22/05/2026
ಮಹಾಲಕ್ಷ್ಮೀ ಲೇಔಟ್ ನ ಜನಪ್ರಿಯ ಶಾಸಕರು ಹಾಗೂ ನನ್ನ ತಂದೆಯವರಾದ ಶ್ರೀ K Gopalaiah ಅವರ ಮಾರ್ಗದರ್ಶನದಲ್ಲಿ ಇಂದು ಕಮಲಾನಗರ ಹಾಗೂ ವೃಷಭಾವತಿನಗರ ವಾರ್ಡ್‌ಗಳ ಯುವ ಮೋರ್ಚಾ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಶಾಸಕರ ಗೃಹ ಕಚೇರಿಯಲ್ಲಿ ನಡೆಸಲಾಯಿತು. ನನ್ನ ಉಸ್ತುವಾರಿಯಲ್ಲಿ ಆಯೋಜಿಸಿದ್ದ ಈ ಸಭೆಯಲ್ಲಿ, ಮೇ 31ರಂದು ಯುವಮೋರ್ಚಾ ಪದಾಧಿಕಾರಿಗಳ ಅಧಿಕೃತ ಘೋಷಣೆ ಹಾಗೂ ಪ್ರಮಾಣಪತ್ರ ವಿತರಣೆ ಸಮಾರಂಭವನ್ನು ನಡೆಸುವಂತೆ ನಿರ್ಧರಿಸಲಾಯಿತು. ಬಿಬಿಎಂಪಿ ಮಾಜಿ ಉಪಮೇಯರ್ ಹಾಗೂ ನನ್ನ ತಾಯಿಯವರಾದ ಶ್ರೀಮತಿ ಹೇಮಲತಾ ಗೋಪಾಲಯ್ಯ, ಮಂಡಲ ಅಧ್ಯಕ್ಷರಾದ ಡಾ. ನಾಗೇಂದ್ರ,ಮಾಜಿ ಕಾರ್ಪೊರೇಟರ್ ಜಯರಾಮ್,ಪ್ರಧಾನ ಕಾರ್ಯದರ್ಶಿ ನಿಸರ್ಗ ಜಗದೀಶ್, ವಾರ್ಡ್ ಅಧ್ಯಕ್ಷರುಗಳಾದ ಬಿ ವಿ ಸೋಮಶೇಖರ್, ರಂಗನಾಥ್, ಮೊದಲಾದವರು ಉಪಸ್ಥಿತರಿದ್ದರು.
BJP Karnataka