SDPI Sakleshpur

SDPI Sakleshpur SDPI Sakleshpur Official Page

Politics For Cause

Freedom From Hunger, Freedom From Fear

ವಿದ್ಯುತ್ ಸಂಪರ್ಕ ಕಡಿತ ಪ್ರಕರಣಕ್ಕೆ ನ್ಯಾಯ ದೊರಕಿಸಿಕೊಟ್ಟ SDPI ಸಕಲೇಶಪುರಬಾಳುಪೇಟೆಯಲ್ಲಿ ಮುದಸ್ಸಿರ್ ಪಾಷಾ ಅವರ ಮನೆಯ ವಿದ್ಯುತ್ ಸಂಪರ್ಕವನ್...
23/05/2026

ವಿದ್ಯುತ್ ಸಂಪರ್ಕ ಕಡಿತ ಪ್ರಕರಣಕ್ಕೆ ನ್ಯಾಯ ದೊರಕಿಸಿಕೊಟ್ಟ SDPI ಸಕಲೇಶಪುರ

ಬಾಳುಪೇಟೆಯಲ್ಲಿ ಮುದಸ್ಸಿರ್ ಪಾಷಾ ಅವರ ಮನೆಯ ವಿದ್ಯುತ್ ಸಂಪರ್ಕವನ್ನು ಯಾವುದೇ ಮುನ್ಸೂಚನೆ ನೀಡದೆ ಕಡಿತಗೊಳಿಸಿದ ಘಟನೆಗೆ ಸಂಬಂಧಿಸಿ, ಮೇ 13ರಂದು ವಿಷಯವು SDPI ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ವಾಜಿದ್ ಪಾಷಾ ಅವರ ಗಮನಕ್ಕೆ ಬಂದಿತ್ತು. ಬಳಿಕ ಅಧ್ಯಕ್ಷರು ವಿಷಯವನ್ನು ವಿಧಾನಸಭಾ ಕ್ಷೇತ್ರ ಸಮಿತಿಯ ಲೀಗಲ್ ಇನ್‌ಚಾರ್ಜ್ ಸಾದಿಕ್ ಮಂಜರಾಬಾದ್ ಅವರ ಗಮನಕ್ಕೆ ತಂದರು. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತು ಪರಿಶೀಲನೆ ನಡೆಸಲಾಯಿತು.
ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಸಂದರ್ಭದಲ್ಲಿ ಮನೆ ಸಂಪೂರ್ಣ ಕತ್ತಲೆಯಲ್ಲಿದ್ದ ಕಾರಣ, ಮುದಸ್ಸಿರ್ ಪಾಷಾ ಅವರ ಪತ್ನಿಗೆ ಹಾವು ಕಚ್ಚಿದ ಘಟನೆ ಕೂಡ ಸಂಭವಿಸಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಜನರ ಜೀವದೊಂದಿಗೆ ಚೆಲ್ಲಾಟ ಆಡುತ್ತಿರುವ KEB ನಿರ್ಲಕ್ಷ್ಯವನ್ನು ತೋರಿಸುತ್ತದೆ.

ಸ್ಥಳೀಯ ನಿವಾಸಿಗಳ ಸಮಸ್ಯೆಯನ್ನು ಆಲಿಸಿದ ಬಳಿಕ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಲಾಯಿತು. ನಿರಂತರ ಹೋರಾಟ ಹಾಗೂ ಒತ್ತಾಯದ ಫಲವಾಗಿ ಇಂದು ಮುದಸ್ಸಿರ್ ಪಾಷಾ ಅವರ ಮನೆಗೆ ಮರು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ದೊರಕಿಸಿಕೊಡುವ ಕಾರ್ಯವನ್ನು SDPI ನಿರಂತರವಾಗಿ ಮುಂದುವರಿಸಲಿದೆ ಎಂದು ಮುಖಂಡರು ತಿಳಿಸಿದ್ದಾರೆ.
• ವಾಜಿದ್ ಪಾಷಾ – ಅಧ್ಯಕ್ಷರು, SDPI ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿ
• ಸಾದಿಕ್ ಮಂಜರಾಬಾದ್ – ವಿಧಾನಸಭಾ ಲೀಗಲ್ ಇನ್‌ಚಾರ್ಜ್
• ಯಾಸಿನ್ ಸಕಲೇಶಪುರ – ವಿಧಾನಸಭಾ ಮೀಡಿಯಾ ಇನ್‌ಚಾರ್ಜ್
• ಸಮಿಯುಲ್ಲಾ – ಚಂಪಕನಗರ ಶಾಖಾ ಕಾರ್ಯದರ್ಶಿ
ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ೇಶಪುರ


ಸಂತಾಪ
22/05/2026

ಸಂತಾಪ

ಸಕಲೇಶಪುರ, ಮೇ 16:ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಇಂದು ಸಕಲೇಶಪುರ ಸರ್ಕ...
17/05/2026

ಸಕಲೇಶಪುರ, ಮೇ 16:
ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಇಂದು ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಗಿತಗೊಂಡಿರುವ ಸ್ಕ್ಯಾನಿಂಗ್ ಸೌಲಭ್ಯವನ್ನು ತಕ್ಷಣ ಪುನರಾರಂಭಿಸುವಂತೆ ಆಗ್ರಹಿಸಿ ತಾಲೂಕು ಆರೋಗ್ಯಾಧಿಕಾರಿ (THO) ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಸ್ಥಗಿತಗೊಂಡಿರುವುದರಿಂದ ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಗರ್ಭಿಣಿಯರು, ವೃದ್ಧರು ಹಾಗೂ ತುರ್ತು ಚಿಕಿತ್ಸೆಗೆ ಒಳಗಾಗುವ ರೋಗಿಗಳು ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳಿಗೆ ತೆರಳಿ ಹೆಚ್ಚಿನ ಹಣ ಪಾವತಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಯಿತು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿರುವ ಸ್ಕ್ಯಾನಿಂಗ್ ಕೇಂದ್ರವನ್ನು ಶೀಘ್ರವಾಗಿ ಪುನರಾರಂಭಿಸಿ, ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂದು SDPI ಮುಖಂಡರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ SDPI ಸಕಲೇಶಪುರ ತಾಲೂಕು ಅಧ್ಯಕ್ಷರಾದ ವಾಜೀದ್ ಪಾಶ ತಾಲೂಕು ಸಹ ಕಾರ್ಯದರ್ಶಿಯಾದ ಸಾದಿಕ್ ಮಂಜರಾಬಾದ್ , ತಾಲೂಕು ಮಾಧ್ಯಮ ಉಸ್ತುವಾರಿ ಯಾಸಿನ್ ಸಕಲೇಶಪುರ ಹಾಗೂ ಅನೇಮಹಲ್ ಬ್ರಾಂಚ್ ಕಾರ್ಯದರ್ಶಿಯಾದ ನಾಸೀರ್ ಅನೇಮಹಲ್ ಉಪಸ್ಥಿತರಿದ್ದರು.

#ಜನಆರೋಗ್ಯ #ಸಕಲೇಶಪುರ #ಸರ್ಕಾರಿಆಸ್ಪತ್ರೆ #ಸ್ಕ್ಯಾನಿಂಗ್_ಕೇಂದ್ರ #ಆರೋಗ್ಯಹಕ್ಕು ೇಶಪುರ #ಹಾಸನ #ತಾಲೂಕುಆರೋಗ್ಯಾಧಿಕಾರಿ #ಜನಸಾಮಾನ್ಯರಧ್ವನಿ #ಗ್ರಾಮೀಣಆರೋಗ್ಯ #ಜನಪರಹೋರಾಟ

ಪತ್ರಿಕಾ ಪ್ರಕಟಣೆಸಕಲೇಶಪುರ, ಮೇ 16:ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಇಂದ...
17/05/2026

ಪತ್ರಿಕಾ ಪ್ರಕಟಣೆ
ಸಕಲೇಶಪುರ, ಮೇ 16:
ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಇಂದು ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಗಿತಗೊಂಡಿರುವ ಸ್ಕ್ಯಾನಿಂಗ್ ಸೌಲಭ್ಯವನ್ನು ತಕ್ಷಣ ಪುನರಾರಂಭಿಸುವಂತೆ ಆಗ್ರಹಿಸಿ ತಾಲೂಕು ಆರೋಗ್ಯಾಧಿಕಾರಿ (THO) ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಸ್ಥಗಿತಗೊಂಡಿರುವುದರಿಂದ ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಗರ್ಭಿಣಿಯರು, ವೃದ್ಧರು ಹಾಗೂ ತುರ್ತು ಚಿಕಿತ್ಸೆಗೆ ಒಳಗಾಗುವ ರೋಗಿಗಳು ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳಿಗೆ ತೆರಳಿ ಹೆಚ್ಚಿನ ಹಣ ಪಾವತಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಯಿತು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿರುವ ಸ್ಕ್ಯಾನಿಂಗ್ ಕೇಂದ್ರವನ್ನು ಶೀಘ್ರವಾಗಿ ಪುನರಾರಂಭಿಸಿ, ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂದು SDPI ಮುಖಂಡರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ SDPI ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ವಾಜೀದ್ ಪಾಶ ಸಹ ಕಾರ್ಯದರ್ಶಿಯಾದ ಸಾದಿಕ್ ಮಂಜರಾಬಾದ್ , ಮಾಧ್ಯಮ ಉಸ್ತುವಾರಿ ಯಾಸಿನ್ ಸಕಲೇಶಪುರ ಹಾಗೂ ಅನೇಮಹಲ್ ಬ್ರಾಂಚ್ ಕಾರ್ಯದರ್ಶಿಯಾದ ನಾಸೀರ್ ಅನೇಮಹಲ್ ಉಪಸ್ಥಿತರಿದ್ದರು.



























#ಜನರಧ್ವನಿ
#ಆರೋಗ್ಯಇಲಾಖೆ
#ಸಕಲೇಶಪುರ
Dinesh Gundu Rao

ಅಭಿನಂದನೆಗಳು 🎉🎉🎉     #ನವಮಿ
16/05/2026

ಅಭಿನಂದನೆಗಳು 🎉🎉🎉

#ನವಮಿ

ಭ್ರಷ್ಟಾಚಾರ ಮುಕ್ತ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಹಾದಿಯಲ್ಲಿ ಸಾಗುತ್ತಿರುವ ಏಕೈಕ ಜನಪರ ರಾಜಕೀಯ ಪಕ್ಷ ಎಸ್‌ಡಿಪಿಐ.ಸಮಾನತೆ, ನ್ಯ...
11/05/2026

ಭ್ರಷ್ಟಾಚಾರ ಮುಕ್ತ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಹಾದಿಯಲ್ಲಿ ಸಾಗುತ್ತಿರುವ ಏಕೈಕ ಜನಪರ ರಾಜಕೀಯ ಪಕ್ಷ ಎಸ್‌ಡಿಪಿಐ.
ಸಮಾನತೆ, ನ್ಯಾಯ ಮತ್ತು ಸಹೋದರತ್ವದ ಮೌಲ್ಯಗಳೊಂದಿಗೆ ದೇಶವನ್ನು ಹಸಿವು ಮುಕ್ತ ಹಾಗೂ ಭಯ ಮುಕ್ತವಾಗಿಸಲು ನಾವೆಲ್ಲರೂ ಒಂದಾಗಿ ಕೈಜೋಡಿಸೋಣ.
ಇಂದೇ ಎಸ್‌ಡಿಪಿಐ ಪಕ್ಷಕ್ಕೆ ಸೇರ್ಪಡೆಯಾಗಿ, ಜನರ ಪರ್ಯಾಯ ರಾಜಕೀಯಕ್ಕೆ ಬೆಂಬಲ ನೀಡಿ.
ಇದೇ ನಿಜವಾದ ಪರ್ಯಾಯ ರಾಜಕೀಯ!
#ಜನಪರರಾಜಕೀಯ #ಭ್ರಷ್ಟಾಚಾರಮುಕ್ತಭಾರತ

Join the only people-oriented political party, SDPI, that is moving forward on the path shown by Dr. Babasaheb Ambedkar’s Constitution and stands firmly against corruption.
Let us all unite together to build an India free from hunger, fear, and injustice with the values of equality, justice, and brotherhood.
Join SDPI today and support the politics of real change and people’s empowerment.
This is the true alternative politics!

ಸಕಲೇಶಪುರದ ಚಂಪಕನಗರ ಸಮೀಪದ ಸ್ಕಂದ ಸ್ಕ್ಯಾನಿಂಗ್ ಸೆಂಟರ್ ರವರ ನಿರ್ಲಕ್ಷ್ಯ ಖಂಡನೀಯ!ವೈಶಾಲಿ ಎಂಬುವವರಿಗೆ ನೀಡಬೇಕಾದ ಸ್ಕ್ಯಾನಿಂಗ್ ವರದಿಯನ್ನು ...
10/05/2026

ಸಕಲೇಶಪುರದ ಚಂಪಕನಗರ ಸಮೀಪದ ಸ್ಕಂದ ಸ್ಕ್ಯಾನಿಂಗ್ ಸೆಂಟರ್ ರವರ ನಿರ್ಲಕ್ಷ್ಯ ಖಂಡನೀಯ!
ವೈಶಾಲಿ ಎಂಬುವವರಿಗೆ ನೀಡಬೇಕಾದ ಸ್ಕ್ಯಾನಿಂಗ್ ವರದಿಯನ್ನು ಹಸೇನಾರ್ ಹಾಜಿ ಅವರ ಪತ್ನಿ ತಂಶಿಯ ಅವರಿಗೆ ನೀಡಿರುವುದು ಆರೋಗ್ಯ ಸೇವೆಯಲ್ಲಿನ ಭಾರೀ ನಿರ್ಲಕ್ಷ್ಯವನ್ನು ತೋರಿಸುತ್ತದೆ.
ತಪ್ಪಾದ ಸ್ಕ್ಯಾನಿಂಗ್ ವರದಿ ನೀಡಿ ಮಹಿಳೆಯ ಜೀವದೊಂದಿಗೆ ಆಟವಾಡಿರುವ ಘಟನೆ ಅತ್ಯಂತ ಗಂಭೀರವಾಗಿದೆ.
ರೋಗಿಗಳ ಆರೋಗ್ಯದ ವಿಚಾರದಲ್ಲಿ ಇಂತಹ ಬೇಜವಾಬ್ದಾರಿತನ ಅಕ್ಷಮ್ಯ.
ಸಂಬಂಧಪಟ್ಟ “ಸ್ಕಂದ ಸ್ಕ್ಯಾನಿಂಗ್ ಸೆಂಟರ್” ವಿರುದ್ಧ ತಕ್ಷಣ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು.
ಅದೇ ರೀತಿ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿರುವ ಸ್ಕ್ಯಾನಿಂಗ್ ಯಂತ್ರವನ್ನು ತಕ್ಷಣ ಕಾರ್ಯಾರಂಭಗೊಳಿಸಿ, ನುರಿತ ತಜ್ಞರನ್ನು ನೇಮಿಸಿ ಸಾರ್ವಜನಿಕರಿಗೆ ಉಚಿತ ಹಾಗೂ ಸುರಕ್ಷಿತ ಆರೋಗ್ಯ ಸೇವೆ ಒದಗಿಸಬೇಕು.
ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡುತ್ತೇವೆ.





#ಸ್ಕಂದ_ಸ್ಕ್ಯಾನಿಂಗ್_ಸೆಂಟರ್
#ಸಕಲೇಶಪುರ





SDPI Sakleshpur
Dinesh Gundu Rao

Sakleshpur SDPI Monthly MeetingSakleshpur, May 8: The monthly meeting of the SDPI Sakleshpur Assembly Constituency Commi...
09/05/2026

Sakleshpur SDPI Monthly Meeting
Sakleshpur, May 8: The monthly meeting of the SDPI Sakleshpur Assembly Constituency Committee was held under the presidentship of President Wajid Pasha. District President Imran Arehalli participated as an observer.
During the meeting, discussions were held regarding strengthening the party, addressing the problems of common people, and collectively facing upcoming political challenges.
On this occasion, the SDPI membership campaign scheduled from May 10 to 25 was officially announced. Party workers were urged to visit households and connect people with the party.
Secretary Haider welcomed the gathering. Vice President Syed delivered the vote of thanks, and party members were present at the meeting.

ಸಕಲೇಶಪುರ SDPI ಮಾಸಿಕ ಸಭೆಸಕಲೇಶಪುರ ಮೇ 8: SDPI ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆಯು ಅಧ್ಯಕ್ಷರಾದ ವಾಜಿದ್ ಪಾಷಾ ಅವರ ಅಧ್ಯಕ...
09/05/2026

ಸಕಲೇಶಪುರ SDPI ಮಾಸಿಕ ಸಭೆ

ಸಕಲೇಶಪುರ ಮೇ 8: SDPI ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆಯು ಅಧ್ಯಕ್ಷರಾದ ವಾಜಿದ್ ಪಾಷಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಅಧ್ಯಕ್ಷರಾದ ಇಮ್ರಾನ್ ಅರೇಹಳ್ಳಿ ವೀಕ್ಷಕರಾಗಿ ಭಾಗವಹಿಸಿದ್ದರು.

ಸಭೆಯಲ್ಲಿ ಪಕ್ಷದ ಬಲವರ್ಧನೆ, ಜನಸಾಮಾನ್ಯರ ಸಮಸ್ಯೆಗಳ ಪರಿಹಾರ ಹಾಗೂ ಮುಂದಿನ ರಾಜಕೀಯ ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸುವ ಕುರಿತು ಚರ್ಚಿಸಲಾಯಿತು.

ಇದೇ ಸಂದರ್ಭದಲ್ಲಿ ಮೇ 10 ರಿಂದ 25 ರವರೆಗೆ ನಡೆಯಲಿರುವ SDPI ಸದಸ್ಯತ್ವ ಅಭಿಯಾನವನ್ನು ಘೋಷಿಸಲಾಯಿತು. ಕಾರ್ಯಕರ್ತರು ಮನೆಮನೆಗೆ ತೆರಳಿ ಜನರನ್ನು ಪಕ್ಷದೊಂದಿಗೆ ಸಂಪರ್ಕಿಸುವಂತೆ ಕರೆ ನೀಡಲಾಯಿತು.

ಸಭೆಯಲ್ಲಿ ಕಾರ್ಯದರ್ಶಿ ಹೈದರ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಸಯ್ಯದ್ ಧನ್ಯವಾದ ಸಲ್ಲಿಸಿದರು ಹಾಗೂ ಸದಸ್ಯರು ಉಪಸ್ಥಿತರಿದ್ದರು

ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ  ಕಾಡ್ಲೂರು ಬ್ರಾಂಚ್  ಇವರ ನೇತೃತ್ವದಲ್ಲಿ  ಕಾಡ್ಲೂರಿನಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪನೆಗೆ ನೀಡಿ...
08/05/2026

ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಾಡ್ಲೂರು ಬ್ರಾಂಚ್ ಇವರ ನೇತೃತ್ವದಲ್ಲಿ ಕಾಡ್ಲೂರಿನಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪನೆಗೆ ನೀಡಿದ ಮನವಿಗೆ ಸ್ಪಂದಿಸಿದ ಮೋಹನ್ ಕುಮಾರ್ ಆಹಾರ ನಿರೀಕ್ಷಕರು K C ಆಲೂರು (ಆಹಾರ ಶಿರಸ್ತೆದಾರರು ) ಮತ್ತು ಕಿಶೋರ್ ಕುಮಾರ್ (ಅಧ್ಯಕ್ಷರು. ಕೃಷಿ ಪತ್ತಿನ ಸಹಕಾರ ಸಂಘ. ನ್ಯಾಯಬೆಲೆ ಅಂಗಡಿ (ಕೆ. ಹೊಸಕೋಟೆ )
ಇವರಿಂದ ಸ್ಥಳ ಪರಿಶೀಲನೆ ನಡೆಸಲಾಯಿತು

ಈ ಸಂದರ್ಭದಲ್ಲಿ
ಮುನೀರ್ ಅಧ್ಯಕ್ಷರು SDPI ಕಾಡ್ಲೂರು
ಶಂಸುದ್ದಿನ್ ಪುತ್ತು
ಕೋಶಧಿಕಾರಿಗಳು SDPI ಹಾಸನ
ಶಾಹುಲ್
ಇಲ್ಯಾಸ್
ಷರೀಫ್
SDPI ಕಾಡ್ಲೂರು ಬ್ರಾಂಚ್ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು

ಪತ್ರಿಕಾ ಪ್ರಕಟಣೆವಿಷಯ: ಕಾಡ್ಲೂರು ಕೊಪ್ಪಲ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪನೆಗೆ ಆಗ್ರಹ – ಗ್ರಾಮಸ್ಥರ ಮನವಿಹಾಸನ: ಆಲೂರು ತಾಲ್ಲೂಕಿನ ಕಾ...
06/05/2026

ಪತ್ರಿಕಾ ಪ್ರಕಟಣೆ

ವಿಷಯ: ಕಾಡ್ಲೂರು ಕೊಪ್ಪಲ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪನೆಗೆ ಆಗ್ರಹ – ಗ್ರಾಮಸ್ಥರ ಮನವಿ

ಹಾಸನ: ಆಲೂರು ತಾಲ್ಲೂಕಿನ ಕಾಡ್ಲೂರು ಕೊಪ್ಪಲ ಗ್ರಾಮದಲ್ಲಿ ಸುಮಾರು 360ಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿರುವ ಕುಟುಂಬಗಳು ವಾಸಿಸುತ್ತಿದ್ದು, ಈ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲದಿರುವುದು ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ.

ಪ್ರಸ್ತುತ ಪಡಿತರ ವಿತರಣೆಗಾಗಿ ಗ್ರಾಮಸ್ಥರು ಸುಮಾರು 5 ಕಿಲೋಮೀಟರ್ ದೂರದ ಪಕ್ಕದ ಗ್ರಾಮಕ್ಕೆ ತೆರಳಬೇಕಾದ ಅನಿವಾರ್ಯತೆ ಉಂಟಾಗಿದ್ದು ಇದರಿಂದ ಕೂಲಿ ಕಾರ್ಮಿಕರು ತಮ್ಮ ದಿನ ಕೆಲಸವನ್ನು ಬಿಟ್ಟು ಹೋಗಬೇಕಾಗಿದ್ದು, ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತಿದೆ. ವಿಶೇಷವಾಗಿ ವೃದ್ಧರು, ಮಹಿಳೆಯರು ಹಾಗೂ ದೈಹಿಕವಾಗಿ ಅಶಕ್ತರಾದವರು ಈ ದೂರ ಪ್ರಯಾಣದಿಂದ ಹೆಚ್ಚಿನ ಕಷ್ಟ ಅನುಭವಿಸುತ್ತಿದ್ದಾರೆ.

ಸರ್ಕಾರದ ಮಾರ್ಗಸೂಚಿಯ ಪ್ರಕಾರ ಪ್ರತಿ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ನ್ಯಾಯಬೆಲೆ ಅಂಗಡಿ ಇರಬೇಕೆಂಬ ಉದ್ದೇಶವಿದ್ದರೂ, ಕಾಡ್ಲೂರು ಕೊಪ್ಪಲ ಗ್ರಾಮಸ್ಥರು 5 ಕಿಲೋಮೀಟರ್ ದೂರ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆಹಾರ ಭದ್ರತಾ ಯೋಜನೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ.

ಸರಿ ಸುಮಾರು ಕಾಡ್ಲೂರು ಗ್ ಸುತ್ತಮುತ್ತ ಮುತ್ತಿಗೆ ಚಾಕನಹಳ್ಳಿ ಸೇರಿ 500 ಕ್ಕೂ ಹೆಚ್ಚು ಪಡಿತರ ಚೀಟಿ ಇರುವ ಹಿನ್ನೆಲೆಯಲ್ಲಿ,

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಹಾಗೂ ಗ್ರಾಮಸ್ಥರ ಪರವಾಗಿ ಮಾನ್ಯ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿ “ವಿಶೇಷ ಪ್ರಕರಣ” ಅಡಿಯಲ್ಲಿ ಕಾಡ್ಲೂರು ಕೊಪ್ಪಲ ಗ್ರಾಮಕ್ಕೆ ಹೊಸ ನ್ಯಾಯಬೆಲೆ ಅಂಗಡಿಯನ್ನು ಅಥವಾ ಉಪಕೇಂದ್ರವನ್ನು ಮಂಜೂರು ಮಾಡುವಂತೆ ಆಗ್ರಹಿಸಲಾಗಿದೆ.

ಸರ್ಕಾರ ತಕ್ಷಣ ಕ್ರಮ ಕೈಗೊಂಡು ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಸ್ಥಳ: ಹಾಸನ
ದಿನಾಂಕ: _05/05/2026_

ಅಧ್ಯಕ್ಷರು, ಎಸ್‌ಡಿಪಿಐ
ಕಾಡ್ಲೂರು ಕೊಪ್ಪಲ್ ಗ್ರಾಮ
ಆಲೂರು ತಾಲ್ಲೂಕು, ಹಾಸನ ಜಿಲ್ಲೆ

Address

AZAD Road SAKLESHPUR
Sakleshpur
573134

Website

Alerts

Be the first to know and let us send you an email when SDPI Sakleshpur posts news and promotions. Your email address will not be used for any other purpose, and you can unsubscribe at any time.

Share