ಬೆಂಗಳೂರು ಆಟೋ ಘಟಕ ಕೆ ಆರ್ ಎಸ್ ಪಕ್ಷ - Bengaluru Auto Wing KRS Party

ಬೆಂಗಳೂರು ಆಟೋ ಘಟಕ ಕೆ ಆರ್ ಎಸ್ ಪಕ್ಷ  - Bengaluru Auto Wing KRS Party Rajagopalnagar membership Ward.

01/06/2026

ಬೆಂಗಳೂರಿನಿಂದ ಬಿಡದಿ-ಭೈರಮಂಗಲ ಚಲೋ.

ಫಲವತ್ತಾದ ಭೂಮಿ, ಸಮೃದ್ಧ ಜಲಸಂಪತ್ತು, ಬುದ್ಧಿವಂತ ಮತ್ತು ಕಾಯಕಜೀವಿ ರೈತರನ್ನು ಹೊಂದಿರುವ ಬಿಡದಿ ಭಾಗದ ಸುಮಾರು 7-8 ಸಾವಿರ ಎಕರೆ ಪ್ರಕೃತಿಯನ್ನು ನೆಲಸಮ ಮಾಡಿ, ಲಕ್ಷಾಂತರ ಮರಗಳನ್ನು ಕತ್ತರಿಸಿ, ಆ ಜಾಗವನ್ನು ಮೊದಲು ಬಟಾಬಯಲು ಮಾಡಿ ನಂತರ ಕಾಂಕ್ರೀಟ್ ಕಾಡು ಎಬ್ಬಿಸಿಯೇ ತೀರುವ ಪಾಪದ ಕೆಲಸಕ್ಕೆ ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಇದನ್ನು ಅಹಿಂಸಾತ್ಮಕವಾಗಿ ಮತ್ತು ನ್ಯಾಯಯುತವಾಗಿ ವಿರೋಧಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ತೀರ್ಮಾನಿಸಿದೆ.

ಈ ನಿಟ್ಟಿನಲ್ಲಿ ಮುಂದಿನ ಶನಿವಾರ, ಜೂನ್ 6, 2026ರಂದು, ಬೃಹತ್ ಹೋರಾಟವನ್ನು ಹಮ್ಮಿಕೊಂಡಿದೆ. ದಯವಿಟ್ಟು ಎಲ್ಲರೂ ಈ ಹೋರಾಟದಲ್ಲಿ ಭಾವಹಿಸಬೇಕೆಂದು 🙏 ಮನವಿ ಮಾಡುತ್ತಿದ್ದೇವೆ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

01/06/2026

Notice ವಿವರ

ತುಮಕೂರು ಜಿಲ್ಲೆಯ Nepokid ಮಾಜಿ ಗೃಹಸಚಿವ Dr.G. ಪರಮೇಶ್ವರ್ ಹಾಗೂ ಈವೆಂಟ್ ಮ್ಯಾನೇಜರ್ ಗಳಾದ IAS ,IPS ಗಳ ಆಡಳಿತದ ರೀತಿಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಮೇಲಿನವರ ಅಣತಿಯಂತೆ ಬೆಳ್ಳಂ ಬೆಳಿಗ್ಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ಭಟ್ಟರಹಳ್ಳಿ ಗ್ರಾಮದ ನನ್ನ ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ ತೋಟಕ್ಕೆ ಬಂದು ಪೋಲಿಸ್ ಗಿರಿ ಮಾಡುತ್ತಿರುವ ಪೊಲೀಸರು...

#ಮಲ್ಲಿಕಾರ್ಜುನಭಟ್ಟರಹಳ್ಳಿ #ಹಳದಿಸೇನೆ #ಚಿಕ್ಕನಾಯಕನಹಳ್ಳಿ #ತುಮಕೂರು #ಕರ್ನಾಟಕ್ಕಾಗಿನಾವು

29/05/2026

ಭೈರಮಂಗಲದ ಫಲವತ್ತಾದ ಭೂಮಿಯಲ್ಲಿ ಕೆ ಆರ್ ಎಸ್ ಪಕ್ಷದ ಹೋರಾಟ

15/05/2026

NEET ಪರೀಕ್ಷಾ ವ್ಯವಸ್ಥೆ ರದ್ದಾಗಲಿ – ವೈದ್ಯಕೀಯ ಶಿಕ್ಷಣದ ಹಕ್ಕಿಗಾಗಿ ರಾಜ್ಯಗಳ ಸಾರ್ವಭೌಮತ್ವಕ್ಕೆ ಆಗ್ರಹ
KRS ಪಕ್ಷದ ಪ್ರತಿಭಟನೆ

15/05/2026

*ಕೆ ಆರ್ ಎಸ್ ಪಕ್ಷದ ವತಿಯಿಂದ*

ಬಿಸಿಲಾಗಲಿ, ಮಳೆಯಾಗಲಿ ತಮ್ಮ ಆರೋಗ್ಯವನ್ನೇ ಲೆಕ್ಕಿಸದೆ ಪ್ರತಿದಿನ ಬೀದಿಗಿಳಿದು ಬೆಂಗಳೂರನ್ನು ಸ್ವಚ್ಛವಾಗಿಡುತ್ತಿರುವ ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ.
ಅವರ ಪರಿಶ್ರಮ ಮತ್ತು ಸಮಾಜ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಕೆ ಆರ್ ಎಸ್ ಪಕ್ಷದ ವತಿಯಿಂದ ಪೌರಕಾರ್ಮಿಕರಿಗೆ ಚಿಕ್ಕ ಸನ್ಮಾನ ಕಾರ್ಯಕ್ರಮ ಹಾಗೂ ಟೋಪಿ ಮತ್ತು ಗ್ಲೌಸ್ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

14/05/2026

📡 LIVE | ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ವಿರುದ್ಧ ರೈತರ ಹೋರಾಟಕ್ಕೆ ಕೆಆರ್‌ಎಸ್ ಬೆಂಬಲ

ಬಿಡದಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಗೆ ಬೆಂಬಲ ಸೂಚಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಅವರು ಭೇಟಿ ನೀಡುತ್ತಿದ್ದಾರೆ.

ರೈತರ ಭೂಮಿ ಉಳಿಸುವ ನ್ಯಾಯಯುತ ಹೋರಾಟಕ್ಕೆ ಕೆಆರ್‌ಎಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದೆ.

📍 ಸ್ಥಳ: ಬೈರಮಂಗಲ ವೃತ್ತ (ಬಿಡದಿ–ಹಾರೋಹಳ್ಳಿ ರಸ್ತೆ)
🗓️ 14-05-2026
🕚 ಬೆಳಿಗ್ಗೆ 11:00 ಗಂಟೆ

✊ ರೈತರ ಭೂಮಿ ರೈತರಿಗೆ!
✊ ಕಾಂಕ್ರೀಟ್ ಕಾಡಿಗೆ ನಮ್ಮ ವಿರೋಧ!

13/05/2026

ಯಾದಗಿರಿ ಜಿಲ್ಲೆಯ ಕರ್ನಾಟಕ ತೆಲಂಗಾಣದ ಗಡಿ ಭಾಗದ ಚೆಲ್ಲೇರಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗಡಿ ಪ್ರದೇಶದಲ್ಲಿ ತೆಲಂಗಾಣ ಸರ್ಕಾರವು ಅಕ್ರಮವಾಗಿ ಕರ್ನಾಟಕ ಭಾಗದ ಸಾವಿರಾರು ಕೋಟಿ ಬೆಲೆ ಬಾಳುವ ಮರಳು ಲೂಟಿ ಮಾಡುತ್ತಿದ್ದರೂ ಅದನ್ನು ತಡೆಯಬೇಕಾದ ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗದಿರುವುದನ್ನು ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಇಂದು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಿರುವ ಪ್ರತಿಭಟನೆ.

07/05/2026

🚨 ಫೇಸ್‌ಬುಕ್ ಲೈವ್ 🚨

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವ, ದಿಢೀರ್ ಬೆಲೆ ಏರಿಕೆ, ಹೋಟೆಲ್ ಉದ್ಯಮದ ಸಂಕಷ್ಟ ಹಾಗೂ ಜನಸಾಮಾನ್ಯರ ಬದುಕಿನ ಮೇಲೆ ಸರ್ಕಾರಗಳ ನಿರ್ಲಕ್ಷ್ಯ ನೀತಿಗಳ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಗಿರಿ!

📍 ಸ್ಥಳ: ಫ್ರೀಡಂ ಪಾರ್ಕ್
📅 ದಿನಾಂಕ: 07-05-2026

🎥 ಪ್ರತಿಭಟನೆಯ ನೇರ ಪ್ರಸಾರ ಫೇಸ್‌ಬುಕ್‌ನಲ್ಲಿ
ಹೋಟೆಲ್‌ಗಳು ಬೀಗ ಹಾಕುತ್ತಿರುವ ಪರಿಸ್ಥಿತಿ…
ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿರುವ ವಾಸ್ತವ…
ಜನರು ತಿಂಡಿ-ಊಟಕ್ಕೂ ಪರದಾಡುವ ದುಸ್ಥಿತಿ…
ಈ ಜನವಿರೋಧಿ ನೀತಿಗಳ ವಿರುದ್ಧ ಜನರ ಧ್ವನಿಯಾಗಿ ನಡೆಯುತ್ತಿರುವ ಹೋರಾಟವನ್ನು ತಪ್ಪದೇ ವೀಕ್ಷಿಸಿ, ಹಂಚಿಕೊಳ್ಳಿ ಮತ್ತು ಬೆಂಬಲಿಸಿ!

07/05/2026

🚨 ಫೇಸ್‌ಬುಕ್ ಲೈವ್ 🚨

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವ, ದಿಢೀರ್ ಬೆಲೆ ಏರಿಕೆ, ಹೋಟೆಲ್ ಉದ್ಯಮದ ಸಂಕಷ್ಟ ಹಾಗೂ ಜನಸಾಮಾನ್ಯರ ಬದುಕಿನ ಮೇಲೆ ಸರ್ಕಾರಗಳ ನಿರ್ಲಕ್ಷ್ಯ ನೀತಿಗಳ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಗಿರಿ!

📍 ಸ್ಥಳ: ಫ್ರೀಡಂ ಪಾರ್ಕ್
📅 ದಿನಾಂಕ: 07-05-2026

🎥 ಪ್ರತಿಭಟನೆಯ ನೇರ ಪ್ರಸಾರ ಫೇಸ್‌ಬುಕ್‌ನಲ್ಲಿ
ಹೋಟೆಲ್‌ಗಳು ಬೀಗ ಹಾಕುತ್ತಿರುವ ಪರಿಸ್ಥಿತಿ…
ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿರುವ ವಾಸ್ತವ…
ಜನರು ತಿಂಡಿ-ಊಟಕ್ಕೂ ಪರದಾಡುವ ದುಸ್ಥಿತಿ…
ಈ ಜನವಿರೋಧಿ ನೀತಿಗಳ ವಿರುದ್ಧ ಜನರ ಧ್ವನಿಯಾಗಿ ನಡೆಯುತ್ತಿರುವ ಹೋರಾಟವನ್ನು ತಪ್ಪದೇ ವೀಕ್ಷಿಸಿ, ಹಂಚಿಕೊಳ್ಳಿ ಮತ್ತು ಬೆಂಬಲಿಸಿ!

#ಕರ್ನಾಟಕ

Adresse

Democratic Republic Of The

Notifications

Soyez le premier à savoir et laissez-nous vous envoyer un courriel lorsque ಬೆಂಗಳೂರು ಆಟೋ ಘಟಕ ಕೆ ಆರ್ ಎಸ್ ಪಕ್ಷ - Bengaluru Auto Wing KRS Party publie des nouvelles et des promotions. Votre adresse e-mail ne sera pas utilisée à d'autres fins, et vous pouvez vous désabonner à tout moment.

Contacter L’organisation

Envoyer un message à ಬೆಂಗಳೂರು ಆಟೋ ಘಟಕ ಕೆ ಆರ್ ಎಸ್ ಪಕ್ಷ - Bengaluru Auto Wing KRS Party:

Partager