National Livelihood Mission - Karnataka

Directions Website

National Livelihood Mission - Karnataka National Livelihood Mission(NRLM & NULM) was launched by Government of India in June 2011

A progress review meeting on the NRLM and DDU-GKY was held under the chairmanship of Dr. Sharana Prakash R. Patil, Hon’b...
04/09/2026

A progress review meeting on the NRLM and DDU-GKY was held under the chairmanship of Dr. Sharana Prakash R. Patil, Hon’ble Minister for Skill Development, Entrepreneurship and Livelihood Department, at Vikasa Soudha.
The meeting was attended by Sri Subodh Yadav, I.A.S., Principal Secretary, Department of Skill Development, Entrepreneurship and Livelihoods, Smt. Vasireddi Vijaya Jyothsna, Mission Director, NLM-Karnataka, Sri Srinivas M., AMD, Smt. Kathyayini Devi, COO (Skills), Sri Srinivasulu, CFO and all Thematic SPMs.
The meeting focused on reviewing the progress of NRLM and DDU-GKY programmes and discussing key priorities and measures for effective implementation.

04/09/2026

🌾 ಆರೋಗ್ಯಕರ ಜೀವನಕ್ಕೆ ಜೋಳದ ರೊಟ್ಟಿ🌾
ಸಾಂಪ್ರದಾಯಿಕ ರುಚಿಯೊಂದಿಗೆ ಆರೋಗ್ಯಕರ ಆಹಾರಕ್ಕೆ ಹೊಸ ಮೆರುಗು ನೀಡುತ್ತಿರುವ ಅಕ್ಕ ದಾನೇಶ್ವರಿ ಜವಾರಿ ರೊಟ್ಟಿ.
ಶ್ರೀಮತಿ ಚೈತ್ರಾ ಕರಡಿ ಅವರ ನೇತೃತ್ವದಲ್ಲಿ, ನಿಸರ್ಗ ಸಂಜೀವಿನಿ ಸ್ವ-ಸಹಾಯ ಸಂಘ, ನೀರಬೂದಿಹಾಳ, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ – ಗ್ರಾಮೀಣ ಮಹಿಳೆಯರ ಪರಿಶ್ರಮ, ಸ್ವಾವಲಂಬನೆ ಮತ್ತು ಉದ್ಯಮಶೀಲತೆಗೆ ಹೆಮ್ಮೆಯ ಉದಾಹರಣೆ. 👩‍🌾✨

#ಸಂಜೀವಿನಿ #ಜೋಳದರೊಟ್ಟಿ #ಜವಾರಿರೊಟ್ಟಿ #ಮಹಿಳಾಉದ್ಯಮಶೀಲತೆ #ಸ್ವಸಹಾಯಸಂಘ #ಗ್ರಾಮೀಣಮಹಿಳೆಯರು #ಆರೋಗ್ಯಕರಆಹಾರ

04/09/2026
ಸಂಜೀವಿನಿ– ಡೇ ಎನ್.ಆರ್.ಎಲ್.ಎಂ ಯೋಜನೆಯಡಿ ಆಯೋಜಿಸುವ ಮಾಸಿಕ ಸಂತೆ ಕಾರ್ಯಕ್ರಮಗಳಲಿ ಭಾಗವಹಿಸುವ ಸ್ವ ಸಹಾಯ ಗುಂಪಿನ ಮಹಿಳಾ ಉದ್ಯಮಿಗಳೊಂದಿಗೆ ಶ್...
03/09/2026

ಸಂಜೀವಿನಿ– ಡೇ ಎನ್.ಆರ್.ಎಲ್.ಎಂ ಯೋಜನೆಯಡಿ ಆಯೋಜಿಸುವ ಮಾಸಿಕ ಸಂತೆ ಕಾರ್ಯಕ್ರಮಗಳಲಿ ಭಾಗವಹಿಸುವ ಸ್ವ ಸಹಾಯ ಗುಂಪಿನ ಮಹಿಳಾ ಉದ್ಯಮಿಗಳೊಂದಿಗೆ ಶ್ರೀ ನವೀನ್ ಭಟ್ ವೈ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಳು ಜಿಲ್ಲಾ ಪಂಚಾಯತಿಯ ಸಂವಾದ ನಡೆಸಿದರು.
ಸಂಜೀವಿನಿ ಯೋಜನೆಯ ಸ್ವ ಸಹಾಯ ಗುಂಪುಗಳ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಿ, ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮ ಅನುಷ್ಟಾನಗೋಳಿಸಲಾಗುತ್ತಿದ್ದು, ಪ್ರತಿ ತಿಂಗಳು ಸಾಪ್ತಹಿಕವಾಗಿ 02 ಸಂತೆಗಳನ್ನು ಆಯೋಜಿಸುವ ಮೂಲಕ ಇವರು ಉತ್ಪಾದಿಸಿದ ಉತ್ಪನಗಳು/ಬೆಳೆದ ಪದಾರ್ಥಗಳಿಗೆ ನೇರ ಮಾರುಕಟ್ಟೆಯನ್ನು ಒದಗಿಸಲಾಗುತ್ತಿದೆ. ಗ್ರಾಮೀಣ ಮಹಿಳೆಯರ ಜೀವನೋಪಾಯಕ್ಕೆ ಪ್ರೋತ್ಸಾಹಿಸಲು ಸಕ್ರಿಯವಾಗಿ ಪ್ರತಿ ಹಬ್ಬಗಳಿಗೂ ಆಯೋಜಿಸಲಾಗುವ ಮಾಸಿಕ ಸಂತೆಯಲ್ಲಿ ಭಾಗವಹಿಸಲು ಕರೆ ನೀಡಿದರು.
ಬಳಿಕ ವ್ಯಾಪಾರ ವಹಿವಾಟು ಕುರಿತು ಮಾಹಿತಿ ಪಡೆದು, ಗ್ರಾಹಕರ ನಿರ್ವಹಣೆ ಮತ್ತು ವ್ಯವಹಾರ ನಿರ್ವಹಣೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಆದಾಯ ದ್ವಿಗುಣಪಡಿಕೊಳ್ಳಲು ತಿಳಿಸಿದರು. ಉತ್ಪನ್ನಗಳ ಗುಣಮಟ್ಟ, ಪ್ಯಾಕೇಜಿಂಗ್ ಮತ್ತು ಮೌಲ್ಯವರ್ಧನೆಯನ್ನು ಸುಧಾರಿಸುವಂತೆ ಸಲಹೆ ನೀಡಿದರು.
ಸಂಘದ ಸದಸ್ಯರು ಜಿಲ್ಲಾ ಮಟ್ಟದ ಮಾರಾಟ ಮೇಳ, ರಾಜ್ಯ ಮಟ್ಟದ ಸರಸ್ ಮೇಳಗಳು, ಸರ್ಕಾರಿ ಮಾರಾಟ ಮಳಿಗೆಗಳಲ್ಲಿ ಅವಕಾಶ ನೀಡುವಂತೆ ಕೋರಿದರು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕು ಹಂತದಲ್ಲಿ ಸ್ವಸಹಾಯ ಗುಂಪಿನ ಉದ್ಯಮಗಳ ಉತ್ಪನ್ನ ಮಾರಾಟಕ್ಕೆ “ಮಾರ್ಕೆಟಿಂಗ್ ಕಿಯೋಸ್ಕ್ ಹಾಗೂ ಶೀಮಾರ್ಟ್ ಸ್ಥಾಪಿಸುವ ಬಗ್ಗೆ ಮತ್ತು ಸಂಜೀವಿನಿ ಆನ್ಲೈನ್ ಮಾರುಕಟ್ಟೆಯ ಪೋರ್ಟಲ್ ಸಹ ಪ್ರಾರಂಬಿಸುವುದರ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಂಜೀವಿನಿ ಮಹಿಳಾ ಉದ್ದಿಮೆದಾರರು, ಸಂಜೀವಿನಿ ಜಿಲ್ಲಾ ಮತ್ತು ತಾಲ್ಲೂಕು ಸಿಬ್ಬಂದಿ ಭಾಗವಹಿಸಿದರು.

03/09/2026

ಒಮ್ಮೆ ಸವಿದರೆ ಮತ್ತೆ ಮತ್ತೆ ನೆನಪಾಗುವ ಗಲಗಲಿ ಪೇಡಾ ತಯಾರಿಕೆ ಘಟಕ-ಗಲಗಲಿ 🙏ತಾ:ಬೀಳಗಿ.ಜಿ:ಬಾಗಲಕೋಟೆ.

ಸಂಜೀವಿನಿ ಕೆ ಎಸ್ ಆರ್ ಎಲ್ ಪಿ ಎಸ್ ವತಿಯಿಂದ OSF implementation ಕುರಿತಂತೆ ಅಭಿಯಾನದ ಜಿಲ್ಲಾ ಮತ್ತು ತಾಲ್ಲೂಕು ಸಿಬ್ಬಂದಿಗಳಿಗೆ ಆಯೋಜಿಸಲಾದ...
31/08/2026

ಸಂಜೀವಿನಿ ಕೆ ಎಸ್ ಆರ್ ಎಲ್ ಪಿ ಎಸ್ ವತಿಯಿಂದ OSF implementation ಕುರಿತಂತೆ ಅಭಿಯಾನದ ಜಿಲ್ಲಾ ಮತ್ತು ತಾಲ್ಲೂಕು ಸಿಬ್ಬಂದಿಗಳಿಗೆ ಆಯೋಜಿಸಲಾದ 4 ದಿನಗಳ ತರಬೇತಿ ಕಾರ್ಯಗಾರವನ್ನು ಶ್ರೀಮತಿ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ, ಮಾನ್ಯ ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕರ್ನಾಟಕ ಇವರು ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿದರು.
ಮಾನ್ಯ ಅಭಿಯಾನ ನಿರ್ದೇಶಕರು ಮಾಡಿ ತರಬೇತಿಗೆ ಭಾಗವಹಿಸಿರುವ ಎಲ್ಲಾ ಸಿಬ್ಬಂದಿಗಳು ಆಸಕ್ತಿಯಿಂದ ಭಾಗವಹಿಸಿ ನಿರ್ದಿಷ್ಟ ಗುರಿಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವಂತೆ ಸೂಚಿಸಿದರು. ಪ್ರತಿಯೊಬ್ಬರು ತಮ್ಮ ಕರ್ತವ್ಯದಲ್ಲಿ passion & commitment ನೊಂದಿಗೆ ಕೆಲಸ ನಿರ್ವಹಿಸಬೇಕು, ನಮ್ಮ ಕಾರ್ಯಕ್ರಮದ ಪಲಾನುಭವಿಗಳಾದ ಮಹಿಳೆಯ ಆರ್ಥಿಕ ಬಲವರ್ಧನೆಗೆ ಅಗತ್ಯ ನಿರಂತರ ಮಾರ್ಗದರ್ಶನ ನೀಡುವಲ್ಲಿ ಸಕ್ರಿಯವಾಗಿ ತೊಡಗಿತೊಳ್ಳುವುದು ಸಿಬ್ಬಂದಿಗಳ ಮೊದಲ ಆದ್ಯತೆ ಆಗಿರಬೇಕು ಎಂದು ತಿಳಿಸಿದರು.
ನಮ್ಮ ರಾಜ್ಯದಲ್ಲಿ OSF ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಅನುಷ್ಠಾನ ಮಾಡಬೇಕು. ಇದರಿಂದ ಗ್ರಾಮೀಣ ಮಹಿಳಾ ಉದ್ದಿಮೆಯನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಬೆಂಗಳೂರು ನಗರದ ಖಾಸಗೀ ಹೊಟೇಲ್‌ನಲ್ಲಿ ದಿನಾಂಕ :31.08.2026 ರಿಂದ 03.09.2026 ರವರೆಗೆ ಆಯೋಜಿಸಲಾಗಿರುವ ಕಾಋಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಶ್ರೀನಿವಾಸ್ ಎಂ, ಮಾನ್ಯ ಅಪರ ಅಭಿಯಾನ ನಿರ್ದೇಶಕರು, ರಾಷ್ಟ್ರ ಸಂಪನ್ಮೂಲ ವ್ಯಕ್ತಿಗಳು, ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರು- ಕೃಷಿಯೇತರ, ಅಪರ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರು, ಯುವ ವೃತ್ತಿಪರರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಘಟಕ ಸಿಬ್ಬಂದಿಗಳು ಹಾಜರಿದ್ದರು.

Sri S Sasikumar (IFoS) Hon. Joint Secretary (Rural Skills), MoRD, Govt. of India, visited National Academy of RUDSETI in...
28/08/2026

Sri S Sasikumar (IFoS) Hon. Joint Secretary (Rural Skills), MoRD, Govt. of India, visited National Academy of RUDSETI in Kumbalgodu, Bengaluru and interacted with NAR, NACER, Karnataka SRLM Officials and other stakeholders.
Smt. Kathyayini Devi, respected COO (Skills), Sanjeevini-KSRLPS briefed Hon. JS Sir about the Current Progress made under RSETIs in Karnataka and also about the Innovative Proposals and Ideas being explored by Karnataka SRLM including Collaboration with Industry and Academic Partners.

28/08/2026

ರಾಜ್ಯದಾದ್ಯಂತ ಸಂಜೀವಿನಿ ಸ್ವಸಹಾಯ ಸಂಘಗಳ (SHG) ಸದಸ್ಯರು ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಮಾನ್ಯ ಶ್ರೀ ಶಿವರಾಜ್ ಸಿಂಗ್ ಚೌವ್ಹಾಣ್ ಅವರ ಉಪಸ್ಥಿತಿಯಲ್ಲಿ ನಡೆದ ವರ್ಚುವಲ್ ರಕ್ಷಾ ಬಂಧನ ಆಚರಣೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಸಂಜೀವಿನಿ ಸ್ವಸಹಾಯ ಸಂಘಗಳ ಸದಸ್ಯರು ವರ್ಚುವಲ್ ಮೂಲಕ ಈ ವಿಶೇಷ ಹಾಗೂ ಮಂಗಳಕರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಹೋದರತ್ವ, ಒಗ್ಗಟ್ಟು, ಪರಸ್ಪರ ಸಹಕಾರ ಮತ್ತು ಮಹಿಳಾ ಸಬಲೀಕರಣದ ಸಂದೇಶವನ್ನು ಸಾರಿದರು.

Sanjeevini SHG members from across Karnataka enthusiastically participated in the virtual Raksha Bandhan celebrations held in the presence of Sri Shivraj Singh Chouhan, Hon’ble Union Minister for Rural Development and Agriculture & Farmers Welfare, Government of India.
Hundreds of Sanjeevini SHG members joined the celebrations virtually and witnessed this auspicious occasion, commemorating the spirit of sisterhood, solidarity and empowerment.

Woven with Heritage. Worn with Pride.Karnataka is renowned for its exquisite sarees, each reflecting the state’s rich cu...
27/08/2026

Woven with Heritage. Worn with Pride.
Karnataka is renowned for its exquisite sarees, each reflecting the state’s rich cultural heritage and craftsmanship. From traditional likal sarees to Kasuti embroidery, each design tells a story of tradition, artistry and identity.

ಕೊ-ಇಂಪ್ಯಾಕ್ಟ್ ಮತ್ತು BRAC ಇಂಟರ್ನ್ಯಾಷನಲ್ ನಿಯೋಗದಿಂದ ಬಸಾಪುರ ಮತ್ತು ಕೆಸ್ತೂರು ಗ್ರಾಮಗಳಿಗೆ ಭೇಟಿಕೊ-ಇಂಪ್ಯಾಕ್ಟ್ (Co-Impact) ಮತ್ತು BR...
26/08/2026

ಕೊ-ಇಂಪ್ಯಾಕ್ಟ್ ಮತ್ತು BRAC ಇಂಟರ್ನ್ಯಾಷನಲ್ ನಿಯೋಗದಿಂದ ಬಸಾಪುರ ಮತ್ತು ಕೆಸ್ತೂರು ಗ್ರಾಮಗಳಿಗೆ ಭೇಟಿ
ಕೊ-ಇಂಪ್ಯಾಕ್ಟ್ (Co-Impact) ಮತ್ತು BRAC ಇಂಟರ್ನ್ಯಾಷನಲ್ ಸಂಸ್ಥೆಗಳ ತಂಡವು ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬಸಾಪುರ ಮತ್ತು ಕೆಸ್ತೂರು ಗ್ರಾಮಗಳಿಗೆ ಭೇಟಿ ನೀಡಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ (SDEL) ವತಿಯಿಂದ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ ಜೀವನೋಪಾಯ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಪರಿಣಾಮವನ್ನು ಪರಿಶೀಲಿಸಲಾಯಿತು.
ತಂಡದಲ್ಲಿ ಕೊ-ಇಂಪ್ಯಾಕ್ಟ್ ಸಂಸ್ಥೆಯ ಅಧ್ಯಕ್ಷರಾದ ಆವೋ ಸೆಲಾಸಿ ಅಬ್ಲೋ, ಏಷ್ಯಾ ಪ್ರಾದೇಶಿಕ ನಿರ್ದೇಶಕರಾದ ಶಗುನ್ ಸಬರ್ವಾಲ್ ಹಾಗೂ BRAC ಇಂಟರ್ನ್ಯಾಷನಲ್ನ ಜೀವನೋಪಾಯ ಕಾರ್ಯಕ್ರಮ ಸಲಹೆಗಾರರಾದ ರಮೇಶ್ ವೇಲುರು ಸೇರಿದಂತೆ ಎರಡೂ ಸಂಸ್ಥೆಗಳ ತಂಡದ ಸದಸ್ಯರು ಉಪಸ್ಥಿತರಿದ್ದರು.
ಭೇಟಿಯ ಸಂದರ್ಭದಲ್ಲಿ ತಂಡವು ಕಾರ್ಯಕ್ರಮ ಅನುಷ್ಠಾನ ಸಮಿತಿ, ಗ್ರಾಮ ಪಂಚಾಯಿತಿ ಮಟ್ಟದ ಸಮಿತಿ (GPLC), ನಾರಿ ಸಖಿಯರು, ಸ್ಥಳೀಯ ಸಮುದಾಯದ ಪ್ರತಿನಿಧಿಗಳು ಹಾಗೂ ದುರ್ಬಲ ವರ್ಗದ ಕುಟುಂಬದ ಸದಸ್ಯರೊಂದಿಗೆ ಸಂವಾದ ನಡೆಸಿದರು. ತಂಡವು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ, ಕಾರ್ಯಕ್ರಮದ ಅನುಷ್ಠಾನ ಕಾರ್ಯತಂತ್ರ, ಜೀವನೋಪಾಯ ಬೆಂಬಲ, ಸರ್ಕಾರಿ ಸೌಲಭ್ಯಗಳು ಮತ್ತು ಹಕ್ಕುಪತ್ರಗಳ ಲಭ್ಯತೆ ಹಾಗೂ ಅತ್ಯಂತ ದುರ್ಬಲ ಕುಟುಂಬಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಮಾಹಿತಿ ಪಡೆದುಕೊಂಡರು.
ದುರ್ಬಲ ಕುಟುಂಬಗಳನ್ನು ಗುರುತಿಸುವುದು, ಅಗತ್ಯ ದಾಖಲೆಗಳನ್ನು ಒದಗಿಸಲು ಸಹಕರಿಸುವುದು ಹಾಗೂ ಸರ್ಕಾರಿ ಯೋಜನೆಗಳು, ಸೌಲಭ್ಯಗಳು ಮತ್ತು ಹೆಚ್ಚುವರಿ ನೆರವು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡುವಲ್ಲಿ GPLC ಸದಸ್ಯರು, ನಾರಿ ಸಖಿಯರು, ಸರ್ಕಾರಿ ಅಧಿಕಾರಿಗಳು ಮತ್ತು ಕಾರ್ಯಕ್ರಮದ ಸಿಬ್ಬಂದಿ ವಹಿಸುತ್ತಿರುವ ಪಾತ್ರವನ್ನು ತಂಡವು ಶ್ಲಾಘಿಸಿತು.
ಅತ್ಯಂತ ದುರ್ಬಲ ಕುಟುಂಬಗಳಿಗೆ ಕಾರ್ಯಕ್ರಮದ ಪ್ರಯೋಜನಗಳು ತಲುಪುವಂತೆ ಮಾಡುವಲ್ಲಿ ಸರ್ಕಾರದ ನಿರ್ಧಾರ ಕೈಗೊಳ್ಳುವ ಅಧಿಕಾರಿಗಳು, ಕ್ಷೇತ್ರಮಟ್ಟದ ಸಿಬ್ಬಂದಿ, ಸಮುದಾಯದ ಸದಸ್ಯರು ಹಾಗೂ ಫಲಾನುಭವಿಗಳ ನಡುವಿನ ಬದ್ಧತೆ ಮತ್ತು ಸಮನ್ವಯವನ್ನು ನಿಯೋಗವು ಪ್ರಶಂಸಿಸಿದರು. ಜೊತೆಗೆ, ಯೋಜನೆಯನ್ನು ವ್ಯವಸ್ಥಿತ ಹಾಗೂ ಪಾರದರ್ಶಕ ರೀತಿಯಲ್ಲಿ ಅನುಷ್ಠಾನಗೊಳಿಸಿ, ಅರ್ಹ ಫಲಾನುಭವಿಗಳಿಗೆ ಅಗತ್ಯ ಬೆಂಬಲ, ಸರ್ಕಾರಿ ಸೌಲಭ್ಯಗಳು ಮತ್ತು ಜೀವನೋಪಾಯದ ಅವಕಾಶಗಳು ಸಮಗ್ರವಾಗಿ ತಲುಪುವಂತೆ ಮುನ್ನಡೆಸಿದ ಅಧಿಕಾರಿಗಳಿಗೆ ನಿಯೋಗವು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.

Address

No. 4, Mysugar Building, JC Road, Kumbaragundi, Kalasipalya, India
Bangalore
560002

Opening Hours

Monday 10am - 6am
Tuesday 10am - 6am
Wednesday 10am - 6am
Thursday 10am - 6am
Friday 10am - 6am
Saturday 10am - 6am

Alerts

Be the first to know and let us send you an email when National Livelihood Mission - Karnataka posts news and promotions. Your email address will not be used for any other purpose, and you can unsubscribe at any time.

Shortcuts

Share