16/06/2023
ಪತ್ರಿಕಾ ಹೇಳಿಕೆ
ಇಂಜಿನಿಯರಿಂಗ್ ಕೋರ್ಸ್ಗಳ ಶುಲ್ಕವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರಕ್ಕೆ ಆಗ್ರಹ.
15 ಜೂನ್ 2023 ರಂದು, ಉನ್ನತ ಶಿಕ್ಷಣ ಇಲಾಖೆ ಸಚಿವ ಶ್ರೀ.ಎಂ.ಸಿ.ಸುಧಾಕರ್ ಅವರು 2023-24 ಶೈಕ್ಷಣಿಕ ವರ್ಷಕ್ಕೆ ಯುಜಿ ಎಂಜಿನಿಯರಿಂಗ್ ಕೋರ್ಸ್ಗಳ ಶುಲ್ಕವನ್ನು 10% ಹೆಚ್ಚಿಸಲಾಗಿದೆ ಎಂದು ಹೇಳಿರುವದು ಸಮಾಜದ ಬಡ ಮತ್ತು ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಆಘಾತವಾಗಿದೆ. ಶುಲ್ಕವನ್ನು ಹೆಚ್ಚಿಸುವುದರಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಮುಂದುವರಿಸಲು ನಿರುತ್ಸಾಹಗೊಳ್ಳುತ್ತಾರೆ ಮತ್ತು ಇದರಿಂದ ರಾಜ್ಯದ ಒಟ್ಟು ದಾಖಲಾತಿ ಅನುಪಾತವು ಕುಸಿಯುತ್ತದೆ.
ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರ ಖಾಸಗಿ ಇಂಜಿನಿಯರಿಂಗ್ ಕಾಲೇಜು ಮ್ಯಾನೇಜ್ಮೆಂಟ್ ಅಸೋಸಿಯೇಷನ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು ಮತ್ತು ಈಗಿನ ಸರ್ಕಾರವೂ ಅದೇ ರೀತಿ ಮುಂದುವರಿಯುತ್ತದೆ ಎಂದು ಸಚಿವರು ಹೇಳಿದರು. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಹೊಸದಾಗಿ ಚುನಾಯಿತವಾದ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರದ ವಿವಿಧ ಜನವಿರೋಧಿ ತೀರ್ಮಾನ ಮತ್ತು ಶಾಸನಗಳನ್ನು ರದ್ದುಗೊಳಿಸುವ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರವು ಮತಾಂತರ ನಿಷೇದ ಕಾಯ್ದೆ ರದ್ದುಗೊಳಿಸಲು ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬುದನ್ನು ಸಹ ಗಮನಿಸಬೇಕು. ಈ ಹಿನ್ನೆಲೆಯಲ್ಲಿ ಬಡ ಜನ ಶಿಕ್ಷಣ ವಿರೋಧಿಯಾಗಿ ಹಿಂದಿನ ಸರಕಾರ ಶೇ10% ರಷ್ಟು ಹೆಚ್ಚಿಸಿ ಜಾರಿಗೆ ತಂದ ಶುಲ್ಕವನ್ನು ಮುಂದುವರೆಸದೆ ಅದನ್ನು ಕೈಬಿಟ್ಟು, ಹಳೆಯ ಶುಲ್ಕವನ್ನು ಮುಂದುವರೆಸುವಂತೆ ಎಐವೈಎಫ್ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.
ಧನ್ಯವಾದಗಳು,
ಹರೀಶ್ ಬಾಲಾ,
ರಾಜ್ಯಾಧ್ಯಕ್ಷರು,
ಸಂತೋಷ್ ಹೆಚ್ ಎಂ,
ರಾಜ್ಯ ಕಾರ್ಯದರ್ಶಿ