SDPI Haveri

SDPI Haveri SDPI Haveri District Official Page
Politics For a Cause, Not For Career

SDPI ಹಾವೇರಿ ಜಿಲ್ಲಾ ಸಮಿತಿಯ ಸಾಮಾನ್ಯ ಸಭೆಯು ಜಿಲ್ಲಾಧ್ಯಕ್ಷರಾದ ಜಿಲಾನಿ ಮೇದೂರು ರವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಅಪ್ಸರ್ ಕೆ...
15/02/2026

SDPI ಹಾವೇರಿ ಜಿಲ್ಲಾ ಸಮಿತಿಯ ಸಾಮಾನ್ಯ ಸಭೆಯು ಜಿಲ್ಲಾಧ್ಯಕ್ಷರಾದ ಜಿಲಾನಿ ಮೇದೂರು ರವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಅಪ್ಸರ್ ಕೆ. ಆರ್.ನಗರ ರವರ ಉಪಸ್ಥಿತಿಯಲ್ಲಿ, ಪಕ್ಷದ ಜಿಲ್ಲಾ ಕಛೇರಿಯಲ್ಲಿ ಜರುಗಿತು.

ಸದರಿ ಸಭೆಯಲ್ಲಿ, SIR ಪ್ರಕ್ರಿಯೆಯ ಪ್ರಥಮ ಹಂತದ ಮ್ಯಾಪಿಂಗ್, ಅದರ ಪರಿಣಾಮಗಳು ಹಾಗೂ ಮುಂದಿನ ಎನ್ಯೂಮರೇಷನ್ ಹಂತದ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಲಾಯಿತು.

ಮುಂಬರಲಿರುವ ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವಂತಹ ಸ್ಥಳೀಯ ಸಂಸ್ಥೆ ಚುನಾವಣೆಗಳ ಬಗ್ಗೆ ಚರ್ಚೆ ನಡೆದು, ರಾಣೇಬೆನ್ನೂರು ನಗರ ಸಭೆ ಹಾಗೂ ವಿವಿಧ ಪಂಚಾಯತಿಗಳು ಸೇರಿದಂತೆ ವಿವಿಧ ವಾರ್ಡುಗಳಲ್ಲಿ ಸ್ಪರ್ಧಿಸಲು ಹಾಗೂ ಚುನಾವಣಾ ಪೂರ್ವ ತಯಾರಿ ನಡೆಸಲು ತೀರ್ಮಾನಿಸಲಾಯಿತು.

ಈ ಮಹತ್ವದ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಖಾಸೀಮ್ ರಬ್ಬಾನಿ, ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಮತ್ತು ಯಾಸಿರ್ ಇರ್ಷಾದ್, ಕಾರ್ಯದರ್ಶಿ ಸದಾಂ ಅಕ್ಕಿಆಲೂರು, ಮತ್ತು ವಿಮೆನ್ ಇಂಡಿಯಾ ಮೂವ್ಮೆಂಟ್ ನ ಜಿಲ್ಲಾ ಅಧ್ಯಕ್ಷೆ ಶಾಹ್ತಾಜ್ ಬೆಗ್ಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಫಿಯಾ ದಾರೋಗರ್ ವಿವಿಧ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಜಿಲ್ಲಾ ಸಮಿತಿಯ ಸರ್ವ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಹಾವೇರಿ ಜಿಲ್ಲೆ ವಿಮೆನ್ ಇಂಡಿಯಾ ಮೂವ್ಮೆಂಟ್ ನ ಜಿಲ್ಲಾಧ್ಯಕ್ಷರಾಗಿ ಶಹ್ತಾಜ್ ಬೀ ಆಯ್ಕೆ.ಎಸ್ಡಿಪಿಐ ಪಕ್ಷದ ಮಹಿಳಾ ಘಟಕವಾದ ವಿಮೆನ್ ಇಂಡಿಯಾ ಮೂವ್...
10/02/2026

ಹಾವೇರಿ ಜಿಲ್ಲೆ ವಿಮೆನ್ ಇಂಡಿಯಾ ಮೂವ್ಮೆಂಟ್ ನ ಜಿಲ್ಲಾಧ್ಯಕ್ಷರಾಗಿ ಶಹ್ತಾಜ್ ಬೀ ಆಯ್ಕೆ.

ಎಸ್ಡಿಪಿಐ ಪಕ್ಷದ ಮಹಿಳಾ ಘಟಕವಾದ ವಿಮೆನ್ ಇಂಡಿಯಾ ಮೂವ್ಮೆಂಟ್ ನ ಜಿಲ್ಲಾ ಪ್ರತಿನಿಧಿ ಸಭೆಯು ರಾಣೆಬೆನ್ನೂರಿನ ಖ್ವಾಜಾ ಬಂದಾ ನವಾಜ್ ಹಾಲ್ ನಲ್ಲಿ ನಡೆಯಿತು.

ನೂತನ ಜಿಲ್ಲಾಧ್ಯಕ್ಷೆಯಾಗಿ ಶಹ್ತಾಜ್ ಬೀ, ಜಿಲ್ಲಾ ಉಪಾಧ್ಯಕ್ಷೆಯಾಗಿ ಫಾತಿಮಾ ಗುಬ್ಬಿ,
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಆಫಿಯಾ ದಾರೋಗರ್,
ಜಿಲ್ಲಾ ಕಾರ್ಯದರ್ಶಿಗಳಾಗಿ ರೆಹಾನ ಬಾನು ದೊಡ್ಡ ಗುಬ್ಬಿ,
ಕೋಶಾಧಿಕಾರಿಯಾಗಿ ರುಖೈಯ ರಾಣೇಬೆನ್ನೂರು,
ಸಮಿತಿ ಸದಸ್ಯರುಗಳಾಗಿ ಸಮೀನಾ ಖಾನಂ, ಶಾಝಿಯಾ ಶೇಕ್ ಶೇಕ್ ಸಣದಿ, ರುಖೈಯ ಮಾಸೂರ್ ಹಾಗೂ ಝೋಯಾ ಖತೀಬ್ ರವರು ಆಯ್ಕೆಯಾಗಿರುತ್ತಾರೆ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾವೇರಿ ಜಿಲ್ಲಾಧ್ಯಕ್ಷ ಜಿಲಾನಿ ಮೇದೂರ ಪ್ರಸಕ್ತ ಮಹಿಳೆಯರಲ್ಲಿ ರಾಜಕೀಯದ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ನೀಡಿದರು. ಸಭೆಯನ್ನು ನಡೆಸಿಕೊಡಲು ವಿಮೆನ್ ಇಂಡಿಯಾ ಮೂವ್ಮೆಂಟ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ *ನಸ್ರಿಯಾ ಬೆಳ್ಳಾರೆ* ಹಾಗೂ ರಾಜ್ಯ ಸಮಿತಿ ಸದಸ್ಯರಾದ *ನಾಜಿಯ ಕಾಪು* ರವರು ಆಗಮಿಸಿದ್ದರು. ಎಸ್ ಡಿ ಪಿ ಐ ಹಾವೇರಿ ಜಿಲ್ಲಾ ಉಪಾಧ್ಯಕ್ಷ ಖಾಸಿಂ ರಬ್ಬಾನಿ ಪ್ರಸ್ತಾವಿಕವಾಗಿ ಮಾತನಾಡಿ ಮಹಿಳೆಯರು ಸಹ ಚುನಾವಣೆಯಲ್ಲಿ ಸ್ಪರ್ಧಿಸಿ ಉನ್ನತ ಮಟ್ಟಕ್ಕೇರಬೇಕೆಂದರು. ಹಾಗೂ ನೂತನವಾಗಿ ಆಯ್ಕೆಯಾದ ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಫಿಯಾ ದಾರೋಗರ್ ಧನ್ಯವಾದಗೈದರು.

01/01/2026
01/01/2026

ಮಾನ್ಯ Chief Minister of Karnataka Siddaramaiah ನವರೇ, ಕೋಗಿಲು ಸಂತ್ರಸ್ತರ ವಿಚಾರದಲ್ಲಿ, ಈ ರೀತಿ ಸುಳ್ಳು ಹರಡುವ, ದ್ವೇಷ ಬಿತ್ತುವ ಮಾಧ್ಯಮ ಮತ್ತು ಬಿಜೆಪಿ ನಾಯಕರ ಮೇಲೆ ಕ್ರಮ ಕೈಗೊಳ್ಳಬೇಕು.

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು SDPI, ಕರ್ನಾಟಕ

01/01/2026
01/01/2026

Urdu Newspaper Coverage of SDPI Protest Against the Eviction of People in Kogilu Layout, Bengaluru

01/01/2026

ಬೆಂಗಳೂರಿನ ಫಕೀರ್ ಕಾಲೋನಿಯ ಬಡವರ ಮನೆಗಳಿಗೆ ಬುಲ್ಲೋಜರ್! ಇನ್ಫೋಸಿಸ್ ನಿಂದ KIADB ಭೂಮಿ ರಿಯಲ್ ಎಸ್ಟೇಟ್‌ಗೆ ಮಾರಾಟ ಸರ್ಕಾರ ಮೌನ!

ಬಡವರ ಕಣ್ಣಿಗೆ ಸುಣ್ಣ, ಕಾರ್ಪೊರೇಟ್ ಕಣ್ಣಿಗೆ ಬೆಣ್ಣೆ

53.5 ಎಕರೆ ಭೂಮಿ ದುರುಪಯೋಗ ಪಡಿಸಿಕೊಂಡ ಇನ್ಫೋಸಿಸ್ ವಿರುದ್ಧ ಏನು ಕ್ರಮ..?

~ಅಬ್ದುಲ್ ಮಜೀದ್,
(ರಾಜ್ಯಾಧ್ಯಕ್ಷರು, SDPI ಕರ್ನಾಟಕ)

01/01/2026

ಮಾನ್ಯ ಮುಖ್ಯಮಂತ್ರಿಗಳೇ ಕೇವಲ ರಾಜಕೀಯ ಹೇಳಿಕೆ ಸಾಲದು, ಅಧಿಕೃತ ಆದೇಶ ಪತ್ರ ಹೊರಡಿಸಿ.

ಇವತ್ತಿನ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ಮುಟ್ಟಿದೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನಿರಾಶ್ರಿತರಿಗೆ ಪರ್ಯಾಯ ಜಾಗ ಕಲ್ಪಿಸುವ ಭರವಸೆಯನ್ನು ನೀಡಿದ್ದಾರೆ. ಆದರೆ ಭರವಸೆ ಸಾಕಾಗದು, ಕಾರ್ಯರೂಪ ಬೇಕು. ಇವತ್ತಿನ ನಮ್ಮ ಹೋರಾಟ, ಪ್ರತಿಭಟನೆ ಮತ್ತು ಜನಪರ ಒತ್ತಡದ ಪರಿಣಾಮವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಗಿಲು ಬಡಾವಣೆಯ ಧ್ವಂಸದಿಂದ ನಿರಾಶ್ರಿತರಾದ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ. ಆದರೆ, ಇದು ಕೇವಲ ಹೇಳಿಕೆಯಾಗಿ ಉಳಿಯದೇ ಕಾರ್ಯರೂಪಕ್ಕೆ ಬರಲೇಬೇಕು. ಭರವಸೆಗಳ ಮೇಲೆ ಬದುಕು ಕಟ್ಟಲಾಗುವುದಿಲ್ಲ.

ಜನರಿಗೆ ಬೇಕಾಗಿರುವುದು ತಕ್ಷಣದ ಪರಿಹಾರ, ಪುನರ್ವಸತಿ ಮತ್ತು ಶಾಶ್ವತ ಮನೆಗಳು. ಮುಖ್ಯಮಂತ್ರಿಗಳ ಭರವಸೆಯನ್ನು ಸ್ವಾಗತಿಸುತ್ತೇವೆ. ಆದರೆ ಒತ್ತಡ ಇಲ್ಲದೆ ನ್ಯಾಯ ಸಿಗುವುದಿಲ್ಲ ಎಂಬುದನ್ನು ಅನುಭವ ನಮಗೆ ಕಲಿಸಿದೆ. ಆದ್ದರಿಂದ, ಈ ಭರವಸೆ ಕಾರ್ಯರೂಪಕ್ಕೆ ಬರಬೇಕೆಂದು ಆಗ್ರಹಿಸಿ ಬುಲ್ಲೋಜರ್ ಸರ್ವಾಧಿಕಾರ ರಾಜಕೀಯ ಧೋರಣೆಯನ್ನು ಖಂಡಿಸಿ ನಾಳೆ ಎಸ್‌ಡಿಪಿಐ ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.

01/01/2026

The Social Democratic Party of India (SDPI) will hold its 6th National Representative Council in Mangaluru on January 20 and 21, 2026. As part of the preparations for this important national-level event, the official logo was formally unveiled today at the party’s national headquarters in New Delhi.

The logo was launched by SDPI National Vice President, Advocate Sharafuddin, in the presence of National General Secretary Mohammed Ashraf, National Secretary Riyaz Farangipete, and National Secretariat member Ya Moideen.

Address

Near Khila Majid
Ranebennur

Alerts

Be the first to know and let us send you an email when SDPI Haveri posts news and promotions. Your email address will not be used for any other purpose, and you can unsubscribe at any time.

Contact The Organization

Send a message to SDPI Haveri:

Share