ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ

  • Home
  • India
  • Bangalore
  • ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ

ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಕನ್ನಡಾಂಬೆಯ ಹಸಿರು ಸಿರಿಯ ಮಾಮರದಲ್ಲಿ ಸಾ?

ಕನ್ನಡ ಸಾರಸತ್ವ ಲೋಕ ಬಹಳ ವಿಶಾಲವಾದದು ಹಾಗೂ ಬಹು ಶ್ರೀಮಂತಿಕೆಯನ್ನು ಒಳಗೊಂಡಿದೆ ಆದರೆ ಇಂತಹ ಬಹು ದೊಡ್ಡ ಶ್ರೀಮಂತಿಕೆ ಅಡಿಯಲ್ಲಿ ಎಲ್ಲೋ ಎಲೆ ಕಾಯಿಯಂತೆ ಸದಾ ಶ್ರಮಿಸುತ್ತಿರುವ ಹಾಗೂ ಮಿಂಚುಹುಳುಗಳಂತೆ ಕನ್ನಡದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಪುಟ್ಟ ಪುಟ್ಟ ಅಳಿಲು ಸೇವೆಯನ್ನು ಸಮರ್ಪಣೆ ಮಾಡುತ್ತಿರು ಪ್ರತಿಭಾವಂತ ಮನಸ್ಸು ಗಳಿಗೆ ಹಾಗೂ ಸಹೃಯಗಳ ಸಮ್ಮಿಲಕ್ಕಾಗಿ ಹಾಗೂ ಪರಸ್ಪರ ವಿಚಾರ ವಿನಿಮಯದ ಹಿನ್ನಲೆಯಲ್ಲಿ ಆರೋಗ್ಯಕರವಾದ ಸೂಕ್ತ ವೇದಿಯು ಅವಶ್ಯಕತೆ ಇದೆ ಆದೃಷ್ಟಿಯಿಂದ ನಮ್ಮ

ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಯು ಕನ್ನಡಾಂಬೆಯ ಹಸಿರು ಸಿರಿಯ ಮಾಮರದಲ್ಲಿ ಸಾಹಿತ್ಯದ ಹಾಗೂ ಸಾಂಸ್ಕೃತಿಕ ಜೇನನ್ನು ಕಟ್ಟುವ ಪುಟ್ಟ ಪ್ರಯತ್ನದ ಅಂಬೆಲು ಇದಾಗಿದೆ ,

ಜೇನುಗೂಡಿನ ಮಹತ್ವ ಮತ್ತು ಅರ್ಥ:-

ಇಡೀ ಜಗತ್ತಿನ ಸೃಷ್ಟಿಯ ಪ್ರಕ್ರಿಯೆಯಲ್ಲಿ ಜೇನುಗೂಡು‌ ಮತ್ತು‌ ಜೇನುಹುಳುಗಳ ಕೊಡುಗೆ ಬಹಳ ಅನನ್ಯವಾದುದ್ದು ಹಾಗೂ ಮಹತ್ವ ಪೂರ್ಣವಾಗಿದೆ. ಸಕಲ ಜೀವರಾಶಿಯ ಸೃಷ್ಟಿಯಾದ ಪ್ರಕೃತಿಯ ಪ್ರಕ್ರಿಯೆ ಚಲನೆಶೀಲನೆಗೆ ಜೇನುಹುಳುಗಳ ಪರಿಶ್ರಮ ಬಹಳ ಮುಖ್ಯ ಜೇನುಹುಳುಗಳು ಹೂವುಗಳೊಂದಿಗೆ ಪರಾಗಸ್ಪರ್ಶ ಕ್ರಿಯೆಯನ್ನು ಮಾಡದೇ ನಿಲ್ಲಿಸಿದರೆ ಇಡೀ‌ ಪ್ರಾಕೃತಿಕ ಚಲನೆಯ ಗತಿಯು ಸ್ತಬ್ಧವಾಗಿ ಬಿಡುತ್ತದೆ ಇವುಗಳ ಪರಾಗಸ್ಪರ್ಶ ಕ್ರಿಯಾಶೀಲ ಯಿಂದಾಗಿ ಇಡೀ ಸೃಷ್ಟಿಯಲ್ಲಿ ಹೂಗಳು ಅರಳುತ್ತವೆ, ಮೋಗ್ಗು ಹೂವಾಗಿ,ಹೀಚಾಗಿ,ಕಾಯಾಗಿ,ಹಣ್ಣಾಗಿ,ಬೀಜ‌ ಮೊಳೆತು ,ಗಿಡವಾಗಿ ಮರವಾಗಿ ,ಅಚ್ಚಹಸಿರು ತುಂಬಿ,ಈ ಸೃಷ್ಟಿ ಬಣ್ಣ ಬಣ್ಣದಿಂದ ಕಂಗೋಳಿಸುತ್ತ, ದುಂಬಿಗಳ ಝೈಂಕಾರ ಮುಳುಗಿ‌,ತಳಿರು ಮಾಮರ ಚಿಗುರಿ, ಗಿಳಿ‌,ಕೊಗಿಲೆ ಹಕ್ಕಿ ಪಕ್ಷಿಗಳ ಚಿಲಿಪಿಲಿ,ನದ ನದಿಗಳ ಝರಿಯ ಧುಮ್ಮಿಕ್ಕುವ ಮಂಜುಳನಾದ, ತಂಗಾಳಿಯ ಸುಂಗಧದ ಉನ್ಮಾದದಿ ನಳನಳಿಸು ಈ ಪ್ರಕೃತಿಗೆ ಜೇನುಹುಳಗಳ ಸೇವೆ ಸಾರ್ಥಕವಾಗಿದೆ ಈ ದೃಷ್ಟಿಯ ಆಶಯಗಳು ಮತ್ತು‌ ಹೊಂಗನಸುಗಳನ್ನು ಹೊತ್ತು ನಮ್ಮ ಜೇನುಗೂಡು ಸಾಹಿತ್ಯ ಮತ್ತು‌ ಸಾಂಸ್ಕೃತಿಕ ಸಹೃದಯಿಗಳಿಗೆ ಸಮರ್ಪಣೆ ಮಾಡಲು ಮುಂದಾಗಿದೆ.


ಕನ್ನಡದ ಕುಲಕೋಟಿ ಸಹೃದಯ ಬಂಧುಗಳು ಈ ನಿಮ್ಮ ಸವಿ ಜೇನಿನ ಆಶಗಳಿಗೆ ಪೂರಕವಾಗಿ ಪ್ರೋತ್ಸಾಹ ,ಸಲಹೆ ಸೂಚನೆಗಳನ್ನು ನೀಡುತ್ತ ಮತ್ತೆ ಮತ್ತೆ ನಿಮ್ಮ ಹೂದೋಟದ ಅಂಗಳಕ್ಕೆ ನಮ್ಮ ಜೇನುಗೂಡು ಕಟ್ಟಲು ಅವಕಾಶಮಾಡಿಕೊಡಿ.

ಪರಿಸರ ದಿನಾಚರಣೆ ಅಂಗವಾಗಿ ,ಪರಿಪರ ಜಾಗೃತಿಯ ,ಮರಗಳೇ ದೇವರು, ಎಂಬ ಕಿರುನಾಟಕವನ್ನು, ಪತ್ರಕರ್ತ ಹಾಗೂ ಕವಿ ಮಹೇಶ್ ಊಗಿನಹಳ್ಳಿ ನಿರ್ದೇಶನದಲ್ಲಿ,,...
11/10/2025

ಪರಿಸರ ದಿನಾಚರಣೆ ಅಂಗವಾಗಿ ,ಪರಿಪರ ಜಾಗೃತಿಯ ,ಮರಗಳೇ ದೇವರು, ಎಂಬ ಕಿರುನಾಟಕವನ್ನು, ಪತ್ರಕರ್ತ ಹಾಗೂ ಕವಿ ಮಹೇಶ್ ಊಗಿನಹಳ್ಳಿ ನಿರ್ದೇಶನದಲ್ಲಿ,, ಸನ್ಸೇರಾ ಸಂಸ್ಥೆಯಲ್ಲಿ ಪ್ರಸ್ತುತಪಡಿಸಲಾಯಿತು, ಈ ನಾಟಕದಲ್ಲಿ, ಮಹೇಶ್ ಊಗಿನಹಳ್ಳಿ, ಶೇಖರ್, ಪ್ರಕಾಶ್ ,ಸತೀಶ್ ಬಾಬು, ಕುಮಾರ್ ಹಾಗೂ ಕವಿತ ಇವರು ವಿವಿಧ ಪಾತ್ರದಲ್ಲಿ ಅಭಿನಯಿಸಿದ್ದಾರೆ., ಇಂದಿನ ಆಧುನಿಕತೆಯ ಜಗತ್ತಿನಲ್ಲಿ, ಪ್ರಗತಿಯ ಹೆಸರಿನಲ್ಲಿ ನಮ್ಮ ಸುತ್ತಮುತ್ತಲಿನ ಮರಗಿಡಗಳು ಹೇಗೆ ನಾಶವಾಗುತ್ತಿವೆ, ಇರದ ಪರಿಣಾಮ ಏನು ಆಗುತ್ತದೆ ಎಂಬ ಚಿತ್ರಣ ಕಟ್ಟಿಕೊಡಲಾಗಿದೆ.

Enjoy the videos and music you love, upload original content, and share it all with friends, family, and the world on YouTube.

01/02/2025

ಶಾಸಕ ಬಿ.ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ಶಾಂತಿಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ, ಶ್ರಿಮತಿ ವಿಮಲಾ ರಘುನಾಥ್, ಚೂಡುಸಂದ್ರ ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕರಾದ, ರಘುನಾಥ್, ಹಾಗೂ ಗ್ರಾಮದ ಕಾಂಗ್ರೆಸ್ ಮುಖಂಡರು ಶುಭಕೋರಿದ್ದಾರೆ.

26/01/2025
ಚಂದಾಪುರದ ಭಕ್ತಿ ಕಲಾ‌ ಸಮ್ಮೇಳನದಲ್ಲಿ ನೂರಾರು ಕಲಾತಂಡಗಳ ವೈಭವ, ಭಜನೆ ಭಕ್ತಿಯಲ್ಲಿ ಮಿದೆಂದ ಸಾವಿರಾರು ಭಕ್ತರ ಹರ್ಷೋದ್ಘಾರ.   ಭಕ್ತಿಗಾಯನ ಹಾಗ...
26/01/2025

ಚಂದಾಪುರದ ಭಕ್ತಿ ಕಲಾ‌ ಸಮ್ಮೇಳನದಲ್ಲಿ ನೂರಾರು ಕಲಾತಂಡಗಳ ವೈಭವ, ಭಜನೆ ಭಕ್ತಿಯಲ್ಲಿ ಮಿದೆಂದ ಸಾವಿರಾರು ಭಕ್ತರ ಹರ್ಷೋದ್ಘಾರ.

ಭಕ್ತಿಗಾಯನ ಹಾಗೂ ಕಲಾ ಆರಾಧನೆಗೆ ದೇವರು ಸುಲಭವಾಗಿ ಒಲಿಯುತ್ತಾರೆ, ಎಂಬುದಾಗಿ ತಿರುಪತಿ ಅನ್ನಮಯ್ಯ, ಕಲಾಕ್ಷೇತ್ರದ ಪೀಠಾಧಿಪತಿಗಳಾದ, ಶ್ರೀವಿಜಯ ಶಂಕರ ಸ್ವಾಮಿ ತಿಳಿಸಿದರು.

ಅವರು ಚಂದಾಪುರದ ಕೆಎಂಎಸ್ ಸಭಾಂಗಣದಲ್ಲಿ, ಅನ್ನಮಯ್ಯ ಕಲಾಕ್ಷೇತ್ರ ತಿರುಪತಿ, ಶ್ರೀ ಸಾಯಿ ಸರ್ವೋದಯ ಯೋಗ ಫೌಂಡೇಷನ್, ಚಂದಾಪುರ ವಿಶ್ವಶಾಂತಿ, ಸಾಯಿಯೋಗ ಕೇಂದ್ರದ, ವತಿಯಿಂದ ಅನ್ನಮಾಚಾರ್ಯರ, ಜನ್ಮದಿನೋತ್ಸವದ ಅಂಗವಾಗಿ, ಏರ್ಪಡಿಸಿದ್ದ 24 ಗಂಟೆಗಳ, ಭಕ್ತಿ ಕಲಾ ಸಮ್ಮೇಳನ ಕಾರ್ಯಕ್ರಮವನ್ನು, ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದಲ್ಲಿ‌‌‌‌, ಕನಕದಾಸರು ಹಾಗೂ ಪುರಂದರದಾಸರ, ಕೀರ್ತನೆಗಳ ದೊಡ್ಡ ಹರಿದಾಸ ಪರಂಪರೆಯನ್ನು‌‌ ನೋಡಬಹುದಾಗಿದೆ, ಇದರ ಜೊತೆಯಲ್ಲಿ, ಸಾಕಷ್ಟು ಸಂಖ್ಯೆಯಲ್ಲಿ, ಅನ್ನಮಯ್ಯ ಅಭಿಮಾನಿಗಳು ‌ಹಾಗೂ ಕಲಾವಿದರು ಇದ್ದಾರೆ. ಇಂತಹ ಕಲಾಪ್ರತಿಭೆಗಳಿಗೆ, ತಿರುಪತಿಯ ತಿರುಮಲ ಕಲಾಕ್ಷೇತ್ರದಲ್ಲಿ, ಸೂಕ್ತವೇದಿಕೆಯನ್ನು, ಕಲ್ಪಿಸಿಕೊಡಲು ಈ ಕಾರ್ಯಕ್ರಮದ, ಆಯೋಜಕರಾದ ಯೋಗಗುರು ಶಾಮಣ್ಣಗುರೂಜಿ, ಮನವಿ ಮಾಡಿದ್ದಾರೆ. ಅದರಂತೆ ಸೂಕ್ತ ಅವಕಾಶದ ವ್ಯವಸ್ಥೆಯನ್ನು ಮಾಡಲು, ಟಿಟಿಡಿ ಕಲಾಕ್ಷೇತ್ರ ಮಂಡಳಿಯೊಂದಿಗೆ, ಚರ್ಚಿಸಿ, ಭಗವಂತನ ಅನುಗ್ರಹ ದೊರಕಿಸಿಕೊಡಲು‌, ಪ್ರಯತ್ನಸುತ್ತಿನಿ‌ ಎಂಬುದಾಗಿ ತಿಳಿಸಿದರು.

ಶ್ರೀ ಸಾಯಿ ಸರ್ವೋದಯ ಯೋಗ ಫೌಂಡೇಷನ್ ಅಧ್ಯಕ್ಷರಾದ, ಶಾಮಣ್ಣ ಗುರೂಜಿ ಮಾತನಾಡುತ್ತ, ಕೋಲಾಟ, ಭಜನೆ, ಕಂಸಾಳೆ, ಸುಗಮಸಂಗೀತ, ಜಾನಪದಗಾಯನ, ಸೋಬಾನೆ, ಮಂಟೇಸ್ವಾಮಿ, ಗೀಗಿಪದ, ಹರಿಕಥೆ, ಭರತನಾಟ್ಯ, ರಂಗಕುಣಿತ ವಿವಿಧ ಪ್ರಕಾರಗಳ‌‌‌ 150ಕ್ಕೂ‌ಹೆಚ್ಚು ಕಲಾ ತಂಡಗಳು, ನಮ್ಮ‌‌ ಬೆಂಗಳೂರು ಗ್ರಾಮಾಂತರ ಹಾಗೂ ಆನೇಕಲ್ ತಾಲ್ಲೂಕು ಸುತ್ತಮುತ್ತಲಿನ, ಹತ್ತಾರು ಪ್ರದೇಶಗಳಿಂದ ಆಗಮಿಸಿ ಉತ್ತಮ ಪ್ರದರ್ಶನ ನೀಡಿವೆ, ಇಂತಹ ಕಾರ್ಯಕ್ರಮವು ಆನೇಕಲ್ ಇತಿಹಾಸದಲ್ಲಿ ಇದೇ ಮೊಟ್ಟಮೊದಲ ಬಾರಿಗೆ, ಆಯೋಜನೆಗೊಂಡಿದ್ದು‌, 24 ಗಂಟೆಗಳ‌ ಕಾಲ, ಸಾವಿರಾರು ಭಕ್ತರು ಕಲಾಭಕ್ತಿ ಭಜನೆಯಲ್ಲಿ‌ ಪರವಶರಾದರು, ಇಂತಹ ಅದ್ಭುತ ಕಲಾ ಪ್ರದರ್ಶನ ನೀಡಿದ, ಕಲಾತಂಡಗಳಿಗೆ ನಿರಂತರ ಅವಕಾಶ ಮತ್ತು ಪ್ರೋತ್ಸಾಹ ನೀಡಲು, ರಾಜ್ಯ ಮುಜರಾಯಿ ಸಚಿವರಲ್ಲಿ, ಮನವಿ ಮಾಡಲು ಕಲಾವಿದ ನಿಯೋಗ ಹೋಗಲು‌ , ವ್ಯವಸ್ಥೆ ಮಾಡಲಾಗುತ್ತದೆ, ಎಂದರು.

ಇದೇ ಸಂದರ್ಭದಲ್ಲಿ ರಾಮಣ್ಣಸ್ಚಾಮಿಗಳು ಮಾತನಾಡುತ್ತ, 24 ಗಂಟೆಗಳ‌‌ ಕಾಲ‌ ನಿರಂತರ ತಮ್ಮ ತಮ್ಮ‌ಕಲಾ ಪ್ರದರ್ಶನವನ್ನು ನೀಡಿದ ಕಲಾವಿದರಿಗೆ, ಈ‌ಸೇವಾ ಕಾರ್ಯದಲ್ಲಿ ಎಲ್ಲ ರೀತಿಯಲ್ಲಿ ಸಹಕಾರ,ಪ್ರೋತ್ಸಾಹ ನೀಡಿದ ಭಕ್ತರಿಗೆ ಧನ್ಯವಾದಗಳು ಅರ್ಪಿಸಿದರು.

ಇದೇ ಸಂದರ್ಭದಲ್ಲಿ, ಯೋಗ ಗುರು ಶಿವಶಂಕರರೆಡ್ಡಿ, ವೆಂಕಟಸ್ವಾಮಿರೆಡ್ಡಿ, ಯೋಗ ಕೇಂದ್ರದ ಮಂಜುಳ, ಮಹದೇವ್ ಹರೀಶ್,ಶೇಖರ್,ಸುರೇಶ್ ರೆಡ್ಡಿ, ಶ್ರೀನಿವಾಸ್, ಪ್ರದೀಪ್ ಹಾಗೂ ಮುರಳಿ, ಪ್ರಕಾಶ್ ಹಾಜರಿದ್ದರು.

ಮರಸೂರು ಮಡಿವಾಳ ಶ್ರೀಬಂಡಿಮಹಾಕಾಳಿ‌ದೇವಿ ಗತವೈಭವದ ತೇರು ಹಾಗೂ ಜಾತ್ರಾ ಮಹೋತ್ಸ ರಮಣೀಯ ನೋಟ
30/04/2024

ಮರಸೂರು ಮಡಿವಾಳ ಶ್ರೀಬಂಡಿಮಹಾಕಾಳಿ‌ದೇವಿ ಗತವೈಭವದ ತೇರು ಹಾಗೂ ಜಾತ್ರಾ ಮಹೋತ್ಸ ರಮಣೀಯ ನೋಟ

29/12/2021

ರಾಷ್ಟ್ರ ಕವಿ,ಯುಗದ ಕವಿ,ಜಗದ ಕವಿ ,ರಸ ಋಷಿ,ವಿಶ್ವ ಚೇತನ ನಮ್ಮ ಕನ್ನಡ ಕಾವ್ಯ ಚೇತನ ಕುವೆಂಪು ಅವರ ಜಯಂತಿ ಆಯೋಜನೆ.

ಆತ್ಮೀಯ ಲಯನ್ ಬಂಧುಗಳೇ ದಿನಾಂಕ
29/12/21ರ ಬುಧವಾರ ಬೆಳಿಗ್ಗೆ 8.30 ಕ್ಕೆ ವಿಶ್ವಕವಿ ಕುವೆಂಪು ರವರ ಹುಟ್ಟು ಹಬ್ಬವನ್ನು ಚಂದಾಪುರ ಲಯನ್ ನೊಬೆಲ್ ಸಂಸ್ಥೆ ಮತ್ತು
ಜೇನುಗೂಡು ಸಾಹಿತ್ಯ ವೇದಿಕೆ ಚಂದಾಪುರ ಸಂಯುಕ್ತ ಆಶ್ರಯದಲ್ಲಿ ನಮ್ಮ
ಸೂರ್ಯ ಸಿಟಿ ಲಯನ್ಸ್ ಕಚೇರಿಯಲ್ಲಿ ನಡೆಯಲಿದೆ ದಯವಿಟ್ಟು ಎಲ್ಲಾ ಲಯನ್ ಬಂಧುಗಳು
ಸಾಹಿತಿಗಳು ಜೇನುಗೂಡು ಸದಸ್ಯ
ಬಂಧುಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಯಾಗಿ ನಡೆಯಲು
ಸಹಕರಿಸಲು ಮನವಿ
ಅಧ್ಯಕ್ಷರು ಕಾರ್ಯದರ್ಶಿಗಳು ಖಜಾಂಚಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಲಯನ್ಸ್ ಕ್ಲಬ್ ಚಂದಾಪುರ
ಖ್ಯಾತ ಕವಿ ಹಾಗೂ ಗಾಯಕರಾದ ಜೆ.ಪ್ರಭಾಕರ್ ರೆಡ್ಡಿ, ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಕವಿ,ಪತ್ರಕರ್ತ ಮಹೇಶ್ ಊಗಿನಹಳ್ಳಿ, ಲಯನ್ಸ್ ಸಂಸ್ಥೆಯ ಅಧ್ಯಕ್ಷರು ಹಾಗೂ ಯುವ ಹೋರಾಟ ಗಾರ ಸಮಾಜ ಸೇವಕ ದೇವರಾಜ್ ನಾಯಕ್, ಲಯನ್ಸ್ ಸಂಸ್ಥೆಯ ಸದಸ್ಯರು ಹಾಗೂ ಜೇನುಗೂಡು ಸಾಹಿತ್ಯ ವೇದಿಕೆ ಸದಸ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು

ಆತ್ಮ್ಮೀಯರೇ, ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ   ಹಮ್ಮಿಕೊಂಡಿರುವ ಶ್ರಾವಣ ಸಂಜೆಯ ಅಂಗವಾಗಿ ಗೂಗಲ್ ಮೀಟ್ ಮೂಲಕ ಶ್ರಾವಣ ಬಂತು ಶ್...
29/08/2021

ಆತ್ಮ್ಮೀಯರೇ, ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿರುವ ಶ್ರಾವಣ ಸಂಜೆಯ ಅಂಗವಾಗಿ ಗೂಗಲ್ ಮೀಟ್ ಮೂಲಕ ಶ್ರಾವಣ ಬಂತು ಶ್ರಾವಣ ಎಂಬ ಆನ್ ಲೈನ್ ಮೂಲದ ಗೂಗಲ್ ಕಾವ್ಯ ಸಂಭ್ರಮ ಹಮ್ಮಿಕೊಳ್ಳಲಾಗಿದೆ ಈ
ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮುಖ್ಯ ಅಥಿತಿಗಳು, ಕವಿಗಳು, ಚಿಂತಕರು ಹಾಗೂ ಸಹೃದಯ ಕವಿಗಳು ದಯವಿಟ್ಟು ಈ ಕೆಳಗಿನ ಗೂಗಲ್ ಮೀಟ್ ಲಿಂಕ್ ಒತ್ತುವುದರ ಮೂಲಕ ಆನ್ಲೈನ್ ಗೆ ಸೇರಿಕೊಳ್ಳಬೇಕಾಗಿ ವಿನಂತಿ.

" ಶ್ರಾವಣ ಕವಿಗೋಷ್ಠಿ"

Shravana Kavigosti

Sunday, August 29 · 5:00 – 7:00pm
Google Meet joining info
Video call link: https://meet.google.com/vzz-ioju-usv

ದಯವಿಟ್ಟು ಭಾಗವಹಿಸುವರು
5 ನಿಮಿಷ ಮೊದಲೇ ಹಾಜರಾಗಬೇಕು ಎಂಬುದಾಗಿ ತಮ್ಮಲ್ಲಿ ವಿನಂತಿ

21/08/2021
ಚಂದಾಪುರ ರಾಜಲಾಂಛನ ಸಂಸ್ಥೆಯ ಮಾರ್ಗದರ್ಶಿ  ದಕ್ಷ ಪೊಲೀಸ್ ಅಧಿಕಾರಿ ಎಲ್.ವೈ.ರಾಜೇಶ್ ಸಾರ್ ಅವರೊಂದಿಗೆ ಗಿಡ ನೆಟ್ಟ  ಸಂದರ್ಭದಲ್ಲಿ ನೆನೆಪಿನಾಳದ ...
21/08/2021

ಚಂದಾಪುರ ರಾಜಲಾಂಛನ ಸಂಸ್ಥೆಯ ಮಾರ್ಗದರ್ಶಿ ದಕ್ಷ ಪೊಲೀಸ್ ಅಧಿಕಾರಿ ಎಲ್.ವೈ.ರಾಜೇಶ್ ಸಾರ್ ಅವರೊಂದಿಗೆ ಗಿಡ ನೆಟ್ಟ ಸಂದರ್ಭದಲ್ಲಿ ನೆನೆಪಿನಾಳದ ಚಿತ್ರಗಳು ಯುವ ಕವಿ,ಪತ್ರಕರ್ತ ಜೇನುಗೂಡು ಮಹೇಶ್ ಊಗಿನಹಳ್ಳಿ

Address

Bangalore

Telephone

+919844536379

Website

Alerts

Be the first to know and let us send you an email when ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ:

Share

Category