City Municipal Council Bailhongal

City Municipal Council Bailhongal Contact information, map and directions, contact form, opening hours, services, ratings, photos, videos and announcements from City Municipal Council Bailhongal, Government Organization, City Municipal Council, Bail Hongal.

20/08/2026

ಶೋಷಿತರ ಸಮಗ್ರ ಅಭಿವೃದ್ಧಿಯ ಹರಿಕಾರ, ನೊಂದವರ ನಂದಾದೀಪ, ಧೀಮಂತ ನಾಯಕ ಹಾಗೂ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

19/08/2026

ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ನಗರ ನಿರ್ಮಾಣ ಮತ್ತು "ಘನತ್ಯಾಜ್ಯ ವಸ್ತುಗಳ ನಿರ್ವಹಣಾ ನಿಯಮಗಳು-2026" ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಲಿಟಲ್‍ ಹಾರ್ಟ್ಸ ಸ್ಕಾಲರ್ಸ್‍ ಪೌಂಡೇಶನ್‍ ಇಂಗ್ಲೀಷ್‍ ಮೀಡಿಯಂ ಸ್ಕೂಲ್‍, ಬೈಲಹೊಂಗಲ ಇದರ ವಿದ್ಯಾರ್ಥಿಗಳು "ತ್ಯಾಜ್ಯ ವಿಂಗಡಣೆ ಬಗ್ಗೆ ಅರಿವು ಮೂಡಿಸುವ" ಕುರಿತಾದ "ನಾಟಕ ಪ್ರದರ್ಶನ" ಮೂಲಕ ತ್ಯಾಜ್ಯ ವಿಂಗಡಣೆಯ ಮಹತ್ವ, ಸ್ವಚ್ಛತೆಯ ಅಗತ್ಯತೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಪರಿಣಾಮಕಾರಿಯಾಗಿ ಜನಜಾಗೃತಿ ಮೂಡಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ವೇಳೆ ಬೈಲಹೊಂಗಲ ನಗರಸಭೆ, ಮಾನ್ಯ ಪೌರಾಯುಕ್ತರಾದ ಶ್ರೀಮತಿ ಭಾಗ್ಯಶ್ರೀ ಆರ್.‌ ಹುಗ್ಗಿ, ಶಾಲಾ ಆಡಳಿತ ಮಂಡಳಿಯ ಚೇರಮನ್ನರಾದ ಶ್ರೀಮತಿ ಸೆಲಿನ್‌ ಜೈಮನ್‌, ಕಾರ್ಯದರ್ಶಿ ಶ್ರೀ ಆಕಾಶ ಜೈಮನ್‌, ಮುಖ್ಯೋಪಾಧ್ಯಾಯನಿ ಶ್ರೀಮತಿ ಆಸ್ಮಾ ಖಾಜಿ ರವರು ಹಾಗೂ ನಗರಸಭೆಯ ಅಧಿಕಾರಿ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.

ಬೈಲಹೊಂಗಲ ನಗರಸಭೆ ಕಾರ್ಯಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸನ್ಮಾನ್ಯ ಶ್ರೀ ಮಹಾಂತೇಶ ಎಸ್. ಕೌಜಲಗಿ ಗೌರವಾನ್ವಿತ ಶಾಸಕರು, ಬ...
15/08/2026

ಬೈಲಹೊಂಗಲ ನಗರಸಭೆ ಕಾರ್ಯಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸನ್ಮಾನ್ಯ ಶ್ರೀ ಮಹಾಂತೇಶ ಎಸ್. ಕೌಜಲಗಿ ಗೌರವಾನ್ವಿತ ಶಾಸಕರು, ಬೈಲಹೊಂಗಲ ರವರ ಘನ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

ಮಾನ್ಯ ಪೌರಾಯುಕ್ತರಾದ ಶ್ರೀಮತಿ ಭಾಗ್ಯಶ್ರೀ ಆರ್. ಹುಗ್ಗಿ ರವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಅಧಿಕಾರಿ-ಸಿಬ್ಬಂದಿ ವರ್ಗ ಮತ್ತು ನಗರಸಭೆಯ ಕಿತ್ತೂರು ರಾಣಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

13/08/2026
ಬೈಲಹೊಂಗಲ ನಗರಸಭೆ ವತಿಯಿಂದ ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಜಲಮೂಲಗಳ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಪ್ಲಾಸ್ಟರ್ ಆಫ್ ಪ್ಯ...
11/08/2026

ಬೈಲಹೊಂಗಲ ನಗರಸಭೆ ವತಿಯಿಂದ ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಜಲಮೂಲಗಳ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿ.ಓ.ಪಿ.) ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಶ್ರೀ ಗಣೇಶನ ಮೂರ್ತಿಗಳ ಉತ್ಪಾದನೆ, ಸಂಗ್ರಹ, ಮಾರಾಟ, ಪ್ರತಿಷ್ಠಾಪನೆ ಹಾಗೂ ಜಲಮೂಲಗಳಲ್ಲಿ ವಿಸರ್ಜನೆಯನ್ನು ನಿಷೇಧಿಸುವ ಕುರಿತು ಮೂರ್ತಿ ತಯಾರಕರು, ಮಾರಾಟಗಾರರು ಹಾಗೂ ಶ್ರೀ ಗಣೇಶ ಉತ್ಸವ ಮಂಡಳಿಗಳ ಪ್ರತಿನಿಧಿಗಳ ಸಭೆಯನ್ನು ಆಯೋಜಿಸಲಾಯಿತು.

ಬೈಲಹೊಂಗಲ ತಾಲೂಕಾ ಆಡಳಿತ ವತಿಯಿಂದ ಆಗಸ್ಟ್ 15, 2026 ರಂದು ಜರುಗಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತೆಗಳ ಕುರಿತು ಬೈಲಹೊಂಗಲ ...
11/08/2026

ಬೈಲಹೊಂಗಲ ತಾಲೂಕಾ ಆಡಳಿತ ವತಿಯಿಂದ ಆಗಸ್ಟ್ 15, 2026 ರಂದು ಜರುಗಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತೆಗಳ ಕುರಿತು ಬೈಲಹೊಂಗಲ ನಗರಸಭೆ ಕ್ರೀಡಾಂಗಣಕ್ಕೆ ಮಾನ್ಯ ಶ್ರೀ ಸದಾಶಿವ ಮಕ್ಕೋಜಿ, ತಹಶೀಲ್ದಾರರು, ಬೈಲಹೊಂಗಲ ರವರು ಮತ್ತು ಮಾನ್ಯ ಶ್ರೀಮತಿ ಭಾಗ್ಯಶ್ರೀ ಆರ್. ಹುಗ್ಗಿ, ಪೌರಾಯುಕ್ತರು, ನಗರಸಭೆ ಬೈಲಹೊಂಗಲ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಪಿ.ಡಬ್ಲ್ಯೂ.ಡಿ. ಇಲಾಖೆ ಅಭಿಯಂತರರು, ತಾಲೂಕಾ ಆಡಳಿತದ ಅಧಿಕಾರಿ, ಸಿಬ್ಬಂದಿಗಳು ಇದ್ದರು.

Address

City Municipal Council
Bail Hongal
591102

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

08288233135

Alerts

Be the first to know and let us send you an email when City Municipal Council Bailhongal posts news and promotions. Your email address will not be used for any other purpose, and you can unsubscribe at any time.

Shortcuts

Share