Saukhya healthcare services

Saukhya healthcare services We provide nursing care at home for elderly and bedridden patients ,
We offer wide range of medical

22/12/2025

ಶುಭೋದಯ ಬಂದುಗಳೆ...
ನಾವು ಇಲ್ಲಿಗೆ ಬಂದಿರುವುದು ಮೂರು ದಿನದ ಸಂತೆಗೆ , ನಗುವುದು ಮರೆತು ಮನವನ್ನೇಕೆ ದೂಡಿರುವಿರಿ ಚಿಂತೆಗೆ, ಬದುಕನ್ನ ಬಲಿ ಕೊಡದಿರಿ ಬಯಕೆಗಳಿಗೆ, ಮೀಸಲಿಡಿ ಬದುಕನ್ನು ನ್ಯಾಯ-ನೀತಿಗಳಿಗೆ.
#ಭೀಮಪುತ್ರಿಸಾವಿತ್ರಿ......

15/12/2025

"ನಾ ಕಂಡ ಬದುಕು"..
ಜೀವನದಲ್ಲಿ ಎಂತಹ ಅದ್ಭುತವೇ ಘಟಿಸಿದರೂ ?!! ,
ದೊಡ್ಡ ದುರಂತವೇ ಘಟಿಸಿದರೂ ಅದು ತಾತ್ಕಾಲಿಕವೆ ಅಲ್ಲವೆ...???

ಜೀವನವೆನ್ನುವುದು ಹರಿವ ನೀರಿದ್ದಂತೆ
ಇಲ್ಲಿ ಯಾವುದೂ ಶಾಶ್ವತವೆಂಬುದಿಲ್ಲ...!!!

ನೋವೂ ,ನಲಿವು ,ಸುಖ ,ದುಃಖ ಎಲ್ಲವೂ
ಇಂದು ನಮ್ಮ ಜೋಳಿಗೆಯಲ್ಲಿದ್ದರೆ;;;;;;;;;;;

ನಾಳೆಗೆ ಮತ್ಯಾರದೋ ಜೋಳಿಗೆ ಸೇರಿರುತ್ತದೆ....!!!
ಬದುಕು ಬಂದಂತೆ ಬದುಕುವುದೇ ನಿಜವಾದ ಜೀವನ...!!!

ಜೋರಾಗಿ ಓಡುವುದನ್ನ ಅಭ್ಯಾಸ ಮಾಡದಿದ್ದರೆ ಹೊಟ್ಟೆ ತುಂಬಿಸಿಕೊಂಡಿದ್ದರೂ ಜಿಂಕೆ ಬದುಕೋದಿಲ್ಲ,,,
ಹುಲಿಗೆ ಆಹಾರವಾಗುತ್ತದೆ...!!!

ಜಿಂಕೆಗಿಂತಲೂ ಜೋರಾಗಿ ಓಡೋದನ್ನ ಕಲಿಯದಿದ್ದರೆ ಹುಲಿ ಹಸಿವಿನಿಂದ ಸತ್ತು ಹೋಗುತ್ತದೆ ಇದು ಬದುಕಿನ ನಿಯಮ
ನಾ ಕಂಡ ಬದುಕು...!!!
" ಭೀಮಪುತ್ರಿ ಸಾವಿತ್ರಿ ".

05/12/2025
05/12/2025

ಶುಭ ರಾತ್ರಿ....
ಅಜ್ಞಾನ ನಿಮ್ಮಲ್ಲಿ ಭಯವನ್ನುಂಟು ಮಾಡಿದರೆ, ಭಯ ನಿಮ್ಮಲ್ಲಿ ಅಜ್ಞಾನವನ್ನುಟು ಮಾಡುತ್ತದೆ, ಈ ಎರಡನ್ನು ಓಡಿಸುವ ಏಕೈಕ ಅಸ್ತ್ರ ವಿದ್ಯೆ. ಡಾ।। ಬಾಬಾ ಸಾಹೇಬ್ ಅಂಬೇಡ್ಕ‌ರ್.

04/12/2025

ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಲ್ಲ.

02/12/2025

ಸಾವಿರಾರು ಕನಸುಗಳ
ಹೊತ್ತ ಒಡತಿ ನಾನು
ವಾಸ್ತವ ಅದೆಂಥ
ಪರೀಕ್ಷೆಗಳ ಒಡ್ಡಿದರೇನು.?

ಕನಸುಗಳ ನನಸಾಗಿಸುವ
ಕಲ್ಪನೆಯೇ ಬೇರೆ
ಬದುಕಿನ ಸವಾಲುಗಳ
ಎದುರಿಸಿ ನಿಲ್ಲುವ
ಸ್ವಾದವೇ ಬೇರೆ...!!!!
ಭೀಮಪುತ್ರಿ ಸಾವಿತ್ರಿ ಹೈಕೋರ್ಟ್ ವಕೀಲರು ಬೆಂಗಳೂರು.

29/11/2025

ಶುಭ ರಾತ್ರಿ ....
ಸಮಯದ ಅತ್ಯಂತ ದೊಡ್ಡ ಶಕ್ತಿಯೆಂದರೆ, ಅದು ನಿಮ್ಮೊಳಗಿನ ಭಯವನ್ನು ಇಂಚಿಂಚಾಗಿ ಅಳಿಸುತ್ತಾ ಹೋಗುತ್ತದೆ ಮೊದಲಿನ ಹಾಗೆ, ನಿಮಗೆ
ಎಲ್ಲಿ ನೀರಾಗಬೇಕು, ಎಲ್ಲಿ ಕಲ್ಲಾಗಬೇಕು ಎನ್ನುವ
ಗೊಂದಲ ಇರುವುದಿಲ್ಲ.

ನೀವು ಇನ್ನೊಬ್ಬರ ಕತೆಯ ಪಾತ್ರಧಾರಿಗಳಾಗಿರುವುದಿಲ್ಲ
ನಿಮ್ಮದೇ ಕತೆಯಲ್ಲಿ, ಅವರ ಪಾತ್ರ ಬಂದು ಹೋಗಿರುತ್ತದೆ
ಯಾವ ನೋವುಗಳನ್ನು ಕಂಡರೆ ನೀವು ಬೆಚ್ಚಿ, ಮುದುಡಿ ಕೂರುತ್ತಿದ್ದರೋ, ಅದೇ ನೋವುಗಳನ್ನು ಇದೀಗ
ನಗು ನಗುತ್ತಾ ದಾಟಲು ಕಲಿತಿರುತ್ತೀರಿ.

ಯಾರೋ ಸುಪಿರಿಯರ್ ಎನ್ನಿಸಿಕೊಂಡವರು
ಇನ್ನಿಲ್ಲದಂತೆ ಸಿಲ್ಲಿ ಎನ್ನಿಸತೊಡಗುತ್ತಾರೆ
ಮಿತ್ರರೆನ್ನಿಸಿಕೊಂಡವರ, ಒಳಸುಳಿಗಳು ಇನ್ನಿಲ್ಲದಂತೆ,
ಸ್ಪಷ್ಟವಾಗಿ ಅರ್ಥವಾಗತೊಡಗುತ್ತದೆ
ಯಾರೋ ಶತ್ರುಗಳಂತಿದ್ದವರು,., ಇನ್ನಿಲ್ಲದಂತೆ ನಿಮ್ಮೆದುರೋ, ಬೆನ್ನ ಹಿಂದೆಯೋ ನಿಮ್ಮನ್ನು ಮನಸಾರೆ ಅಡ್ಮೈರ್ ಮಾಡುತ್ತಿರುತ್ತಾರೆ.

ನಿಮ್ಮೊಳಗೆ ಸಂಬಂಧಗಳ ವ್ಯಾಖ್ಯಾನ ಅದಲು ಬದಲಾಗಿಬಿಡುತ್ತದೆ ಕೊಟ್ಟು ಕೊಳ್ಳುವಿಕೆಯ ವ್ಯಾಪಾರ
ಈಗ, ಮೊದಲಿಗಿಂತ ಸಲೀಸಾಗಿ ಅರ್ಥವಾಗಿಬಿಡುತ್ತದೆ
ಒಂದಷ್ಟು ಹಿಂದಕ್ಕೆ ತಿರುಗಿದರೆ "ಅರೆ" ಇದು ನಾನಾ ? ಎನ್ನುವಷ್ಟು ನೀವು ಬದಲಾಗಿರುತ್ತೀರಿ...,
ಅದು ನಿಮಗೂ ಅರ್ಥವಾಗಿರುವುದಿಲ್ಲ. ಹೌದು ! ನೀವು ಬದಲಾಗಿರುತ್ತೀರಿ ಸಮಯಕ್ಕೆ ಅಂತದ್ದೊಂದು
ಪವಾಡ ಮಾಡುವ ಶಕ್ತಿ ಇದೆ.

03/10/2025

ಹುಟ್ಟಿರುವುದೇ ಇನ್ನೊಬ್ಬರ ನೋವಿಗೆ, ಸಂಕಷ್ಟಕ್ಕೆ ಸ್ಪಂದಿಸಲು ಎಂಬ ನಿಸ್ವಾರ್ಥ ಮನೋಭಾವದ ಕೆಲವರು ಸಹಾಯವನ್ನೇ ಬದುಕಾಗಿಸಿಕೊಂಡಿರುತ್ತಾರೆ. ಸಹಾಯ ಮಾಡಿಯೂ ಅದನ್ನು ಹೇಳಿಕೊಳ್ಳದೆ ತಮ್ಮ ಪಾಡಿಗೆ ತಾವಿರುವವರು ಇರುತ್ತಾರೆ.
ಬೇರೆಯವರಿಗೆ ಸಹಾಯ ಮಾಡುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ಕಾರಣದಿಂದ ಸಹಾಯ ಮಾಡುವವರು ಇದ್ದಾರೆ.

ಈಗ ಸಹಾಯ ಮಾಡುವುದರಿಂದ ಮುಂದೆ ನಮ್ಮ ಕಷ್ಟದ ಸಮಯದಲ್ಲಿ ಬೇರೆಯವರು ನಮಗೆ ಸಹಾಯ ಮಾಡಬಹುದು ಎಂಬ ಮುಂದಾಲೋಚನೆಯಿಂದ ಸಹಾಯ ಮಾಡುವವರು ಇರುವರು. ಪಾಪ, ಪುಣ್ಯ - ಸ್ವರ್ಗ, ನರಕದ ನಂಬಿಕೆಯಿಂದ ಸಹಾಯ ಮಾಡುವವರು ಕೆಲವರು. ತಮ್ಮ ವಂಶದ ಅಥವಾ ಮನೆತನದ ಹೆಸರಿನ ಪ್ರತಿಷ್ಠೆಗಾಗಿ ಸಹಾಯ ಮಾಡುವವರು ಹಲವರು..

ಸಮಾಜದಲ್ಲಿ ದಾನಿಗಳು ಎಂಬ ಹೆಸರು ಪಡೆಯಲು ಸಹಾಯ ಮಾಡುವವರು ಇದ್ದಾರೆ. ಪ್ರಚಾರ,ಪ್ರಶಸ್ತಿ ಮತ್ತು ಜನಪ್ರಿಯತೆಯ ಮೂಲ ಉದ್ದೇಶದಿಂದಲೇ ಸಹಾಯ ಮಾಡುವವರು ಇರುತ್ತಾರೆ. ಭವಿಷ್ಯದ ಲಾಭದ ಆಸೆಯಿಂದ, ರಾಜಕೀಯ ಮುಂತಾದ ಅಧಿಕಾರ ದಾಹದಿಂದ ಸಹಾಯ ಮಾಡುವವರು ಕೆಲವರು.
ಬೇರೆಯವರ ಒತ್ತಡ ಅಥವಾ ಬಲವಂತಕ್ಕೆ ಸಹಾಯ ಮಾಡುವವರು ಇದ್ದಾರೆ.

ವೈಯಕ್ತಿಕ ಲಾಭಕ್ಕಾಗಿ ಸಹಾಯ ರೂಪದ ನೆರವು ನೀಡುವವರು ಹಲವರು. ಸಹಾಯ ಮಾಡುವುದನ್ನು ಹವ್ಯಾಸ ಮಾಡಿಕೊಂಡಿರುವವರು ಇರುತ್ತಾರೆ. ಸಹಾಯ ಮಾಡುತ್ತಾ ಸಂಪಾದನೆ ಮಾಡಿಕೊಳ್ಳುವವರು ಇದ್ದಾರೆ. ತೀರಾ ಕ್ಷುಲ್ಲಕ ಹತ್ತು ರೂಪಾಯಿ ಅಥವಾ ಎರಡು ಹಣ್ಣೋ, ಬಿಸ್ಕತ್ತೋ ಕೊಟ್ಟು ಸಣ್ಣ ಸಹಾಯವನ್ನು ದೊಡ್ಡದಾಗಿ ಹೇಳಿಕೊಂಡು ಮಹಾನ್ ದಾನಿಗಳಂತೆ ಮೆರೆಯುವವರು ಇದ್ದಾರೆ....

ತಮಗೆ ನಿರುಪಯುಕ್ತವಾದ ವಸ್ತುಗಳನ್ನು ಇತರರಿಗೆ ಕೊಟ್ಟು ಅದನ್ನು ಮಹಾ ಉಪಕಾರ ಎಂದು ಬಣ್ಣಿಸಿಕೊಳ್ಳುವವರು ಕೆಲವರು. ಬೇರೆಯವರು ಸಹಾಯ ಮಾಡುವಾಗ ತಾವು ಅದರಲ್ಲಿ ಭಾಗಿಯಾಗಿ ತಾವೇ ಮಾಡಿದಂತೆ ಹೇಳುವವರು ಅನೇಕರು.
ಏನೂ ಮಾಡದೆ ಕೇವಲ ಮಾತಿನಲ್ಲೇ ಮಹಾ ದಾನವಂತರಂತೆ ಹೇಳಿಕೊಳ್ಳುವವರು ಇದ್ದಾರೆ...

ಸಹಾಯದ ಸಂಧರ್ಭದಲ್ಲಿ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವವರು ಇದ್ದಾರೆ. ತೆರಿಗೆ ತಪ್ಪಿಸಿಕೊಳ್ಳಲು ಆ ಹಣವನ್ನು ದಾನ ಮಾಡುವವರು ಇರುತ್ತಾರೆ.
ಹೀಗೆ ಇನ್ನೂ ಅನೇಕ ರೀತಿಯ ಜನಗಳು ನಮ್ಮ ನಡುವೆ ಇದ್ದಾರೆ...

ಇದರಲ್ಲಿ ನಾವು ಯಾರು ಎಂಬುದು ಅವರವರ ಆತ್ಮಾವಲೋಕನಕ್ಕೆ ಸೇರಿದ್ದು.!!!
ಹಾಗೆಯೇ ತಿಳಿವಳಿಕೆ ನಡವಳಿಕೆಯಾದಾಗ.
ಒಳ್ಳೆಯತನ ಉದಾಹರಣೆಯಾಗದೆ ಸಹಜವಾದಾಗ.
ಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳಿದ್ದ ಸೂಟ್ ಕೇಸ್ ಒಂದನ್ನು
ಆಟೋ ಡ್ರೈವರ್ ಒಬ್ಬರು ಮರಳಿ ಅದರ ಒಡೆಯನಿಗೆ ತಲುಪಿಸುತ್ತಾರೆ.

ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ವಯೋವೃಧ್ಧ ರೋಗಿಯನ್ನು ಶಾಲಾ ಶಿಕ್ಷಕರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತಮ್ಮ ಮನೆಯಲ್ಲಿಯೇ ಆಶ್ರಯ ನೀಡುತ್ತಾರೆ..

ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಮನೆಯವರು ಆತನ, ಎಲ್ಲಾ ಅಂಗಾಂಗಗಳನ್ನು ಅವಶ್ಯಕತೆ ಇರುವವರಿಗೆ ದಾನ ಮಾಡುತ್ತಾರೆ....

ವಿಕಲ ಚೇತನ ಹುಡುಗಿಯನ್ನು ಪ್ರೀತಿಸಿ ಮದುವೆಯಾದ, ವಿದ್ಯಾವಂತ ಯುವಕನೊಬ್ಬ ಆಕೆಗೆ ಸುಂದರ ಬದುಕು ನೀಡುತ್ತಾನೆ.....

ಅಧಿಕಾರದ ಅನೇಕ ಹಂತಗಳನ್ನು ಅನುಭವಿಸಿಯೂ ರಾಜಕಾರಣಿಯೊಬ್ಬರು,
ಈಗಲೂ ಒಂದೇ ಕೋಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.....

ಆಡಳಿತದ ಅತ್ಯಂತ ಉನ್ನತ ಹುದ್ದೆಗೇರಿ ನಿವೃತ್ತರಾದ ಅಧಿಕಾರಿಯೊಬ್ಬರು ,
ಈಗಲೂ ಸರ್ಕಾರಿ ಬಸ್ಸುಗಳಲ್ಲೇ ಓಡಾಡುವ ಸರಳತೆ ಬೆಳೆಸಿಕೊಂಡಿದ್ದಾರೆ....

ಅತ್ಯಂತ ಶ್ರೀಮಂತ ಉದ್ಯಮಿಯೊಬ್ಬ ತನ್ನ ಮಗಳ ಮದುವೆಯನ್ನು, ಬಹಳ ಸರಳವಾಗಿ ಮಂತ್ರ - ಮಾಂಗಲ್ಯದ ರೀತಿಯಲ್ಲಿ ಮಾಡಿದರು....

ರಾಜ್ಯದ ಬಹುತೇಕ ಮುಖ್ಯಮಂತ್ರಿಗಳಿಗೆ ಹತ್ತಿರವಾಗಿದ್ದ ಪತ್ರಕರ್ತರೊಬ್ಬರು,
ಈಗಲೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಓದಿಸಿ ಸರಳತೆ ಅಳವಡಿಸಿಕೊಂಡಿದ್ದಾರೆ....

ಪೋಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದ ಅಧಿಕಾರಿಯೊಬ್ಬರು ,
ಪರೋಕ್ಷವಾಗಿಯೂ ಲಂಚ ಮುಟ್ಟದ ಶುದ್ಧ ಹಸ್ತರು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ....

ಇದೆಲ್ಲವೂ ಘಟಿಸಿರುವುದು, ಸಾಧ್ಯವಾಗಿರುವುದು ನಮ್ಮ ಈಗಿನ ಸಮಾಜದಲ್ಲಿಯೇ. ಆದರೆ ಯೋಚಿಸಬೇಕಾಗಿರುವುದು ಇವು ಕೇವಲ ಅಪರೂಪದ ಉದಾಹರಣೆಗಳು ಮಾತ್ರ.

ನಮ್ಮ ಆಶಯ ಬಹುತೇಕ ಸಮಾಜದ ಪ್ರತಿಕ್ರಿಯೆ ಇದೇ ಆಗಿರಬೇಕು.ಇಡೀ ಸಮುದಾಯಗಳ ನಡೆ ನುಡಿ ಇದೇ ಆಗಿರಬೇಕು. ಇಡೀ ಜನಗಳ ಮೂಲಭೂತ ಗುಣ ಇದೇ ಆಗಿರಬೇಕು.ಇದಕ್ಕಾಗಿ ನೀವೇನು ಬೆವರು ಸುರಿಸಬೇಕಾಗಿಲ್ಲ,
ಇದಕ್ಕಾಗಿ ನೀವೇನು ಬೆಟ್ಟ ಹತ್ತಿ ಸಮುದ್ರ ದಾಟಬೇಕಾಗಿಲ್ಲ,
ಇದಕ್ಕಾಗಿ ನೀವೇನು ಬ್ರಹ್ಮವಿದ್ಯೆ ಕಲಿಯಬೇಕಾಗಿಲ್ಲ,
ಕೇವಲ ನಿಮ್ಮ ವ್ಯಕ್ತಿತ್ವವನ್ನು ಸ್ವಲ್ಪ ಮೇಲ್ದರ್ಜೆಗೆ ಏರಿಸಿಕೊಳ್ಳಿ.

ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಿ. ಆಗ ಎಲ್ಲವೂ ಸಾಧ್ಯ.
ಕೇವಲ ಮಾತುಗಳು, ಭಾಷಣಗಳು, ಬರಹಗಳು, ಚಿಂತನೆಗಳಿಂದ ಮಾತ್ರ ಸಾಧ್ಯವಿಲ್ಲ. ಬದುಕು ಈ ಎಲ್ಲವನ್ನೂ ಮೀರಿದ್ದು.
ಇಂತಿ ನಿಮ್ಮ ಭೀಮಪುತ್ರಿ ಸಾವಿತ್ರಿ. ಹೈಕೋರ್ಟ್ ವಕೀಲರು ಬೆಂಗಳೂರು ಕರ್ನಾಟಕ..

Address

Lava-khusha Nagar , Hosur Main Road , LAVA-KUSHA Building Next To AUDI SHOWROOM Electronic City 100
Bangalore
560100

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm
Sunday 9am - 6pm

Telephone

+917019948883

Alerts

Be the first to know and let us send you an email when Saukhya healthcare services posts news and promotions. Your email address will not be used for any other purpose, and you can unsubscribe at any time.

Contact The Organization

Send a message to Saukhya healthcare services:

Share

Category