CWFI Bengaluru North page

CWFI Bengaluru North page Contact information, map and directions, contact form, opening hours, services, ratings, photos, videos and announcements from CWFI Bengaluru North page, Political organisation, No. 1201 4th Cross 3Rd Main Kalyana Nagar, Bangalore.

  ಕರಾಳ    #ರದ್ದಾಗಲಿ #ಸೆಪ್ಟೆಂಬರ್8  #ಕಾರ್ಮಿಕರ  #ಬೃಹತ್ #ವಿಧಾನಸೌಧಚಲೋ ಬನ್ನಿ ಭಾಗವಹಿಸಿ
02/09/2026


ಕರಾಳ #ರದ್ದಾಗಲಿ
#ಸೆಪ್ಟೆಂಬರ್8 #ಕಾರ್ಮಿಕರ #ಬೃಹತ್
#ವಿಧಾನಸೌಧಚಲೋ ಬನ್ನಿ ಭಾಗವಹಿಸಿ

22/06/2026

*ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ರಿ)(ಸಿಐಟಿಯು)*
*Karnataka State Building & Other Construction Worker's Federation(CITU)*
ಕರ್ನಾಟಕ ರಾಜ್ಯ ಸಮಿತಿ
----------------------------------------
23-06-2026. (*ಪತ್ರಿಕಾ ಹೇಳಿಕೆ*)

*ಜೂನ್ 27 ಸಸಿ ನಡೆಸುವ ಬಿ.ಡಿ.ಎ ಯೋಜನೆಗೆ* *ಕಟ್ಟಡ ಕಾರ್ಮಿಕ ಮಂಡಳಿ 10 ಕೋಟಿ ಹಣ ಬಳಕೆ*
*ತೀವ್ರ ವಿರೋಧ: ಕೈ ಬಿಡಲು CWFI ಆಗ್ರಹ;*

ಜೂನ್ 27 ರಂದು ಒಂದೇ ದಿನದಲ್ಲಿ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(BDA) ಕಾರ್ಯಕ್ರಮಕ್ಕೆ ಕಟ್ಟಡ ಕಾರ್ಮಿಕರ ಸೌಲಭ್ಯಗಳಿಗೆ ಮೀಸಲಾದ ಕಲ್ಯಾಣ‌‌ ಮಂಡಳಿಯ ನಿಧಿ ರೂ 10 ಕೋಟಿ ಗಳನ್ನು ಬಳಕೆ ಮಾಡುವ‌‌ ಕ್ರಮವು ಅತ್ಯಂತ ಖಂಡನಾರ್ಹ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (CWFI-CITU) ತೀವ್ರವಾಗಿ ಟೀಕಿಸಿದೆ.ಸಸಿ ನಡೆಸುವ ಸರ್ಕಾರಿ ಕಾರ್ಯಕ್ರಮಕ್ಕೆ ಬಡ‌ ಕಾರ್ಮಿಕರ ನಿಧಿ ಬಳಸುವುದನ್ನು ಕೈಬಿಡಬೇಕೆಂದು ಆಗ್ರಹಿಸಿದೆ.

ಸಾರ್ವಜನಿಕರು ಸಂಘಸಂಸ್ಥೆಗಳನ್ನು ಭಾಗಿಗಳನ್ನಾಗಿ ಮಾಡಿಕೊಂಡು ದಿನಾಂಕ 27.06.26ರ ಶನಿವಾರ ಕೆಂಪೇಗೌಡ ದಿನಾಚರಣೆಯ ದಿನ ಬಿಡಿಎ(ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಬೆಂಗಳೂರಿನ ಮೂರು ಬಡಾವಣೆಗಳಲ್ಲಿ ಒಂದೇ ದಿನ 15 ಲಕ್ಷ ಸ್ಥಳೀಯ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದೆ ಇದು ಸ್ವಾಗತಾರ್ಹ‌ ಕ್ರಮವಾಗಿದೆ.‌

ಆದರೆ ಇದರಲ್ಲಿ ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯು ಬೆಂಗಳೂರಿನಲ್ಲಿ ಇರುವ ಸಾವಿರಾರು ‌ಕಾರ್ಮಿಕ ಸಂಘಗಳು ಕಾರ್ಮಿಕ‌ ನಾಯಕರುಗಳು ಸ್ವಯಂ ಪ್ರೇರಿತವಾಗಿ
ಪಾಲ್ಗೊಳ್ಳುವ ಇಚ್ಚೆ ವ್ಯಕ್ತಪಡಿಸಿದರೂ ಅವರುಗಳನ್ನು ಪಾಲ್ಗೊಳಿಸುವ ಯಾವುದೇ ಪ್ರಯತ್ನ ನಡೆಸಿಲ್ಲ.
ಬದಲಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ‌ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರಿಗೆ ಪಿಂಚಣಿ, ವೈದ್ಯಕೀಯ ವಿದ್ಯಾರ್ಥಿ ವೇತನ, ಹೆರಿಗೆ ಭತ್ಯೆ ಮರಣ ಪರಿಹಾರ ಇತ್ಯಾದಿಗಳಿಗಾಗಿ ಸಂಗ್ರಹವಾಗಿರುವ ನೂರಾರು ಕೋಟಿ‌ ಹಣದಲ್ಲಿ ರೂ 10 ಕೋಟಿಯನ್ನು ಏಕಪಕ್ಷಿಯವಾಗಿ ಖರ್ಚು‌ಮಾಡಲು ಹೊರಟಿರುವುದು ಕಲ್ಯಾಣ ‌ಮಂಡಳಿ‌ ಹಾಗೂ ಕಾರ್ಮಿಕ ಇಲಾಖೆಯ
ಅಧಿಕಾರಿಗಳ ಭ್ರಷ್ಟಚಾರಕ್ಕೊಂದು ಸಾಕ್ಷಿಯಾಗಿದೆ.

ಕಲ್ಯಾಣ‌‌ ಮಂಡಳಿಯು ಒಂದು ತ್ರೀಪಕ್ಷಿಯ ಸಮಿತಿಯಾಗಿದ್ದು ಅಲ್ಲಿ ಚರ್ಚಿಸದೇ ಕಾರ್ಮಿಕ ಕಲ್ಯಾಣಕ್ಕೆ ಸಂಬಂಧವಿರದ ಸರ್ಕಾರದ ಇನ್ನೊಂದು ಇಲಾಖೆಯ ಕಾರ್ಯಕ್ರಮಕ್ಕೆ ಈ ರೀತಿ ನಿಧಿ ವಿನಿಯೋಗಿಸುವುದು ಸುಪ್ರೀಮ್ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗೆ ಬಳಸಲ್ಪಡುವ ಹಣದಲ್ಲಿ ಸಸಿ ನಡೆಸಲು ಕಾರ್ಮಿಕ ಇಲಾಖೆ ಹಾಗೂ ಕಲ್ಯಾಣ ಮಂಡಳಿಯಿಂದ ಶಿವರಾಂ ಕಾರಂತ ಬಡಾವಣೆಯಲ್ಲಿ 7.5 ಲಕ್ಷ ಸಹಿಗಳನ್ನು ನೆಡಲು ಹಾಗೂ. ಇದಕ್ಕಾಗಿ 13750 ಸಾವಿರ ಕಾರ್ಮಿಕರನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಮತ್ತು ಅದರಲ್ಲಿ ಭಾಗವಹಿಸುವ ಕಾರ್ಮಿಕರಿಗೆ ತಲಾ‌ ರೂ 750 ಗಳನ್ನು ಗೌರವಧನವನ್ನು ನೀಡಲಾಗುವುದೆಂದು ಕಾರ್ಮಿಕರಿಗೆ ಪೋನ್ ಮೂಲಕ ಕಾರ್ಮಿಕ ಇಲಾಖೆ ಸಿಬ್ಬಂದಿ ತಿಳಿಸುತ್ತಿದ್ದಾರೆ ಆದರೆ ಇದರಲ್ಲಿ‌ ಬೋಗಸ್ ಕಾರ್ಮಿಕರ ಪಟ್ಟಿಯನ್ನು ಸೃಷ್ಟಿಸಿ ಅಧಿಕಾರಿಗಳು ಸಿಬ್ಬಂದಿಗಳು ನೈಜ ಕಾರ್ಮಿಕರ ಹೆಸರಿನಲ್ಲಿ ಹಣ‌ದೋಚುವ ಯೋಜನೆ ರೂಪಿಸಿದ್ದಾರೆ ಎನ್ನುವುದು‌‌ ಕಾರ್ಮಿಕರ ಆರೋಪವಾಗಿದೆ.

ಕರೋನಾ ಸಂದರ್ಭದಲ್ಲಿ ದಲ್ಲಿ ಅಂದಿನ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ನೇತೃತ್ವದಲ್ಲಿ ಬೆಂಗಳೂರಿನ ‌196 ವಾರ್ಡಗಳಲ್ಲಿ ಕಾರ್ಮಿಕ ಸಂಘಟನೆಗಳು ಹಾಗೂ ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಸುಮಾರು‌ 45 ದಿನಗಳ ಕಾಲ ಅವಿರತವಾಗಿ ಹಗಲು ರಾತ್ರಿಗಳೆನ್ನದೆ ದುಡಿದಿದ್ದರು. ಲಕ್ಷಾಂತರ ವಲಸೆ ಕಾರ್ಮಿಕರಿಗೆ ಅಗತ್ಯವಿರುವ ಆಹಾರ,ನೀರು, ವಸತಿ, ಪ್ರಯಾಣ‌ ಮೊದಲಾದ ಸೌಲಭ್ಯಗಳನ್ನು ವಿತರಿಸುತ್ತಾ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದವು. ಕಾರ್ಮಿಕ ಸಂಘಗಳ ಆ‌ ಶ್ರಮವನ್ನು ಅಂದಿನ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ನವರೇ ಪ್ರಶಂಶಿಸಿದ್ದರು.

ಅದರೆ ಈಗ ಇರುವ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಸರ್ಕಾರದ ಈ ಮಹತ್ವಕಾಂಕ್ಷೆಯ ಮತ್ತು ಗಿನ್ನಿಸ್‌ದಾಖಲೆಯ ಉದ್ದೇಶ ಹೊಂದಿರುವ ಈ‌‌‌ ಕಾರ್ಯಕ್ರಮ ಯಶಸ್ಬಿಗೆ
ಕಾರ್ಮಿಕ ಸಂಘಗಳು, ಕಾರ್ಮಿಕರ‌ನಾಯಕರುಗಳು, ಕಾರ್ಯಕರ್ತರುಗಳನ್ನು ಪಾಲ್ಗೊಳಿಸುವ ಯಾವುದೇ ಪ್ರಯತ್ನ ನಡೆಸದೇ ಏಕಪಕ್ಷಿಯವಾಗಿ ಹತ್ತಾರು ಕೋಟಿ ಕಾರ್ಮಿಕರ ನಿಧಿಯನ್ನು ದುರ್ಬಳಕೆ ಮಾಡಲು ಹೊರಟಿರುವುದರ ಹಿಂದೆ ವ್ಯಾಪಕ ಭ್ರಷ್ಟಾಚಾರ ದ ವಾಸನೆ ಮನೆ‌ಮಾಡಿದೆ.

ಇದರ ವಿರುದ್ದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (CWFI-CITU)
ಕಟ್ಟಡ ‌ಕಾರ್ಮಿಕ ಸಂಘಗಳು ಕಲ್ಯಾಣ ಮಂಡಳಿ ಮುಂದೆ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ‌ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸಲು ತೀರ್ಮಾನಿಸಿವೆ. ಮತ್ತು ಲೋಕಾಯುಕ್ತರಿಗೆ,‌ ಕಾನೂನು ಸೇವಾ ಪ್ರಾಧಿಕಾರಕ್ಕೆ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ಗಮನಕ್ಕೂ ತರಲು ನಿರ್ಧರಿಸಿವೆ.

ಕೆ.ಮಹಾಂತೇಶ್
ಪ್ರಧಾನ ಕಾರ್ಯದರ್ಶಿ
6363778848

ಗಾರ್ಮೆಂಟ್ಸ್ ಸೇರಿದಂತೆ ಇತರೆ 19 ಉದ್ಯಮಗಳನ್ನು ಸೇರಿಸಿ, ಕನಿಷ್ಠ ವೇತನ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲು ಒತ್ತಾಯಿಸಿ ಮೇ 30 ರಂದು ಪ್ರತಿಭಟನೆ...
25/05/2026

ಗಾರ್ಮೆಂಟ್ಸ್ ಸೇರಿದಂತೆ ಇತರೆ 19 ಉದ್ಯಮಗಳನ್ನು ಸೇರಿಸಿ, ಕನಿಷ್ಠ ವೇತನ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲು ಒತ್ತಾಯಿಸಿ ಮೇ 30 ರಂದು ಪ್ರತಿಭಟನೆ.

1 ಜುಲೈ 1987 ರ ಒಳಗೆ ಹುಟ್ಟಿದವರಾಗಿದ್ದರೆ ತಮ್ಮ ವೈಯಕ್ತಿಕ ಹುಟ್ಟಿದ ದಿನಾಂಕ ಮತ್ತು ಹುಟ್ಟಿದ ಸ್ಥಳದ ದೃಢೀಕರಣ ನೀಡಬೇಕು1 ಜುಲೈ 1987ರಿಂದ 2 ಡ...
25/04/2026

1 ಜುಲೈ 1987 ರ ಒಳಗೆ ಹುಟ್ಟಿದವರಾಗಿದ್ದರೆ ತಮ್ಮ ವೈಯಕ್ತಿಕ ಹುಟ್ಟಿದ ದಿನಾಂಕ ಮತ್ತು ಹುಟ್ಟಿದ ಸ್ಥಳದ ದೃಢೀಕರಣ ನೀಡಬೇಕು

1 ಜುಲೈ 1987ರಿಂದ 2 ಡಿಸೆಂಬರ್ 2004 ರ ಮಧ್ಯೆ ಹುಟ್ಟಿದವರು ತಮ್ಮ ಮತ್ತು ತಮ್ಮ ಪೋಷಕರಲ್ಲಿ ಒಬ್ಬರ ದಾಖಲೆಯನ್ನು ಒದಗಿಸಬೇಕು (ತಂದೆ ತಾಯಿ, ಅಥವಾ ಅಜ್ಜ ಅಜ್ಜಿ)

2 ಡಿಸೆಂಬರ್ 2004ರ ನಂತರ ಹುಟ್ಟಿದವರು ತಮ್ಮ ಮತ್ತು ತಮ್ಮ ಇಬ್ಬರೂ ಪೋಷಕರ (ತಂದೆ ತಾಯಿ ಅಥವಾ ಅಜ್ಜ ಆಜ್ಞೆ) ಯವರ ದಾಖಲೆಗಳನ್ನು ಒದಗಿಸಬೇಕು.

ಒದಗಿಸಬಹುದಾದ ದಾಖಲೆಗಳು

1. ನಿವೃತ್ತಿ ವೇತನದಂತಹ ಅಧಿಕೃತ ಯಾವುದೇ ಗುರುತಿನ ಚೀಟಿಗಳು,/ಸರಕಾರಿ, ಉದ್ಯೋಗಿಗಳ ಗುರುತಿನ ಚೀಟಿ/ಸಾರ್ವಜನಿಕ ಉದ್ದಿಮೆಗಳ ಉದ್ಯೋಗದ ಗುರುತಿನ ಚೀಟಿ

2. ಬ್ಯಾಂಕ್ /ಪೋಸ್ಟ್ ಆಫೀಸ್/ಜೀವವಿಮಾ ನಿಗಮ/ಸಾರ್ವಜನಿಕ ಉದ್ದಿಮೆಗಳ ಹೀಗೆ ಯಾವುದಾದರು ಸರಕಾರಿ ಒಡೆತನದ ಅಧಿಕೃತ ಗುರುತಿನ ಚೀಟಿ 01-07-1987ಕ್ಕೂ ಮೊದಲು ಕೊಟ್ಟಿದ್ದು.

3. ಸ್ಥಳೀಯ ಆಡಳಿತದಿಂದ ಕೊಡಲ್ಪಟ್ಟ ಜನನ ಪ್ರಮಾಣ ಪತ್ರ

4. ಪಾಸ್ ಪೋರ್ಟ್:

5. ಮೆಟ್ರಿಕ್ಯುಲೇಷನ್ ತತ್ಸಮಾನ ಶೈಕ್ಷಣಿಕ ಆಧಿಕೃತ ಸರ್ಟಿಫಿಕೇಟ್

6. ಸ್ಥಳೀಯ ಆಡಳಿತದಿಂದ ಕೊಡಲ್ಪಟ್ಟ ವಾಸಸ್ಥಳದ ಸರ್ಟಿಫಿಕೇಟ್ :

7. ಅರಣ್ಯ ಹಕ್ಕುಪತ್ರ

8. ದೃಢೀಕೃತ ಜಾತಿ ಪ್ರಮಾಣಪತ್ರ/

9. ಎನ್.ಆರ್.ಸಿ.ಪ್ರಮಾಣ ಪತ್ರ(ಎಲ್ಲಿ ಇದೆಯೋ ಆ ಸ್ಥಳದಲ್ಲಿ)

10. ಸ್ಥಳೀಯ ಆಡಳಿತದಿಂದ ತಯಾರಿಸಲ್ಪಟ್ಟ ಕುಟುಂಬ ನೋಂದಣಿಪತ್ರ

11. ಸರಕಾರದಿಂದ ಕೊಡಲ್ಪಟ್ಟ ಭೂಮಿ/ವಸತಿಗಳ ಪತ್ರ.

12ನೇಯದಾಗಿ ಸುಪ್ರಿಂ ಕೋರ್ಟ್ ಮಧ್ಯಪ್ರವೇಶ ಮಾಡಿದ ನಂತರ ಆಧಾರ ಕಾರ್ಡ್‌ನ್ನು 2025ರ ಆಗಸ್ಟ್, 22ರಿಂದ ಪರಿಗಣಿಸಲಾಗುತ್ತಿದೆ.

23/03/2026

*ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ರಿ)(ಸಿಐಟಿಯು)*
*Karnataka State Building & Other Construction Worker's Federation(CITU)*
ಕರ್ನಾಟಕ ರಾಜ್ಯ ಸಮಿತಿ
----------------------------------------
23-03-2026. (*ಪತ್ರಿಕಾ ಹೇಳಿಕೆ*)
*ರಾಜ್ಯ ಸರ್ಕಾರದ ಬಜೆಟ್ 2026-27*
*ಶ್ರಮಿಕ ಶಾಲೆ, ಕೌಶಲ್ಯ ತರಬೇತಿಗೆ ಕಲ್ಯಾಣ ನಿಧಿ ಬಳಕೆಗೆ ವಿರೋಧಿಸಿ*
*ಹೊಸ ಲೇಬರ್ ಕೋಡ್ ಗಳ ಪರಿಣಾಮಗಳ ವಿರುದ್ಧ*
*ಸ್ಪೀಕರ್, ಸಚಿವರು, ಶಾಸಕರಿಗೆ ರಾಜ್ಯಾದ್ಯಂತ ಕಟ್ಟಡ ನಿರ್ಮಾಣ ಕಾರ್ಮಿಕರ ಮನವಿ ಸಲ್ಲಿಕೆ*

ಮಾರ್ಚ್ 6 ರಂದು ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ನಲ್ಲಿ ಕಟ್ಟಡ ಕಾರ್ಮಿಕರ‌ ಕಲ್ಯಾಣಕ್ಕಾಗಿ ಮೀಸಲಾದ ನಿಧಿಯಿಂದ ಶ್ರಮಿಕ ವಸತಿ ಶಾಲೆ ಹಾಗೂ ಕೌಶಲ್ಯ ತರಬೇತಿ ಕೇಂದ್ರಗಳ ಸ್ಥಾಪನೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ಹಾಗೂ‌ ಹೊಸ ಲೇಬರ್‌ ಕೋಡ್ ಗಳಿಂದ ಕಟ್ಟಡ ನಿರ್ಮಾಣ ಕಾರ್ಮಿಕರ ಬದುಕಿನ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಆಗ್ರಹಿಸಿ ರಾಜ್ಯಾದ್ಯಂತ ವಿಧಾನ ಸಭಾ‌ ಸ್ಪೀಕರ್, ಸಚಿವರು ಹಾಗೂ ಶಾಸಕರುಗಳಿಗೆ ಕಟ್ಟಡ ನಿರ್ಮಾಣ ಕಾರ್ಮಿಕರು ಮನವಿಗಳನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ಸಿಐಟಿಯು ನೇತೃತ್ವದಲ್ಲಿ ದ.ಕನ್ನಡ ಜಿಲ್ಲೆಯ ಉಳ್ಳಾಲ ಕ್ಷೇತ್ರದ ಶಾಸಕರು ಹಾಗು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್, ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಮಂಕಾಳು ಎಸ್.ವೈದ್ಯ, ಟಿ.ನರಸೀಪುರ ಕ್ಷೇತ್ರದ ಶಾಸಕರು ಸಚಿವರಾದ ಎಚ್.ಮಹಾದೇವಪ್ಪ, ಸೇಡಂ ಶಾಸಕರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ ಪಾಟೀಲ್, ಆಳಂದ ಶಾಸಕರು ಹಾಗೂ ನೀತಿ ಆಯೋಗದ ಉಪಾಧ್ಯಕ್ಷ .ಬಿ.ಆರ್.ಪಾಟೀಲ್ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ,ಚಾಮರಾಜ ಕ್ಷೇತ್ರದ ಕೆ.ಹರೀಶ ಗೌಡ, ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀ ವತ್ಸ್, ಕೊಪ್ಪಳ ‌ಕ್ಷೇತ್ರದ ಶಾಸಕ ರಾಘವೇಂದ್ರ ಇಟ್ನಾಳ್,ದೇವದುರ್ಗ ಶಾಸಕಿ ಶ್ರೀಮತಿ ‌ಕರೇಮ್ಮ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಹೊಸಪೇಟೆ ಶಾಸಕ ಎ.ಆರ್.ಗವಿಯಪ್ಪ, ಕೂಡ್ಲಿಗಿ ಶಾಸಕರಾದ ಡಾ; ಶ್ರೀನಿವಾಸ, ರಾಮದುರ್ಗ ಕ್ಷೇತ್ರದ ಶಾಸಕರಾದ ಅಶೋಕ ಪಟ್ಟಣ ಶೆಟ್ಟಿ,ಕುಂದಾಪುರ ಶಾಸಕರಾದ ಕಿರಣ ಕುಮಾರ್ ಕೊಡ್ಗಿ, ಬೈಂದೂರು ಶಾಸಕರಾ ಗುರುರಾಜ ಗಂಟಿ, ಟಿ.ದಾಸರಹಳ್ಳಿ ಕ್ಷೇತ್ರದ ಶಾಸಕ ಮುನಿರಾಜ್,ಬೀದರ್ ದಕ್ಷಿಣದ ಡಾ; ಶೈಲೇಂದ್ರ ಚಲ್ದಲೆ, ವಿಧಾನ ಪರಿಷತ್ ಸದಸ್ಯ ರಾದ ಡಾ ಭೀಮರಾವ್ ಪಾಟೀಲ್,ಹುಕ್ಕೇರಿ ಶಾಸಕ ಗಣೇಶ ಹುಕ್ಕೇರಿ,ಅಪ್ಜಲ್ ಪುರ ಶಾಸಕ ಎಂವೈ ಪಾಟೀಲ್, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮಲ್ಲಿಮಟ್,,ಹುಮ್ನಾಬಾದ್ ಶಾಸಕ ಡಾ ಸಿದ್ಧಲಿಂಗ ಪಾಟೀಲ್ ಇದಲ್ಲದೆ ಹಗರಿಬೊಮ್ಮನಹಳ್ಳಿ,ಕಾಗವಾಡ, ಕ್ಷೇತ್ರದ ಶಾಸಕರು ಸೇರಿ ಇದುವರೆಗೂ ಮುವತ್ತಕ್ಕಿಂತ ಅಧಿಕ ಶಾಸಕರಿಗೆ ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರತಿಭಟನೆ, ನಿಯೋಗ‌ ಮೂಲಕ ಬಜೆಟ್ ನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮೀಸಲಿರುವ ನಿಧಿ ದುರ್ಬಳಕೆ ಹಾಗೂ ಹೊಸ ಲೇಬರ್ ಕೋಡ್ ಗಳಿಂದ ಆಗುತ್ತಿರುವ ಪರಿಣಾಮಗಳನ್ನು ತಡೆಗಟ್ಟಲು ಶಾಸಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕೆಂದು ಎರಡು ಮನವಿಗಳನ್ನು ಪ್ರತಿ ಶಾಸಕರಿಗೆ ಸಲ್ಲಿಸಿ ಮನವರಿಕೆ ಮಾಡಿಕೊಡಲಾಗಿದೆ.
ಫೆಡರೇಶನ್ ಪರವಾಗಿ ಮನವಿಗಳನ್ನು ಸ್ವೀಕರಿಸಿದ ಸ್ಪೀಕರ್ ,ಸಚಿವರು,ಶಾಸಕರು ಪರಿಷತ್ ಸದಸ್ಯರು ಇಂದಿನಿಂದ ಪುನಃ ಆರಂಭಗೊಳ್ಳುವ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಸುತ್ತವೆ ಆ ಮೂಲಕ ತಮ್ಮ ತಮ್ಮ ಮತ ಕ್ಷೇತ್ರದ ಮತದಾರರು ಆಗಿರುವ ಕಾರ್ಮಿಕರು ನೀಡಿರುವ ಈ ಮನವಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ.
ರಾಜ್ಯದ ನಿರ್ಮಾಣ ವಲಯದ ಕಾರ್ಮಿಕರು ಮಂಡಿಸಿರುವ ಬೇಡಿಕೆಗಳು ಕುರಿತು ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಏಪ್ರಿಲ್20 ರಿಂದ ನಮ್ಮ ಸಂಘಟನೆ ಸ್ವತಂತ್ರವಾಗಿ ಇಲ್ಲವೇ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂಪಾರ್ಕ ನಲ್ಲಿ ಸಾವಿರಾರು ಕಾರ್ಮಿಕರ ಅನಿರ್ಧಿಷ್ಟ ಧರಣಿ ಆರಂಭಿಸಲು ಯೋಜನೆ ರೂಪಿಸಿದೆ ಎಂದು ಈ‌ಮೂಲಕ‌ ಎಚ್ಚರಿಕೆ ನೀಡಿದೆ
ಮಾರ್ಚ್ 21-22 ರಂದು ಶಾಸಕರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಸಮಿತಿಗಳಿಗೂ ಅದರ ನಾಯಕರುಗಳಿಗೂ ಹಾಗೂ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಎಲ್ಲ ಜನಪ್ರತಿನಿಧಿಗಳಿಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ಸಿಐಟಿಯು ಕೃತಜ್ಞತೆಗಳನ್ನು ಸಲ್ಲಿಸಿದೆ.

ಕೆ.ಮಹಾಂತೇಶ್
ಪ್ರಧಾನ ಕಾರ್ಯದರ್ಶಿ

  ಜನಪರತೆಯ ಮುಖವಾಡ ಧರಿಸಿ-ಬಂಡವಾಳಗಾರರಿಗೆ ಮಣೆ ಹಾಕುವ ಬಜೆಟ್-1.34 ಲಕ್ಷ ಕೋಟಿ ಸಾಲದ ಹೊರೆ-ಹೊರಿಸಿದ ಬಜೆಟ್ - ಸಿಪಿಐ(ಎಂ) ಟೀಕೆಪ್ರಗತಿಶೀಲ ರಾ...
06/03/2026



ಜನಪರತೆಯ ಮುಖವಾಡ ಧರಿಸಿ-ಬಂಡವಾಳಗಾರರಿಗೆ ಮಣೆ ಹಾಕುವ ಬಜೆಟ್-1.34 ಲಕ್ಷ ಕೋಟಿ ಸಾಲದ ಹೊರೆ-ಹೊರಿಸಿದ ಬಜೆಟ್ - ಸಿಪಿಐ(ಎಂ) ಟೀಕೆ

ಪ್ರಗತಿಶೀಲ ರಾಜ್ಯದ ಸರ್ವರ ಏಳಿಗೆಯನ್ನು ಬಯಸುವ ಬಜೆಟ್ ಎಂದು ಮಂಡನೆಯಾದ ರಾಜ್ಯದ ಬಜೆಟ್, ಬಹುತೇಕ ಖಾಸಗೀ, ಕಾರ್ಪೊರೇಟ್ ಬಂಡವಾಳಿಗರಿಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಿಕೊಡುವ ಬಜೆಟ್ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ)-ಸಿಪಿಐ(ಎಂ) ರಾಜ್ಯ ಸಮಿತಿಯು ಹೇಳಿದೆ. 4.48 ಲಕ್ಷ ಕೋಟಿಯ ಬಜೆಟ್ ಮಂಡನೆಯಾಗಿದ್ದು 1.34 ಲಕ್ಷ ಕೋಟಿ ಸಾಲದ ಹೊರೆ ಮತ್ತೆ ಹೊರಿಸುವ ಬಜೆಟ್ ಇದಾಗಿದೆ. 2024-25 ರಲ್ಲಿ 5 ಲಕ್ಷ ಕೋಟಿ ರೂ.ಗಳ ಮಟ್ಟದಲ್ಲಿದ್ದ ಸಾಲದ ಹೊರೆ ಈಗ ಅಂದಾಜು ಸುಮಾರು 8 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ. ಸರಕಾರದ ವೆಚ್ಚವನ್ನು ಸರಿತೂಗಿಸಲು ಸಾಲವೇ ಪ್ರಮುಖ ಆಧಾರವಾಗಿದೆ ಎಂಬುದನ್ನು ಇದು ಸೂಚಿಸುತ್ತಿದೆ.

ರಾಜ್ಯದ ಅಭಿವೃದ್ಧಿಗೆ ಮೂಲ ಕೊಡುಗೆ ನೀಡುವ ಕೈಗಾರಿಕಾ ಬೆಳವಣಿಗೆಗಳ ಕುರಿತು ಹೊಸ ದೃಷ್ಟಿಕೋನವೇ ಈ ಬಜೆಟ್ ನಲ್ಲಿ ಇಲ್ಲವಾಗಿದೆ. ಗೌರವಾನ್ವಿತ ಆದಾಯ ಬರುವ ಹೊಸ ಉದ್ಯೋಗ ಸೃಷ್ಟಿಯ ಸೂಚನೆಗಳಿಲ್ಲ. ಜನರ ಆದಾಯ ಹೆಚ್ಚಿಸದೇ ಆರ್ಥಿಕತೆ ಉತ್ತಮಗೊಳ್ಳಲು ಸಾಧ್ಯವಿಲ್ಲ. ಕೇಂದ್ರದ ಬಿ.ಜೆ.ಪಿ. ಸರಕಾರ ಜಾರಿಗೆ ತಂದಿರುವ ಕರಾಳ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸುವ ಯಾವ ಸೂಚನೆಯನ್ನೂ ರಾಜ್ಯ ಸರಕಾರ ಕೊಟ್ಟಿಲ್ಲ.

ಕೈಗಾರಿಕಾ ಅಭಿವೃದ್ಧಿಗೆಂದು ಕರಾಳ ಕೆ.ಐ.ಡಿ.ಬಿ ಕಾಯ್ದೆಯ ಮೂಲಕ ಮನಬಂದಂತೆ ರಾಜ್ಯದಲ್ಲಿ ನಡೆದಿರುವ, ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗಳು, ಅದರಿಂದ ವಂಚನೆಗೊಳಗಾದ ಪ್ರಕರಣಗಳಿಗೆ ಪರಿಹಾರದ ಪ್ರಸ್ತಾಪವಿಲ್ಲ, ಬಗರ್ ಹುಕುಂ ಸಾಗುವಳಿ, ಅರಣ್ಯ ಭೂಮಿ ಒಳಗೊಂಡು ಹಲವಾರು ಸಾಗುವಳಿದಾರರ ಜಮೀನು ಸಕ್ರಮಗೊಳಿಸುವ ಪ್ರಸ್ತಾಪವೂ ಇಲ್ಲ.

ಮನ್ ರೇಗಾ ಉಳಿಸುವ ಪ್ರಯತ್ನ ಬಜೆಟ್ ನಲ್ಲಿ ಕಾಣುತ್ತಿಲ್ಲ:

ಈಗ ಆ 2025-26 ರ ಸಾಲಿನಲ್ಲಿ ಮನ್ ರೇಗಾದ ಅಡಿಯಲ್ಲಿ ಕೇಂದ್ರದ ಪಾಲು 90% ರಾಜ್ಯದ ಪಾಲು 10% ಇದ್ದಾಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 26,735 ಕೋಟಿ ಹಂಚಿಕೆಯಾಗಿತ್ತು. ಕಾಯ್ದೆಯನ್ನೇ ರದ್ದು ಮಾಡಿ ರಾಜ್ಯದ ಪಾಲು 40%, ಕೇಂದ್ರದ ಪಾಲು 60% ಎಂದು ಮಾಡಿರುವ ಹೊತ್ತಿನಲ್ಲಿ ಕಳೆದ ಅವಧಿಗಿಂತ ಕಡಿಮೆ ಎಂದರೆ 26,559 ಕೋಟಿ ಮೀಸಲಿಟ್ಟು 176 ಕೋಟಿಯಷ್ಟು ಕಡಿತ ಮಾಡಲಾಗಿದೆ. ಸರ್ವೋದಯದ ಕನಸು ಇಲ್ಲೇ ಹುಡಿಯಾಗಿದೆ. ಕೃಷಿ ಬಿಕ್ಕಟ್ಟಿನಿಂದ ರೈತರು ಕೃಷಿ ಕೂಲಿಕಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ರಾಜ್ಯದ ಬಜೆಟ್ ಮೂಲಕ ಅವರಿಗೆ ಬದುಕಿನ ಭರವಸೆ ನೀಡಲು ಸರಕಾರ ವಿಫಲವಾಗಿದೆ.

ಕೃಷಿ ಉತ್ಪಾದಕತೆ ಮತ್ತು ಕೃಷಿ ಭೂಮಿ ರಕ್ಷಣೆಗೆ ಯಾವುದೇ ಬೆಂಬಲ ನೀಡದೇ ರಿಯಲ್ ಎಸ್ಟೇಟ್ ಹಾಗೂ ಕಾರ್ಪೊರೇಟ್ ಭೂ ಕಬಳಿಕೆಗೆ ಉತ್ತೇಜಿಸುವಂತೆ ವ್ಯವಸ್ಥೆಯನ್ನು ರೂಪಿಸುವ ಕ್ರಮಗಳು ಬಜೆಟ್‌ನಲ್ಲಿವೆ.

ಆರೋಗ್ಯ ವಲಯದಲ್ಲಿ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಮತ್ತು ಇರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪಗಳು ಸ್ವಾಗತಾರ್ಹ. ಆದರೆ ಅವುಗಳ ಸಮರ್ಪಕ ಜಾರಿಯಲ್ಲಿ ಕೊರತೆಗಳಿವೆ ಎಂಬುದು ಈ ಹಿಂದಿನ ಅವಧಿಗಳ ನಮ್ಮ ಅನುಭವ. ಇವುಗಳನ್ನು ಖಾಸಗೀ ಸಹಭಾಗಿತ್ವದ ಹೆಸರಿನಲ್ಲಿ ಖಾಸಗೀ ಬಂಡವಾಳಿಗರಿಗೆ ತೆರೆದಿಡುವ ಸೂಚನೆಗಳು ಅತ್ಯಂತ ಅಪಾಯಕಾರಿಯಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಕೆಲವು ವಿಸ್ತರಣಾ ಯೋಜನೆಗಳ ಪ್ರಸ್ತಾಪವಿದೆ. ಆದರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಸುತ್ತಮುತ್ತಲಿನ ಸರಕಾರೀ ಶಾಲೆಗಳನ್ನು ಮುಚ್ಚುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು, ಅವು ಗ್ರಾಮೀಣ ಭಾಗದ ಮಕ್ಕಳ ಕಲಿಕೆಯ ಮೇಲೆ ತೀವ್ರ ಪರಿಣಾಮ ಉಂಟುಮಾಡಲಿದೆ. ಖಾಸಗೀ ಶಾಲೆಗಳನ್ನು ತೆರೆಯಲು ಅನುಮತಿಯನ್ನು ಆನೈನ್ ಮೂಲಕ ಸರಳೀಕರಿಸುವ ಪ್ರಸ್ತಾಪ ಸರಕಾರೀ ಶಾಲೆಗಳ ಕೊರಳಿಗೆ ಬಿಗಿಯುವ ಉರುಳೇ ಆಗಿದೆ. ರೋಹಿತ್ ವೇಮುಲ ಕಾಯ್ದೆಯ ಜಾರಿ ಎನ್ನುವುದು ಕೂಡಾ ಆಗ ಕನಸಿನ ಗಂಟೇ ಆದೀತು.

ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆಯೊಂದು ಸ್ವಾಗತಾರ್ಹ. ಆದರೆ ಅದು ವೇತನ ಸಹಿತ ರಜೆ ಎಂಬುದನ್ನು ಖಾತ್ರಿಪಡಿಸಿ, ಅವರ ರಜೆಯ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆಗೆ ಅಗತ್ಯವಾದ ಕ್ರಮದ ಪ್ರಸ್ತಾಪವಿಲ್ಲ.

ಗ್ಯಾರಂಟಿ ಯೋಜನೆಗಳು: ಬಜೆಟ್ ನಲ್ಲಿಯೇ ಉಲ್ಲೇಖಿಸಿದಂತೆ ಕಳೆದ ಅವಧಿಗೆ ಗ್ಯಾರಂಟಿ ಯೋಜನೆಗಳಿಗೆ

ಸರಕಾರ ಮಾಡಿದ ವೆಚ್ಚ 1,21,598 ಕೋಟಿಗಳು, ಈ ವರ್ಷದ ಬಜೆಟ್ ನಲ್ಲಿ ಘೋಷಿಸಿರುವುದು 49,608 ಕೋಟಿ. ಯುವ ನಿಧಿಯ ಪ್ರಸ್ತಾಪವೇ ಇಲ್ಲ. ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದ್ದು ಕಳೆದ ವಾರ ಧಾರವಾಡದಲ್ಲಿ ನಡೆದ ಯುವಜನರ ಹೋರಾಟವೇ ಸಾಕ್ಷಿಯಾಗಿದೆ. ಆದರೆ ಅದರತ್ತ ಗಮನವೇ ಕೊಡದ ಸರಕಾರ ಇತರ ಗ್ಯಾರಂಟಿಗಳಿಗೆ ಘೋಷಿಸಿರುವ ಮೊತ್ತವೂ ತೀರಾ ಕಡಿಮೆಯಾಗಿದ್ದು ಗ್ಯಾರಂಟಿಗಳ ಭವಿಷ್ಯದ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿದೆ. ಅದಲ್ಲದೆ ದಲಿತರು ಹಾಗೂ ಆದಿವಾಸಿಗಳ ಅಭಿವೃದ್ದಿಗೆಂದೇ ಮೀಸಲಿರುವ ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ.ಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಅದರ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲದಿರುವುದು ಕೂಡಾ ಅನುಮಾನಕ್ಕೆ ಎಡೆ ಮಾಡಿದೆ.

ಈ ಮೊದಲು ಮಂಡಿಸುತ್ತಿದ್ದ ಜೆಂಡರ್ ಬಜೆಟ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದು ಈ ಬಾರಿಯೂ ಮುಂದುವರೆದಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ವಿಕೃತ ಸ್ವರೂಪದ ದೌರ್ಜನ್ಯಗಳು, ಅವುಗಳನ್ನು ನಿಯಂತ್ರಿಸಿ ನಿಜವಾದ ಮಹಿಳಾ ಸಬಲೀಕರಣಕ್ಕೆ ಕೊಡಬೇಕಾದ ಒತ್ತು ಮಾಯವಾಗುತ್ತಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ಗೌರವ ಧನ ಹೆಚ್ಚಿಸುವ ಭರವಸೆ ಇದುವರೆಗೂ ಈಡೇರಿಸದೇ ಸಮವಸ್ತ್ರಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರು ಸಾವಿರಾರು ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಅವರ ಕುರಿತು ಪ್ರಸ್ತಾಪವಿಲ್ಲ. ಮಕ್ಕಳ ಸಹಾಯವಾಣಿ ಸಿಬ್ಬಂದಿಗೆ ಕಳೆದ 6 ತಿಂಗಳಿನಿಂದ ವೇತನವೂ ಇಲ್ಲ. ಇವೆಲ್ಲದರ ಬಗ್ಗೆ ಬಜೆಟ್ ಮೌನ ವಹಿಸಿದೆ.

ಪ್ರವಾಸೋದ್ಯಮದ ಹೆಸರಿನಲ್ಲಿ ಕರಾವಳಿ ಕಡಲ ತೀರಗಳನ್ನು ಖಾಸಗೀ ಬಂಡವಾಳಿಗರು ಮತ್ತು ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ತೆರೆದಿಡುವ ಪ್ರಸ್ತಾಪವನ್ನು ಬಜೆಟ್ ನಲ್ಲಿಯೇ ಮಾಡಿರುವುದು ಸರಕಾರ ಎಂದಿದ್ದರೂ ತನ್ನ ನವ ಉದಾರವಾದೀ ನೀತಿಗಳ ಪರವಾಗಿಯೇ ನಿಲ್ಲುತ್ತದೆ ಎಂಬುದನ್ನು ದೃಢಪಡಿಸುತ್ತದೆ.

ವೃದ್ದರು. ಗಂಡ ಸತ್ತವರು, ಅಂಗವಿಕಲರು, ದೇವದಾಸಿಯರಾಗಿದ್ದವರು ಇವರೆಲ್ಲರ ಬದುಕಿಗೆ ಆಸರೆ ಒದಗಿಸುವ ಯಾವ ಪ್ರಸ್ತಾಪಗಳನ್ನೂ ಮಾಡದ ಒಂದು ತೀರಾ ನೀರಸ ಬಜೆಟ್ ಇದು ಎಂದು ಸಿ.ಪಿ.ಐ(ಎಂ) ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯ ಪಡುತ್ತದೆ.

(ಡಾ.ಕೆ.ಪ್ರಕಾಶ್) ಕಾರ್ಯದರ್ಶಿ

 #ಕಾರ್ಮಿಕ_ಸಂಹಿತೆಗಳನ್ನು_ರದ್ದುಪಡಿಸಬೇಕು. #ಒಕ್ಕೂಟ_ವ್ಯವಸ್ಥೆಯ_ವಿರುದ್ಧವಾದ_ಸಮವರ್ತಿ_ಪಟ್ಟಿ_ಕಾರ್ಮಿಕರ_ಕುರಿತು_ಅಧಿಕಾರವನ್ನು_ಕೇಂದ್ರ_ಸರ್ಕ...
04/03/2026

#ಕಾರ್ಮಿಕ_ಸಂಹಿತೆಗಳನ್ನು_ರದ್ದುಪಡಿಸಬೇಕು.

#ಒಕ್ಕೂಟ_ವ್ಯವಸ್ಥೆಯ_ವಿರುದ್ಧವಾದ_ಸಮವರ್ತಿ_ಪಟ್ಟಿ_ಕಾರ್ಮಿಕರ_ಕುರಿತು_ಅಧಿಕಾರವನ್ನು_ಕೇಂದ್ರ_ಸರ್ಕಾರಕ್ಕೆ_ಸಿಮೀತಗೊಳಿಸುವ_ಪ್ರಯತ್ನವನ್ನು_ರಾಜ್ಯ_ಸರ್ಕಾರ_ವಿರೋಧಿಸಬೇಕು.

#ರಾಜ್ಯ_ಸರ್ಕಾರ_ತನ್ನ_ಅಧಿಕಾರವನ್ನು_ಚಲಾಯಿಸಿ_ಮೂಲ_ಸಂಹಿತೆಗಳಿಗೆ_ತಿದ್ದುಪಡಿಗಳನ್ನು_ತಂದು_ನಂತರ_ನಿಯಮಾವಳಿ_ರೂಪಿಸಬೇಕು.

#ಕರಡು_ನಿಯಮಾವಳಿಗಳನ್ನು_ಕನ್ನಡದಲ್ಲಿ_ಪ್ರಕಟಿಸಿ_ನಂತರ_ಆಕ್ಷೇಪಣೆ_ಸಲ್ಲಿಸಲು_ಸಮಯಾವಕಾಶ_ನೀಡಬೇಕು.

#ರಾಜ್ಯ_ಸರ್ಕಾರ_ಕೂಡಲೇ_ಕನಿಷ್ಠ_ವೇತನ_ಅಧಿಸೂಚನೆ_ಹೊರಡಿಸಬೇಕು.

#ಸಿಐಟಿಯು_ಮತ್ತು_ಸಂಯೋಜಿತ_ಸಂಘಟನೆಗಳಿಂದ_ಕಾರ್ಮಿಕ_ಸಂಘಟನೆಗಳಿಗೆ_ಕರಡು_ನಿಯಮಗಳಿಗೆ_ಆಕ್ಷೇಪಣೆಗಳ‌_ಸಲ್ಲಿಕೆ.

#ರಾಜ್ಯಾದ್ಯಂತ_ಕಾರ್ಮಿಕ_ಕಚೇರಿ_ಎದುರು_ಮತ_ಪ್ರದರ್ಶನ
ಿಂದ_05_ಮಾರ್ಚ್_2026

 #ಕಾರ್ಮಿಕ_ಸಂಹಿತೆಗಳನ್ನು_ರದ್ದುಪಡಿಸಬೇಕು #ಒಕ್ಕೂಟ_ವ್ಯವಸ್ಥೆಯ_ವಿರುದ್ಧವಾದ_ಸಮವರ್ತಿ_ಪಟ್ಟಿ_ಕಾರ್ಮಿಕರ_ಕುರಿತು_ಅಧಿಕಾರವನ್ನು_ಕೇಂದ್ರ_ಸರ್ಕಾ...
01/03/2026

#ಕಾರ್ಮಿಕ_ಸಂಹಿತೆಗಳನ್ನು_ರದ್ದುಪಡಿಸಬೇಕು
#ಒಕ್ಕೂಟ_ವ್ಯವಸ್ಥೆಯ_ವಿರುದ್ಧವಾದ_ಸಮವರ್ತಿ_ಪಟ್ಟಿ_ಕಾರ್ಮಿಕರ_ಕುರಿತು_ಅಧಿಕಾರವನ್ನು_ಕೇಂದ್ರ_ಸರ್ಕಾರಕ್ಕೆ_ಸಿಮೀತಗೊಳಿಸುವ_ಪ್ರಯತ್ನವನ್ನು_ರಾಜ್ಯ_ಸರ್ಕಾರ_ವಿರೋಧಿಸಬೇಕು.

#ರಾಜ್ಯ_ಸರ್ಕಾರ_ತನ್ನ_ಅಧಿಕಾರವನ್ನು_ಚಲಾಯಿಸಿ_ಮೂಲ_ಸಂಹಿತೆಗಳಿಗೆ_ತಿದ್ದುಪಡಿಗಳನ್ನು_ತಂದು_ನಂತರ_ನಿಯಮಾವಳಿ_ರೂಪಿಸಬೇಕು.

#ಕರಡು_ನಿಯಮಾವಳಿಗಳನ್ನು_ಕನ್ನಡದಲ್ಲಿ_ಪ್ರಕಟಿಸಿ_ನಂತರ_ಆಕ್ಷೇಪಣೆ_ಸಲ್ಲಿಸಲು_ಸಮಯಾವಕಾಶ_ನೀಡಬೇಕು.

#ರಾಜ್ಯ_ಸರ್ಕಾರ_ಕೂಡಲೇ_ಕನಿಷ್ಠ_ವೇತನ_ಅಧಿಸೂಚನೆ_ಹೊರಡಿಸಬೇಕು.

#ಸಿಐಟಿಯು_ಮತ್ತು_ಸಂಯೋಜಿತ_ಸಂಘಟನೆಗಳಿಂದ_ಕಾರ್ಮಿಕ_ಸಂಘಟನೆಗಳಿಗೆ_ಕರಡು_ನಿಯಮಗಳಿಗೆ_ಆಕ್ಷೇಪಣೆಗಳ‌_ಸಲ್ಲಿಕೆ.

#ರಾಜ್ಯಾದ್ಯಂತ_ಕಾರ್ಮಿಕ_ಕಚೇರಿ_ಎದುರು_ಮತ_ಪ್ರದರ್ಶನ
ಿಂದ_05_ಮಾರ್ಚ್_2026

ದೇಶದ ಸಂವಿಧಾನ ಖಾತರಿ ಪಡಿಸುವ ಒಕ್ಕೂಟ್ಟ ಪದ್ಧತಿಯಲ್ಲಿ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ನುಂಗುವ ಸರ್ವಾಧಿಕಾರಿ ಕೇಂದ್ರ ಸರ್ಕಾರದ ನಡೆಯ ...
01/03/2026

ದೇಶದ ಸಂವಿಧಾನ ಖಾತರಿ ಪಡಿಸುವ ಒಕ್ಕೂಟ್ಟ ಪದ್ಧತಿಯಲ್ಲಿ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ನುಂಗುವ ಸರ್ವಾಧಿಕಾರಿ ಕೇಂದ್ರ ಸರ್ಕಾರದ ನಡೆಯ ವಿರುದ್ಧ ರಾಜ್ಯ ಸರ್ಕಾರ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು.

ಕಾರ್ಮಿಕರ ಕುರಿತ ವಿಚಾರಗಳು ಸಮವರ್ತಿ ಪಟ್ಟಿಯಲ್ಲಿರುವುದರಿಂದ ಕರ್ನಾಟಕ ರಾಜ್ಯದ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಘೋರ ನಿಯಮಗಳನ್ನು ಬದಲಿಸಬೇಕು. ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿಯು ಕಾರ್ಮಿಕರಿಗೆ ಮಾರಕವಾದ ಅಂಶಗಳನ್ನು ತಿದ್ದುಪಡಿಗಳ ಮೂಲಕ ಬದಲಿಸಬೇಕು. ಅದರ ನಂತರ ಸಂಹಿತೆಗಳ ಜಾರಿಗೆ ಅಗತ್ಯವಾದ ನಿಯಮಾವಳಿಗಳನ್ನು ರೂಪಿಸಬೇಕು.

ಕೇಂದ್ರ ಸರ್ಕಾರ ಹಿಂದಿ ಹಾಗು ಆಂಗ್ಲ ಭಾಷೆಯಲ್ಲಿ ಸಂಹಿತೆ ಹಾಗು ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ. ಹಿಂದಿ ಭಾಷಿಕರಲ್ಲದ ದೇಶದ ಕಾರ್ಮಿಕರಿಗೆ ಈ ಕಾನೂನು ಹಾಗು ನಿಯಮಾವಳಿಗಳನ್ನು ಅವರವರ ಮಾತೃಭಾಷೆಯಲ್ಲಿ ತಿಳಿದುಕೊಳ್ಳುವ ಹಕ್ಕಿದೆ. ಅದನ್ನು ನಿರಾಕರಿಸಬಾರದು.

ಆದ್ದರಿಂದ ರಾಜ್ಯ ಸರ್ಕಾರ ರಾಜ್ಯದ ಆಡಳಿತ ಭಾಷೆಯಾದ ಕನ್ನಡ ಭಾಷೆಯಲ್ಲಿ ಪ್ರಕಟಿಸ ಬೇಕು. ಕಾನೂನು ಹಾಗು ನಿಯಮಾವಳಿಗಳನ್ನು ಕಾರ್ಮಿಕರಿಗೆ ಓದಲು ಹಾಗು ಅರ್ಥಮಾಡಿಕೊಳ್ಳಲು ಮುಕ್ತ ಅವಕಾಶವನ್ನು ಖಾತರಿ ಪಡಿಸಬೇಕು. ಕನ್ನಡ ಅಭಿಮಾನ ತುಟಿಯಮೇಲಿನ ಪದಗಳಲ್ಲ ಕಾರ್ಯಾಚರಣೆಯ ಬದ್ಧತೆ ಎಂಬುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮರೆಯಬಾರದು.

ಕನ್ನಡದಲ್ಲಿ ಸಂಹಿತೆಗಳು ಹಾಗು ನಿಯಮಾವಳಿಗಳನ್ನು ಪ್ರಕಟಿಸಿದ ನಂತರ ಕನಿಷ್ಟ ಎರಡು ತಿಂಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡ ಬೇಕು ಎಂಬುದು ಸಿಐಟಿಯು ರಾಜ್ಯ ಸಮಿತಿಯ ಒತ್ತಾಯವಾಗಿದೆ.

ಈ ಬೇಡಿಕೆಗಳಿಗೆ ಪ್ರಗತಿಪರ ಹಾಗು ಪ್ರಸತಾತ್ಮಕ ಮನಸ್ಸುಗಳು ಬೆಂಬಲ ನೀಡಬೇಕು ಎಂಬುದು ಸಿಐಟಿಯು ರಾಜ್ಯ ಸಮಿತಿಯ ವಿನಂತಿ.

ಮಾರ್ಚ್ 3 ರಿಂದ 5, 2026 ರಾಜ್ಯಾದ್ಯಂತ "ರಾಜ್ಯದ ಗೌರವ ಹಾಗು ಆಭಿಮಾನ" ಉಳಿಸಲು ನಮ್ಮ ಸಂಘಟನೆ ನಡೆಸುವ ಕಾರ್ಯಾಚರಣೆಗೆ ಬೆಂಬಲ ನೀಡಲು ವಿನಂತಿಸುತ್ತೇವೆ.

-ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ

ಕಾರ್ಮಿಕ- ಕಾರ್ಮಿಕಾಧಿಕಾರಿ ಮಧ್ಯ ಒಂದು ಚರ್ಚೆ ಗಮನಿಸಿ #ಇಂತಹ_ಲೇಬರ್_ಕೋಡ್ಸ್_ಬೇಕಾ?????  #ಫೆಬ್ರುವರಿ12_ದೇಶವ್ಯಾಪಿ_ಸಾರ್ವತ್ರಿಕ_ಮುಷ್ಕರ
02/02/2026

ಕಾರ್ಮಿಕ- ಕಾರ್ಮಿಕಾಧಿಕಾರಿ ಮಧ್ಯ ಒಂದು ಚರ್ಚೆ ಗಮನಿಸಿ
#ಇಂತಹ_ಲೇಬರ್_ಕೋಡ್ಸ್_ಬೇಕಾ?????

#ಫೆಬ್ರುವರಿ12_ದೇಶವ್ಯಾಪಿ_ಸಾರ್ವತ್ರಿಕ_ಮುಷ್ಕರ

Address

No. 1201 4th Cross 3Rd Main Kalyana Nagar
Bangalore
560057

Website

Alerts

Be the first to know and let us send you an email when CWFI Bengaluru North page posts news and promotions. Your email address will not be used for any other purpose, and you can unsubscribe at any time.

Shortcuts

Share