Bhaskar Rao

Bhaskar Rao Vice President
Indian Red Cross Society,Karnataka State Branch
Former Comissioner of Police Bangalore City

06/09/2026

"ನಮ್ಮ ಸಿಬ್ಬಂದಿಗೆ ನಾವು ಪ್ರೀತಿ ತೋರಿಸಿಲ್ಲ ಅಂದ್ರೆ ಇನ್ಯಾರು ತೋರಿಸ್ಬೇಕು?"

ಪೊಲೀಸ್ ಸಿಬ್ಬಂದಿಯ ಹಿತರಕ್ಷಣೆ ಮತ್ತು ಅವರ ಕಷ್ಟಗಳಿಗೆ ಸ್ಪಂದಿಸುವುದು ಪ್ರತಿಯೊಂದು ಸರ್ಕಾರದ ಕರ್ತವ್ಯ. ಆದರೆ, ಪ್ರಸ್ತುತ ಸಚಿವರಿಗೆ ಈ ಬಗ್ಗೆ ಕನಿಷ್ಠ ಪ್ರಬುದ್ಧತೆ (ಮೆಚುರಿಟಿ) ಇಲ್ಲದಿರುವುದು ಬೇಸರದ ಸಂಗತಿ. ಇಲಾಖೆಯ ಸಿಬ್ಬಂದಿಯ ವಾಸ್ತವ ಸ್ಥಿತಿ ಹಾಗೂ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ನನ್ನ ನೇರ ಮಾತುಗಳು.

ರೈತರ ಸಂಕಷ್ಟ ಅರಿಯಲು ಆಕಾಶದಿಂದಲ್ಲ, ಹೊಲಕ್ಕೆ ಇಳಿಯಬೇಕು!ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದ ರೈತರು ಬೆಳೆ ನಷ್ಟದ ಸಂಕಷ್ಟ ಎದುರಿಸುತ್ತಿ...
05/09/2026

ರೈತರ ಸಂಕಷ್ಟ ಅರಿಯಲು ಆಕಾಶದಿಂದಲ್ಲ, ಹೊಲಕ್ಕೆ ಇಳಿಯಬೇಕು!

ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದ ರೈತರು ಬೆಳೆ ನಷ್ಟದ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬರ ಪರಿಸ್ಥಿತಿಯ ನೈಜ ಚಿತ್ರಣ ಪಡೆಯಲು ವೈಮಾನಿಕ ಸಮೀಕ್ಷೆಯ ಜೊತೆಗೆ, ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ.

ಆಕಾಶದಿಂದ ಕಾಣುವ ದೃಶ್ಯಕ್ಕೂ, ಒಣಗಿದ ಬೆಳೆಯ ನಡುವೆ ನಿಂತಿರುವ ರೈತನ ನೋವಿಗೂ ಸಾಕಷ್ಟು ವ್ಯತ್ಯಾಸವಿದೆ.

ರೈತರ ಬೆಳೆ ನಷ್ಟ, ನೀರಿನ ಲಭ್ಯತೆ ಹಾಗೂ ಸ್ಥಳೀಯ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿ, ಅರ್ಹ ರೈತರಿಗೆ ಶೀಘ್ರವಾಗಿ ಪರಿಹಾರ ಮತ್ತು ಅಗತ್ಯ ನೆರವು ತಲುಪಿಸುವುದು ಸರ್ಕಾರದ ಆದ್ಯತೆಯಾಗಬೇಕು.

ಬರ ಸಮೀಕ್ಷೆ ಕೇವಲ ವರದಿಗಾಗಿ ಇರಬಾರದು; ರೈತರ ಬದುಕಿನಲ್ಲಿ ಪರಿಹಾರದ ರೂಪದಲ್ಲಿ ಕಾಣಿಸಿಕೊಳ್ಳಬೇಕು.

ಮಣ್ಣಿನ ಮಕ್ಕಳ ಸಂಕಷ್ಟ ಅರಿಯಲು ಮಣ್ಣಿಗಿಳಿದು ಅವರ ಜೊತೆ ನಿಲ್ಲುವ ಸಮಯ ಇದು.

Farmers’ distress cannot be understood from the sky, it must be witnessed on the ground.

Farmers across Karnataka are facing crop losses due to inadequate rainfall. In such a situation, an aerial survey may provide an overview, but it cannot replace a direct assessment of the situation on the ground.

The real condition of a drought-affected field, the extent of crop damage, water availability and the concerns of farmers can only be properly understood by visiting the fields and speaking directly with those affected.

A drought assessment should not merely result in reports and photographs. It must lead to timely compensation, effective relief measures and meaningful support for farmers.

The government must stand with farmers not just from the skies, but on the ground, where their struggle is being faced every day.

ವಿದ್ಯಾರ್ಥಿಗಳ ಆದರ್ಶ ಗುರು, ಶ್ರೇಷ್ಠ ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನದ ಸ್ಮರಣೆಗ...
05/09/2026

ವಿದ್ಯಾರ್ಥಿಗಳ ಆದರ್ಶ ಗುರು, ಶ್ರೇಷ್ಠ ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನದ ಸ್ಮರಣೆಗಳು.

ಎಲ್ಲಾ ಶಿಕ್ಷಕ-ಶಿಕ್ಷಕಿಯರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ । ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ||ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್...
04/09/2026

ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ ।
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ||

ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.

03/09/2026

ಬಾಗಲಕೋಟೆ ಜಿಲ್ಲೆಯ ಮುಗಳೊಳ್ಳಿ ತಾಂಡಾದಲ್ಲಿ ತರಗತಿ ನಡೆಯುತ್ತಿದ್ದ ವೇಳೆ ಶಾಲೆಯ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಗಳ ಮೇಲೆ ಬಿದ್ದಿರುವ ಘಟನೆ, ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ‘ಗ್ಯಾರಂಟಿ’ಗಳ ಹೆಸರಿನಲ್ಲಿ ಭಾರೀ ಪ್ರಚಾರ ನಡೆಸುತ್ತಿರುವ ಸರ್ಕಾರ, ಮಕ್ಕಳಿಗೆ ಅತ್ಯಂತ ಮೂಲಭೂತವಾದ ಜೀವ ಮತ್ತು ಸುರಕ್ಷತೆಯ ಗ್ಯಾರಂಟಿಯನ್ನೇ ನೀಡಲು ವಿಫಲವಾಗಿದೆ.

ಮಾನ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ರಾಜಕೀಯ ಘೋಷಣೆಗಳಾಚೆಗೆ ನೈಜ ಆಡಳಿತದತ್ತ ಗಮನಹರಿಸಬೇಕು. ಮಕ್ಕಳಿಗೆ ಶೂ, ಸಾಕ್ಸ್‌ನಂತಹ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿಯೇ ವಿಳಂಬವಾಗುತ್ತಿರುವಾಗ, ಶಿಥಿಲಗೊಂಡಿರುವ ಶಾಲಾ ಕಟ್ಟಡಗಳ ನಿರ್ವಹಣೆಯನ್ನೂ ನಿರ್ಲಕ್ಷಿಸಿರುವುದು ವ್ಯವಸ್ಥೆಯ ಆಳವಾದ ವೈಫಲ್ಯವನ್ನು ತೋರಿಸುತ್ತದೆ.

ಮಕ್ಕಳಿಗೆ ಸುರಕ್ಷಿತ ಕಲಿಕಾ ವಾತಾವರಣ ಕಲ್ಪಿಸುವುದು ಸರ್ಕಾರದ ಐಚ್ಛಿಕ ಹೊಣೆಗಾರಿಕೆಯಲ್ಲ, ಕಡ್ಡಾಯ ಕರ್ತವ್ಯ. ಮಕ್ಕಳ ಜೀವದ ಜೊತೆ ಚೆಲ್ಲಾಟ ನಡೆಸುವ ಆಡಳಿತಕ್ಕೆ ಜನತೆ ಉತ್ತರ ಕೇಳಲೇಬೇಕು.

The recent incident in Mugalolli Tanda, Bagalkot, where a school roof collapsed on students during class, is a stark indictment of the Karnataka government’s administrative priorities. While the ruling government aggressively campaigns around its socio-economic “guarantees,” it is tragically failing to provide the most fundamental guarantee of all the safety and security of our children.

Hon’ble Chief Minister, Deputy Chief Minister D.K. Shivakumar, and Education Minister Madhu Bangarappa must look beyond political rhetoric and focus on genuine governance. When the government struggles to provide basic necessities like shoes and socks, while also neglecting the maintenance of dilapidated school infrastructure, it exposes a deep and systemic governance failure.

Our children are the human capital and future of this state. Providing them with a safe and secure learning environment is not a luxury or an option, it is a fundamental responsibility of the government. The people deserve accountability for putting children’s lives at risk.

02/09/2026

ಮಾನ್ಯ ಕೃಷ್ಣ ಬೈರೇಗೌಡರೇ, ಈಗ ಎಲ್ಲಿದ್ದೀರಿ?

ಫುಟ್‌ಪಾತ್ ತೆರವು ಕಾರ್ಯಾಚರಣೆ ಕೇವಲ PR ಗಿಮಿಕ್ ಆಗಿತ್ತೇ?

ಬಡ ಬೀದಿ ವ್ಯಾಪಾರಿಗಳ ಮೇಲೆ ಅಧಿಕಾರದ ಬಲ ಪ್ರದರ್ಶಿಸಿ, ಆಕ್ರಮಣ ತೆರವು ಕಾರ್ಯಾಚರಣೆಯನ್ನು ದೊಡ್ಡ ಸಾಧನೆಯಂತೆ ಬಿಂಬಿಸಲಾಗಿತ್ತು.

ಆದರೆ, ಶ್ರೀಮಂತರು ಮತ್ತು ಪ್ರಭಾವಿಗಳ ಅಪಾರ್ಟ್‌ಮೆಂಟ್ ಹಾಗೂ ನಿರ್ಮಾಣ ಮಾಫಿಯಾಗಳಿಂದ ರಾಜಕಾಲುವೆ ಮತ್ತು ಚರಂಡಿಗಳಾಗುತ್ತಿರುವ ಒತ್ತುವರಿಗಳ ವಿರುದ್ಧ ಅದೇ ವೇಗದ ಕಾರ್ಯಾಚರಣೆ ಈಗ ಏಕೆ ಕಾಣುತ್ತಿಲ್ಲ?

ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವುದು ಉದ್ದೇಶವಾಗಿತ್ತೇ? ಅಥವಾ ಅಷ್ಟರ ಮಟ್ಟಿಗೆ ಮಾತ್ರ ಸೀಮಿತವಾದ PR ಗಿಮಿಕ್ ಆಗಿತ್ತೇ?

ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಂತೆ ನಿಗದಿತ ವೆಂಡಿಂಗ್ ಜೋನ್ ಮೂಲಕ ಬೀದಿ ವ್ಯಾಪಾರಿಗಳಿಗೆ ಶಾಶ್ವತ ಹಾಗೂ ಗೌರವಯುತ ಪರಿಹಾರ ನೀಡಬೇಕು. ಅದೇ ಸಮಯದಲ್ಲಿ, ನಾಗರಿಕರಿಗೂ ಸ್ವಚ್ಛ ಹಾಗೂ ಅಡೆತಡೆಯಿಲ್ಲದ ಫುಟ್‌ಪಾತ್‌ಗಳ ಹಕ್ಕಿದೆ.

ನಿಯಮ ಜಾರಿ ಎಲ್ಲರಿಗೂ ಸಮಾನವಾಗಿರಬೇಕು, ಬಡವರಿಗೊಂದು ಕಾನೂನು, ಶ್ರೀಮಂತರಿಗೊಂದು ಕಾನೂನು ಎಂಬಂತಾಗಬಾರದು.

ಕೃಷ್ಣ ಬೈರೇಗೌಡರೇ, ನಾಗರಿಕರು ಇನ್ನೂ ನಿಮ್ಮ ಮೇಲೆ ಭರವಸೆ ಇಟ್ಟಿದ್ದಾರೆ. ಈಗ PR ಅಲ್ಲ, ಶಾಶ್ವತ ಪರಿಹಾರ ಬೇಕಾಗಿದೆ.

Mr. Krishna Byre Gowda, where are you now?

Was the footpath clearance drive merely a PR exercise?
You projected the aggressive eviction drive as a major achievement while flexing your power over poor street vendors. Why isn’t the same action continuing now against encroachers of Rajkaluve and Drains who are rich powerful Apartments Construction Mafia.

Was the intent to genuinely solve people’s problems or was it just a short-lived PR gimmick?

Please come out with a permanent solution for Street vendors as per Supreme Court guidelines on Vending Zones. All of us have a Right to Livelihood and Citizens too need Clear Footpaths.

As Citizens we still have high hopes on you.

30/08/2026

Live:- ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನ್ ಕೀ ಬಾತ್

Why does North Karnataka still lack basic amenities despite producing top political leaders for decades?Even after Indep...
28/08/2026

Why does North Karnataka still lack basic amenities despite producing top political leaders for decades?

Even after Independence, influential politicians from North Karnataka have occupied high positions at both the State and national levels. Yet, districts in this region continue to lag behind in drinking water, sanitation, education, healthcare, and employment. What is the fundamental reason behind this backwardness? How much priority have these leaders actually given to their own regions?

Take Kalaburagi district, for example. Despite decades of political influence, several rural areas struggle with basic infrastructure. Instead of ensuring essential facilities for his own constituency, Priyank Kharge appears more interested in speaking about national and global issues. Does he not see the basic problems in his own backyard?

The same question applies to Raichur. Across the country, the Central Government’s Swachh Bharat Abhiyan has enabled crores of families to build and use toilets. Yet, in parts of rural North Karnataka, people are still forced into open defecation.
The tragic death of Ashwini, who was subjected to a brutal gang assault when she went out for open defecation in Hokrani village (Sirwar taluk), is a deeply disturbing reminder of these infrastructural failures. When women lack access to a safe toilet, serious questions arise regarding sanitation, women’s safety, and administrative failure.

While a proper investigation is needed before holding anyone directly responsible for Ashwini’s death, the government and local administration have a clear duty: ensure every village has safe toilets, proper sanitation, and adequate security for women.

Leaders who have represented this region for decades have made endless promises. But if people still struggle for toilets, clean water, and roads, their political priorities must be questioned.

The people of North Karnataka need more than slogans, they need visible development. When Central Government schemes are available but fail to reach the grassroots level due to a lack of political will, it is the common people who pay the price.

Why does North Karnataka still lack basic amenities despite producing top political leaders for decades?Even after Indep...
28/08/2026

Why does North Karnataka still lack basic amenities despite producing top political leaders for decades?

Even after Independence, influential politicians from North Karnataka have occupied high positions at both the State and national levels. Yet, districts in this region continue to lag behind in drinking water, sanitation, education, healthcare, and employment. What is the fundamental reason behind this backwardness? How much priority have these leaders actually given to their own regions?

Take Kalaburagi district, for example. Despite decades of political influence, several rural areas struggle with basic infrastructure. Instead of ensuring essential facilities for his own constituency, Priyank Kharge appears more interested in speaking about national and global issues. Does he not see the basic problems in his own backyard?

The same question applies to Raichur. Across the country, the Central Government’s Swachh Bharat Abhiyan has enabled crores of families to build and use toilets. Yet, in parts of rural North Karnataka, people are still forced into open defecation.

The tragic death of Ashwini, who was subjected to a brutal gang assault when she went out for open defecation in Hokrani village (Sirwar taluk), is a deeply disturbing reminder of these infrastructural failures. When women lack access to a safe toilet, serious questions arise regarding sanitation, women’s safety, and administrative failure.

While a proper investigation is needed before holding anyone directly responsible for Ashwini’s death, the government and local administration have a clear duty: ensure every village has safe toilets, proper sanitation, and adequate security for women.

Leaders who have represented this region for decades have made endless promises. But if people still struggle for toilets, clean water, and roads, their political priorities must be questioned. The people of North Karnataka need more than slogans, they need visible development. When Central Government schemes are available but fail to reach the grassroots level due to a lack of political will, it is the common people who pay the price.

ದಶಕಗಳಿಂದ ಘಟಾನುಘಟಿ ನಾಯಕರು ಆಳಿದರೂ ಉತ್ತರ ಕರ್ನಾಟಕ ಇನ್ನು ಹಿಂದುಳಿದಿರುವುದೇಕೆ?

ಸ್ವಾತಂತ್ರ್ಯದ ನಂತರ ಉತ್ತರ ಕರ್ನಾಟಕದ ಹಲವು ಪ್ರಭಾವಿ ರಾಜಕಾರಣಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಆದರೂ, ಈ ಭಾಗದ ಹಲವು ಜಿಲ್ಲೆಗಳು ಇಂದಿಗೂ ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವುದು ವಿಪರ್ಯಾಸ. ಹಾಗಾದರೆ ಇದಕ್ಕೆ ಮೂಲ ಕಾರಣವೇನು? ದಶಕಗಳ ಕಾಲ ಅಧಿಕಾರ ಅನುಭವಿಸಿದ ನಾಯಕರು, ತಮ್ಮದೇ ಪ್ರದೇಶದ ಅಭಿವೃದ್ಧಿಗೆ ವಾಸ್ತವದಲ್ಲಿ ಎಷ್ಟು ಆದ್ಯತೆ ನೀಡಿದ್ದಾರೆ?

ಉದಾಹರಣೆಗೆ, ಕಲಬುರಗಿ ಜಿಲ್ಲೆ. ಖರ್ಗೆ ಕುಟುಂಬದ ದಶಕಗಳ ರಾಜಕೀಯ ಪ್ರಭಾವವಿದ್ದರೂ, ಇಂದಿಗೂ ಹಲವು ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಲಭ್ಯಗಳಿಗಾಗಿ ಪರದಾಡುತ್ತಿವೆ. ಪ್ರಿಯಾಂಕ್ ಖರ್ಗೆ ಅವರು ತಮ್ಮದೇ ಕ್ಷೇತ್ರದ ಜನರಿಗೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸುವ ಬದಲು, ರಾಷ್ಟ್ರೀಯ ಹಾಗೂ ಜಾಗತಿಕ ವಿಚಾರಗಳ ಬಗ್ಗೆ ಮಾತನಾಡುವುದಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿರುವಂತೆ ಕಾಣುತ್ತಿದೆ. ತಮ್ಮ ಕ್ಷೇತ್ರದ ಜನರ ದೈನಂದಿನ ಸಮಸ್ಯೆಗಳು ಅವರಿಗೆ ಕಾಣುತ್ತಿಲ್ಲವೇ?

ಇದೇ ಪ್ರಶ್ನೆ ರಾಯಚೂರಿಗೂ ಅನ್ವಯಿಸುತ್ತದೆ. ಕೇಂದ್ರ ಸರ್ಕಾರದ 'ಸ್ವಚ್ಛ ಭಾರತ್ ಅಭಿಯಾನ'ದಡಿ ಕೋಟ್ಯಂತರ ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡಿವೆ. ಆದರೆ, ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಇಂದಿಗೂ ಬಯಲು ಶೌಚವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇರುವುದು ಖೇದಕರ.

ರಾಯಚೂರಿನ ಹೊಕ್ರಾಣಿ ಗ್ರಾಮದಲ್ಲಿ, ಬಯಲು ಶೌಚಕ್ಕೆ ತೆರಳಿದ್ದಾಗ ಸಾಮೂಹಿಕ ದೌರ್ಜನ್ಯಕ್ಕೊಳಗಾಗಿ ಪ್ರಾಣ ಕಳೆದುಕೊಂಡ ಅಶ್ವಿನಿಯವರ ದುರ್ಮರಣವು ಆಡಳಿತದ ವೈಫಲ್ಯದ ಭೀಕರ ಪರಿಣಾಮವನ್ನು ನೆನಪಿಸುತ್ತದೆ. ಮಹಿಳೆಯರಿಗೆ ಸುರಕ್ಷಿತ ಶೌಚಾಲಯದ ಕನಿಷ್ಠ ಸೌಲಭ್ಯವೂ ಇಲ್ಲದಿರುವಾಗ, ಮಹಿಳಾ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಏಳುತ್ತವೆ.

ಸೂಕ್ತ ತನಿಖೆಗೂ ಮುನ್ನ ಅಶ್ವಿನಿಯವರ ಸಾವಿಗೆ ಯಾರನ್ನೂ ನೇರವಾಗಿ ಹೊಣೆ ಮಾಡುವುದು ಸರಿಯಲ್ಲ. ಆದರೆ, ಇಂತಹ ದುರ್ಘಟನೆಗಳು ಮರುಕಳಿಸದಂತೆ ಸುರಕ್ಷಿತ ಶೌಚಾಲಯ ಮತ್ತು ಮಹಿಳೆಯರಿಗೆ ಭದ್ರತೆ ಕಲ್ಪಿಸುವ ಸ್ಪಷ್ಟ ಜವಾಬ್ದಾರಿ ಸರ್ಕಾರದ ಮೇಲಿದೆ.

ದಶಕಗಳಿಂದ ಈ ಭಾಗವನ್ನು ಪ್ರತಿನಿಧಿಸುತ್ತಿರುವ ನಾಯಕರು ಭರವಸೆಗಳನ್ನಷ್ಟೇ ನೀಡಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳಿದ್ದರೂ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅವುಗಳು ತಳಮಟ್ಟದ ಜನರನ್ನು ತಲುಪಲು ವಿಫಲವಾದರೆ, ಅಂತಿಮವಾಗಿ ಅದರ ಬೆಲೆ ತೆರಬೇಕಾದವರು ಸಾಮಾನ್ಯ ಜನರೇ.

ಉತ್ತರ ಕರ್ನಾಟಕದ ಜನರಿಗೆ ಕೇವಲ ಘೋಷಣೆಗಳ ಅಗತ್ಯವಿಲ್ಲ, ನೈಜ ಅಭಿವೃದ್ಧಿ ಬೇಕಿದೆ!

ಸಹೋದರ-ಸಹೋದರಿಯ ಬಾಂಧವ್ಯದ ಸಂಕೇತವಾಗಿರುವ, ಭಾತೃತ್ವದ ಸಂಭ್ರಮಾಚರಣೆಯಾಗಿರುವ ಈ ರಕ್ಷಾ ಬಂಧನದಂದು ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡುವ ಸಂಕಲ್...
28/08/2026

ಸಹೋದರ-ಸಹೋದರಿಯ ಬಾಂಧವ್ಯದ ಸಂಕೇತವಾಗಿರುವ, ಭಾತೃತ್ವದ ಸಂಭ್ರಮಾಚರಣೆಯಾಗಿರುವ ಈ ರಕ್ಷಾ ಬಂಧನದಂದು ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡುವ ಸಂಕಲ್ಪ ಮಾಡೋಣ.

Address

Office Of Bhaskar Rao, (Upstairs) Near Mani Stores, , No 12, D V Gundappa Road, Basavanagudi
Bangalore
560004

Telephone

+918026615100

Website

Alerts

Be the first to know and let us send you an email when Bhaskar Rao posts news and promotions. Your email address will not be used for any other purpose, and you can unsubscribe at any time.

Shortcuts

Share