ಬಸನಗೌಡ ಬಾದರ್ಲಿ ನಡಿಗೆ ಜನರ ಕಡೆಗೆ

  • Home
  • India
  • Bangalore
  • ಬಸನಗೌಡ ಬಾದರ್ಲಿ ನಡಿಗೆ ಜನರ ಕಡೆಗೆ

ಬಸನಗೌಡ ಬಾದರ್ಲಿ ನಡಿಗೆ ಜನರ ಕಡೆಗೆ ಪೊಲಿಟಿಕಲ್

ಸಿಂಧನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿ ವಿಚಾರವಾಗಿ ಮಾನ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಸನ್ಮಾನ್ಯ ...
27/12/2025

ಸಿಂಧನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿ ವಿಚಾರವಾಗಿ ಮಾನ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಸನ್ಮಾನ್ಯ ದಿನೇಶ್ ಗುಂಡೂರಾವ್ ವರನ್ನು ನಮ್ಮೆಲ್ಲರ ನೆಚ್ಚಿನ ನಾಯಕರು, ಕರ್ನಾಟಕ ವಿಧಾನಪರಿಷತ್ ಶಾಸಕರಾದ ಶ್ರೀ Basanagouda Badarli ಅವರು ಭೇಟಿ ಮಾಡಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಸಿ ಟಿ ಸ್ಕ್ಯಾನ್, ಎಮ್ ಆರ್ ಐ ಮತ್ತು ಡಯಲಿಸಸ್ ಸ್ಥಾಪಿಸುವ ಬಗ್ಗೆ ಚರ್ಚಿಸಿದರು.

ಈ ವೇಳೆ ಮಸ್ಕಿ ಕ್ಷೇತ್ರದ ಶಾಸಕರಾದ ಶ್ರೀ ಆರ್. ಬಸನಗೌಡ ತುರ್ವಿಹಾಳ, ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಶ್ರೀ ರವಿ ಬೋಸರಾಜು ಅವರು ಇದ್ದರು

ಕಾಂಗ್ರೆಸ್ ಪಕ್ಷದ ಅತ್ಯಂತ ಕ್ರೀಯಾಶೀಲ ನಾಯಕರು,  ಮಾಜಿ ಸಂಸದರು, ಬಮುಲ್ ಅಧ್ಯಕ್ಷರು, ಆತ್ಮೀಯರಾದ ಸನ್ಮಾನ್ಯ ಶ್ರೀ DK Suresh ಅವರಿಗೆ ಜನ್ಮ ದಿ...
18/12/2025

ಕಾಂಗ್ರೆಸ್ ಪಕ್ಷದ ಅತ್ಯಂತ ಕ್ರೀಯಾಶೀಲ ನಾಯಕರು, ಮಾಜಿ ಸಂಸದರು, ಬಮುಲ್ ಅಧ್ಯಕ್ಷರು, ಆತ್ಮೀಯರಾದ ಸನ್ಮಾನ್ಯ ಶ್ರೀ DK Suresh ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.

ಭಗವಂತ ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಜನಸೇವೆ ಮಾಡಲು ಮತ್ತಷ್ಟು ಅವಕಾಶ ನೀಡಲಿ ಎಂದು ಹಾರೈಸುತ್ತೇನೆ.

Basanagouda Badarli

 #ಶಿಕ್ಷಣ ಕ್ಷೇತ್ರ  #ಆರೋಗ್ಯ ಕ್ಷೇತ್ರ ಬದಲಾವಣೆ ಯತ್ತ..------ ಎಂಎಲ್ಸಿ  #ಶ್ರೀ_ಬಸನಗೌಡ_ಬಾದರ್ಲಿ ಚಿತ್ತ..ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲ...
08/12/2025

#ಶಿಕ್ಷಣ ಕ್ಷೇತ್ರ #ಆರೋಗ್ಯ ಕ್ಷೇತ್ರ ಬದಲಾವಣೆ ಯತ್ತ..
------ ಎಂಎಲ್ಸಿ #ಶ್ರೀ_ಬಸನಗೌಡ_ಬಾದರ್ಲಿ ಚಿತ್ತ..

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಆರಂಭಗೊಂಡಿರುವ ವಿಧಾನಪರಿಷತ್ ಚಳಿಗಾಲ ಅಧಿವೇಶನದಲ್ಲಿ ಇಂದು ನಮ್ಮೆಲ್ಲರ ನೆಚ್ಚಿನ ನಾಯಕರು, ಕರ್ನಾಟಕ ವಿಧಾನಪರಿಷತ್ ಶಾಸಕರಾದ ಶ್ರೀ Basanagouda Badarli ಅವರು ಭಾಗವಹಿಸಿ, ಸಿಂಧನೂರು ತಾಲೂಕಿನ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ವಿಧ್ಯುತ್ ಹಾಗೂ ಆರೋಗ್ಯ ವಿಚಾರಗಳ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಸಂಬಂಧಿಸಿದಂತೆ ಉತ್ತರವನ್ನು ಸ್ವೀಕರಿಸಲಾಯಿತು.

25/11/2025

ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿಯು ಅತ್ಯಂತ ನೋವಿನ ಸಂಗತಿಯಾಗಿದೆ.

ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅವರು ಕರ್ತವ್ಯನಿಷ್ಠೆ, ದಕ್ಷತೆ, ಜನಪರ ನಿಲುವುಗಳಿಂದ ಜನಮಾನಸದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ.

ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ, ದುಃಖದಲ್ಲಿರುವ ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು.

ಸಿಂಧನೂರು ಕ್ಷೇತ್ರದ ಜನಪ್ರಿಯ ನಾಯಕರು ವಿಧಾನಪರಿಷತ್ ಶಾಸಕರಾದ ಶ್ರೀ ಬಸನಗೌಡ ಬಾದರ್ಲಿ ಅವರ ಕುಟುಂಬದ ವತಿಯಿಂದ ಸಿಂಧನೂರು ತಾಲೂಕಿನ ಅಧಿ ದೇವತೆಯ...
12/10/2024

ಸಿಂಧನೂರು ಕ್ಷೇತ್ರದ ಜನಪ್ರಿಯ ನಾಯಕರು ವಿಧಾನಪರಿಷತ್ ಶಾಸಕರಾದ ಶ್ರೀ ಬಸನಗೌಡ ಬಾದರ್ಲಿ ಅವರ ಕುಟುಂಬದ ವತಿಯಿಂದ ಸಿಂಧನೂರು ತಾಲೂಕಿನ ಅಧಿ ದೇವತೆಯಾದ ಶ್ರೀ ಅಂಬಾ ಭವಾನಿ ಸನ್ನಿಧಾನ ಸುಕ್ಷೇತ್ರ ಅಂಭಾಮಠದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ನಾಡಿನ ಒಳಿತಿಗಾಗಿ, ರೈತರ ಹಿತಕ್ಕಾಗಿ, ಯುವಕರ ಏಳಿಗೆಗಾಗಿ ಪ್ರಾರ್ಥಿಸಿದರು.



Indian National Congress - Karnataka
Karnataka Pradesh Youth Congress
ಭತ್ತದ ನಾಡು ಸಿಂಧನೂರು

ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗ...
09/10/2024

ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ.

ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಗಾಂಧಿ ಜಯಂತಿ ಹಾಗೂ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ...
02/10/2024

ಗಾಂಧಿ ಜಯಂತಿ ಹಾಗೂ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕೆಪಿಸಿಸಿ ವತಿಯಿಂದ ಇಂದು ಹಮ್ಮಿಕೊಂಡಿದ್ದ ಗಾಂಧಿ ನಡಿಗೆ ಹಾಗೂ ಗಾಂಧಿ ಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಂಡು ನಮ್ಮ ನಾಯಕರಾದ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಮಾನ್ಯ ಉಪಮುಖ್ಯಮಂತ್ರಿಗಳೊಂದಿಗೆ ಹಾಗೂ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದೆ.

ಶ್ರೀಮತಿ ಅಯ್ಯಮ್ಮ ಭೀಮನಗೌಡ ಬಾದರ್ಲಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ಯಲಮಂಚಾಲಿ ಕಮ್ಮಾವಾರಿ ಭವನದ...
30/09/2024

ಶ್ರೀಮತಿ ಅಯ್ಯಮ್ಮ ಭೀಮನಗೌಡ ಬಾದರ್ಲಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ಯಲಮಂಚಾಲಿ ಕಮ್ಮಾವಾರಿ ಭವನದಲ್ಲಿ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಶ್ರೀ ಗುರು ಮಹಾಸಂಗಮ-2024 ರ ಅಂಗವಾಗಿ ಸಿಂಧನೂರು ತಾಲೂಕಿನ ಅತ್ಯುತ್ತಮ ಶಿಕ್ಷಕರರಿಗೆ ಗೌರವ ಸಮರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಅಭಿನಂದಿಸಿ ತಮ್ಮಿಂದ ಇನ್ನು ಉತ್ತಮ ಸೇವೆ ಶಿಕ್ಷಣ ಕ್ಷೇತ್ರಕ್ಕೆ ದೊರೆಯುವಂತಾಗಲಿ ಎಂದು ಹಾರೈಸಲಾಯಿತು.

28/09/2024

ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಅನುಷ್ಠಾನಾಧಿಕಾರಿಗಳು, ತಾಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ತಾಲೂಕ ಪಂಚಾಯತ ಸಭಾಂಗಣದಲ್ಲಿ ತಾಲೂಕ ಪಂಚಾಯತ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ,
ರೈತರ, ಮಹಿಳೆಯರ, ಯುವಕರ ವಿಚಾರ ಪ್ರಸ್ತಾಪಿಸಿ ಭ್ರಷ್ಟಾಚಾರ ಮಾಡದೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಪಾರದರ್ಶಕತೆಯಿಂದ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಳ್ಳಲಾಯಿತು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಸಿಂಧನೂರು ವತಿಯಿಂದ ಹಮ್ಮಿಕೊಂಡಿದ್ದ "ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ 137...
28/09/2024

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಸಿಂಧನೂರು ವತಿಯಿಂದ ಹಮ್ಮಿಕೊಂಡಿದ್ದ "ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ 137ನೇ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ತಾಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ" ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದೆ.

ಗುರು-ಶಿಷ್ಯರ ಸಂಬಂಧ ಅನನ್ಯವಾದದ್ದು, ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಿದೆ ಎಂದು ಶಿಕ್ಷಕರ ಸೇವೆ ಮತ್ತು ಕಾರ್ಯವನ್ನು ಶ್ಲಾಘಿಸಿ, ರಾಜ್ಯದಲ್ಲಿ ಉತ್ತಮ ಶಿಕ್ಷಣ ನೀಡಲು ಹಾಗೂ ಶಿಕ್ಷಕರ ಅಭಿವೃದ್ದಿಗಾಗಿ ನಮ್ಮ ಸರ್ಕಾರ ಅಗತ್ಯ ಸಹಕಾರವನ್ನು ನೀಡುತ್ತಿದೆ. ತಾಲೂಕಿನಲ್ಲಿ ಶಿಕ್ಷಕರು ತಮ್ಮ ಅನೇಕ ಸಮಸ್ಯೆಗಳನ್ನು ನನ್ನ ಬಳಿ ತಿಳಿಸಿದ್ದು, ಅವೆಲ್ಲಾವನ್ನು ಈಡೇರಿಸುವುದಾಗಿ ಭರವಸೆ ನೀಡಲಾಯಿತು.

Address

ಕರ್ನಾಟಕ
Bangalore

Telephone

+919663798999

Website

Alerts

Be the first to know and let us send you an email when ಬಸನಗೌಡ ಬಾದರ್ಲಿ ನಡಿಗೆ ಜನರ ಕಡೆಗೆ posts news and promotions. Your email address will not be used for any other purpose, and you can unsubscribe at any time.

Share