaya mruthyunjaya swamijij

🚩👆 *wish you all Happy Ugadi festival**ನಾಡಿನ ಸಮಸ್ತರೆಲ್ಲರಿಗೂ ಭಾರತೀಯ ನೂತನ ಹೂಸ ವರ್ಷಾರಂಭ ಚಂದ್ರಮಾನ ಯುಗಾದಿ ಹಬ್ಬ, ಹಾಗೂ  ವಿಶ್ವಗು...
19/03/2026

🚩👆 *wish you all Happy Ugadi festival*
*ನಾಡಿನ ಸಮಸ್ತರೆಲ್ಲರಿಗೂ ಭಾರತೀಯ ನೂತನ ಹೂಸ ವರ್ಷಾರಂಭ ಚಂದ್ರಮಾನ ಯುಗಾದಿ ಹಬ್ಬ, ಹಾಗೂ ವಿಶ್ವಗುರು ಬಸವಣ್ಣನವರು, ಸ್ಥಾಪಿಸಿದ ಅನುಭವ ಮಂಟಪ, ಶೂನ್ಯ ಸಿಂಹಾಸನದ ಪ್ರಥಮ ಪೀಠಾಧ್ಯಕ್ಷರಾದ, ಜಗತ್ತಿನ ಪ್ರಪ್ರಥಮ ಸಂಸತ್ ಅಧ್ಯಕ್ಷರಾದ ಅಲ್ಲಮ ಪ್ರಭುದೇವರ ಜಯಂತಿಯ ಹಾರ್ದಿಕ ಶುಭಾಶಯಗಳು.*🙏

ಬಸವೇಶ್ವರ ನೂತನ ರಥೋತ್ಸವ ಅಂಗವಾಗಿ ಬಸವಪ್ರವಚನ ಉದ್ಘಾಟನೆಕಲ್ಬುರ್ಗಿ ಜಿಲ್ಲೆ
16/03/2026

ಬಸವೇಶ್ವರ ನೂತನ ರಥೋತ್ಸವ ಅಂಗವಾಗಿ ಬಸವಪ್ರವಚನ ಉದ್ಘಾಟನೆ
ಕಲ್ಬುರ್ಗಿ ಜಿಲ್ಲೆ

ಜನಪರ ಶಾಸಕರು ಹಾಗೂ ಭಾರತ ಸರ್ಕಾರದ ಮಾಜಿ ಸಚಿವರಾದ ಬಸವನಗೌಡ ಪಾಟೀಲ್ ಯಾತ್ನಾಳ್ ಇವರ ಮಗ ರಾಮನಗೌಡ ಪಾಟೀಲ್ ಯಾತ್ನಾಳ್ ಇವರ ಕಲ್ಯಾಣ ಮಹೋತ್ಸವದ ಸಾ...
15/03/2026

ಜನಪರ ಶಾಸಕರು ಹಾಗೂ ಭಾರತ ಸರ್ಕಾರದ ಮಾಜಿ ಸಚಿವರಾದ ಬಸವನಗೌಡ ಪಾಟೀಲ್ ಯಾತ್ನಾಳ್ ಇವರ ಮಗ ರಾಮನಗೌಡ ಪಾಟೀಲ್ ಯಾತ್ನಾಳ್ ಇವರ ಕಲ್ಯಾಣ ಮಹೋತ್ಸವದ ಸಾನಿದ್ಯವಹಿಸಿದ್ದ,
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ನೂತನ ದಂಪತಿಗಳನ್ನು ಆಶೀರ್ವಾದಿಸಿದರು.
ಈ ಸಂದರ್ಭದಲ್ಲಿ ಹಾಲಿ ಮಾಜಿ ಜನಪ್ರತಿನಿಧಿಗಳು ಗಣ್ಯರು ಸಮಾಜ ಬಾಂಧವರು ಹಾಗೂ ಯಾತ್ನಾಳ ಪಾಟೀಲ್ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

11/03/2026

*ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಾರಸನಹಳ್ಳಿಯಲ್ಲಿ ಧಾರ್ಮಿಕ ಸಮಾರಂಭದಲ್ಲಿ*
*ಪಂಚಸೇನಾ ಉದ್ಘಾಟನೆ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿಯವರಿಂದ*

ಬೆಳವಡಿ ರಾಣಿ ಮಲ್ಲಮ್ಮ ಪ್ರಾಧಿಕಾರಕ್ಕಾಗಿ ಅಧಿವೇಶನದಲ್ಲಿ ಒತ್ತಾಯ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯಾತ್ನಾಳ್ ಗುಡುಗು 🔥🚩👆  #ಬೆಳವಡಿಯಲ್ಲಿ_ಅದ...
02/03/2026

ಬೆಳವಡಿ ರಾಣಿ ಮಲ್ಲಮ್ಮ ಪ್ರಾಧಿಕಾರಕ್ಕಾಗಿ ಅಧಿವೇಶನದಲ್ಲಿ ಒತ್ತಾಯ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯಾತ್ನಾಳ್ ಗುಡುಗು

🔥🚩👆 #ಬೆಳವಡಿಯಲ್ಲಿ_ಅದ್ದೂರಿ_ರಾಣಿ_ಮಲ್ಲಮ್ಮನ #ಉತ್ಸವಕ್ಕೆ_ಜ್ಯೋತಿ_ಯಾತ್ರೆ_ಉದ್ಘಾಟಿಸಿದ.
ಕೂಡಲಸಂಗಮ ಮಹಾಪೀಠದ ಜಗದ್ಗುರು ಲಿಂಗಾಯತ ಪಂಚಮಸಾಲಿ ಪರಮಪೂಜ್ಯ ಪ್ರಥಮ ಜಗದ್ಗುರು
#ಶ್ರೀ_ಬಸವಜಯ_ಮೃತ್ಯುಂಜಯ_ಸ್ವಾಮೀಜಿಯವರು.

ಕರ್ನಾಟಕ ಸರ್ಕಾರದವತಿಯಿಂದ ಪ್ರತಿ ವರ್ಷದಂತೆ ನಡೆಯುವ ಮಲ್ಲಮ್ಮನ ಬೆಳವಡಿ ಉತ್ಸವ ಅಂಗವಾಗಿ.

ಸಿದ್ದಸಮುದ್ರದಿಂದ ಬೆಳವಡಿಯವರೆಗೆ
ಜ್ಯೋತಿ ಯಾತ್ರೆಯ ಬೈಕ್ Rally.

ಬೆಳವಡಿಯಲ್ಲಿ ಮಲ್ಲಮ್ಮನ ಪ್ರತಿಮೆಗೆ
ಮಾಲಾರ್ಪಣೆ ಭವ್ಯ ಮೆರವಣಿಗೆಗೆ ಚಾಲನೆ

ಈ ಸಂದರ್ಭದಲ್ಲಿ ಶಾಸಕ ಮಹಾಂತೇಶ ಕೌಜಲಗಿ,
ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ , ಜಿಲ್ಲಾಧಿಕಾರಿ ರೋಷನ್ ಬೇಗ, ಜಿಲ್ಲಾ ಪಂಚಾಯತಿ ಸದಸ್ಯೆ rohini ಬಾಬಾಸಾಹೇಬ್ ಪಾಟೀಲ್, ಶಂಕರ ಮಾಡಲಾಗಿ,
ಜಿಲ್ಲಾ ತಾಲೂಕು ಅಧಿಕಾರಿಗಳು, ಜಿಲ್ಲಾ ಪಂಚಾಯತಿ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.

Basava Jaya Mruthyunjaya Swamiji page Basava Jaya Mruthyunjaya Swamiji C C Patil Arvind Bellad C. C Patil Channaraj Hattiholi

*ವೀರ ರಾಣಿ ಕಿತ್ತೂರು ಚನ್ನಮ್ಮನವರ ಸ್ಮರಣೋತ್ಸವ ಸಮಿತಿ ಬೈಲಹೊಂಗಲ**ಪ್ರಥಮಮ ಜಗದ್ಗುರು ಶ್ರೀ ಬಸವ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ**ಲಿಂ...
24/02/2026

*ವೀರ ರಾಣಿ ಕಿತ್ತೂರು ಚನ್ನಮ್ಮನವರ ಸ್ಮರಣೋತ್ಸವ ಸಮಿತಿ ಬೈಲಹೊಂಗಲ*
*ಪ್ರಥಮಮ ಜಗದ್ಗುರು ಶ್ರೀ ಬಸವ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ*
*ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಧರ್ಮಕ್ಷೇತ್ರ ಕೂಡಲಸಂಗಮ*
ಇವರ ದಿವ್ಯ ನೇತೃತ್ವದಲ್ಲಿ

ಉಪವಿಭಾಗಧಿಕಾರಿಗಳು ಬೈಲಹೊಂಗಲ ಇವರ ಮೂಲಕ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ ಇವರಿಗೆ,
ಸಲ್ಲಿಸುವ
"ಮನವಿ ಪತ್ರ"

ವಿಷಯ: ವೀರರಾಣಿ ಕಿತ್ತೂರು ಚನ್ನಮ್ಮನವರ ರಾಕ್ ಗಾರ್ಡನ್ ಹಾಗೂ ಚಮ್ನಮ್ಮನವರ ಹೆಸರಿನಲ್ಲಿ ಅಂತರಾಷ್ಟ್ರೀಯ ಸೈನಿಕ ಶಾಲೆ ಸ್ಥಾಪನೆಗೆ ಬಜೆಟ್ 2026ರಲ್ಲಿ ಘೋಷಿಸುವ ಕುರಿತು.

ಸನ್ಮಾನ್ಯರೆ,
ಬೈಲಹೊಂಗಲ ನಾಡಿನ ಸಮಸ್ತ‌ ದೇಶಾಭಿಮಾನಿಗಳ ಪರವಾಗಿ ತಮ್ಮಲ್ಲಿ ವಿನಂತಿ ಏನೆಂದರೆ,
ಸೂರ್ಯಮುಳಗದ ಸಾಮ್ರಾಜ್ಯ ಕಟ್ಟಿದ್ದ ಬ್ರಿಟಿಷ್‌ ರಿಗೆ ಪ್ರಪಂಚದಲ್ಲಿ‌ ಮೊಟ್ಟಮೊದಲಿಗೆ ಸೋಲಿನ‌ ರುಚಿ ತೊರಿಸಿದ್ದ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ, ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಷ್ಟ್ರಮಾತೆ ವೀರರಾಣಿ ಕಿತ್ತೂರ ಚನ್ನಮ್ಮ‌ನನವರ ಕಿತ್ತೂರು ಕೋಟೆ, ಜನ್ಮಸ್ಥಳ ಕಾಕತಿ, ಐಕ್ಯಸ್ಥಾನ ಬೈಲಹೊಂಗಲ ಸೇರಿದಂತೆ ಸುಮಾರು 30ಸ್ಥಳಗಳ ಅಭಿವೃದ್ಧಿಗಾಗಿ 18ವರ್ಷಗಳ ಹಿಂದೆ ಸ್ಥಾಪನೆಯಾದ,
*ಕಿತ್ತೂರು ಪ್ರಾಧಿಕಾರಕ್ಕೆ ಈ ವರ್ಷದ ಬಜೆಟ್ ದಲ್ಲಿ ಕನಿಷ್ಠ 200ಕೋಟಿರೂಪಾಯಿ ನೀಡಬೇಕು ರಾಜ್ಯ ಸರ್ಕಾರ‌ ಒಂದು ಕಣ್ಣಿಗೆ ಬೆಣ್ಣಿ ಮತ್ತೊಂದು ಕಣ್ಣಿಗೆ ಸುಣ್ಣ ಹಾಕಿ ಮಲತಾಯಿ ಧೋರಣೆ ತಾಳುವದನ್ನು ತೀವ್ರವಾಗಿ ಖಂಡಿಸುತ್ತೆವೆ*
18ವರ್ಷಗಳಲ್ಲಿ ಯಾವುದೆ ಅಭಿವೃದ್ಧಿ ಪರವಾದ ಕಾರ್ಯಗಳನ್ನು ಕಾಣದೆ ಆಮೆಗತಿಯಲ್ಲಿ ಸಾಗುತ್ತಿವೆ. 18 ವರ್ಷದಿಂದ ಪ್ರಾಧಿಕಾರಕ್ಕೆ 43ಕೋಟಿ 75 ಲಕ್ಷ ರೂಪಾಯಿ‌ ಅನುದಾನ ಕೋಟೆ ಪುನರ್ಜಿವನಕ್ಕೆ ಅಲ್ಪ ಮೊತ್ತ ನೀಡಿದ್ದನ್ನು ಬಿಟ್ಟರೆ ಏನು ಇಲ್ಲಾ. ಸರ್ಕಾರಗಳು 10ವರ್ಷದ ಪ್ರಾಧಿಕಾರಕ್ಕೆ 350ಕೋಟಿಗಿಂತ‌ ಹೆಚ್ಚಿನ‌ ಹಣ ನೀಡಿದ್ದಿರಿ ಇದು ಸ್ವಾಗತಾರ್ಹ. ಆದರೆ ತಾಯಿಯ ಸ್ಥಾನದಲ್ಲಿದ್ದು ಸರ್ವಸ್ವವನ್ನೂ ತನ್ನ ಪ್ರಜೆಗಳಿಗಾಗಿ ದಾರೆ ಎರೆದು ಪ್ರಾಣ ತ್ಯಾಗಮಾಡಿದ ವೀರರಾಣಿ ಚನ್ದಮ್ಮನವರ ಪ್ರಾಧಿಕಾರದ ಬಗ್ಗೆ ಅಸಡ್ಡೆ ತೊರುವದಲ್ಲದೆ ಈ ಬಜೆಟ್ ನಲ್ಲಿ 200ಕೋಟಿ ಅನುದಾನ ನೀಡದೆ ಹೋದರೆ ಉಗ್ರವಾಗಿ ಖಂಡಿಸುತ್ತೆವೆ.

ಸರ್ಕರದ ಮಲತಾಯಿ ಧೋರಣೆಯಿಂದ ವೀರರಾಣಿ ಚನ್ನಮ್ಮನವರ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಿರಿ. ಅಂದು ಬ್ರಿಟೀಷರಿಂದ ಪಡಬಾರದ ಕಷ್ಟ ಅನುಭವಿಸಿದ ತಾಯಿ ಚನ್ನಮ್ಮನವರಿಗೆ ಇಂದಿನ ಪ್ರಜಾಪ್ರಭುತ್ವ ಸರ್ಕಾರ ಬ್ರೀಟಿಷ್ ಸರ್ಕಾರದಂತೆ ನಡೆದುಕೊಳ್ಳುತ್ತಿರುವದು ರಾಷ್ಟ್ರಮಾತೆಗೆ ತೋರಿದ ಅಗೌರವ. ಜನ್ಮಭೂಮಿ ಕಾಕತಿಯಲ್ಲಿ‌ ಚನ್ನಮ್ಮನ ಮೂರ್ತಿಯೊಂದನ್ನು ಬಿಟ್ಟರೆ ಅವರ ಜನ್ಮಸ್ಥಾನದಲ್ಲಿ ಒಂದೆ ಒಂದು ಅಭಿವೃದ್ಧಿ ಇಲ್ಲಾ. ಕಿತ್ತೂರು ಉತ್ಸವ ಒಂದನ್ನು ಬಿಟ್ಟರೆ ಕೋಟೆಯ ರಕ್ಷಣೆಯಾಗಲಿ ಇನ್ನುವರೆಗೆ ನಡೆದಿಲ್ಲ. ಐಕ್ಯಸ್ಥಾನ ಬೈಲಹೊಂಗಲದಲ್ಲಿ ಕಳೆದ 10ವರ್ಷದಿಂದ ಆಮೆಗತಿಯಲ್ಲಿ ಅಲ್ಪಸ್ವಲ್ಪ ಕಾರ್ಯ ನಡೆದಿದ್ದು ಅದನ್ನು ಯಾವದೆ ಗೌರವ ಕೊಡದೆ ತುರಾತುರಿಯಲ್ಲಿ ಉದ್ಘಾಟನೆ ನಡೆಸಿರುವದು ಚನ್ನಮ್ಮನ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದ್ದಿರಿ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರಿಲ್ಲದೆ ಐಕ್ಯಸ್ಥಳ ಉದ್ಘಾಟನೆ ಈ ಭಾಗದ ದುರ್ಧೈವ .‌
ತಕ್ಷಣ ಸರ್ಕಾರ ಕಿತ್ತೂರು ಪ್ರಾಧಿಕಾರಕ್ಕೆ ಕನಿಷ್ಠ 200ಕೋಟಿ ಅನುದಾನ ನೀಡಬೇಕು. ಚನ್ನಮ್ಮನ ಐಕ್ಯಸ್ಥಾನ ಬೈಲಹೊಂಗಲದಲ್ಲಿ ಅಂತರಾಷ್ಟ್ರೀಯ ಬಾಲಕಿಯರ ಸೈನಿಕ ಶಾಲೆ ತೆರೆಯಬೇಕು. ಕಿತ್ತೂರ ಮತ್ತು ಬೈಲಹೊಂಗಲದಲ್ಲಿ ಚನ್ನಮ್ಮನ ವೀರ ಜೀವನದ ರಾಕ್ ಗಾರ್ಡನ್ ಕನಿಷ್ಠ ನೂರುಕೋಟಿ ರೂಪಯಿಗಳಲ್ಲಿ ನೂರಾರೂ ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಬೇಕು.
ಕಿತ್ತೂರು ಕೋಟೆಯನ್ನು ಮರು ಸೃಷ್ಟಿಸುವದು ಹೇಳಿಕೆಯಾಗದೆ ಕಾರ್ಯಪ್ರವರ್ತರಾಗಬೇಕು. ಪ್ರಾಧೀಕಾರದಲ್ಲಿ ಹೇಳಿದ ಮರಡಿ ದಿಬ್ಬ, ಕಲ್ಮಠ,‌ನಿಚ್ಚನಕಿ ಸೇರಿದಂತೆ‌ 30ಸ್ಥಳಗಳ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಬೇಕು.
ಕಳೆದ ವರ್ಷ ಅನುದಾನ ನೀಡದ ಸರ್ಕಾರದ ಕ್ರಮ‌ ಖಂಡಿಸಿ ಮಾ18ರಂದು ಬೈಲಹೊಂಗಲ ಪಟ್ಟಣವನ್ನು ಎಲ್ಲ ಮಠಾಧೀಶರ ನೇತೃತ್ವದಲ್ಲಿ ವೀರರಾಣಿ ಚನ್ನಮ್ಮನವರ ಅಭಿಮಾನಿಗಳು ಬಂದ ಮಾಡಿ ಅಕ್ರೋಶ ವ್ಯಕ್ತಪಡಿಸಿರುವದು ಮರೆಯಬಾರದು. ಮತ್ತೊಮ್ಮೆ ಅಂತಹ ಅವಕಾಶ ನೀಡಬಾರದೆಂದು ತಮಗೆ ಎಚ್ಷರಿಕೆ ನೀಡುತ್ತೆವೆ. ಬಜೆಟ್ ನಲ್ಲಿ ಕಿತ್ತೂರು ಪ್ರಾಧಿಕಾರಕ್ಕೆ ಕನಿಷ್ಠ 200ಕೋಟಿ ಹಣ ಅನುದಾನ ನೀಡುವದಾಗಬೇಕು
ಧನ್ಯವಾದಗಳೊಂದಿಗೆ..

ಬೈಲಹೊಂಗಲ. ತಮ್ಮ ವಿಶ್ವಾಸಿ
ದಿನಾಂಕ: 22.02.2026

Address

Bangalore
560001

Website

Alerts

Be the first to know and let us send you an email when ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ posts news and promotions. Your email address will not be used for any other purpose, and you can unsubscribe at any time.

Share

Category