05/04/2026
ನಮ್ಮ ಮಾನ್ಯ ಶಾಸಕರಾದ ಶ್ರೀ ಎಂ. ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಮತ್ತು ಶಾಸಕರ ನಿಧಿಯಿಂದ ಅನುದಾನ ನೀಡಿ, ಅರಕೆರೆ ವಾರ್ಡ್‌ನ ಮೈಕೋ ಲೇಔಟ್ 1ನೇ ಹಂತದಲ್ಲಿ ಮಕ್ಕಳ ಆಟದ ಮೈದಾನವನ್ನು ಯಶಸ್ವಿಯಾಗಿ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮವನ್ನು ನಮ್ಮ ಮಾನ್ಯ ಶಾಸಕರಾದ ಶ್ರೀ ಎಂ. ಸತೀಶ್ ರೆಡ್ಡಿ ಅವರು ಉದ್ಘಾಟಿಸಿ, ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀ ರವಿ ಪುರುಷೋತ್ತಮ್, ಮಾಜಿ ನಗರ ಸಭೆ ಸದಸ್ಯರಾದ ಶ್ರೀ ಎ. ಎನ್. ಮುರಳಿ ಮತ್ತು ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಭಾಗ್ಯಲಕ್ಷ್ಮಿ ಮುರಳಿ ಅವರ ಸಾನ್ನಿಧ್ಯದಲ್ಲಿ ಮತ್ತು ಮಾರ್ಗದರ್ಶನದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಮೈಕೋ ಲೇಔಟ್ 1ನೇ ಹಂತ, 2ನೇ ಹಂತ, ಓಂಕಾರ್ ನಗರ, ಬ್ರಿಂದಾವನ್ ಎಕ್ಸ್ಟೆನ್ಶನ್ ನಿವಾಸಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಆಟದ ಮೈದಾನವು ಮಕ್ಕಳಿಗೆ ಆಟವಾಡಲು, ಬೆಳೆಯಲು ಮತ್ತು ಸಂತೋಷದಿಂದ ಕಾಲ ಕಳೆಯಲು ಉತ್ತಮ ಅವಕಾಶವನ್ನು ಒದಗಿಸುತ್ತದೆ ಹಾಗೂ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.