17/03/2026
“ಒಗ್ಗಟ್ಟೇ ಬಹುಜನರ ನಿಜವಾದ ಶಕ್ತಿ”
ಈ ದೇಶದ ಇತಿಹಾಸ ನೋಡಿದರೆ,
ಒಂದು ಸತ್ಯ ತುಂಬಾ ಸ್ಪಷ್ಟವಾಗಿ ಕಾಣಿಸುತ್ತದೆ —
ಬಹುಜನರು ಯಾವಾಗ ಒಗ್ಗಟ್ಟಾಗಿದ್ರೋ, ಆಗಲೇ ಇತಿಹಾಸ ಬದಲಾಗಿದೆ.
Kanshi Ram ಅವರು ಹೇಳಿದ
“Jiski Jitni Sankhya Bhari, Uske Itni Hissedari”
ಎಂಬ ಘೋಷವಾಕ್ಯ ಕೇವಲ ಮಾತಲ್ಲ…
ಅದು ನಮ್ಮ ಹಕ್ಕಿನ ದಾರಿ ತೋರಿಸುವ ದೀಪ.
ವಿಭಜನೆಯಿಂದ ನಷ್ಟ — ಏಕತೆಯಿಂದ ಶಕ್ತಿ
ನಮ್ಮ ನಡುವೆ ಜಾತಿ, ಉಪಜಾತಿ, ಭಿನ್ನಾಭಿಪ್ರಾಯಗಳಿವೆ — ಇದು ನಿಜ.
ಆದರೆ ಅದನ್ನೇ ಹಿಡಿದು ನಾವು ಪರಸ್ಪರ ಎದುರಾಗಿ ನಿಂತರೆ, ಅದು ನಮ್ಮ ಶತ್ರುಗಳಿಗೆ ಲಾಭ, ನಮಗೆ ನಷ್ಟ.
👉 ನಾವು ಒಡೆದೊದ್ರೇ — ನಮ್ಮ ಶಕ್ತಿ ಕುಗ್ಗುತ್ತದೆ
👉 ನಾವು ಒಗ್ಗಟ್ಟಾದ್ರೆ — ನಮ್ಮ ಧ್ವನಿ ಬಲವಾಗುತ್ತದೆ.
ನ್ಯಾಯ ಬೇಕು — ಆದರೆ ಒಗ್ಗಟ್ಟಿನೊಂದಿಗೆ
ಒಳ ಮೀಸಲಾತಿ ಆಗಲಿ, ಹಕ್ಕುಗಳ ವಿಚಾರವಾಗಲಿ —ಎಲ್ಲರಿಗೂ ನ್ಯಾಯ ಸಿಗಬೇಕು ಅನ್ನೋದು ನಮ್ಮ ಆಶಯ. ಆದರೆ ಪ್ರಶ್ನೆ ಒಂದೇ:
👉 “ನ್ಯಾಯದ ಹೆಸರಿನಲ್ಲಿ ನಾವು ಒಡೆಯಬೇಕಾ…
ಅಥವಾ ಒಗ್ಗಟ್ಟಿನಿಂದಲೇ ನ್ಯಾಯ ಸಾಧಿಸಬೇಕಾ?”
ನಿಜವಾದ ದಾರಿ ಏನು ಅಂದರೆ —
ಒಬ್ಬರ ಹಕ್ಕು ಇನ್ನೊಬ್ಬರಿಗೆ ವಿರೋಧವಾಗಬಾರದು.
-:ನಮ್ಮ ಮೂಲ ತತ್ವ:-
Kanshi Ram ಅವರ ದೂರದೃಷ್ಟಿ ಸ್ಪಷ್ಟ:
✓ ಬಹುಜನರು ಒಗ್ಗಟ್ಟಾಗಬೇಕು.
✓ ಸಂಖ್ಯಾಬಲವನ್ನು ಶಕ್ತಿಯಾಗಿ ಮಾರ್ಪಡಿಸಬೇಕು.
✓ ರಾಜ್ಯಾಧಿಕಾರ ಪಡೆಯುವುದರ ಮುಖಾಂತರ, ಆರ್ಥಿಕ, ಸಾಮಾಜಿಕ ಹಕ್ಕುಗಳನ್ನು ಪಡೆಯಬೇಕು.
ಆದರೆ ಈ ಎಲ್ಲಾ ಸಾಧ್ಯವಾಗೋದು ಒಂದೇ ಸಂದರ್ಭದಲ್ಲಿ —ನಾವು ಒಂದಾಗಿ ನಿಂತಾಗ ಮಾತ್ರ!
ಇಂದಿನ ಹೊಣೆಗಾರಿಕೆ ಇವತ್ತು ನಾವು ತೆಗೆದುಕೊಳ್ಳೋ ನಿರ್ಧಾರ ನಾಳೆಯ ಬಹುಜನರ ಭವಿಷ್ಯ ನಿರ್ಧರಿಸುತ್ತದೆ.
ನಾವು ಒಡೆಯುವ ದಾರಿಯನ್ನು ಆಯ್ಕೆ ಮಾಡ್ತೀವಾ? ಅಥವಾ ಒಗ್ಗಟ್ಟಿನ ದಾರಿಯನ್ನು ಹಿಡಿದು ಮುಂದುವರೆಯ್ತೀವಾ? ಬಹುಜನ ಸಮಾಜದ ಶಕ್ತಿ ಕೇವಲ ಸಂಖ್ಯೆಯಲ್ಲಿ ಇಲ್ಲ — ಅದು ನಮ್ಮ ಒಗ್ಗಟ್ಟಿನಲ್ಲಿ ಇದೆ. “ಒಗ್ಗಟ್ಟಾಗಿದ್ರೆ ನಮ್ಮನ್ನು ಯಾರೂ ತಡೆಯಲಾರರು…
ಒಡೆದೋದ್ರೇ ನಮ್ಮನ್ನು ಯಾರೂ ಉಳಿಸಲಾರರು!”
ಬನ್ನಿ… ಮನುವಾದಿಗಳ ಕುತಂತ್ರಕ್ಕೆ ಬಲಿಯಾಗದೆ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದು ಗುರಿಗಾಗಿ ಒಂದಾಗಿ ನಿಲ್ಲೋಣ — ಸಮಾನತೆ, ನ್ಯಾಯ ಮತ್ತು ಗೌರವಕ್ಕಾಗಿ!
BSP Anekal taluk assembly