15/08/2026
ಇಂದು ಆಗಸ್ಟ್ ೧೫ (15) — ಭಾರತದ ಅತ್ಯಂತ ಪವಿತ್ರ ಹಾಗೂ ಹೆಮ್ಮೆಯ #ರಾಷ್ಟ್ರೀಯ_ಹಬ್ಬವಾದ ೮೦ನೇ #ಸ್ವಾತಂತ್ರ್ಯ_ದಿನಾಚರಣೆ ಶುಭಾಶಯಗಳು
🔸ಇತಿಹಾಸ: ೧೯೪೭ರ ಆಗಸ್ಟ್ ೧೫ ರಂದು ಭಾರತವು ಬ್ರಿಟಿಷರ ಆಡಳಿತದಿಂದ ಮುಕ್ತಿ ಪಡೆದು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು.
🔸 ಸಂಪ್ರದಾಯ: ನವದೆಹಲಿಯ ಕೆಂಪು ಕೋಟೆಯ ಮೇಲೆ ದೇಶದ ಪ್ರಧಾನಮಂತ್ರಿಯವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರವನ್ನುದ್ದೇಶಿಸಿ ಸಂದೇಶ ನೀಡುತ್ತಾರೆ.
🔸 ವಿಶೇಷತೆ: ಈ ಬಾರಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕ್ರಾಂತಿಕಾರಿ ಕಹಳೆ ನೀಡಿದ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಗೀತೆಗೆ ೧೫೦ ವರ್ಷಗಳು ತುಂಬಿದ ಸಂಭ್ರಮವೂ ಸೇರಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಲಕ್ಷಾಂತರ ಮಹನೀಯರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸುವ ಅತ್ಯಂತ ಗಂಭೀರ ಹಾಗೂ ಸಂಭ್ರಮದ ದಿನ ಇದಾಗಿದೆ.
#ಸ್ವಾತಂತ್ರ್ಯ
#ಭಾರತ್ #ಇಂಡಿಯಾ #ತ್ಯಾಗಬಲಿಧಾನ
#ಹೋರಾಟ #ಕೆಂಪುಕೋಟೆ
#ಬೆಳಗಾವಿ #ಕರ್ನಾಟಕ #ಭಾರತ