SADIK K.P

SADIK K.P Contact information, map and directions, contact form, opening hours, services, ratings, photos, videos and announcements from SADIK K.P, Political Party, near NH 66 service Road Hira complex kapu, Udupi.

ಸಾಮಾಜಿಕ ನ್ಯಾಯ, ಸಮಾನತೆ, ಸಂವಿಧಾನದ ಮೌಲ್ಯಗಳು ಹಾಗೂ ಶೋಷಿತ-ವಂಚಿತರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುತ್ತಿರುವ ನಮ್ಮ ಪಕ್ಷವು ಇನ್ನಷ್ಟು ಬಲ...
20/06/2026

ಸಾಮಾಜಿಕ ನ್ಯಾಯ, ಸಮಾನತೆ, ಸಂವಿಧಾನದ ಮೌಲ್ಯಗಳು ಹಾಗೂ ಶೋಷಿತ-ವಂಚಿತರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುತ್ತಿರುವ ನಮ್ಮ ಪಕ್ಷವು ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿ. ಜನರ ವಿಶ್ವಾಸ, ಕಾರ್ಯಕರ್ತರ ಸಮರ್ಪಣೆ ಮತ್ತು ಹೋರಾಟದ ಮನೋಭಾವದೊಂದಿಗೆ ಪರ್ಯಾಯ ರಾಜಕಾರಣದ ಕನಸನ್ನು ಸಾಕಾರಗೊಳಿಸುವ ದಿಸೆಯಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ.
"ಹೋರಾಟದಿಂದ ಪರಿವರ್ತನೆ, ಪರಿವರ್ತನೆಯಿಂದ ನ್ಯಾಯಯುತ ಸಮಾಜ" ಎಂಬ ಧ್ಯೇಯದೊಂದಿಗೆ ಹೊಸ ಉತ್ಸಾಹ, ಹೊಸ ಸಂಕಲ್ಪಗಳೊಂದಿಗೆ 18ನೇ ವರ್ಷದ ಪಯಣವನ್ನು ಆರಂಭಿಸೋಣ.
ಜೂನ್ 21, 2009 – ಜೂನ್ 21, 2026
*ಸಾಮಾಜಿಕ ನ್ಯಾಯದ ಹೋರಾಟದ 17 ವರ್ಷಗಳು – 18ನೇ ವರ್ಷದತ್ತ ದೃಢ ಹೆಜ್ಜೆಗಳು*

🌹 *ಎಸ್‌ಡಿಪಿಐ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು!* 🌹

ಸಾದಿಕ್ ಕೆ. ಪಿ
ಅಧ್ಯಕ್ಷರು, ಕಾಪು ವಿಧಾನಸಭಾ ಕ್ಷೇತ್ರ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಿಡ್ ಟರ್ಮ್ ಡಿ.ಆರ್.ಸಿ (DRC) ಸಭೆಯಲ್ಲಿ ಉಡುಪಿ ಜಿಲ್ಲಾ ಸಮಿತಿಯ  ಪದಾಧಿಕಾರಿಯಾಗಿ ನೂತನವಾಗಿ ಆಯ...
11/06/2026

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಮಿಡ್ ಟರ್ಮ್ ಡಿ.ಆರ್.ಸಿ (DRC) ಸಭೆಯಲ್ಲಿ
ಉಡುಪಿ ಜಿಲ್ಲಾ ಸಮಿತಿಯ ಪದಾಧಿಕಾರಿಯಾಗಿ ನೂತನವಾಗಿ ಆಯ್ಕೆಯಾದ
ನಮ್ಮ ಪ್ರೀತಿಯ ಹಸೈನಾರ್, ಕಟಪಾಡಿ. ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

ನಿಮ್ಮ ಯೋಚನೆ ಕಾರ್ಯತಂತ್ರದಿಂದ ಜಿಲ್ಲಾ ಸಮಿತಿಯು ಮತ್ತಷ್ಟು ಯಶಸ್ವಿಯನ್ನು ಕಾಣಲಿ , ನಿಮ್ಮ ಜನಪರ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತೇವೆ.

22/04/2026

**LEADERS CONCLAVE""

""ಲೀಡರ್ಸ್ ಕಾಂಕ್ಲೇವ್ ""

*29 April 2026 | Udupi*

Social Democratic Party of India, Udupi Dist.

ಸಾಮಾಜಿಕ ಅಸಮಾನತೆಗಳ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ಸಾಮಾಜಿಕ ಸಾಮರಸ್ಯದ ನಾಯಕಭಾರತರತ್ನಡಾ. ಭೀಮರಾವ್ ಅಂಬೇಡ್ಕ‌ರ್
14/04/2026

ಸಾಮಾಜಿಕ ಅಸಮಾನತೆಗಳ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ಸಾಮಾಜಿಕ ಸಾಮರಸ್ಯದ ನಾಯಕ

ಭಾರತರತ್ನ
ಡಾ. ಭೀಮರಾವ್ ಅಂಬೇಡ್ಕ‌ರ್

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 567 (94.5%) ಅಂಕವನ್ನು ಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಅತ್ಯುತ್ತಮ ಸಾಧನೆ ಮಾಡಿದ ಉ...
10/04/2026

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 567 (94.5%) ಅಂಕವನ್ನು ಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಅತ್ಯುತ್ತಮ ಸಾಧನೆ ಮಾಡಿದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿ ಹಾಗೂ ಕಾಪು ನಿವಾಸಿಗಳಾದ ಅಬ್ದುಲ್ ಸಲಾಂ ಮನ್ಸೂರ್ ಮತ್ತು ನಾಝಿಯಾ ಅಬ್ದುಲ್ ಸಲಾಂ ರವರ ಪುತ್ರ ನುಮಾನ್ ಅಬ್ದುಲ್ ಸಲಾಂ ರವರಿಗೆ ಹಾರ್ದಿಕ ಅಭಿನಂದನೆಗಳು.

ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸುತ್ತಿದ್ದೇನೆ.

ಪತ್ರಿಕಾ ಪ್ರಕಟಣೆ  - 26-03-2026ಕಾಪು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಸ್ಥಳೀಯ ನಾಡದೋಣಿ ಗೆ ಡಿಕ್ಕಿ ಪ್ರಕರಣ: ಎಸ್‌ ಡಿ ಪಿ ಐ ಖಂಡನೆ...
26/03/2026

ಪತ್ರಿಕಾ ಪ್ರಕಟಣೆ - 26-03-2026

ಕಾಪು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಸ್ಥಳೀಯ ನಾಡದೋಣಿ ಗೆ ಡಿಕ್ಕಿ ಪ್ರಕರಣ: ಎಸ್‌ ಡಿ ಪಿ ಐ ಖಂಡನೆ*

ಕಾಪು: ಕಾಪು ಕಡಲ ಕಿನಾರೆಯಲ್ಲಿ ತಮಿಳುನಾಡು ಮೂಲದ ಮೀನುಗಾರರ ದೋಣಿ ಸ್ಥಳೀಯ ಮೀನುಗಾರರ ಸಣ್ಣ ದೋಣಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು, ಇಬ್ಬರು ಮೀನುಗಾರರು ಸಮುದ್ರಕ್ಕೆ ಬಿದ್ದು ಒಬ್ಬರು ನಾಪತ್ತೆಯಾಗಿರುವ ಘಟನೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಪು ಕ್ಷೇತ್ರ ಸಮಿತಿ ತೀವ್ರ ಖಂಡನೆ ವ್ಯಕ್ತಪಡಿಸುತ್ತದೆ.

ಕಳೆದ ಕೆಲವು ದಿನಗಳಿಂದ ತಮಿಳುನಾಡು ಮೂಲದ ಮೀನುಗಾರರು ಅಕ್ರಮ ಅಜಿರ್ (ಪಾಚ್ಚಾಲೆ) ಮೀನುಗಾರಿಕೆ ನಡೆಸುತ್ತಿರುವುದಾಗಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರು ಶಾಂತಿಯುತವಾಗಿ ಅವರೊಂದಿಗೆ ಮಾತನಾಡಲು ತೆರಳಿದ ಸಂದರ್ಭದಲ್ಲಿ ಈ ರೀತಿಯ ಕ್ರೂರ ಹಾಗೂ ಅಮಾನುಷ ಕೃತ್ಯ ಎಸಗಿರುವುದು ಅತ್ಯಂತ ಖಂಡನೀಯವಾಗಿದೆ.
ಈ ಘಟನೆಯ ಪರಿಣಾಮವಾಗಿ ಸ್ಥಳೀಯ ಮೀನುಗಾರರ ದೋಣಿ ಮುಗುಚಿ, ಇಬ್ಬರು ಮೀನುಗಾರರು ನೀರಿಗೆ ಬಿದ್ದಿದ್ದು, ಒಬ್ಬರನ್ನು ರಕ್ಷಿಸಲಾಗಿದ್ದರೂ ಇನ್ನೊಬ್ಬ ಮೀನುಗಾರ ಇನ್ನೂ ನಾಪತ್ತೆಯಾಗಿರುವುದು ಆತಂಕಕಾರಿ ಸಂಗತಿಯಾಗಿದೆ.

ಈ ಹಿನ್ನೆಲೆಯಲ್ಲಿ, ಎಸ್ ಡಿ ಪಿ ಐ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳನ್ನು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತದೆ. ನಾಪತ್ತೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿ, ತಪ್ಪಿತಸ್ಥರನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ, ಅಕ್ರಮ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದರೊಂದಿಗೆ ಸ್ಥಳೀಯ ಮೀನುಗಾರರ ಭದ್ರತೆಯನ್ನು ಖಚಿತಪಡಿಸಬೇಕು.
ಪಕ್ಷವು ಪೀಡಿತ ಕುಟುಂಬದ ಜೊತೆ ನಿಂತಿದ್ದು, ಅವರಿಗೆ ಅಗತ್ಯ ಪರಿಹಾರ ಮತ್ತು ಸಹಾಯವನ್ನು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಎಸ್ ಡಿ ಪಿ ಐ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸಾದಿಕ್ ಕೆ ಪಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಸೃಷ್ಟಿಕರ್ತನ ಅನುಲ್ಲಂಘನೀಯ ವಿಧಿಗೆ ವಿಧೇಯರಾಗಿ ಇಹಲೋಕ ತ್ಯಜಿಸಿದ ಆತ್ಮೀಯರಾದ ಅಬ್ದುಲ್ ಮಜೀದ್ ರವರ ಅಗಲಿಕೆಯಿಂದ ಮನಸ್ಸು ತುಂಬಾ ದುಃಖಿತವಾಗಿದೆ...
25/03/2026

ಸೃಷ್ಟಿಕರ್ತನ ಅನುಲ್ಲಂಘನೀಯ ವಿಧಿಗೆ ವಿಧೇಯರಾಗಿ ಇಹಲೋಕ ತ್ಯಜಿಸಿದ ಆತ್ಮೀಯರಾದ ಅಬ್ದುಲ್ ಮಜೀದ್ ರವರ ಅಗಲಿಕೆಯಿಂದ ಮನಸ್ಸು ತುಂಬಾ ದುಃಖಿತವಾಗಿದೆ. ಅವರ ನಿಧನಕ್ಕೆ ನನ್ನ ತೀವ್ರ ಸಂತಾಪಗಳನ್ನು ಸೂಚಿಸುತ್ತಿದ್ದೇನೆ.
ಅಲ್ಲಾಹನು ಮೃತರಿಗೆ ಜನ್ನತ್‌ನ ಉನ್ನತ ಸ್ಥಾನವನ್ನು ದಯಪಾಲಿಸಲಿ ಹಾಗೂ ಈ ದುಃಖದ ಘಳಿಗೆಯಲ್ಲಿ ಕುಟುಂಬ ವರ್ಗಕ್ಕೆ ಈ ಅಗಲಿಕೆಯ ನೋವನ್ನು ಸಹಿಸುವ ಧೈರ್ಯ ಮತ್ತು ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

Address

Near NH 66 Service Road Hira Complex Kapu
Udupi
574106

Website

Alerts

Be the first to know and let us send you an email when SADIK K.P posts news and promotions. Your email address will not be used for any other purpose, and you can unsubscribe at any time.

Share