01/10/2024
ಕೃಪೆ : WhatsApp
*"ನಾ ರಾತ್ರಿ ಗಸ್ತಿನ ಪೊಲೀಸ್ "*
😥😥😥😥😥😥😥
~~~~~~~~~~~~~~~
ರಾತ್ರಿ 8 ಗಂಟೆಗೆ ಪೊಲೀಸ್ ಠಾಣೆಗೆ
ಹಾಜರಾಗಿ ಹಿರಿಯ ಅಧಿಕಾರಿಗಳಿಗೆ
ವಂದಿಸಿ ವಾಕಿಟಾಕಿ ಬ್ಯಾಟ್ರಿ ತಗೊಂಡು
ಕೈ ಬೀಸಿ ಕರೆಯುತಿರು ರಸ್ತೆಗಳಿಗೆ
ಇಳಿಯಬೇಕು ನಾನು. ಬೈಕ್ ಹತ್ತಿ ಸೈರನ್
ಹಾಕಬೇಕು ನಾನು....
ನಾ ಯಾರೆಂದು
ಯೋಚಿಸ ಬೇಡಿ
" ನಾ ರಾತ್ರಿ ಗಸ್ತಿನ ಪೊಲೀಸ್" ||
ಬಸ್ ಸ್ಟ್ಯಾಂಡ್ ಕಡೆ ಮಲಗಿರು
ಮದ್ಯ ಪ್ರಿಯರನ್ನು ಎದ್ದೇಳಿಸಿ
ಅವರ ಊರಿನ ಕೊನೆಯ ಬಸ್ಸಿಗೆ ಹತ್ತಿಸಿ
ಜೋಪಾನ ಎಂದು ಒಗ್ಗರಣೆ ಹಾಕಿ
ಕಳುಹಿಸಿ ಕೊಡುತ್ತಿರುವೆ ನಾನು,
ಬಸ್ ನಿಲ್ದಾಣದ ಮೂಲೆಗಳಲಿ
ಪ್ರಣಯದ ಪಯಣದಲ್ಲಿರು ಅರಿಯದ
ಹರಯದವರನ್ನು
ನಿಮ್ಮ ನಿಮ್ಮ ಮನೆಗೆ
ಹೋಗಿ ಎಂದು ಎಚ್ಚರಿಸುತಿರುವೆ ನಾನು
ನಾ ಯಾರೆಂದು ಕನ್ಫ್ಯೂಸ್ ಆಗಬೇಡಿ...
" ನಾ ರಾತ್ರಿ ಗಸ್ತಿನ ಪೊಲೀಸ್ " ||
ರಾತ್ರಿ 10 ಗಂಟೆಯ ಒಳಗೆ
ಎಲ್ಲ ಅಂಗಡಿ ಮುಂಗ್ಗಟ್ಟುಗಳು
ಮದ್ಯ ಪಾನದ ಮಡಿಲುಗಳು
ರಸ್ತೆ ಬದಿಯ ತಿಂಡಿ ತೀರ್ಥದ ಗಾಡಿಗಳು
ಮುಚ್ಚಿಸಬೇಕು ನಾನು,
ಹಾರಾಡಿ ತೂರಾಡುತಿರುವ ರಾಜ್ಯದ
ಬೊಕ್ಕಸಿಗೆ ಸಿಂಹ ಪಾಲು ತೆರಿಗೆ ಕಟ್ಟುತಿರುವ
ಶ್ರೀಮಂತರನ್ನು ನಯವಾಗಿ ಮನೆಗೆ ಹೋಗಿ
ಎಂದು ಕೇಳಿಕೊಳ್ಳುವೆ ನಾನು,....
ನಾ ಯಾರೆಂದು
ಮತ್ತೆ ಯೋಚಿಸ ಬೇಡಿ
" ನಾ ರಾತ್ರಿ ಗಸ್ತಿನ ಪೊಲೀಸ್ "||
ಚಿನ್ನ ಬೆಳ್ಳಿ ಅಂಗಡಿ,
ಶಾಲಾ ಕಾಲೇಜು
ಮಸೀದಿ ಮಂದಿರ, ಒಂಟಿಮನೆ,
ನ್ಯಾಯಾಧೀಶರ ಮನೆ,
ನ್ಯಾಯಾಲಯ, ಬ್ಯಾಂಕು, ಅಂಚೆ ಕಚೇರಿ
ಸಂತೆ ರೈಲ್ವೆ ಸ್ಟೇಷನ್... ಹೀಗೆ ಇನ್ನೂ
ಮುಂತಾದ ಕಡೆ ತಿರುಗಿ ವಿಷಲ್ ಹಾಕುವೆ ನಾನು,
ನಾ ಯಾರೆಂದು ದಿಟ್ಟಿಸಿ ನೋಡ ಬೇಡಿ.....
" ನಾ ರಾತ್ರಿ ಗಸ್ತಿನ ಪೊಲೀಸ್ "||
ಬೆಳಗಿನ ಜಾವ 5 ಗಂಟೆಗೆ
ಪೊಲೀಸ್ ಠಾಣೆಗೆ ಬಂದು ಮಾಡಿದ
ಕರ್ತವ್ಯದ ಬಗ್ಗೆ ವರದಿ ಮಾಡಿ
ಠಾಣಾಧಿಕಾರಿಗಳ ಅನುಮತಿ ಪಡೆದು
ನಿದ್ದೆಗಣ್ಣಲೇ ಮನೆ ಕಡೆ ಮುಖ ಮಾಡುವೆ
ಗುಡ್ಮಾರ್ನಿಗ್ ಹೇಳಲು ಬರುತ್ತಿರುವ
ಸೂರ್ಯನಿಗೆ ಗುಡ್ ನೈಟ್ ಹೇಳಿ
ಮಲಗುತ್ತಿರುವೆ ನಾನು.... ನಾ ಯಾರೆಂದು
ನನ್ನ ಹೆಂಡತಿ ಮಕ್ಕಳನ್ನು ಕೇಳಬೇಡಿ....
" ನಾ ರಾತ್ರಿ ಗಸ್ತಿನ ಪೊಲೀಸ್."||