14/06/2026
ಇಂದು ದಾವಣಗೆರೆಯಲ್ಲಿ ರಾಜ್ಯ ಬಿಜೆಪಿ S T ಮೋರ್ಚಾ ವತಿಯಿಂದ ಸಂವಿಧಾನ ಬದ್ಧವಾಗಿ ಪರಿಶಿಷ್ಟ ಪಂಗಡಗಳಿಗೆ ಸಿಗಬೇಕಾದ ಪ್ರತಿಶತ 7ರ ಮೀಸಲಾತಿಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ ಸಭೆಯ ಅಧ್ಯಕ್ಷತೆ ಯನ್ನು ಎಸ್ ಟಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ ಬಂಗಾರು ಹನುಮಂತಣ್ಣ ನವರು ವಹಿಸಿದ್ದರು ,
ನಂತರ ಸಭೆಯನ್ನುದ್ದೇಶಿಸಿ ಬಿಜೆಪಿ ಸರ್ಕಾರ ನಮಗೆ ನೀಡಿದ್ದ ಮೀಸಲಾತಿಯನ್ನು ದಲಿತ ವಿರೋಧಿ ಕಾಂಗ್ರೆಸ್ ಶೇಕಡಾ 7 ರಿಂದ ಶೇಕಡಾ 3 ಕ್ಕೆ ಇಳಿಸಿ ಅನ್ಯಾಯಮಾಡಿದ್ದರ ಬಗ್ಗೆ ಸವಿಸ್ತಾರವಾಗಿ ತಿಳಿಸದರು,
ಪ್ರಾಸ್ತಾವಿಕ ಭಾಷಣವನ್ನು ಹಿರಿಯರಾದ ಶ್ರೀ ವಾದಿರಾಜ್ ಜೀ ರವರು ನುಡಿದು ಮಾತನಾಡಿದರು,
ಈ ಸಭೆಯಲ್ಲಿ ಸಮುದಾಯದ ಹಿರಿಯರು ಮಾಜಿ ಸಚಿವರುಗಳಾದ ರಮೇಶ್ ಜಾರಕಿಹೊಳಿರವರು, ಶ್ರೀ ರಾಮುಲು ರವರು, ರಾಜೂಗೌಡರವರು,ಮಾಜಿ ಸಂಸದರುಗಳಾದ
ಬಿ ವಿ ನಾಯಕ್ ರವರು, ದೇವೇಂದ್ರಪ್ಪನವರು, ಸಣ್ಣ ಪಕೀರಪ್ಪನವರು, ಮಾಜಿ ಶಾಸಕರುಗಳಾದ ಪ್ರತಾಪ್ ಗೌಡ ಪಾಟೀಲ್ ರವರು, ಸೋಮಲಿಂಗಪ್ಪನವರು, ತಿಪ್ಪರಾಜು ಹವಾಲ್ದಾರ್ ರವರು, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್ ರವರು, ಶಾಂತರಾಮ್ ಸಿದ್ದಿಯವರು, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ರವರು, ಮೈಸೂರಿನ ಅಪ್ಪಣ್ಣರವರು, ಶ್ರೀ ಶಿವ ಕುಮಾರ,ಜಯಸುಂದರ್ ಶ್ರೀನಿವಾಸ್ ದಾಸ ಕರಿಯಪ್ಪನವರು, ಅನಿಲ್ ಕುಮಾರ್ ರವರು,ಕಾರ್ಯಾಲಯ ಕಾರ್ಯದರ್ಶಿ ಶಿವಶಂಕರರವರು, ST ಮೋರ್ಚಾ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರುಗಳು ಕೃಷ್ಣ ಮೂರ್ತಿ ರಾಜ ಶೇಖರ್ ಗುಮ್ಮನೂರು ಶ್ರೀನಿವಾಸ ಕೆ ಎಸ್ ರವಿ ಪ್ರಮುಖ ಕಾರ್ಯಕರ್ತ ಬಂಧುಗಳು, ಸಮುದಾಯದ ಮುಖಂಡರುಗಳು ಭಾಗವಹಿಸಿದ್ದರು.