Sir M Visvesvaraya

Sir M Visvesvaraya Contact information, map and directions, contact form, opening hours, services, ratings, photos, videos and announcements from Sir M Visvesvaraya, Bangalore.

15/09/2023
ವಿಶ್ವದ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ನವರ 163ನೇ ಜನ್ಮ ದಿನಾಚರಣೆಯ ಶುಭಾಶಯಗಳು ......
15/09/2023

ವಿಶ್ವದ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ನವರ 163ನೇ ಜನ್ಮ ದಿನಾಚರಣೆಯ ಶುಭಾಶಯಗಳು ......

🎊ಸರ್ ಎಂ.ವಿಶ್ವೇಶ್ವರಯ್ಯ🎊ಬಡತನದ ನಡುವೆಯೂ ಅಸಾಧಾರಣ ಸಾಧನೆ ಮಾಡುವವರಿಗೆ ವಿಶ್ವೇಶ್ವರಯ್ಯ ಆದರ್ಶ ಅವರೊಬ್ಬ ಆದರ್ಶ ವ್ಯಕ್ತಿ. ಉಳಿಗಳ ಏಟಿನಿಂದ ಕಲ...
14/09/2022

🎊ಸರ್ ಎಂ.ವಿಶ್ವೇಶ್ವರಯ್ಯ🎊

ಬಡತನದ ನಡುವೆಯೂ ಅಸಾಧಾರಣ ಸಾಧನೆ ಮಾಡುವವರಿಗೆ ವಿಶ್ವೇಶ್ವರಯ್ಯ ಆದರ್ಶ ಅವರೊಬ್ಬ ಆದರ್ಶ ವ್ಯಕ್ತಿ. ಉಳಿಗಳ ಏಟಿನಿಂದ ಕಲ್ಲು ಮೂರ್ತಿಯಾಗಿ ಅರಳುವ ಹಾಗೆ ಸಂಕಷ್ಟಗಳ ಬದುಕು ವ್ಯಕ್ತಿತ್ವವನ್ನು ಒಪ್ಪಗೊಳಿಸುತ್ತದೆ.

ಸರ್ ಎಂ.ವಿಶ್ವೇಶ್ವರಯ್ಯನವರು ನಮ್ಮ ದೇಶ ಕಂಡ ಮಹಾನ್ ವ್ಯಕ್ತಿ ಮತ್ತು ಅವರ ಕೊಡುಗೆಗಳನ್ನು ನಾವು ನೋಡುತ್ತ ಬಂದರೆ ನಮಗೆ ಆಶ್ಚರ್ಯವಾಗುತ್ತದೆ. ಕಾರಣ ಅವರ ಕೊಡುಗೆಗಳು ನಮ್ಮ ದೇಶದ ಸಂಪತ್ತಾಗಿದೆ. ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಇವರು 1912 ರಿಂದ 1918ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು.

🎊ಸರ್ ಎಂ.ವಿಶ್ವೇಶ್ವರಯ್ಯ ನವರ ಬಾಲ್ಯ 🎊

ವಿಶ್ವೇಶ್ವರಯ್ಯನವರು ಜನಿಸಿದ್ದು ಸೆಪ್ಟೆಂಬರ್ 15, 1860 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ. ವಿಶ್ವೇಶ್ವರಯ್ಯನವರ ತಂದೆ ‘ಶ್ರೀನಿವಾಸ ಶಾಸ್ತ್ರಿ’, ತಾಯಿ ‘ವೆಂಕಟಲಕ್ಷ್ಮಮ್ಮ’. ಅವರ ಪೂರ್ವಜರು ಈಗಿನ ಆಂದ್ರಪ್ರದೇಶದ ‘ಮೋಕ್ಷಗುಂಡಂ’ ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡಂ ಸೇರಿಕೊಂಡಿದೆ. ವಿಶ್ವೇಶ್ವರಯ್ಯನವರ ತಂದೆ ಸಂಸ್ಕøತ ವಿದ್ವಾಂಸರು, ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ವಿಶ್ವೇಶ್ವರಯ್ಯ ಅವ ರಿಗೆ 15 ವರ್ಷವಾಗಿದ್ದಾಗಲೇ ಅವರ ತಂದೆ ತೀರಿಕೊಂಡರು. ಕುಟುಂಬಕ್ಕೆ ತುತ್ತು ಒದಗಿಸುತ್ತಿದ್ದ ಕೈ ಇಲ್ಲವಾಯಿತು. ದಾರಿದ್ರ್ಯದ ಬಾಳ್ವೆ ತಾಯಿ ಅವರಿವರ ಮನೆಯಲ್ಲಿ ದುಡಿಯುತ್ತ ಮಗನನ್ನು ಸಾಕಿ ಸಲಹಿದರು.ಸೋದರ ಮಾವ ರಾಮಯ್ಯನವರ ಸಹಾಯದಿಂದ 1875ರಲ್ಲಿ ವಿಶ್ವೇಶ್ವರಯ್ಯ ಬೆಂಗಳೂರಿಗೆ ಬಂದು ವೆಸ್ಲಿ ಮಿಶನ್ ಹೈಸ್ಕೂಲ್ ಸೇರಿದರು. ಒಮ್ಮೆಯಂತೂ ಹತ್ತನೇ ತರಗತಿ ಪರೀಕ್ಷೆಗೆ ಕೂರಲು ಹಣದ ತೀವ್ರ ಮುಗ್ಗಟ್ಟಿನಿಂದಾಗಿ ಬೆಂಗಳೂರಿನಿಂದ ಮುದ್ದೇನಹಳ್ಳಿಗೆ 35 ಕಿಲೋಮೀಟರ್ ನಡೆದುಕೊಂಡೇ ಹೋದರಂತೆ. ಮನೆಯ ಪಾತ್ರೆ ಪಗಡ ಅಡವಿಟ್ಟು ಆ ತಾಯಿ ಹಣ ಹೊಂದಿಸಿಕೊಟ್ಟಿದ್ದರು, ದೈನಂದಿನ ಜೀವನದ ಖರ್ಚಿಗೆ ಹಣವಿಲ್ಲದೆ, ಒಂದು ಕೂರ್ಗಿ ಕುಟುಂಬದಲ್ಲಿ ಪಾಠ ಹೇಳಿಕೊಟ್ಟು ಹಣ ಹೊಂದಿಸಿಕೊಂಡರು.ನಂತರ 1881 ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.ಬಿ.ಎ ನಲ್ಲಿ ರ‍್ಯಾಂಕ್, ಇಂಜಿನಿಯರಿಂಗ್‌ನಲ್ಲೂ ಎಲ್ಲರಿಗಿಂತ ಮಿಗಿಲಾಗಿ ಸಾಧನೆ ಮಾಡಿದರು ನಮ್ಮ ಸರ್ ಎಂ.ವಿಶ್ವೇಶ್ವರಯ್ಯ.
🌿📢ಇವರ ಹಲವಾರು ಸಾಧನೆಗಳಲ್ಲಿ ಪ್ರಮುಖವಾದದ್ದು ಅದುವೇ ಕೃಷ್ಣರಾಜಸಾಗರ ಅಣೆಕಟ್ಟು🌾

ಕಾವೇರಿ ನದಿಗೆ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಿಸುವ ಮೂಳಕ ಹರಿದು ಪೋಲಾಗುತ್ತಿದ್ದ ನೀರಿನ ಸದ್ಬಳಿಕೆಗೆ ಅನುವು ಮಾಡಿಕೊಟ್ಟರು. ಕನ್ನಂಬಾರಿ ಅಣೆಕಟ್ಟು ನಿರ್ಮಾಣ ಮಾಡುವ ಸಂದರ್ಭದಲ್ಲಿ ವಿಶ್ವೇಶ್ವರಯ್ಯನವರು ಮದ್ರಾಸ್ ಸರ್ಕಾರದ ವಿರೋಧದ ನಡುವೆಯೂ ಕಟ್ಟಿದರು. ಇವರಿಂದಾಗಿಯೇ ಬೆಂಗಳೂರಿನ ಎಲ್ಲಾ ಜನರೂ ನೀರು ಕುಡಿಯುವಂತಾಗಿದೆ...
ಇವರನ್ನೂ ಪ್ರತಿದಿನ ನಾವು ನೀರು ಕುಡಿಯುವಾಗ ನೆನಪು ಮಾಡಿಕೋಳ್ಳಲೇ ಬೇಕು....

ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ ಆಳ್ವಿಕೆಯ ಕಾಲದಲ್ಲಿ ವಿಶ್ವೇಶ್ವರಯ್ಯನವರು ದಿವಾನರಾಗಿ ಕಾರ್ಯ ನಿರ್ವಹಿಸಿದರು. ಈ ಕಾಲಾವಧಿಯಲ್ಲಿ ಸಾಕಷ್ಟು ಮಹತ್ಕಾರ್ಯಗಳನ್ನು ಮಾಡಿದರು. ಅವುಗಳೆಂದರೆ ಭದ್ರಾವತಿಯ ಉಕ್ಕಿನ ಕಾರ್ಖಾನೆ, ಜೋಗದ ಶರಾವತಿ ವಿದ್ಯುತ್‌ ಯೋಜನೆ, ಮೈಸೂರು ಸ್ಯಾಂಡಲ್‌ ಸಾಬೂನಿನ ಕಾರ್ಖಾನೆ , ಮೈಸೂರು ಬ್ಯಾಂಕ್ ಸ್ಥಾಪನೆ, ಮೈಸೂರು ವಿಶ್ವ ವಿದ್ಯಾನಿಲಯ ಸ್ಥಾಪನೆ, ಕನ್ನಡ ಸಾಹಿತ್ಯ ಸ್ಥಾಪನೆ ಹೀಗೆ ಹಲವು ಮಹತ್ವದ ಕೊಡುಗೆಗಳನ್ನು ನಮ್ಮ ಕನ್ನಡ ನಾಡಿಗೆ ನೀಡಿ ನಮ್ಮೆಲ್ಲರ ಮನಸ್ಸಿನಲ್ಲಿ ಅಜರಾಮರರಾಗಿ ನೆಲೆಸಿದ್ದಾರೆ.

🎊ಭಾರತ ರತ್ನ🎊

ವಿಶ್ವೇಶ್ವರಯ್ಯನವರ ಸಾಧನೆ ಮೆಚ್ಚಿ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಬ್ರಿಟಿಷ್ ಸರಕಾರ ಇವರಿಗೆ ನೈಟ್‌ಹುಡ್ ನೀಡಿ ಗೌರವಿಸಿತು. 1955ರಲ್ಲಿ ಭಾರತ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 🎊ಭಾರತರತ್ನ 🎊ನೀಡಿ ಗೌರವಿಸಿತು. ತುಂಬು ಜೀವನ ನಡೆಸಿದ ಇವರು ಶತಾಯುಷಿಗಳಾಗಿ 1962ನೇ ಎಪ್ರಿಲ್‌ 12ಕ್ಕೆ ವಿಧಿವಶರಾದರು.

ಈ ಮಹಾನ್‌ ಜನ್ಮ ದಿನವನ್ನು ಇಂಜಿನಿಯರ್ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶಕ್ಕೆ, ದೇಶದ ಪ್ರಮುಖ ಯೋಜನೆಗಳಿಗೆ ಭದ್ರ ಬುನಾದಿ ಹಾಕುವಲ್ಲಿ ಇಂಜಿನಿಯರ್‌ಗಳ ಪಾತ್ರ ಪ್ರಮುಖವಾದದ್ದು. ಇಂಜಿನಿಯರ್‌ಗ ಳ ಕ್ರಿಯಾಶೀಲತೆ, ಬುದ್ಧಿವಂತಿಕೆ ದೇಶ, ನಗರ ಒಂದು ಸಂಸ್ಥೆಯನ್ನು ಆರ್ಥಿಕವಾಗಿ ಅಭಿವೃದ್ಧಿಗೆ ಕೊಂಡೊಯ್ಯುತ್ತದೆ. ವಿಶ್ವೇಶ್ವರಯ್ಯನಂಥ ಮತ್ತಷ್ಟು ಕೊಡುಗೆಗಳನ್ನು ಇಂಜಿನಿಯರ್‌ಗಳು ನೀಡುವಂತಾಗಲಿ... ಎಲ್ಲಾ ಇಂಜಿನಿಯರ್‌ಗಳಿಗೆ 'ಇಂಜಿನಿಯರ್‌ ದಿನ'ದ ಶುಭಾಶಯಗಳು...

ವಿಶ್ವದ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ನವರ 162ನೇ ಜನ್ಮ ದಿನಾಚರಣೆಯ ಶುಭಾಶಯಗಳು ......
14/09/2022

ವಿಶ್ವದ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ನವರ 162ನೇ ಜನ್ಮ ದಿನಾಚರಣೆಯ ಶುಭಾಶಯಗಳು ......

     ವಿಶ್ವದ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ನವರ 162ನೇ ಜನ್ಮ ದಿನಾಚರಣೆಯ ಶುಭಾಶಯಗಳು ......
14/09/2022



ವಿಶ್ವದ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ನವರ 162ನೇ ಜನ್ಮ ದಿನಾಚರಣೆಯ ಶುಭಾಶಯಗಳು ......

ವಿಶ್ವ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ನವರ 161 ನೇ ಜನ್ಮ ದಿನಾಚರಣೆಯ ಶುಭಾಶಯಗಳು ......
14/09/2021

ವಿಶ್ವ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ನವರ 161 ನೇ ಜನ್ಮ ದಿನಾಚರಣೆಯ ಶುಭಾಶಯಗಳು ......

ನಮ್ಮ ರೈತರಿಗೆ ನನ್ನ ಬೆಂಬಲ..... ಕೃಷಿ ಮಸೂದೆಗಳು ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾಯಿದೆ ಅಡಿಯಲ್ಲಿ ಸೇರಿಸದೇ...ಶ್ರೀಮಂತರಿಗೆ,ಕಂಪನಿಗಳಿ...
03/12/2020

ನಮ್ಮ ರೈತರಿಗೆ ನನ್ನ ಬೆಂಬಲ..... ಕೃಷಿ ಮಸೂದೆಗಳು ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾಯಿದೆ ಅಡಿಯಲ್ಲಿ ಸೇರಿಸದೇ...ಶ್ರೀಮಂತರಿಗೆ,ಕಂಪನಿಗಳಿಗೆ,ದಲ್ಲಾಳಿಗಳಿಗೆ ಅನುಕೂಲ ಕಲ್ಪಿಸಿ.....ರೈತರಿಗೆ ಮರಣ ಶಾಸನಗಳನ್ನು ಬರೆಯಲು ಹೊರಟಿದೆ ನಮ್ಮ ಕೇಂದ್ರ ಸರ್ಕಾರ......

ನಮ್ಮ ರೈತರ ದೆಹಲಿ ಚಲೋ...ರೈತ ಮಸೂದೆಗಳ ರದ್ದತಿಗೆ ಆಗ್ರಹಿಸಿ, ಎಲ್ಲ ಅಡ್ಡಿಗಳನ್ನೂ ಮೀರಿ ರೈತರು ದೆಹಲಿ ತಲುಪಿದ್ದಾರೆ.ನಮ್ಮ‌ಅನ್ನದಾತ....

D V G ಯವರ ಹಸ್ತಾಕ್ಷರ, 1936 ರಲ್ಲಿ  ಸರ್ ಎಂ ವಿಶ್ವೇಶ್ವರಯ್ಯ ರವರಿಗೆ ಬರೆದಿದ್ದ ಪತ್ರ.
20/11/2020

D V G ಯವರ ಹಸ್ತಾಕ್ಷರ, 1936 ರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ರವರಿಗೆ ಬರೆದಿದ್ದ ಪತ್ರ.

ವಿಶ್ವ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ನವರ 160 ನೇ ಜನ್ಮ ದಿನಾಚರಣೆಯ ಶುಭಾಶಯಗಳು ......
15/09/2020

ವಿಶ್ವ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ನವರ 160 ನೇ ಜನ್ಮ ದಿನಾಚರಣೆಯ ಶುಭಾಶಯಗಳು ......

14/09/2020
ವಿಶ್ವದ ವಿಶ್ವ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ನವರ 160 ನೇ ಜನ್ಮ ದಿನಾಚರಣೆಯ ಶುಭಾಶಯಗಳು ......
14/09/2020

ವಿಶ್ವದ ವಿಶ್ವ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ನವರ 160 ನೇ ಜನ್ಮ ದಿನಾಚರಣೆಯ ಶುಭಾಶಯಗಳು ......

25/05/2020

Address

Bangalore

Telephone

+919036859889

Website

Alerts

Be the first to know and let us send you an email when Sir M Visvesvaraya posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sir M Visvesvaraya:

Share