23/07/2026
ನಿಮಗೆ ನಾಚಿಕೆಯಾಗುವುದಿಲ್ಲವೇ ನಾಯಕರೇ, ಶಾಸಕರೇ, ಸಂಸದರೇ ಮತ್ತು ಕಾರ್ಯಕರ್ತರೇ?
NEET ಪರೀಕ್ಷೆಯ ಅವ್ಯವಸ್ಥೆಯಿಂದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದು ನಿಮ್ಮ ಕೇಂದ್ರ ಸರ್ಕಾರದ ವೈಫಲ್ಯವಲ್ಲವೇ?
ಇದು ಮುಖ್ಯವೇ ಅಥವಾ ನಿಮ್ಮ ಪ್ರತಿಷ್ಠೆಯೇ ಮುಖ್ಯ?
ಲಕ್ಷಾಂತರ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ NEET ಪರೀಕ್ಷೆ ಬರೆಯುವಂತೆ ಮಾಡಿರುವುದು ಕೇಂದ್ರ ಸರ್ಕಾರವೇ.
ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು,
ಪುಂಡಾಟಿಕೆ ಮಾಡಿಕೊಂಡು, ಇಲ್ಲದ ಸಲ್ಲದ ಆರೋಪ ಮಾಡಿಕೊಂಡು,
ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡದೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿಕೆ ಕೊಡುತ್ತೀರಲ್ಲ, ಯಾಕೆ? ಸ್ವಲ್ಪ ಉತ್ತರ ಕೊಡಿ.
ಇದೇ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದ್ದರೆ ನೀವು ಸುಮ್ಮನಿರುತ್ತಿದ್ದಿರಾ?
ಇದು ಪಕ್ಷಾತೀತ ವಿಷಯ. ವಿದ್ಯಾರ್ಥಿಗಳ ಪರವಾಗಿ ಬೆಂಬಲಿಸಬೇಕು ಹೊರತು ರಾಜಕೀಯ ಮಾಡಬಾರದು.
ನಿಮಗೆ ಸ್ವಲ್ಪವಾದರೂ ಮಾನವೀಯತೆ ಇದ್ದರೆ, ಕೇಂದ್ರ ನಾಯಕರಿಗೆ ಒತ್ತಡ ಹಾಕಿ ರಾಜೀನಾಮೆ ಕೊಡಿಸಿ.
ಇಲ್ಲವಾದರೆ ನೀವು ರಾಜೀನಾಮೆ ಕೊಟ್ಟು ಇಳಿಯಿರಿ.
ನಾವು ಯಾರ ಪರವಾಗಿಯೂ ಮಾತನಾಡುತ್ತಿಲ್ಲ. ಸತ್ಯವನ್ನಷ್ಟೇ ಹೇಳುತ್ತಿದ್ದೇವೆ.
ತಾಕತ್ತಿದ್ದರೆ ರಾಜೀನಾಮೆ ಕೊಡಿಸಿ.
ಕರ್ನಾಟಕ ಬಿಜೆಪಿ ಘಟಕದ ನಾಯಕರೇ, ಇಲ್ಲವಾದರೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡಿ.
ಅದಕ್ಕಾಗಿಯೇ ಪ್ರತಿಭಟನೆ ಮಾಡಿ.
ನಿಮ್ಮ ಸ್ವ-ಪ್ರತಿಷ್ಠೆಗಾಗಿ ಪ್ರತಿಭಟನೆ ಮಾಡುವುದನ್ನು ಬಿಟ್ಟು,
ರಾಜ್ಯಕ್ಕಾಗಿ ಅಥವಾ ದೇಶಕ್ಕಾಗಿ ಪ್ರತಿಭಟನೆ ಮಾಡಿ.
ಇಲ್ಲವಾದರೆ ನಿಮ್ಮ ಕಚೇರಿಗಳಲ್ಲಿ ಸುಮ್ಮನೆ ಕುಳಿತುಕೊಳ್ಳಿ.