CPIM BENGALURU SOUTH

Call Directions Website Contact the organization

CPIM BENGALURU SOUTH Official Page of the CPIM Bengaluru South District Committee
ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ

 ,    bhavanಮಾಸಿಕ ಉಪನ್ಯಾಸ:ಸಮಾಜವಾದಿ ಕ್ಯೂಬಾ - ಅನುಭವ ಕಥನಇತ್ತೀಚೆಗೆ ಕಳೆದ ಆರು ದಶಕಗಳಿಂದ ಅಮೆರಿಕದ ಆರ್ಥಿಕ ದಿಗ್ಬಂಧನವನ್ನು ಎದುರಿಸುತ್ತ...
26/09/2026

,
bhavan
ಮಾಸಿಕ ಉಪನ್ಯಾಸ:
ಸಮಾಜವಾದಿ ಕ್ಯೂಬಾ - ಅನುಭವ ಕಥನ

ಇತ್ತೀಚೆಗೆ ಕಳೆದ ಆರು ದಶಕಗಳಿಂದ ಅಮೆರಿಕದ ಆರ್ಥಿಕ ದಿಗ್ಬಂಧನವನ್ನು ಎದುರಿಸುತ್ತಿರುವ ಪುಟ್ಟ ಸಮಾಜವಾದಿ ದೇಶ ಕ್ಯೂಬಾಕ್ಕೆ ಬಾರತದಿಂದ ನಿಯೋಗದ ಸದಸ್ಯರಾಗಿ ಹೋಗಿದ್ದ ಸಂಗಾತಿ ಮೀನಾಕ್ಷಿ ಸುಂದರಂ ಅವರು ಆ ಭೇಟಿಯ ಅನುಭವವನ್ನು ಹಂಚಿಕೊಂಡರು.

ಎಲ್ಲರಿಗೂ ಸ್ವಾಗತ
25/09/2026

ಎಲ್ಲರಿಗೂ ಸ್ವಾಗತ

ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ ಬನ್ನಿ
25/09/2026

ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ ಬನ್ನಿ

*ಜ್ಞಾನೇಶ್ ಕುಮಾರ್‌ಗೆ ಮುಖ್ಯ ಚುನಾವಣಾ ಆಯುಕ್ತರಾಗಿ ಮುಂದುವರಿಯುವ ಹಕ್ಕಿಲ್ಲ!* *ಚುನಾವಣಾ ಆಯೋಗವನ್ನು ಸುಧಾರಿಸಬೇಕು-ಸಿಪಿಐ(ಎಂ) ಪೊಲಿಟ್‌ಬ್ಯು...
24/09/2026

*ಜ್ಞಾನೇಶ್ ಕುಮಾರ್‌ಗೆ ಮುಖ್ಯ ಚುನಾವಣಾ ಆಯುಕ್ತರಾಗಿ ಮುಂದುವರಿಯುವ ಹಕ್ಕಿಲ್ಲ!*
*ಚುನಾವಣಾ ಆಯೋಗವನ್ನು ಸುಧಾರಿಸಬೇಕು-ಸಿಪಿಐ(ಎಂ) ಪೊಲಿಟ್‌ಬ್ಯುರೊ*

ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ (ಸೆಪ್ಟೆಂಬರ್ 23) ಹೊರಗೆಡಹಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸುತ್ತಲಿನ ಸ್ಫೋಟಕ ಸಂಗತಿಗಳು ಈ ಪ್ರಕ್ರಿಯೆಯ ಬಗ್ಗೆ ಮಾತ್ರವಲ್ಲದೆ, ಮುಖ್ಯವಾಗಿ ಭಾರತ ಚುನಾವಣಾ ಆಯೋಗದ (ECI) ಸಮಗ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

SIR ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಸಿಪಿಐ(ಎಂ), ಇತರ ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳು ಎತ್ತಿರುವ ಅನುಮಾನಗಳು ಮತ್ತು ಕಳವಳಗಳನ್ನು ಈ ಸಂಗತಿಗಳು ಬಲಪಡಿಸಿವೆ.

ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಮತದಾರರ ಪಟ್ಟಿ ಪರಿಷ್ಕರಣೆ ಮತ್ತು SIR ಪ್ರಕ್ರಿಯೆಗೆ ಸಂಬಂಧಿಸಿದ ಹಲವಾರು ನಿರ್ಧಾರಗಳಿಗೆ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಕಾನೂನಿನ ಪ್ರಕಾರ ಮೂವರು ಚುನಾವಣಾ ಆಯುಕ್ತರು ಸಮಾನರು ಮತ್ತು ಯಾವುದೇ ಭಿನ್ನಾಭಿಪ್ರಾಯವನ್ನು ಬಹುಮತ ಅಥವಾ ಸರ್ವಾನುಮತದಿಂದ ಇತ್ಯರ್ಥಪಡಿಸಬೇಕು. ಮುಖ್ಯ ಚುನಾವಣಾ ಆಯುಕ್ತರು(CEC-ಸಿಇಸಿ)) ಈ ನಿಯಮವನ್ನು ಅನುಸರಿಸಲಿಲ್ಲ, ಆಯೋಗದ ತನ್ನ ಇತರ ಸಹೋದ್ಯೋಗಿಗಳು ಎತ್ತಿರುವ ಆಕ್ಷೇಪಣೆಗಳನ್ನು ಲೆಕ್ಕಿಸದೆ ತನ್ನ ಅಭಿಪ್ರಾಯಗಳನ್ನು ಹೇರುತ್ತಲೇ ಹೋದರು. ಗಮನಾರ್ಹವಾಗಿ, ಈ ಭಿನ್ನಾಭಿಪ್ರಾಯಗಳು ಮತದಾರರ ಪಟ್ಟಿಗೆ ಮತದಾರರನ್ನು ಹೇಗೆ ಸೇರಿಸಲಾಗುತ್ತಿದೆ ಅಥವಾ ತೆಗೆದುಹಾಕಲಾಗುತ್ತಿದೆ ಮತ್ತು SIR ಅನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತಿದೆ ಎಂಬ ಮೂಲಭೂತ ಪ್ರಶ್ನೆಗಳಿಗೆ ಸಂಬಂಧಿಸಿವೆ.

ಈಗ ಬಹಿರಂಗವಾಗುತ್ತಿರುವ ಸಂಗತಿಯೆಂದರೆ, ಮುಖ್ಯ ಚುನಾವಣಾ ಆಯುಕ್ತರು ಇಡೀ ಪ್ರಕ್ರಿಯೆಯು ಪಾರದರ್ಶಕ ಮತ್ತು ವಿಕೇಂದ್ರೀಕೃತವಾಗಿದೆ ಎಂದು ಸುಳ್ಳು ದಾವೆ ಹೇಳಿಕೊಂಡು ಬಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಇಡೀ ವ್ಯವಸ್ಥೆಯು ಎಷ್ಟು ಕೇಂದ್ರೀಕೃತವಾಗಿದೆಯೆಂದರೆ,ಯಾರು ನಿಜವಾಗಿಯೂ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಅದು ಮರೆಮಾಡುತ್ತದೆ ಎಂಬುದು ಈಗ ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್ ಕೂಡ ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಮತ್ತು "ಯಾಂತ್ರಿಕ" ನೋಟಿಸ್ ಜಾರಿಯನ್ನು ಗುರುತಿಸಿದೆ.

ಇಬ್ಬರು ಚುನಾವಣಾ ಆಯುಕ್ತರು ಎತ್ತಿರುವ ಪ್ರಶ್ನೆಗಳು ಎಸ್‌ಐಆರ್ ಪ್ರಕ್ರಿಯೆಯನ್ನು ಮೀರಿವೆ. ಇದು ಚುನಾವಣಾ ಆಯೋಗದ ಸಾಂಸ್ಥಿಕ ಸಮಗ್ರತೆ ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆ, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ವಿಪರೀತ ಕೇಂದ್ರೀಕರಣದ ಮೇಲೆ ಮತ್ತು ಸಾರ್ವತ್ರಿಕ ವಯಸ್ಕ ಮತದಾನಹಕ್ಕಿನ ರಕ್ಷಣೆಗೆ ಸಂಬಂಧಿಸಿದೆ. ನಿಷ್ಪಕ್ಷಪಾತೀ ಸಂಸ್ಥೆ ಎಂಬ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಅಪಾಯದಲ್ಲಿದೆ. ರಾಜಿ ಮಾಡಿಕೊಂಡ ಚುನಾವಣಾ ಆಯೋಗದಲ್ಲಿ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ, ಇದಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಅವರು ಇನ್ನು ಮುಂದೆ ತನ್ನ ಹುದ್ದೆಯಲ್ಲಿ ಇರಲು ಸಾಧ್ಯವಿಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಕೂಡ ಆಗ್ರಹಿಸಿದೆ.

ಭಾರತದ ಚುನಾವಣಾ ಆಯೋಗದ ಸಮಗ್ರತೆ ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯನ್ನು ಪುನಃಸ್ಥಾಪಿಸಬೇಕು. ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಪಾರದರ್ಶಕತೆಯನ್ನು, ಸಂಬಂಧಪಟ್ಟ ಶಾಸನವನ್ನು ರದ್ದು ಮಾಡಿ ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಆಯ್ಕೆ ಸಮಿತಿಯ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಸ್ವೀಕರಿಸಿ ಒಂದು ಹೊಸ ಶಾಸನವನ್ನು ತರುವ ಮೂಲಕ ಖಚಿತಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಸೆಪ್ಟೆಂಬರ್ 19: ಹೈಕೋರ್ಟ್ ತೀರ್ಪಿನಂತೆ ನೈಸ್ ಅಕ್ರಮಗಳ ತನಿಖೆಗೆ,  ಅಕ್ರಮ ನೈಸ್ ಟೋಲ್ ರದ್ದತಿಗೆ ಆಗ್ರಹಿಸಿ CPIM, CITU, KPRS, AIDWA, AIL...
20/09/2026

ಸೆಪ್ಟೆಂಬರ್ 19:
ಹೈಕೋರ್ಟ್ ತೀರ್ಪಿನಂತೆ ನೈಸ್ ಅಕ್ರಮಗಳ ತನಿಖೆಗೆ, ಅಕ್ರಮ ನೈಸ್ ಟೋಲ್ ರದ್ದತಿಗೆ ಆಗ್ರಹಿಸಿ CPIM, CITU, KPRS, AIDWA, AILU, AIAWU, DHS ನಿಂದ ಮಾದಾವಾರ ನೈಸ್ ಟೋಲ್ ಮುಂದೆ ಪ್ರತಿಭಟನೆ & 100 ಕ್ಕೂ ಹೆಚ್ಚು ಹೋರಾಟಗಾರರ ಬಂಧನ & ಬಿಡುಗಡೆ

ಹೈಕೋರ್ಟ್ ತೀರ್ಪಿನಂತೆ ನೈಸ್ ಅಕ್ರಮಗಳ ತನಿಖೆಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ,  ಅಕ್ರಮ ನೈಸ್ ಟೋಲ್ ರದ್ಧತಿಗಾಗಿ ಆಗ್ರಹಿಸಿ ಸಿಪಿಐ(ಎಂ), CI...
19/09/2026

ಹೈಕೋರ್ಟ್ ತೀರ್ಪಿನಂತೆ ನೈಸ್ ಅಕ್ರಮಗಳ ತನಿಖೆಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ, ಅಕ್ರಮ ನೈಸ್ ಟೋಲ್ ರದ್ಧತಿಗಾಗಿ ಆಗ್ರಹಿಸಿ ಸಿಪಿಐ(ಎಂ), CITU, KPRS, AIDWA, DHS, AIAWU ನೇತೃತ್ವದಲ್ಲಿ ಮಾದಾವಾರ ಟೋಲ್ ಬಳಿ ಹೋರಾಟ ನಿರತರನ್ನು ಬಂಧಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ!!!

🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲೈವ್ | TV5 KANNADA NEWS LI...

19/09/2026
ನೈಸ್ ಅಕ್ರಮ ಟೋಲ್ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಮುಂದಾದ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ!ಹೈಕೋರ್ಟ್ ತೀರ್ಪಿನಂತೆ ನೈಸ್ ಅಕ್ರಮಗಳ ತನಿಖೆ...
19/09/2026

ನೈಸ್ ಅಕ್ರಮ ಟೋಲ್ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಮುಂದಾದ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ!

ಹೈಕೋರ್ಟ್ ತೀರ್ಪಿನಂತೆ ನೈಸ್ ಅಕ್ರಮಗಳ ತನಿಖೆಗೆ ಮುಂದಾಗದೆ ನೈಸ್ ಕಂಪನಿ ಪರ ಇಚ್ಛಾಶಕ್ತಿ ಪ್ರದರ್ಶಿಸಿದ ಕಾಂಗ್ರೆಸ್ ಸರ್ಕಾರ!!!

18/09/2026
ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ, ಟೋಲ್ ಮುಕ್ತ ನೈಸ್ ರಸ್ತೆಗಾಗಿ ಒತ್ತಾಯೊಸೋಣ, ಹೈಕೋರ್ಟ್ ತೀರ್ಪಿನಂತೆ ನೈಸ್ ಅಕ್ರಮಗಳ ಕುರಿತು ತನಿಖೆಗೆ ರಾಜ್ಯ ಸ...
15/09/2026

ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ, ಟೋಲ್ ಮುಕ್ತ ನೈಸ್ ರಸ್ತೆಗಾಗಿ ಒತ್ತಾಯೊಸೋಣ, ಹೈಕೋರ್ಟ್ ತೀರ್ಪಿನಂತೆ ನೈಸ್ ಅಕ್ರಮಗಳ ಕುರಿತು ತನಿಖೆಗೆ ರಾಜ್ಯ ಸರ್ಕಾರವನ್ನು ಆಗ್ರಹಿಸೋಣ.

Address

Anekal
562106

Alerts

Be the first to know and let us send you an email when CPIM BENGALURU SOUTH posts news and promotions. Your email address will not be used for any other purpose, and you can unsubscribe at any time.

Contact The Organization

Send a message to CPIM BENGALURU SOUTH:

Shortcuts

Share