15/04/2026
ಸಂಸತ್ತಿನಲ್ಲಿ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ 'ನಾರಿಶಕ್ತಿ ವಂದನಾ ಅಧಿನಿಯಮ-2026' ಕೇವಲ ಕಾನೂನಲ್ಲ, ಅದು ವಿಕಸಿತ ಭಾರತದತ್ತ ದೇಶದ ಪಯಣದಲ್ಲಿ ಮಹಿಳಾ ಸಬಲೀಕರಣದ ಹೊಸ ಮೈಲಿಗಲ್ಲು. ಈ ಮಹತ್ವಪೂರ್ಣ ಐತಿಹಾಸಿಕ ಕಾಯ್ದೆ ಜಾರಿಯಾಗುವ ಅಂತಿಮ ಹಂತದಲ್ಲಿದ್ದು, ಈ ಸಂಭ್ರಮದ ಅಂಗವಾಗಿ ಇಂದು ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಆಯೋಜಿಸಲಾಗಿದ್ದ “Town Hall of Women” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಕು. Shobha Karandlaje , ಬಿಜೆಪಿ ರಾಜ್ಯ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಯಡಿಯೂರಪ್ಪ, ಪದ್ಮಶ್ರೀ ಡಾ. ವಿಜಯಲಕ್ಷ್ಮಿ ದೇಶಮಾನೆ, ಪದ್ಮಶ್ರೀ ಡಾ. ಸುಶೀಲಮ್ಮ, ಪಕ್ಷದ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷರಾದ ಕು. ಮಂಜುಳಾ, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕಾ ಅವಿನಾಶ್, ಸೇರಿದಂತೆ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರು, ಪ್ರಮುಖರು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ನಾಗರಿಕ ಬಂಧುಗಳು ಪಾಲ್ಗೊಂಡಿದ್ದರು.