Dr. Dhananjaya Sarji ಜನಪರ - ಜೀವಪರ

Dr. Dhananjaya Sarji  ಜನಪರ - ಜೀವಪರ ಜನಪರ - ಜೀವಪರ
MLC for South West Graduates Constituency Karnataka |
Proprietor, Sarji Group of Hospitals |

ಈ ಸಲನೂ ಕಪ್ ನಮ್ದೇ 🏆ಐಪಿಎಲ್ 2026 ಚಾಂಪಿಯನ್ಸ್ ಆದ ನಮ್ಮ ಆರ್‌ಸಿಬಿ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.ಕನ್ನಡಿಗರ ಹೆಮ್ಮೆ ನಮ್ಮ ಆರ್​ಸಿಬಿ! ❤️ ...
31/05/2026

ಈ ಸಲನೂ ಕಪ್ ನಮ್ದೇ 🏆

ಐಪಿಎಲ್ 2026 ಚಾಂಪಿಯನ್ಸ್ ಆದ ನಮ್ಮ ಆರ್‌ಸಿಬಿ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.

ಕನ್ನಡಿಗರ ಹೆಮ್ಮೆ ನಮ್ಮ ಆರ್​ಸಿಬಿ! ❤️

ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಇಂದು ಉಡುಪಿಯ ಕಕ್ಕುಂಜೆಯ ಅನುಗ್ರಹ ಬಿಷಪ್ ಸೆಂಟರ್ ನಲ್ಲಿ  ಆಯೋಜಿಸಲಾಗಿದ್ದ ಗೌರವಾನ್ವಿ...
31/05/2026

ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಇಂದು ಉಡುಪಿಯ ಕಕ್ಕುಂಜೆಯ ಅನುಗ್ರಹ ಬಿಷಪ್ ಸೆಂಟರ್ ನಲ್ಲಿ ಆಯೋಜಿಸಲಾಗಿದ್ದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಯವರ 134 ನೇ ಸಂಚಿಕೆಯ ಮನ್ ಕೀ ಬಾತ್ ಕಾರ್ಯಕ್ರಮವನ್ನು ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಪಾಲ್ಗೊಂಡು ವೀಕ್ಷಿಸಲಾಯಿತು.

ಭಾರತದ ಕ್ರೀಡಾಪಟುಗಳಾದ ಗುರಿಂದರ್​ವೀರ್ ಸಿಂಗ್, ವಿಶಾಲ್ ಕುಮಾರ್, ತೇಜಸ್ವಿನ್ ಶಂಕರ್ ಮತ್ತು ದೇವ್ ಮೀನಾ ಅವರ ಕ್ರೀಡಾ ಸಾಧನೆಗಳು ಹಾಗೂ ವಿದೇಶದಿಂದ ಚೋಳರ ಕಾಲದ ಪುರಾತನ ಕಲಾಕೃತಿಯನ್ನು ಮರಳಿ ತಂದಿರುವುದು ನಮ್ಮ ಸಾಂಸ್ಕೃತಿಕ ಪರಂಪರೆಯ ಮರುಸ್ಥಾಪನೆಯ ಕುರಿತಾದ ಪ್ರಧಾನಿಯವರ ಸಂದೇಶ ಪ್ರೇರಣಾದಾಯಕವಾದುದ್ದು.

ಈ ವೇಳೆ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ರುಡಾಲ್ಫ್ ಡಿಸೋಜ ಅವರು, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಅವರು, ಶಾಸಕರಾದ ಶ್ರೀ ಕಿರಣ್ ಕುಮಾರ್ ಕೂಡ್ಗಿ ಅವರು, ಗುರ್ಮೆ ಸುರೇಶ್ ಶೆಟ್ಟಿ ಅವರು, ಗುರುರಾಜ್ ಗಂಟಿಹೊಳೆ ಅವರು, ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಅವರು, ಚರ್ಚ್ ನ ಧರ್ಮಗುರುಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

31/05/2026
ಮಾಳ್ವಾ ಪ್ರಾಂತ್ಯದ ಮಹಾರಾಣಿಯಾಗಿ ದಕ್ಷ ಆಡಳಿತಗಾರ್ತಿಯಾಗಿ, ಹಳೆಯ ಮತ್ತು ವಿಧ್ವಂಸಗೊಂಡ ಅನೇಕ ದೇವಾಲಯಗಳು ಹಾಗೂ ಕಾಶಿ ವಿಶ್ವನಾಥನ ದೇವಾಲಯವನ್ನು...
31/05/2026

ಮಾಳ್ವಾ ಪ್ರಾಂತ್ಯದ ಮಹಾರಾಣಿಯಾಗಿ ದಕ್ಷ ಆಡಳಿತಗಾರ್ತಿಯಾಗಿ, ಹಳೆಯ ಮತ್ತು ವಿಧ್ವಂಸಗೊಂಡ ಅನೇಕ ದೇವಾಲಯಗಳು ಹಾಗೂ ಕಾಶಿ ವಿಶ್ವನಾಥನ ದೇವಾಲಯವನ್ನು ಪುನರ್‌ ನಿರ್ಮಾಣ ಮಾಡುವ ಮೂಲಕ ಧರ್ಮ ರಕ್ಷಣೆ ಮಾಡಿದ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್‌ ಅವರ ಜನ್ಮದಿನದಂದು ಶತ ಶತ ನಮನಗಳು.

ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಶುಭಶ್ರೀ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ  ಪಂಡಿತ್  ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ...
30/05/2026

ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಶುಭಶ್ರೀ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026” ರ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದ ಮೊದಲನೆಯ ದಿನದ ಪ್ರಮುಖ ಕ್ಷಣಗಳು.

ಶಿವಮೊಗ್ಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ನ ವತಿಯಿಂದ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್...
30/05/2026

ಶಿವಮೊಗ್ಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ನ ವತಿಯಿಂದ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಗ್ರಾಜುಯೇಷನ್ ಡೇ-2026 ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆಯನ್ನು ಹಾಗೂ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಲಾಯಿತು.

ಈ ವೇಳೆ ಖ್ಯಾತ ಕೈಗಾರಿಕೋದ್ಯಮಿಗಳು ಮತ್ತು ಮಾಜಿ ವಿಧಾನ ಪರಿಷತ್ ಶಾಸಕರಾದ ಎಸ್ ರುದ್ರೇಗೌಡ ಅವರು,
ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ನ ಮ್ಯಾನೇಜಿಂಗ್ ಟ್ರಸ್ಟಿ ಕಿರಣ್ ಕುಮಾರ್ ಅವರು, ಪ್ರಾಂಶುಪಾಲರಾದ ಶ್ರೀ ರುದ್ರೇಶ್ ಅವರು, ಉದ್ಯಮಿಗಳಾದ ಬಾಳೆಕಾಯಿ ಮೋಹನ್ ಅವರು, ಹಿರಿಯ ಪತ್ರಕರ್ತರಾದ ಚಂದ್ರಹಾಸ್ ಹಿರೇಮಳಲಿ ಅವರು, ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಹೆಚ್.ಸಿ ಯೋಗೇಶ್ ಅವರು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು

ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಶುಭಶ್ರೀ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪಂಡಿತ್  ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ...
30/05/2026

ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಶುಭಶ್ರೀ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026” ರ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ ರಾಘವೇಂದ್ರ ಅವರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರು, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎನ್.ಕೆ ಜಗದೀಶ್ ಅವರು, ಶಾಸಕರಾದ ಎಸ್.ಎನ್ ಚನ್ನಬಸಪ್ಪ ಅವರು, ಮಾಜಿ ಸಚಿವರಾದ ಹರತಾಳು ಹಾಲಪ್ಪ ಅವರು, ವಿಧಾನಪರಿಷತ್ ಮುಖ್ಯ ಸಚೇತಕರಾದ ಶ್ರೀ ಎನ್.ರವಿಕುಮಾರ್ ಅವರು, ವಿಧಾನ ಪರಿಷತ್ ಶಾಸಕರಾದ ಶ್ರೀ ಅಮರನಾಥ ಪಾಟೀಲ್ ಅವರು, ಮಾಜಿ ಶಾಸಕರಾದ ಶ್ರೀ ಕೆ ಬಿ ಅಶೋಕ್ ನಾಯ್ಕ್ ಅವರು, ಶ್ರೀ ಕೆ. ಜಿ ಕುಮಾರಸ್ವಾಮಿ ಅವರು, ರಾಜ್ಯ ಪ್ರಕೋಷ್ಟಗಳ ಸಂಚಾಲಕರಾದ ಶ್ರೀ ಎಸ್. ದತ್ತಾತ್ರಿ ಅವರು, ದಾವಣಗೆರೆ ವಿಭಾಗ ಪ್ರಭಾರಿ ಶ್ರೀ ಟಿ.ಡಿ ಮೇಘರಾಜ್ ಅವರು, ಶ್ರೀ ಆರ್ ಡಿ ಹೆಗ್ಡೆ ಪಕ್ಷದ ಹಾಗೂ ವಿವಿಧ ಸ್ಥರದ ಮುಖಂಡರು ಉಪಸ್ಥಿತರಿದ್ದರು.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದ 12 ವರ್ಷಗಳು !12 ವರ್ಷಗಳ ದೂರದೃಷ್ಟಿಯುಳ್ಳ ನಾಯಕತ್ವವು ಭಾರತವನ್ನು ಪರಿವರ್ತನೆ ಮತ್ತು ಅಭಿ...
29/05/2026

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದ 12 ವರ್ಷಗಳು !
12 ವರ್ಷಗಳ ದೂರದೃಷ್ಟಿಯುಳ್ಳ ನಾಯಕತ್ವವು ಭಾರತವನ್ನು ಪರಿವರ್ತನೆ ಮತ್ತು ಅಭಿವೃದ್ಧಿಯ ಪರ್ವಕಾಲವನ್ನಾಗಿ ಪರಿವರ್ತಿಸಿದೆ. 📈

ಹಾವೇರಿ ಜಿಲ್ಲಾ ಬಿಜೆಪಿ ವತಿಯಿಂದ ಇಂದು ಹಾವೇರಿಯ ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ  "ಕೇಂದ್ರ ಸರ್ಕಾರದ ಜನಪರ ಯೋಜನೆಗಳ"  ಕುರಿತ ಕಾರ್ಯ...
28/05/2026

ಹಾವೇರಿ ಜಿಲ್ಲಾ ಬಿಜೆಪಿ ವತಿಯಿಂದ ಇಂದು ಹಾವೇರಿಯ ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ
"ಕೇಂದ್ರ ಸರ್ಕಾರದ ಜನಪರ ಯೋಜನೆಗಳ" ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು , ಜಿಲ್ಲಾ ಹಾಗೂ ಮಂಡಲಗಳ ಸಂಚಾಲಕರು, ಸಹ ಸಂಚಾಲಕರು, ಮತ್ತು ಕಾರ್ಯಕರ್ತರಿಗೆ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದ ಎನ್.ಡಿ.ಎ ಸರ್ಕಾರದ ಜನ ಕಲ್ಯಾಣ ಯೋಜನೆಗಳ ಬಗ್ಗೆ ಮಾರ್ಗದರ್ಶನ ನೀಡಿ, ಈ ಯೋಜನೆಗಳನ್ನು ಕಾರ್ಯಕರ್ತರು ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಮಾಹಿತಿ ನೀಡಲಾಯಿತು.

ಈ ವೇಳೆ ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ವಿರುಪಾಕ್ಷಪ್ಪ ಅವರು, ಮಾಜಿ ಶಾಸಕರಾದ ಶಿವರಾಜ ಸಜ್ಜನ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಅವರು, ಜಿಲ್ಲಾ ಸಂಚಾಲಕರಾದ ಕಲ್ಯಾಣ್ ಕುಮಾರ್ ಅವರು, ಸಹ ಸಂಚಾಲಕರಾದ ನೀಲಪ್ಪ ಚಾವಡಿ ಅವರು, ಪರಮೇಶ್ ಅವರು, ಮುಖಂಡರಾದ ಗವಿ ಸಿದ್ದಪ್ಪ ದ್ಯಾಮಣ್ಣ ಅವರು, ಸಿದ್ದಣ್ಣ ಚಿಕ್ಕಬಿದರಿ ಅವರು ಸೇರಿದಂತೆ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.

ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಆತ್ಮೀಯರಾದ ಶ್ರೀ ಎಂ. ಆರ್. ದೇವರಾಜ್ ಶೆಟ್ಟಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.ಸಾರ್ವಜ...
28/05/2026

ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಆತ್ಮೀಯರಾದ ಶ್ರೀ ಎಂ. ಆರ್. ದೇವರಾಜ್ ಶೆಟ್ಟಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಸಾರ್ವಜನಿಕ ಸೇವೆಯಲ್ಲಿರುವ ತಮಗೆ ದೇವರು ಉತ್ತಮ ಆಯುರಾರೋಗ್ಯ, ದೀರ್ಘಾಯುಷ್ಯ, ಕರುಣಿಸಲಿ. ನಿಮ್ಮ ನೇತೃತ್ವದಲ್ಲಿ ಪಕ್ಷ ಸಂಘಟನೆ ಇನ್ನಷ್ಟು ಬಲಗೊಳ್ಳಲಿ ಎಂದು ಹಾರೈಸುತ್ತೇನೆ.

Address

RMR Road, Tilak Nagar
Shimoga
577201

Alerts

Be the first to know and let us send you an email when Dr. Dhananjaya Sarji ಜನಪರ - ಜೀವಪರ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dr. Dhananjaya Sarji ಜನಪರ - ಜೀವಪರ:

Share