17/10/2025
ತಂದೆಯ ಕೃಪಾಕಟಾಕ್ಷದಿಂದ ಮೊದಲ ಬಾರಿ ರಾಮನಗರ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ತಂದೆ ಎಚ್ ಡಿ ದೇವೇಗೌಡ ರವರ ಜಾತ್ಯಾತೀತ ತತ್ವದ ವಿರುದ್ಧವಾಗಿ ಅಧಿಕಾರದ ಆಸೆಗೆ ಬಿಜೆಪಿಯ ಯಡಿಯೂರಪ್ಪ ನವರ ಜೊತೆ 20 :20 ಸರ್ಕಾರ ರಚನೆ ಮಾಡಿ ಅಧಿಕಾರ ಅನುಭವಿಸಿ ಬಿಜೆಪಿಯ *ನಾಯಕ ಯಡಿಯೂರಪ್ಪನವರಿಗೆ ಅಧಿಕಾರವನ್ನು ಹಸ್ತಾಂತರ ಮಾಡದೆ ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡು ಕೂತ ಏಕೈಕ ಮುಖ್ಯಮಂತ್ರಿ ತಾವು....*
ದಲಿತ ಸಮುದಾಯದಿಂದ ಬೆಳೆದು ತನ್ನ ಜ್ಞಾನಾರ್ಜನೆಯಿಂದ ಡಾಕ್ಟರೇಟ್ ಪಡೆದ ಒಬ್ಬ ವಿದ್ಯಾವಂತ ನಾಯಕರದ ಡಾಕ್ಟರ್ ಜಿ ಪರಮೇಶ್ವರ್ ಸಾಹೇಬರು ಪಕ್ಷ ಹಾಗೂ ರಾಜ್ಯ ಸರ್ಕಾರದಲ್ಲಿ ಹಲವು ಉನ್ನತ ಖಾತೆಗಳನ್ನು ನಿಭಾಯಿಸಿದ ಅನುಭವಿ ರಾಜಕಾರಣಿ *ಪರಮೇಶ್ವರ್ ಸಾಹೇಬರಿಗೂ ನಿಮಗೂ ವಿದ್ಯಾರ್ಹತೆ, ಜ್ಞಾನ,ಅನುಭವದಲ್ಲಿ ಆಕಾಶ ಭೂಮಿಯಷ್ಟು ಅಂತರ* ಎಂಬುದನ್ನು ತಾವು ಅರಿತರೆ ಒಳಿತು
*ಮಾನ್ಯ ಎಚ್ ಡಿ ಕುಮಾರಸ್ವಾಮಿ ರವರೆ ತಮಗೆ ತಮ್ಮ ತಂದೆಯವರಿಗೆ ದಲಿತ ನಾಯಕರುಗಳು ಎಂದರೆ ಯಾಕಿಷ್ಟು ತಾತ್ಸಾರ*
#ಪುರುಷೋತ್ತಮ್ ಹೆಚ್. ಎಂ
ರಾಜ್ಯ ಅಧ್ಯಕ್ಷರು