S I Dongargaon Ex MLA

S I Dongargaon Ex MLA social worker

, 1999 ಸಾಲಿನ ಶಾಸಕರು ಶ್ರೀ ಷಹಜಹಾನ್ ಡೋಂಗರ್ ಗಾವ್ ಅವರು ನೆನೆಗುದ್ದಿಗೆ ಬಿದ್ದಂತ,ದಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ  ಕೆಲಸವನ್ನು ಪ್ರಾರ...
20/10/2025

, 1999 ಸಾಲಿನ ಶಾಸಕರು ಶ್ರೀ ಷಹಜಹಾನ್ ಡೋಂಗರ್ ಗಾವ್ ಅವರು ನೆನೆಗುದ್ದಿಗೆ ಬಿದ್ದಂತ,ದಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಕೆಲಸವನ್ನು ಪ್ರಾರಂಭ ಮಾಡಿ, ಶೇರ್ ಕಲೆಕ್ಷನ್, ಟೆಂಡರ್, ಸತತವಾಗಿ ಪ್ರಗತಿ ಪರಿಶೀಲನೆ, ಅವರ ಸತತ ಪ್ರಯತ್ನದಿಂದ ಕೇವಲ ಎರಡು ವರ್ಷಗಳಲ್ಲಿ ಕೆಲಸ ಮುಕ್ತಾಯವಾಯಿತು, ಇದೇ ಸಂದರ್ಭದಲ್ಲಿ ದಿ. ಪ. ಪೂ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಯವರು ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಪಾಲ್ಗೊಂಡು ಫ್ಯಾಕ್ಟರಿಯ ಕೆಲಸವನ್ನು ಪರಿಶೀಲಿಸಿದರು , ನಂತರ ಆಗಿನ ಸಹಕಾರಿ ಮಂತ್ರಿ ಶ್ರೀ ಹೆಚ್ ವಿಶ್ವನಾಥ್ ರವರಿಂದ ಉದ್ಘಾಟನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅಥಣಿ ಮತ್ತು ಕಾಗವಾಡ ತಾಲೂಕಿನ ಎಲ್ಲ ಹಿರಿಯ ಮುಖಂಡರು ಹಾಗೂ ರೈತ ಬಾಂದವರು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.🙏🙏

17/07/2023
10/04/2023

https://youtu.be/h8krXpez7EQಎರಡು ದಶಕಗಳ ಹಿಂದೆ ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭೆ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಕ್ರಾಂತಿಕಾರಿ ಅಭಿವೃದ್ಧಿಯ ಹೊಸ ಶಕೆಗೆ ಮುನ್ನುಡಿ ಬರೆದು ನೇಪಥ್ಯಕ್ಕೆ ಸರಿದಿದ್ದ ಹಿರಿಯ ಮುತ್ಸದ್ದಿ ಒಬ್ಬರಿಗೆ ಜನರು ಒತ್ತಾಯ ಮಾಡುತ್ತಿದ್ದಾರೆ.
ಅಥಣಿ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳು ಮತ್ತು ಅದರಿಂದ ಸಂತುಷ್ಟರಾದ ಜನತೆ ಮತ್ತೆ ಇವರನ್ನು ಕಣಕ್ಕಿಳಿಯುವಂತೆ ಆಗ್ರಹಿಸುತ್ತಿದ್ದಾರೆ. ಈ ಹಿರಿಯ ನಾಯಕ ಯಾರು ಗೊತ್ತಾ?
ಮಾಜಿ ಶಾಸಕ ಶಹಜಾನ್ ಡೋಂಗರಗಾಂವ.
1999ರಲ್ಲಿ ಅಥಣಿ ವಿಧಾನಸಭೆ ಅಖಾಡದಲ್ಲಿ ಆಯ್ಕೆಯಾಗಿ ಇವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ಇಂಥ ಜನಪರ ನಾಯಕ ಮತ್ತೊಮ್ಮೆ ಆಯ್ಕೆಯಾಗಿ ಸೇವೆಗೆ ಮುಂದಾಗಬೇಕು ಎಂಬುದು ಸದ್ಯ ಅಥಣಿ ಜನತೆಯ ಅಭಿಪ್ರಾಯವಾಗಿದೆ.
ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ 1956, ಜನವರಿ 7ರಂದು ರೈತರ ಕುಟುಂಬದಲ್ಲಿ ಜನಿಸಿದ ಶಹಜಾನ್, ಬಾಲ್ಯದಿಂದಲೂ ಬಡವರ ಕಷ್ಟಗಳನ್ನು ಹತ್ತಿರದಿಂದ ಕಂಡವರು. ಐಗಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ ನಂತರ ಡಿಪ್ಲೋಮಾ ಸಿವಿಲ್ ಶಿಕ್ಷಣ ಪೂರೈಸಿ ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ವಿವಿಧ ಹುದ್ದೆಗಳಲ್ಲಿ 14 ವರ್ಷ ಸೇವೆ ಸಲ್ಲಿಸಿದ ಇವರು ಒಕ್ಕಲುತನದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡು 1996 ರಲ್ಲಿ ಇಸ್ರೇಲ್ ದೇಶಕ್ಕೆ ತೆರಳಿದರು. ಅಲ್ಲಿ ಕೃಷಿ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ತಾಯ್ನಾಡಿಗೆ ಮರಳಿದ ನಂತರ ಅಥಣಿ ತಾಲೂಕಿನ ರೈತ ಬಾಂಧವರೊಂದಿಗೆ ಅನೇಕ ಸಭೆಗಳನ್ನು ನಡೆಸಿ ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಕೈಗೊಳ್ಳಲು ಹುರಿದುಂಬಿಸಿದರು. ಕೃಷಿ ತಂತ್ರಜ್ಞಾನದ ಬಗ್ಗೆ ಪುಸ್ತಕ ಬರೆದು ರೈತರ ಮನೆ ಮನೆಗೆ ವಿತರಿಸಿದರು. ತಾವು ಕೂಡ ದ್ರಾಕ್ಷಿ ಬೆಳೆದರು. ಈ ದಿನಗಳಲ್ಲಿ ರೈತರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ರೈತರ ಪರವಾಗಿ ಅನೇಕ ಹೋರಾಟ ನಡೆಸಿದರು. ವಿದ್ಯುತ್, ನೀರಾವರಿ, ಕಬ್ಬುನುರಿಸುವುದು, ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸಿ ರೈತರಿಗೆ ಅನುಕೂಲ ಕಲ್ಪಿಸಿ ಎಂದು ಸರ್ಕಾರವನ್ನು ಎಚ್ಚರಿಸಿದರು.
ಮುಂದೆ ರಾಜಕೀಯಲ್ಲಿ ಗುರುತಿಸಿಕೊಂಡರ ಇವರನ್ನು ಜನತೆ ಅವಿರೋಧವಾಗಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕರನ್ನಾಗಿ ಮಾಡಿದರು. ನಂತರ ಕೊಹಳ್ಳಿ ತಾಲೂಕ ಪಂಚಾಯಿತಿ ಸದಸ್ಯರಾಗಿಯೂ ಆಯ್ಕೆಯಾದ ಶಹಜಾನ್ 1999 ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳನ್ನು 4 ವರ್ಷ 4 ತಿಂಗಳಿನಲ್ಲಿ ಪೂರ್ಣಗೊಳಿಸಿ ಜನರ ಮೆಚ್ಚುಗೆ ಗಳಿಸಿದರು.
ಹಿಪ್ಪರಗಿ ಬ್ಯಾರೇಜ್, ಕರಿ ಮಸೂತಿ ನೀರಾವರಿ ಯೋಜನೆ, ಸಾವಳಗಿ, ತುಂಗಳ, ಹಲ್ಯಾಳ, ಐನಾಪುರ ಬಸವೇಶ್ವರ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಾವಿರಾರು ರೈತರಿಗೆ ಅನುಕೂಲ ಕಲ್ಪಿಸಿದರು. ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸಿದರು. ಬರಗಾಲ ಪೀಡಿತ ಪ್ರದೇಶದಲ್ಲಿ ಗೋಶಾಲೆಗಳು ಆರಂಭಿಸಿ ಸೌಹಾರ್ದ ಮೆರೆದರು. ಬೃಹತ್ ಪ್ರಮಾಣದ ಕೊಳವೆ ಬಾವಿಗಳು, ಬಾವಿಗಳನ್ನು ತೆರೆದು ಜನರ ದಾಹ ನೀಗಿದರು.
PMGSY ಯೋಜನೆಯಲ್ಲಿ ಕ್ಷೇತ್ರಕ್ಕೆ ಅಪಾರ ಅನುದಾನ ತಂದು ರಸ್ತೆಗಳನ್ನು ನಿರ್ಮಿಸಿದರು. ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಮುನ್ನುಡಿ ಬರೆದರು. ಸಾವಿರಾರು ಆಶ್ರಯ ಮನೆಗಳನ್ನು ನಿರ್ಮಿಸಿ ಬಡವರಿಗೆ ಸೂರು ಕಲ್ಪಿಸಿದರು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸರ್ಕಲ್, ಪೂಜ್ಯಶ್ರೀ ಶಿವಯೋಗಿ ಸರ್ಕಲ್ ನಿರ್ಮಾಣಕ್ಕೆ ಮುಂದಾಗಿ ಅನೇಕ ದೇವಸ್ಥಾನಗಳು, ದರ್ಗಾಗಳಿಗೆ ಅನುದಾನ ಬಿಡುಗಡೆಗೊಳಿಸಿ ಅವುಗಳ ಅಭಿವೃದ್ಧಿಗೆ ಮುಂದಾಗಿ ಜನರಲ್ಲಿ ಸೌಹಾರ್ದ ಬೆಳೆಸಿದರು. ಸರ್ಕಾರಿ ಹೈಸ್ಕೂಲ್ ಗಳು, ಶಾಲೆಗಳು, ಅಥಣಿ ಪಟ್ಟಣದಲ್ಲಿ ಎರಡನೇ ಹಂತದ ಕುಡಿಯುವ ನೀರಿನ ಬೃಹತ್ ಯೋಜನೆ, ನೂತನ ಸರ್ಕಾರಿ ಆರೋಗ್ಯ ಕೇಂದ್ರ, ನೂತನ ಕೋರ್ಟ್ ಕಟ್ಟಡ ಪೊಲೀಸ್ ವಸ್ತಿ ಕಟ್ಟಡಗಳು ಅಗ್ನಿಶಾಮಕ ದಳ ಕಟ್ಟಡ ಮುಂತಾದ ಇಲಾಖೆಗಳ ಕಟ್ಟಡಗಳ ನಿರ್ಮಾಣಕ್ಕೆ ಮುಂದಾದರು. ಗಂಗಾ ಕಲ್ಯಾಣ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರು. 2003 ರಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿದಾಗ ಆಡಳಿತ ಪಕ್ಷದ ಶಾಸಕರಾಗಿದ್ದರೂ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ನಡೆಸಿ ಮಹಾರಾಷ್ಟ್ರ ರಾಜ್ಯದಿಂದ ಕೃಷ್ಣಾ ನದಿಗೆ ನೀರು ಬಿಡಿಸುವಲ್ಲಿ ಯಶಸ್ವಿಯಾದರು. ಅಥಣಿ ತಾಲೂಕಿನ ಜನತೆ ಶಹಜಾನ್ ಅವರ ಈ ಕಾಳಜಿಯನ್ನು ಇಂದಿಗೂ ಸ್ಮರಿಸುತ್ತಾರೆ‌.
ಇಂಥ ಅನೇಕ ಹೋರಾಟಗಳಿಂದ, ಪ್ರಾಮಾಣಿಕ ಸೇವೆಯಿಂದ ಜನಮನ ಗೆದ್ದ ಶಾಸಕ ಶಹಜಾನ್ ದ್ರಾಕ್ಷಿ ಬೆಳೆಗಾರರ ಸಂಘವನ್ನೂ ನಿರ್ಮಿಸಿ ಅಥಣಿ ಪೂರ್ವ ಭಾಗದಲ್ಲಿ ಕ್ಲಸ್ಟರ್ ರೂಪಿಸಿ ಸಣ್ಣ ದ್ರಾಕ್ಷಿ ಬೆಳಗಾರರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದ ಕಾರ್ಯ ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಇಂಥ ಜನಪರ ಮುತ್ಸದ್ದಿ, ಜಾತ್ಯತೀತ ನಾಯಕನ ಸೇವೆ ಅಥಣಿ ತಾಲೂಕಿಗೆ ಇನ್ನಷ್ಟು ಅಗತ್ಯವಿದ್ದು, ಶಹಜಾನ್ ಡೋಂಗರಗಾಂವ ಮತ್ತೊಮ್ಮೆ ಕಣಕ್ಕಿಳಿಯಬೇಕು ಎಂಬುದು ಸಾವಿರಾರು ಜನರ ಒತ್ತಾಸೆಯಾಗಿದೆ. ಇವರಿಗೆ ಸ್ಪರ್ಧಿಸಿದರೆ ಇವರನ್ನು ಬೆಂಬಲಿಸುವ ಮೂಲಕ ಮತ್ತೊಮ್ಮೆ ಸೇವೆಗೆ ಅವಕಾಶ ನೀಡುತ್ತೇವೆ ಎಂದು ಅಥಣಿ ಜನತೆ ವಿಶ್ವಾಸದಿಂದ ನುಡಿಯುತ್ತಿದ್ದಾರೆ.

03/10/2022

Address

Athani
591304

Website

Alerts

Be the first to know and let us send you an email when S I Dongargaon Ex MLA posts news and promotions. Your email address will not be used for any other purpose, and you can unsubscribe at any time.

Share

Category