CPIML Liberation - Karnataka

CPIML Liberation - Karnataka CPIML Liberation is a revolutionary communist party fighting for the emancipation of people from the shackles of exploitation and all forms of domination.

Official handle of the CPIML Liberation, Karnataka State Committee [email protected]

ಐಸಾ ರಾಷ್ಟ್ರೀಯ ಅಧ್ಯಕ್ಷೆ ಕಾಮ್ರೇಡ್ ನೇಹಾ ಬೋರಾ ಮೇಲಿನ ದಾಳಿ ಖಂಡಿಸಿ: ಸಂಘಿ ಗೂಂಡಾಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಪಿಐ(ಎಂಎಲ್) ಲಿಬರೇಶನ್ ಆಗ...
08/08/2026

ಐಸಾ ರಾಷ್ಟ್ರೀಯ ಅಧ್ಯಕ್ಷೆ ಕಾಮ್ರೇಡ್ ನೇಹಾ ಬೋರಾ ಮೇಲಿನ ದಾಳಿ ಖಂಡಿಸಿ: ಸಂಘಿ ಗೂಂಡಾಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಪಿಐ(ಎಂಎಲ್) ಲಿಬರೇಶನ್ ಆಗ್ರಹಿಸಿ ಪ್ರತಿಭಟನೆ

ಗಂಗಾವತಿ: ಆಗಸ್ಟ್ 08. 2026
ಜಾರ್ಖಂಡ್‌ನ ರಾಂಚಿಯಲ್ಲಿ ನೇಮಕಾತಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಯುವಜನರೊಂದಿಗೆ ಐಕ್ಯತೆ ವ್ಯಕ್ತಪಡಿಸಲು ತೆರಳಿದ್ದ AISA ರಾಷ್ಟ್ರೀಯ ಅಧ್ಯಕ್ಷೆ ಕಾಮ್ರೇಡ್ ನೇಹಾ ಹಾಗೂ ಇತರ ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆದ ದಾಳಿಯನ್ನು ಸಿಪಿಐ(ಎಂಎಲ್) ಲಿಬರೇಶನ್ ತೀವ್ರವಾಗಿ ಖಂಡಿಸಿ.ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಆಕ್ರೋಶ ವ್ಯಕ್ತಪಡಿಸಿದರು

ಈ ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐಎಂಎಲ್ ಲಿಬರೇಶನ್ ರಾಜ್ಯಕಾರ್ಯದರ್ಶಿ ಕ್ಲಿಫ್ಟನ್ ಡಿ ರೋಜೊರಿಯೋ ಅವರು ಮಾತನಾಡಿ ಜಾರ್ಖಂಡ್ ನಲ್ಲಿ ನೇಹಾ ಅವರ ಮೇಲೆ ನಡೆದ ದಾಳಿ ಕೇವಲ ಪ್ರತ್ಯೇಕ ಗೂಂಡಾಗಿರಿಯ ಘಟನೆ ಅಲ್ಲ. ಮಹಿಳೆಯರು ಯುವಜನರ ಹೋರಾಟದ ಮುಂಚೂಣಿಯಲ್ಲಿ ನಿಂತು ರಾಜಕೀಯ ನಾಯಕತ್ವ ವಹಿಸುತ್ತಿರುವುದನ್ನು ಸಂಘ ಪರಿವಾರದ ಪಿತೃಸತ್ತಾತ್ಮಕ ರಾಜಕಾರಣ ಸಹಿಸಿಕೊಳ್ಳಲಾಗುತ್ತಿಲ್ಲ ಎಂಬುದನ್ನು ಈ ಘಟನೆ ಮತ್ತೊಮ್ಮೆ ಬಹಿರಂಗಪಡಿಸಿದೆ

ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುವಜನರ ಹೋರಾಟಗಳಲ್ಲಿ ಮಹಿಳಾ ವಿದ್ಯಾರ್ಥಿನಿಯರು ಮತ್ತು ಯುವತಿಯರು ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಅವರು ಮೌನ ಪ್ರೇಕ್ಷಕರಾಗಿರದೆ ಉದ್ಯೋಗ, ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ.
ಮಹಿಳೆಯರನ್ನು ಕೇವಲ ಕುಟುಂಬದ ‘ಗೌರವ’ದ ಸಂಕೇತಗಳಾಗಿ ನೋಡಬೇಕೆಂಬ ಪಿತೃಸತ್ತಾತ್ಮಕ ಮನೋಭಾವಕ್ಕೆ, ಹೋರಾಟದ ಮುಂಚೂಣಿಯಲ್ಲಿ ನಿಂತಿರುವ ಮಹಿಳೆಯರು ನೇರ ಸವಾಲಾಕಿದ್ದಾರೆ ಎಂದು ಹೇಳಿದರು.

ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಸಮಿತಿ ಸದಸ್ಯರಾದ ನಿರ್ಮಲಾ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ದಾಳಿ,ವೈಯಕ್ತಿಕ ಮಾಹಿತಿಯ ಬಹಿರಂಗಪಡಿಸುವಿಕೆ, ಬೆದರಿಕೆಗಳು ಹಾಗೂ ಇತರ ರೀತಿಯ ಕಿರುಕುಳದ ಆರೋಪಗಳು ಕೇಳಿಬರುತ್ತಿವೆ. ಮಹಿಳೆಯರನ್ನು ಹೆದರಿಸಿ ಅವರ ರಾಜಕೀಯ ಧ್ವನಿಯನ್ನು ಮೌನಗೊಳಿಸುವ ಯಾವುದೇ ಪ್ರಯತ್ನವನ್ನು
ಮಹಿಳೆಯರನ್ನು ಮೌನಗೊಳಿಸಲು ಸಾಧ್ಯವಿಲ್ಲ
ಜಾರ್ಖಂಡ್‌ನಲ್ಲಿ ನೇಹಾ ಮತ್ತು ಇತರ ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆದ ದಾಳಿಗೆ ಹೊಣೆಗಾರರನ್ನು ಗುರುತಿಸಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮಹಿಳಾ ಪ್ರತಿಭಟನಾಕಾರರಿಗೆ ಸಂಪೂರ್ಣ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರ ಮೇಲಿನ ಪ್ರತಿಯೊಂದು ದಾಳಿಯೂ ಇನ್ನಷ್ಟು ಮಹಿಳೆಯರನ್ನು ಹೋರಾಟದ ಮುಂಚೂಣಿಗೆ ತರುತ್ತದೆ. ಬೆದರಿಕೆ ಮತ್ತು ದಮನಕ್ಕೆ ನಮ್ಮ ಉತ್ತರ ಇನ್ನಷ್ಟು ಬಲವಾದ ಜನಾಂದೋಲನ ಎಂದು ಸಿಪಿಐ(ಎಂಎಲ್) ಲಿಬರೇಶನ್ ತಿಳಿಸಿದೆ.

ಉದ್ಯೋಗ, ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವ ಯುವಜನರ ಧ್ವನಿಯನ್ನು ಹತ್ತಿಕ್ಕುವ ಬದಲು, ನೇಮಕಾತಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳ ಕುರಿತು ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಪ

The recent attack on Com. Neha, AISA President, in Ranchi, Jharkhand, where she reached along with other AISA comrades i...
07/08/2026

The recent attack on Com. Neha, AISA President, in Ranchi, Jharkhand, where she reached along with other AISA comrades in solidarity with the youth protesting against recruitment scams and paper leaks, is not an isolated act of hooliganism. It is the latest expression of a deep patriarchal panic gripping the RSS–Sangh ecosystem.

(ಕನ್ನಡಕ್ಕಾಗಿ ಸ್ವೈಪ್ ಮಾಡಿ)

ಜಾರ್ಖಂಡ್‌ನ ರಾಂಚಿಯಲ್ಲಿ ನೇಮಕಾತಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಯುವಜನತೆಯೊಂದಿಗೆ ಐಕ್ಯತೆ ವ್ಯಕ್ತಪಡಿಸಲು ಇತರ ಐಸಾ (AISA) ಕಾಮ್ರೇಡ್‌ಗಳೊಂದಿಗೆ ತೆರಳಿದ್ದ ಐಸಾ ರಾಷ್ಟ್ರೀಯ ಅಧ್ಯಕ್ಷೆ ಕಾಮ್ರೇಡ್ ನೇಹಾ ಅವರ ಮೇಲೆ ಇಂದು ನಡೆದ ದಾಳಿ ಕೇವಲ ಗೂಂಡಾಗಿರಿಯ ಒಂದು ಪ್ರತ್ಯೇಕ ಘಟನೆಯಲ್ಲ. ಇದು ಆರ್‌ಎಸ್‌ಎಸ್–ಸಂಘ ಪರಿವಾರವನ್ನು ಆವರಿಸಿರುವ ಆಳವಾದ ಪಿತೃಸತ್ತಾತ್ಮಕ ಭಯದ ಮತ್ತೊಂದು ಬಹಿರಂಗ ಅಭಿವ್ಯಕ್ತಿಯಾಗಿದೆ.

In Harapanahalli of Vijayanagara district (Karnataka), supporting the hunger strike being held by AISA students at Janta...
20/07/2026

In Harapanahalli of Vijayanagara district (Karnataka), supporting the hunger strike being held by AISA students at Jantar Mantar, Delhi, demanding the resignation of Union Minister Dharmendra Pradhan over the NEET paper leak issue, a memorandum addressed to the Honorable President was submitted through the Tehsildar on behalf of the All India Students' Association (AISA).

ವಿಜಯನಗರ ಜಿಲ್ಲಾ ಹರಪ್ಪನ ಹಳ್ಳಿಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (AISA)ವತಿಯಿಂದ ನೀಟ್ ಪೇಪರ್ ಲೀಕ್ ವಿಚಾರವಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಲು ಜಂತರ್ ಮಂತರ್ ದೆಹಲಿಯಲ್ಲಿ ಐಸಾ ವಿದ್ಯಾರ್ಥಿಗಳು ಉಪವಾಸ ಮಾಡುತ್ತಿರುವ ಹೋರಾಟವನ್ನು ಬೆಂಬಲಿಸಿ, ಹರಪನಹಳ್ಳಿಯಲ್ಲಿ ಮಾನ್ಯ ರಾಷ್ಟ್ರಪತಿಯವರಿಗೆ ತಹಸೀಲ್ದಾರ್ ಮೂಲಕ ಮನವಿ ನೀಡಲಾಯಿತು

✊ "Youth must unite against capitalism, casteism, and communalism to save democracy!"CPI(ML) Liberation State Secretary,...
07/06/2026

✊ "Youth must unite against capitalism, casteism, and communalism to save democracy!"

CPI(ML) Liberation State Secretary, Clifton D'Rozario, delivered a powerful call to action at the Revolutionary Youth Association (RYA) State Convention held at Ambedkar Bhavan, B.C. Road in Dakshina Kannada district.

Speaking on "The Role of Students & Youth in Facing Current National Challenges," he emphasized that capitalism is draining the analytical thinking of our youth and urged them to cultivate a questioning mindset to avoid becoming corporate slaves. He inspired the youth to follow Bhagat Singh’s patriotism, Dr. B.R. Ambedkar’s social justice, and Kuvempu’s vision of universal humanity (Vishwa Manava).

The event was inaugurated by Karnataka Rajya Raitha Sangha State Secretary, Ravikiran Punacha, who raised concerns over the country's economic distress, rising debt, and unemployment, urging the youth to break their silence and lead the nation forward.

A new RYA State Convening Committee was also formed during the convention to strengthen the youth movement in Karnataka! 🚩

👉🏿Swipe left to see glimpses from the convention! 📸

👉🏽ಹೇಳಿಕೆ: ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆಗಳ ಚುನಾವಣೆಗಳು, ವ...
05/05/2026

👉🏽ಹೇಳಿಕೆ: ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು

ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆಗಳ ಚುನಾವಣೆಗಳು, ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ, ಒಂದರ ಹಿಂದೆ ಮತ್ತೊಂದು ಆಘಾತಕಾರಿ ಫಲಿತಾಂಶಗಳನ್ನು ನೀಡಿವೆ. ಪಶ್ಚಿಮ ಬಂಗಾಳದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ತಮಿಳುನಾಡು ಚಲನಚಿತ್ರತಾರೆ ಜೋಸೆಫ್ ವಿಜಯ್ ಚಂದ್ರಶೇಖರ್ ನೇತೃತ್ವದಲ್ಲಿ ಹೊಸ ಪಕ್ಷವಾದ ಟಿವಿಕೆ ಉದಯಗೊಂಡಿದ್ದು, ಕಳೆದ ಆರು ದಶಕಗಳಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಯ ಪರ್ಯಾಯ ರಾಜಕೀಯ ಪ್ರಾಬಲ್ಯವನ್ನು ಕೊನೆಗೊಳಿಸಿದೆ.

ಪಶ್ಚಿಮ ಬಂಗಾಳದಲ್ಲಿ 90 ಲಕ್ಷಗಿಂತಲೂ ಹೆಚ್ಚು ಮತ್ತು ತಮಿಳುನಾಡಿನಲ್ಲಿ 70 ಲಕ್ಷಗಿಂತಲೂ ಹೆಚ್ಚು ಮತದಾರರನ್ನು ಸಾಮೂಹಿಕವಾಗಿ ಹೊರಗಿಟ್ಟ ನಂತರ ಮತ್ತು ಅಸ್ಸಾಂನಲ್ಲಿ ಕ್ಷೇತ್ರಗಳ ಅತ್ಯಂತ ವಿಚಿತ್ರವಾದ ಪುನರ್ವಿಂಗಡಣೆಯ (delimitation) ನಂತರ ಫಲಿತಾಂಶಗಳು ಬಂದಿರುವುದನ್ನು ನಾವು ಗಮನಿಸಬೇಕು. ಪಶ್ಚಿಮ ಬಂಗಾಳದ SIR ಪ್ರಕ್ರಿಯೆಯಲ್ಲಿ 'ತಾರ್ಕಿಕ ವ್ಯತ್ಯಾಸ'ದ (logical discrepancy) ಹೆಸರಿನಲ್ಲಿ ಹೆಚ್ಚುವರಿ ಫಿಲ್ಟರ್‌ಗಳನ್ನು ಸೇರಿಸಲಾಯಿತು ಮತ್ತು 30 ಲಕ್ಷ ಹೆಚ್ಚು ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಯಿತು. ಈ ಮತದಾರರ ಹೊರದಬ್ಬುವಿಕೆಯ ಜೊತೆಗೆ, ಕೇಂದ್ರ ಸರ್ಕಾರವು ಚುನಾವಣೆಯ ಪ್ರಕ್ರಿಯೆಯಲ್ಲಿ ಭಾರೀ ಮಾತ್ರದ ಹಸ್ತಕ್ಷೇಪ ಮತ್ತು ಅಭೂತಪೂರ್ವ ಅರೆಸೈನಿಕ ಪಡೆಗಳ ನಿಯೋಜನೆಯ ಸಂದರ್ಭದಲ್ಲಿ ನಡೆಸಲಾಗಿದೆ.

ಲೆಕ್ಕಾಚಾರ ಭರಿತ ಈ ಚುನಾವಣೆಯಲ್ಲಿ ಬಾಂಗ್ಲಾದೇಶದ "ನುಸುಳುಕೋರರ" ನೆಪವನ್ನು ಬಳಸಿಕೊಂಡು ಮತದಾರರಲ್ಲಿ ಕೋಮು ದ್ವೇಷ ಪ್ರೇರಿತ ಪ್ರಚಾರ ಮತ್ತು ಇತರ ಇಸ್ಲಾಮೋಫೋಬಿಕ್ ಮಿತ್ಯಗಳನ್ನು ಟಿಎಂಸಿಯ ದುರಾಡಳಿತದ ವಿರುದ್ಧ ಜನರನ್ನು ಕ್ರೋಢೀಕರಿಸಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಅನಿರೀಕ್ಷಿತ ವಿಜಯಕ್ಕೆ ಕಾರಣವಾಗಿದೆ.

ಫಲಿತಾಂಶದಿಂದ ಹುರಿದುಂಬಿದ ಬಿಜೆಪಿಯು ಅಧಿಕಾರವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಮತ್ತು ಕೇಂದ್ರೀಕರಿಸಲು, ಮತದಾನದ ಹಕ್ಕನ್ನು ಕಳೆದುಕೊಳ್ಳುವುದು ಮತ್ತು ಜನಾಂಗೀಯ ಹಿಂಸಾಚಾರವನ್ನು ಹೆಚ್ಚಿಸಿ, ಜನರ ಪ್ರತಿರೋಧವನ್ನು ಹತ್ತಿಕ್ಕಲು ರಾಜಕೀಯ ದಮನವನ್ನು ಹೆಚ್ಚಿಸುತ್ತಾ ತನ್ನ ದುಷ್ಟ ರಾಜಕೀಯ ಕಾರ್ಯಸೂಚಿಯನ್ನು ಮುಂದುವರಿಸಲು ಪ್ರಯತ್ನಿಸುತ್ತದೆ. ಎಡ ಮತ್ತು ಪ್ರಗತಿಪರ ಶಕ್ತಿಗಳು ಒಗ್ಗಟ್ಟಿನಿಂದ ಈ ಫ್ಯಾಸಿಸ್ಟ್ ಶಕ್ತಿಗಳನ್ನು ವಿರೋಧಿಸಲು ಜನರೊಂದಿಗೆ ನಿಲ್ಲಬೇಕು.

ಸಿಪಿಐ(ಎಂಎಲ್) ಲಿಬರೇಶನ್

CPIML ಲಿಬರೇಶನ್ ಸಿಂಧನೂರು ತಾಲೂಕ ಸಮಿತಿ ನೇತೃತ್ವದಲ್ಲಿ ಒಡಿಶಾದ ಬುಡಕಟ್ಟು ಸಮುದಾಯದ ಜೀತು ಮುಂಡಾ ಅವರ ಮೇಲೆ ಸರ್ಕಾರಿ ಬ್ಯಾಂಕ್ ಅಧಿಕಾರಿಗಳ ಅ...
02/05/2026

CPIML ಲಿಬರೇಶನ್ ಸಿಂಧನೂರು ತಾಲೂಕ ಸಮಿತಿ ನೇತೃತ್ವದಲ್ಲಿ ಒಡಿಶಾದ ಬುಡಕಟ್ಟು ಸಮುದಾಯದ ಜೀತು ಮುಂಡಾ ಅವರ ಮೇಲೆ ಸರ್ಕಾರಿ ಬ್ಯಾಂಕ್ ಅಧಿಕಾರಿಗಳ ಅಮಾನವೀಯ ವರ್ತನೆ ಖಂಡಿಸಿ, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೊಳಪಡಿಸಿ ತಪ್ಪಿತಸ್ಥ ಬ್ಯಾಂಕ್ ಅಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕಾರ್ಮಿಕರ ದಿನಾಚರಣೆಯ ಕ್ರಾಂತಿಕಾರಿ ಶುಭಾಶಯಗಳು....1871ರ ಪ್ಯಾರೀಸ್ ಕಮ್ಯೂನ್, ಕೇವಲ 72 ದಿನದ ಅಲ್ಪಾವಧಿ ಆಳ್ವಿಕೆ ನಡೆಸಿದರೂ. ಕಾರ್ಮಿಕರು ಉತ...
01/05/2026

ಕಾರ್ಮಿಕರ ದಿನಾಚರಣೆಯ ಕ್ರಾಂತಿಕಾರಿ ಶುಭಾಶಯಗಳು....

1871ರ ಪ್ಯಾರೀಸ್ ಕಮ್ಯೂನ್, ಕೇವಲ 72 ದಿನದ ಅಲ್ಪಾವಧಿ ಆಳ್ವಿಕೆ ನಡೆಸಿದರೂ. ಕಾರ್ಮಿಕರು ಉತ್ಪಾದನೆ ಮಾಡಲು ಮಾತ್ರ ಸೀಮಿತರಾಗಿಲ್ಲ. ಅವರು ಕ್ರಾಂತಿಯನ್ನು ಜರುಗಿಸಿ ಆಧಿಕಾರ ಹಿಡಿಯಬಲ್ಲರೆಂದು ಪ್ಯಾರೀಸ್ ಕ್ರಾಂತಿ ತೋರಿಸಿ ಕೊಟ್ಟಿತು. ಜಗತ್ತಿನ ತಂತ್ರಜ್ಞಾನ ಉತ್ಪಾದನೆಯ ಮುಂಚೂಣಿಯಲ್ಲಿದ್ದ ಯೂರೋಪ್ ಕಾರ್ಮಿಕ ಶೋಷಣೆಯಲ್ಲಿಯೂ ಹಿಂದೆ ಬಿದ್ದಿರಲಿಲ್ಲ. ಮಾಲೀಕ ವರ್ಗದ ಬಂಡವಾಳಶಾಹಿಗಳು ಕಾರ್ಮಿಕರನ್ನು ಯಂತ್ರಗಳಂತೆ ಬಳಸಿಕೊಂಡು, ಜೀವನದ ಕನಿಷ್ಠ ಭದ್ರತೆ ನೀಡದೇ, ಶಕ್ತಿ ಹೀನಗೊಂಡ ಕಾರ್ಮಿಕರನ್ನು ತ್ಯಾಜ್ಯದಂತೆ ಬಿಸಾಡುವ ಹೀನ ಸ್ಥಿತಿ ಇತ್ತು. ಯೂರೋಪಿನಿಂದ ಸ್ಪೂರ್ತಿ ಪಡೆದ ಅಮೇರಿಕ ಉಪಖಂಡದ ಚಿಕ್ಯಾಗೋ ನಗರದಲ್ಲಿ 1886ರ ಮೇ ಆರಂಭದಲ್ಲಿ ಬಂಡವಾಳಶಾಹಿ ಮಾಲೀಕ ವರ್ಗದ ವಿರುದ್ಧ 12-16 ತಾಸಿನ ಕೆಲಸದ ಅವಧಿ ವಿರುದ್ಧ ಕಾರ್ಮಿಕರು ದಂಗೆ ಎದ್ದರು. ಕೆಲಸದ ಅವಧಿ 8 ಗಂಟೆಗೆ ಮಿತಿಗೊಳಿಸಲು ಒತ್ತಾಯಿಸಿ ಪೋಲೀಸರ ಗುಂಡಿಗೆ ಎದೆಯೊಡ್ಡಿದರು. ಇಲ್ಲಿ 4 ಕಾರ್ಮಿಕರು ಗಲ್ಲಿಗೇರುವ ಮೂಲಕ ಇಡೀ ಜಗತ್ತಿನ ಕಾರ್ಮಿಕರು ಎಚ್ಚೆತ್ತು ಸಿಡಿದೇಳವಂತೆ ಮಾಡಿದ ದಿನವಾಯಿತು. ಅಂದಿನಿಂದ ಜಗತ್ತಿನ ಬಹುತೇಕ ರಾಷ್ಟ್ರಗಳು 8 ತಾಸಿನ ಕೆಲಸಕ್ಕೆ ಮಣಿದವು. ಇದರ ಪ್ರೇರಣಿಯಿಂದ ಅರ್ಕಾಟಿಕ, ಅಹ್ಮದಾಬಾದ್ ಮತ್ತು ಬಾಂಬೆಯಲ್ಲಿ ಹತ್ತಿ ಗಿರಣಿಯ ಸಹಸ್ರಾರು ಕಾರ್ಮಿಕರು ಮಾಲೀಕರ ವಿರುದ್ಧ ಬೀದಿಗಿಳಿಯುವ ಮೂಲಕ 1823ರಲ್ಲಿ ರೋಚಕ ಇತಿಹಾಸ ನಿರ್ಮಿಸಿದರು. ಅಲ್ಲದೇ ಕಾರ್ಮಿಕರು ಬ್ರಿಟಿಷ್ರ ವಿರುದ್ಧ ದಂಗೆ ಎದ್ದು, ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದರು. ಕಾರ್ಮಿಕರ ಶ್ರಮ ದೋಚುವ ಬಂಡವಾಳಶಾಹಿ, ಕಂಪನಿರಾಜ್ ,ಆಳುವ ವರ್ಗದ ವಿರುದ್ಧ ಐಕ್ಯತೆಯಿಂದ ಕಾರ್ಮಿಕ ಹಕ್ಕುಗಳ ಉಳಿವಿಗಾಗಿ ಸಂಘರ್ಷ ತೀವ್ರಗೊಳಿಸೋಣ.

ದುಡಿಯುವ ವರ್ಗದ ಐಕ್ಯತೆ ಚಿರಾಯುವಾಗಲಿ.!
AICCTU ಜಿಂದಾಬಾದ್!

CPI(ML) Liberation's 57th Party Foundation Day and 156th Birth Anniversary of Comrade Lenin was observed in party branch...
22/04/2026

CPI(ML) Liberation's 57th Party Foundation Day and 156th Birth Anniversary of Comrade Lenin was observed in party branches in Karnataka.

CPI(ML) members resolved to uphold the communist banner and lead the struggle for a genuinely sovereign secular socialist democratic republic, & to expand and strengthen the CPI(ML) in every possible way to fulfill the dreams of our great martyrs and serve the interests of our great people.

ಖಾಸಗಿ ಆಸ್ಪತ್ರೆಗಳ ಜೊತೆ ಸರಕಾರಿ ಆಸ್ಪತ್ರೆಗಳ ಒಪ್ಪಂದ ಮಾಡಿ ಕೊಂಡಿರುವ ಸರಕಾರ ಕ್ರಮ ಖಂಡಿಸಿ CPIML ಲಿಬರೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ...
17/04/2026

ಖಾಸಗಿ ಆಸ್ಪತ್ರೆಗಳ ಜೊತೆ ಸರಕಾರಿ ಆಸ್ಪತ್ರೆಗಳ ಒಪ್ಪಂದ ಮಾಡಿ ಕೊಂಡಿರುವ ಸರಕಾರ ಕ್ರಮ ಖಂಡಿಸಿ CPIML ಲಿಬರೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಮ್ಮ ಹಕ್ಕೊತ್ತಾಯಗಳು -
👉 ಸರ್ಕಾರ ತಕ್ಷಣವೇ ಖಾಸಗಿ ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳನ್ನು ರದ್ದುಪಡಿಸಬೇಕು!
👉 ಸರಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಮತ್ತು ಸಿಬ್ಬಂದಿಯನ್ನು ಒದಗಿಸಬೇಕು!
👉 ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಬೇಕು!
ಜನರ ಹಕ್ಕುಗಳನ್ನು ರಕ್ಷಿಸಲು, ಶೋಷಣೆಯ ವಿರುದ್ಧ ಧ್ವನಿ ಎತ್ತಲು — ಎಲ್ಲರೂ ಒಗ್ಗೂಡಬೇಕು.

ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣಕ್ಕೆ ಒಪ್ಪಿಸುವ ಸರ್ಕಾರದ ದ್ರೋಹ — ಜನರ ಹಕ್ಕುಗಳ ಮೇಲೆ ದಾಳಿ!ರಾಜ್ಯದ ಆಡಳಿತ ವರ್ಗ ಮತ್ತೆ ಒಂದು ಬಾರ...
15/04/2026

ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣಕ್ಕೆ ಒಪ್ಪಿಸುವ ಸರ್ಕಾರದ ದ್ರೋಹ — ಜನರ ಹಕ್ಕುಗಳ ಮೇಲೆ ದಾಳಿ!

ರಾಜ್ಯದ ಆಡಳಿತ ವರ್ಗ ಮತ್ತೆ ಒಂದು ಬಾರಿ ತನ್ನ ನಿಜಸ್ವರೂಪವನ್ನು ಬಯಲಿಗೆಳೆಯುತ್ತಿದೆ. ಜನಸಾಮಾನ್ಯರ ಆರೋಗ್ಯವನ್ನು ರಕ್ಷಿಸಬೇಕಾದ ಸರ್ಕಾರವೇ ಇಂದು ಖಾಸಗಿ ಆಸ್ಪತ್ರೆಗಳ ಲಾಭದಾಸೆಗೆ ತಲೆಬಾಗುತ್ತಿದ್ದು, ಸರಕಾರಿ ಆಸ್ಪತ್ರೆಗಳನ್ನೇ ಹಂತ ಹಂತವಾಗಿ ಖಾಸಗೀಕರಣದ ಹಾದಿಗೆ ಒಯ್ಯುತ್ತಿದೆ. ಇದು ಕೇವಲ ಆಡಳಿತದ ನಿರ್ಧಾರವಲ್ಲ — ಇದು ಬಡಜನರ ಬದುಕಿನ ಮೇಲೆ ನಡೆಸುತ್ತಿರುವ ನೇರ ದಾಳಿ!

ಸರಕಾರಿ ಆಸ್ಪತ್ರೆಗಳು ಜನರ ಹಕ್ಕು. ಅದು ದಾನವಲ್ಲ, ಅದು ದಯೆಯಲ್ಲ — ಅದು ಸಂವಿಧಾನಿಕ ಹಕ್ಕು. ಆದರೆ, ಆ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ. “ಸೌಲಭ್ಯಗಳ ಕೊರತೆ” ಎಂಬ ನೆಪದಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಎಂದರೆ ಸರ್ಕಾರ ತನ್ನ ಹೊಣೆಗಾರಿಕೆಯಿಂದ ಓಡಿ ಹೋಗುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ.

ಬೆಳ್ತಂಗಡಿ, ಮೂಡಬಿದ್ರೆ, ಬಂಟ್ವಾಳ, ವಿಟ್ಲ ಪ್ರದೇಶಗಳಲ್ಲಿನ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳ ಜೊತೆ ಸೇರಿಸುವುದು ಜನಪರ ನೀತಿ ಅಲ್ಲ — ಇದು ಕಾರ್ಪೊರೇಟ್ ಪರ ನೀತಿ! ಇವುಗಳಿಂದ ಲಾಭವಾಗುವುದು ಜನರಿಗೆ ಅಲ್ಲ, ಕೆಲವೇ ಮুষ্টಿಮೇಲೆ ಕುಳಿತಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಮಾತ್ರ.
ಇಂದು ಖಾಸಗಿ ಆಸ್ಪತ್ರೆಗಳು ಹೇಗೆ ಜನರನ್ನು ಸುಲಿಗೆ ಮಾಡುತ್ತಿವೆ ಎಂಬುದು ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಗೊತ್ತಿದೆ. ಚಿಕಿತ್ಸೆ ಎಂಬ ಹೆಸರಿನಲ್ಲಿ ಸಾವಿರಾರು ರೂಪಾಯಿಗಳನ್ನು ಕಿತ್ತುಕೊಳ್ಳುವ ವ್ಯವಸ್ಥೆಗೆ ಈಗ ಸರ್ಕಾರವೇ ಕಾನೂನುಬದ್ಧ ಬಲ ನೀಡುತ್ತಿದೆ. ಇದು ಸ್ವೀಕಾರಾರ್ಹವಲ್ಲ!

ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದು ಸರ್ಕಾರದ ಮೊದಲ ಕರ್ತವ್ಯ. ಆದರೆ ಅದನ್ನು ಬಿಟ್ಟು ಖಾಸಗೀಕರಣದ ದಾರಿಗೆ ಹೋಗುವುದು ಎಂದರೆ, ಬಡವರನ್ನು ಆರೋಗ್ಯ ಸೇವೆಯಿಂದ ದೂರ ತಳ್ಳುವುದು. ಇದು ಸಾಮಾಜಿಕ ಅನ್ಯಾಯದ ಪರಾಕಾಷ್ಠೆ.

ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಬಹುಕಾಲದಿಂದ ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಅದನ್ನು ಕಡೆಗಣಿಸಿ ಇರುವ ವ್ಯವಸ್ಥೆಯನ್ನೇ ಕುಸಿತಗೊಳಿಸುತ್ತಿದೆ. ಇದು ಜನರ ಆಶೆಗಳನ್ನೇ ದ್ರೋಹ ಮಾಡುವಂತಾಗಿದೆ.

ಇದನ್ನು ವಿರೋಧಿಸುವುದು ಕೇವಲ ರಾಜಕೀಯ ಹೋರಾಟವಲ್ಲ — ಇದು ಮಾನವೀಯ ಹೋರಾಟ. ಆರೋಗ್ಯ ಹಕ್ಕಿಗಾಗಿ, ಸಮಾನತೆಗೆಗಾಗಿ, ಶೋಷಣೆಯ ವಿರುದ್ಧ ಹೋರಾಡುವ ಅವಶ್ಯಕತೆ ಇದೆ.

👉 ಸರ್ಕಾರ ತಕ್ಷಣವೇ ಖಾಸಗಿ ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳನ್ನು ರದ್ದುಪಡಿಸಬೇಕು!
👉 ಸರಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಮತ್ತು ಸಿಬ್ಬಂದಿಯನ್ನು ಒದಗಿಸಬೇಕು!
👉 ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಬೇಕು!
ಜನರ ಹಕ್ಕುಗಳನ್ನು ರಕ್ಷಿಸಲು, ಶೋಷಣೆಯ ವಿರುದ್ಧ ಧ್ವನಿ ಎತ್ತಲು — ಎಲ್ಲರೂ ಒಗ್ಗೂಡಬೇಕು.

Address

Bangalore
560048

Alerts

Be the first to know and let us send you an email when CPIML Liberation - Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to CPIML Liberation - Karnataka:

Shortcuts

Share