Yecharike News - ಎಚ್ಚರಿಕೆ ನ್ಯೂಸ್

  • Home
  • Yecharike News - ಎಚ್ಚರಿಕೆ ನ್ಯೂಸ್

Yecharike News - ಎಚ್ಚರಿಕೆ ನ್ಯೂಸ್ ಇದು ನಾಡಿನ ವಿಚಾರವಂತರ ಧ್ವನಿ

05/07/2026

No Headlights KSRTC Runs In Mobile Torch | Kalaburgi | ಸಾರಿಗೆ ಸಚಿವರೇ ಏನಿದು ಪರಿಸ್ಥಿತಿ? |

04/07/2026

ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಐದು ದಿನಗಳ ಕಾಲ ಸುಮಾರು 30 ಕ್ಕೂ ಹೆಚ್ಚು ನರರಾಕ್ಷಸರು ಸರಣಿ ಅತ್ಯಾಚಾರ ನಡೆಸಿರುವ ಅತ್ಯಂತ ಭೀಕರ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್ (FIR) ಪ್ರಕಾರ, ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ರಿಕ್ಷಾ ಚಾಲಕನೊಬ್ಬ ಸ್ಥಳೀಯ ಹೋಟೆಲ್ ಮಾಲೀಕನಿಗೆ ಮಾರಾಟ ಮಾಡಿದ್ದನು.ಆನಂತರ ನಗರದ ವಿವಿಧ ಹೋಟೆಲ್‌ಗಳಲ್ಲಿ ಐದು ದಿನಗಳ ಕಾಲ ಬಾಲಕಿಯ ಮೇಲೆ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಈ ಅಮಾನವೀಯ ಕೃತ್ಯದ ವೇಳೆ ಬಾಲಕಿಗೆ ತೀವ್ರ ನೋವುಂಟಾದಾಗಲೆಲ್ಲಾ ಆಕೆಗೆ ಬಲವಂತವಾಗಿ ಮದ್ಯವನ್ನು ಕುಡಿಸಲಾಗುತ್ತಿತ್ತು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದೇನಾ ಭೇಟಿ ಬಚಾವೋ ಭೇಟಿ ಪಡಾವೋ ?

ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ (GJY) ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯವನ್ನು ಎಲ್ಲಾ ಎಸ್ಕಾಂಗ...
01/07/2026

ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ (GJY) ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯವನ್ನು ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಜುಲೈ 1 ರಿಂದ ಕೈಗೊಳ್ಳಲಿದ್ದಾರೆ.

ಮಾಧ್ಯಮ  ಭಕುತಮಣಿಗಳ ಗಮನಕ್ಕೆ.ಅಯ್ಯಾ, ಮುಠಾಳ ಮಿತ್ರರಾ,  ಯಾವನೋ ಒಬ್ಬ ಅವಿವೇಕಿ ಬರೆದ ಲೇಖನವನ್ನು ಮಿಠಾಯಿ ಹಂಚುಕೊಳ್ಳುವಂತೆ ಹಂಚಿಕೊಂಡು ಬರೆಯು...
01/07/2026

ಮಾಧ್ಯಮ ಭಕುತಮಣಿಗಳ ಗಮನಕ್ಕೆ.

ಅಯ್ಯಾ, ಮುಠಾಳ ಮಿತ್ರರಾ, ಯಾವನೋ ಒಬ್ಬ ಅವಿವೇಕಿ ಬರೆದ ಲೇಖನವನ್ನು ಮಿಠಾಯಿ ಹಂಚುಕೊಳ್ಳುವಂತೆ ಹಂಚಿಕೊಂಡು ಬರೆಯುವುದು ಪತ್ರಿಕೋದ್ಯಮವಲ್ಲ.

ಈ ದಿನ ನಿಧನರಾದ ನನ್ನ ಹಿರಿಯಮಿತ್ರರು ಮತ್ತು ಕಲಾವಿದರಾದ ಕೆ.ಟಿ. ಶಿವಪ್ರಸಾದ್ ಕುರಿತು ಬಡ ರೈತ ಕುಟುಂಬದಲ್ಲಿ ಜನಿಸಿದರು ಎಂಬ ನಿಮ್ಮ ವರದಿ, ನಿಮ್ಮೆಲ್ಲರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.

ಬೆಂಗಳೂರು ಯಶವಂತಪುರದ ರೈಲ್ವೆ ಸೇತುವೆ ಬಳಿ ಇರುವ ಕಾರ್ಲೆ ಎಕ್ಸ್ ಪೋರ್ಟ್ ಎಂಬ ಕಂಪನಿಯ ಬಗ್ಗೆ ತಿಳಿದಿದ್ದರೆ, ಶಿವಪ್ರಸಾದ್ ಕುಟುಂಬದ ಹಿನ್ನೆಲೆ ನಿಮಗೆ ಗೊತ್ತಾಗುತ್ತಿತ್ತು. ಶಿವಪ್ರಸಾದ್ ಗೆ ಆತ್ಮೀಯರಾದ ಬೆಂಗಳೂರಿನ ಡಾ.ಕೆ.ಪುಟ್ಟಸ್ವಾಮಿ, ಮೈಸೂರಿನ ಕೃಪಾಕರ್ ಸೇನಾನಿ, ಹಾಸನದ ಮಂಜುನಾಥ ದತ್ತ ಮತ್ತು ಆರ್.ಪಿ. ವೆಂಕಟೇಶ್ ಮೂರ್ತಿ, ಅಥವಾ ಮೂಡಿಗೆರೆಯ ಪ್ರದೀಪ್ ಕೆಂಜಿಗೆ ಇವರನ್ನು ಸಂಪರ್ಕಿಸಿದ್ದರೆ ಕ್ಷಣಾರ್ಧದಲ್ಲಿ ನಿಮಗೆ ಸಂಪೂರ್ಣ ವಿವರ ಸಿಗುತ್ತಿತ್ತು.

1985 ರಲ್ಲಿ ಮಿತ್ರ ಕೆ.ಪುಟ್ಟಸ್ವಾಮಿ ಮೂಲಕ ಪರಿಚಯವಾದ ಕೆ.ಟಿ. ಶಿವಪ್ರಸಾದ್ ಬದುಕಿನುದ್ದಕ್ಕೂ ದೊರೆಯಂತೆ ಬದುಕಿದರು. ಹಾಸನದಿಂದ ಬೆಂಗಳೂರಿಗೆ ಜೀಪ್ ನಲ್ಲಿ ಬರುವಾಗ, ಜೊತೆಯಲ್ಲಿ ಇಬ್ಬರು, ಮೂವರು ಹುಡುಗರನ್ನು ಕರೆತರುತ್ತಿದ್ದರು. ಮಧ್ಯಾಹ್ನ ಅಥವಾ ಸಂಜೆಯ ಪ್ರೆಸ್ ಕ್ಲಬ್ ನಲ್ಲಿ ಊಟದ ಬಿಲ್ ಅನ್ನು ನಮ್ಮ ಕೈಯಲ್ಲಿ ಕೊಡಿಸುತ್ತಿರಲಿಲ್ಕ. ಅಂತಹ ಧಾರಾಳತನದ ವ್ಯಕ್ತಿತ್ವ ಅವರದು.

1974 ಅಥವಾ 75 ರಲ್ಲಿ ತೇಜಸ್ವಿ ಯವರು ತುಷಾರ ಮಾಸಪತ್ರಿಕೆಗೆ ಕರ್ವಾಲೋ ಕಾದಂಬರಿಯನ್ನು ಧಾರವಾಹಿ ರೂಪದಲ್ಲಿ ಬರೆದು ನಂತರ ಕೃತಿ ರೂಪದಲ್ಲಿ ಪ್ರಕಟವಾದಾಗ, ಒಳಗಿನ ಚಿತ್ರ ಮತ್ತು ಮುಖಪುಟವನ್ನು ಶಿವಪ್ರಸಾದ್ ಬರೆದಿದ್ದರು.

ತೇಜಸ್ವಿ ನಿಧನರಾದಾಗ, ಕುಪ್ಪಳ್ಳಿಯಲ್ಲಿ ಅವರ ಸಮಾಧಿಯನ್ನು ವಿನ್ಯಾಸ ಮಾಡಿದವರು ಕೆ.ಟಿ. ಶಿವಪ್ರಸಾದ್. ಬೃಹತ್ ಕಪ್ಪುಬಣ್ಣದ ಕಲ್ಲು ಕಂಬಗಳನ್ನು ತೇಜಸ್ವಿ ಅವರಿಗೆ ಹತ್ತಿರದ ಸಂಬಂಧಿ ಹಾಗೂ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ ಅವರು ಉಚಿತವಾಗಿ ಪೂರೈಸಿದ್ದರು

ರೈತಸಂಘ ಮತ್ತು ದಲಿತ ಸಂಘಗಳ ಒಡನಾಟದ ಬಗ್ಗೆ ಬರೆದರೆ ಅದೇ ಒಂದು‌ ಕೃತಿಯಾಗಬಲ್ಲದು.

ಅಯ್ಯಾ ಪತುರಕರುತರೇ, ನಾಳೆ ಲೇಖನ ಬರೆಯುವಾಗ, ಮೇಲ್ಕಂಡ ಮಿತ್ರರನ್ನು ಸಂಪರ್ಕಿಸಿ, ವಸ್ತುನಿಷ್ಠ ಶ್ರದ್ಧಾಂಜಲಿ ಲೇಖನ ಬರೆಯಿರಿ.

21/06/2026

ಒಬ್ಬ ಅವಿವೇಕಿಯ ಕಥೆ .. ಕಾನೂನೇ ಗೊತ್ತಿಲ್ದೆ ಕಾನೂನು ಮಾತಾಡ್ತಾನೆ ? ಈ ವಿಚಾರದಲ್ಲಿ ಯಾರದು ತಪ್ಪು/ಸರಿ?

15/06/2026

ಬಿಹಾರದ ಡಬಲ್ ಇಂಜಿನ್ ಸರ್ಕಾರದ ಕಥೆ ವ್ಯಥೆ
ದೇಶದ ಯುವ ಜನತೆ ಸಿಡಿದರೆ ಯಾವ ಪಕ್ಷವನ್ನು ಉಳಿಯಲ್ಲ 🙏

ವರದಕ್ಷಿಣೆ ಪ್ರಕರಣವೊಂದರ ತನಿಖೆಗೆಂದು ಜೈಪುರಕ್ಕೆ ತೆರಳಿದ್ದ ಹೆಚ್.ಎ.ಎಲ್. ಪೊಲೀಸರು ಲಾಕ್ ... ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳದ (ACB) ಅ...
15/06/2026

ವರದಕ್ಷಿಣೆ ಪ್ರಕರಣವೊಂದರ ತನಿಖೆಗೆಂದು ಜೈಪುರಕ್ಕೆ ತೆರಳಿದ್ದ ಹೆಚ್.ಎ.ಎಲ್. ಪೊಲೀಸರು ಲಾಕ್ ...
ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳದ (ACB) ಅಧಿಕಾರಿಗಳಿಂದ ಲಾಕ್ ..
ಅಧಿಕಾರಿಗಳು ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಸಿಕ್ಕಿರುವ ಪೊಲೀಸರು ...
ಜೈಪುರಕ್ಕೆ ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಲಂಚಕ್ಕೆ ಬೇಡಿಕೆ ...
ದಾಳಿ ನಡೆಸಿ ಮೂವರು ಪೊಲೀಸರನ್ನು ವಶಕ್ಕೆಪಡೆದ ರಾಜಸ್ಥಾನ ಎಸಿಬಿ ಅಧಿಕಾರಿಗಳು...
40 ಸಾವಿರ ರೂಪಾಯಿ ಲಂಚ ಪಡೆಯುವಾಗ ಪೊಲೀಸರು ವಶಕ್ಕೆ ...
ಅನಿತಾ (ಸಬ್ ಇನ್ಸ್‌ಪೆಕ್ಟರ್) , ಯತೀಶ್ ಕುಮಾರ್ (ಹೆಡ್ ಕಾನ್ಸ್‌ಟೇಬಲ್), ಉಳುವಪ್ಪ (ಹೆಡ್ ಕಾನ್ಸ್‌ಟೇಬಲ್) HAL ನ ಮೂವರು ಪೊಲೀಸರು ಜೈಪುರದಲ್ಲಿ ಲಾಕ್.

15/06/2026

ಕಸ ಗೂಡಿಸಿಆಯಿತು 🤣.. ನಮ್ಮ ದೇಶದ ಹಣಕಾಸು ಸಚಿವರನ್ನು ಕರ್ನಾಟಕಕ್ಕೆ ಏನು ಮಾಡಿದ್ದೀರಾ ಎಂದು ಮುಂದೆ ಕೇಳುವ ಹಾಗಿಲ್ಲ?
ಮುಂದೆ ಇದನ್ನೇ ಹೇಳುತ್ತಾರೆ 🙏

14/06/2026

ಆಧುನಿಕ ಯುಗದ ಯುವ ಸಮೂಹವೇ 🙏,
ರಾಜ್ಯ, ದೇಶ ಕಟ್ಟುವ ನಿಸ್ವಾರ್ಥಾ ಸೇವೆ ಸ್ವಲ್ಪ ಆದರೂ ಮಾಡೋಣ. ಸರ್ಕಾರದ ಪ್ರತಿ ಸೌಲಭ್ಯಗಳನ್ನು ಅರ್ಹ ವ್ಯಕ್ತಿಗೆ ಪೂರ್ತಿ ಪ್ರಮಾಣದಲ್ಲಿ ತಲುಪುತಿಲ್ಲ.
ಈ ವಿಚಾರ ಗೊತ್ತಿದ್ದರೂ ಗೊತ್ತಿಲ್ಲದವರಂತೆ ಮೂಕ ಪ್ರೇಕ್ಷಕರಾಗುವುದು ಬೇಡ.
ಪ್ರಶ್ನೆ ಮಾಡುವ ಎದೆಗಾರಿಕೆ ಬೆಳೆಸಿಕೊಳ್ಳೋಣ.
ನಾವು ಬದಲಾಗಿ ಇತರರನ್ನು ಬದಲಾಯಿಸಲು ಪ್ರಯತ್ನಿಸೋಣ.
ಬಡವ ಬಡವನಾಗಿಯೇ ದುಡಿಯುತ್ತಿದ್ದಾನೆ, ಶ್ರೀಮಂತ ಮತ್ತಷ್ಟೂ ಶ್ರೀಮಂತರಾಗುತ್ತಿದ್ದಾನೆ.
ಈ ವ್ಯವಸ್ಥೆಯ ಅವ್ಯವಸ್ಥೆಯ ಬಗ್ಗೆ ಹೋರಾಡೋಣ.
ಇರುವ ಒಂದು ಜೀವನದಲ್ಲಿ ಸಾಧಕರಾಗಿ, ಇತರರಿಗೆ ಮಾರ್ಗದರ್ಶಕರಾಗಿ ರೂಪಗೋಳ್ಳೋಣ.
ಪ್ರಪಂಚವನ್ನೇ ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಇದೆ.
ಇದರ ಖಾಸಗಿ ವ್ಯಾಪಾರಮಯಕ್ಕೆ ತಿಲಾಂಜಲಿ ಹಾಡಿ ಸರ್ಕಾರಿ ಶಾಲೆ ಕಾಲೇಜುಗಳ ಉನ್ನತಿಗಾಗಿ ಶ್ರಮಿಸೋಣ.
ಪ್ರತಿಗ್ರಾಮದಲ್ಲಿರುವ or 3-4 ಗ್ರಾಮಗಳಿಗೆ ಒಂದೊಂದು ಇರುವ ಸರ್ಕಾರಿ ಶಾಲೆಯ ಅವ್ಯವಸ್ಥೆಯ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಕೇಳೋಣ...
ಇದು ನಮ್ಮ ಹಕ್ಕು, ನಮ್ಮ ಶಾಲೆ ಉಳಿಸೋಣ ಬೆಳೆಸೋಣ.

ಬದಲಾವಣೆ ಜಗದ ನಿಯಮ.
ಬದಲಾವಣೆ ಬಯಸುವ
ಎಚ್ಚರಿಕೆ ನ್ಯೂಸ್ @

Address

Karnataka

Website

Alerts

Be the first to know and let us send you an email when Yecharike News - ಎಚ್ಚರಿಕೆ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

  • Want your organization to be the top-listed Government Service?

Share