CPIM Mulbagal

CPIM Mulbagal Official page of the Communist Party of India (Marxist) in MULBAGAL

15/05/2026

Communist Village: ಈಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕೇರಳದಲ್ಲಿ ಅಧಿಕಾರ ಕಳೆದುಕೊಳ್ಳುವ ಮೂಲಕ, 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶ 'ಎಡರಂಗ ಮುಕ್ತ'ವಾಯಿತು. ಇದೇ ಹೊತ್ತಿನಲ್ಲಿ, ತಮಿಳುನಾಡಿನ ಪುಟ್ಟ ಹಳ್ಳಿಯೊಂದು ಕಣ ಕಣದಲ್ಲಿ ಕಮ್ಯುನಿಸ್ಟ್ ಸಿದ್ಧಾಂತವನ್ನು ಉಸಿರಾಡುತ್ತಿದೆ.

https://www.prajavani.net/news/india-news/tamil-nadu-communist-village-vannivelampatti-a-special-story-3985861

12/05/2026

ಕಾರ್ಮಿಕ ಸಂಹಿತೆ ನಿಯಮಗಳ ಜಾರಿ ಮಾಡದಿರಲು ಸಿಐಟಿಯು ಒತ್ತಾಯ,

ಕೋಲಾರ: ಕೇಂದ್ರ ಸರ್ಕಾರ ಪ್ರಕಟಿಸಿದ್ದ 4 ಕಾರ್ಮಿಕ ಸಂಹಿತೆಗಳ ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಘಟನೆಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಗಣಿಸದೆ, ಅಂತಿಮ ನಿಯಮಾವಳಿಗಳನ್ನು ಪ್ರಕಟಿಸಿ ನಾಲ್ಕು ಸಂಹಿತೆಗಳನ್ನು ಅನುಷ್ಠಾನಕ್ಕೆ ತರಲಾಗಿರುವುದನ್ನು ಕೂಡಲೇ ವಾಪಸು ಪಡೆಯಬೇಕೆಂದು ಸಿಐಟಿಯು ನೇತೃತ್ವದಲ್ಲಿ ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು

ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಿ.ಎನ್ ಮಂಜುನಾಥ್ ಮಾತನಾಡಿ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿಗಳನ್ನು ರೂಪಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು. ಈ ಸಂಹಿತೆಗಳಿಗೆ ಕೇಂದ್ರ ಸರ್ಕಾರವು ನಿಯಮಾವಳಿಗಳನ್ನು ಅಂತಿಮ ಪ್ರಕಟನೆ ಮಾಡದಿದ್ದ ಕಾರಣ ಈ ಸಂಹಿತೆಗಳು ಜಾರಿಗೆ ಬರಲಿಲ್ಲ. ಈಗ ಐದು ರಾಜ್ಯಗಳ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದೆ. ಅಸ್ಸಾಂ ಹಾಗು ಪಶ್ಚಿಮ ಬಂಗಾಳದಲ್ಲಿನ ಗೆಲುವು ನೀಡಿರುವ ಅಹಂಕಾರದೊಂದಿಗೆ ಈ ಕಪಟ ಹಾಗು ವಂಚನೆಯನ್ನು ಕೇಂದ್ರ ಸರ್ಕಾರ ದೇಶದ ಕಾರ್ಮಿಕ ವರ್ಗದ ವಿರುದ್ಧ ಮಾಡಿದೆ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿ
2019ರಲ್ಲಿ ವೇತನ ಸಂಹಿತೆ, 2020ರಲ್ಲಿ ಕೈಗಾರಿಕಾ ಸಂಬಂಧ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಸ್ಥಿತಿಗತಿ ಸಂಹಿತೆಗಳನ್ನು ಲೋಕಸಭೆಯಲ್ಲಿ ಯಾವುದೇ ಚರ್ಚೆ ನಡೆಸದೇ ಏಕಪಕ್ಷೀಯವಾಗಿ ಅನುಮೋದನೆಗೊಂಡಿತು. ಈ ಸಂದರ್ಭದಲ್ಲಿ ದೇಶದ ಕಾರ್ಮಿಕ ವರ್ಗವು ನಿರಂತರವಾಗಿ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದರು. ದೇಶದ ದುಡಿಯುವ ಜನರ ಅಭಿಪ್ರಾಯಗಳನ್ನು ತಿರಸ್ಕರಿಸಿ, ವಿದೇಶಿ ಹಾಗು ಸ್ವದೇಶಿ ಕಾರ್ಪೊರೇಟ್ ಬಂಡವಾಳಿಗರ ಅನುಕೂಲಕ್ಕಾಗಿ ಈ ನಾಲ್ಕು ಸಂಹಿತೆಗಳನ್ನು ಜಾರಿಗೆ ತರಲಾಗಿದೆ ಎಂದರು

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ ಮಾತನಾಡಿ ಹಲವಾರು ದಶಕಗಳಿಂದ ಸಮರಧೀರ ಹೋರಾಟಗಳ ಮೂಲಕ ಗಳಿಸಲಾದ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಹಾಗು ಸವಲತ್ತುಗಳನ್ನು ನಾಶ ಮಾಡುವ ಕ್ರಮವಾಗಿದೆ. ಬಂಡವಾಳಿಗರು ಮಾಡುತ್ತಿದ್ದ ಎಲ್ಲಾ ಕಾನೂನು ಉಲ್ಲಂಘನೆಗಳನ್ನು ಕಾನೂನು ಬದ್ಧಗೊಳಿಸುವುದಲ್ಲದೆ, ಖಾಯಂ ಉದ್ಯೋಗದ ಅವಕಾಶಗಳೇ ಭಾರತೀಯ ಯುವ ಪೀಳಿಗೆಗಳಿಗೆ ಇಲ್ಲದಂತೆ ಮಾಡುವ ಕ್ರಮವಾಗಿದೆ. ನವ ಗುಲಾಮಗಿರಿಗೆ ಹಾಲಿ ಹಾಗು ಭಾವಿ ಕಾರ್ಮಿರನ್ನು ಒಳಪಡಿಸುವ ಕುತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಸಿಐಟಿಯು ಜಿಲ್ಲಾ ಖಜಾಂಚಿ ಹೆಚ್.ಬಿ ಕೃಷ್ಣಪ್ಪ ಮಾತನಾಡಿ ಸಂಘಟನೆಯು ಈ ಸಂಹಿತೆಗಳನ್ನು ಕಾರ್ಮಿಕರ ಜೀವನ ಮತ್ತು ಜೀವನೋಪಾಯಗಳ ಮೇಲಿನ ನರಮೇಧದ ದಾಳಿಗಳೆಂದು ಪರಿಗಣಿಸುತ್ತವೆ". ಈ ಸಂಹಿತೆಗಳು ಕಾರ್ಮಿಕರ ಮೇಲೆ ಗುಲಾಮಗಿರಿಯನ್ನು ಹೇರುವುದು ಮಾತ್ರವಲ್ಲದೇ, ಕಾರ್ಮಿಕರ ಪ್ರತಿಯೊಂದು ಹಕ್ಕು ಹಾಗು ಪ್ರತಿಭಟಿಸುವ ಅವಕಾಶಗಳನ್ನು ಕಸಿದುಕೊಳ್ಳುತ್ತವೆ. ನಮ್ಮ ದೇಶದ ಮುಂದಿನ ತಲೆಮಾರುಗಳ ಸಮಸ್ತ ಭರವಸೆ, ನಂಬಿಕೆ ಮತ್ತು ಆಕಾಂಕ್ಷೆಗಳನ್ನು ನಂದಿಸಿಬಿಡುತ್ತವೆ" ಎಂದು ಟೀಕಿಸುತ್ತದೆ. ಆದ್ದರಿಂದ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡುವುದನ್ನು ವಾಪಸು ಪಡೆಯಬೇಕೆಂದು ಆಗ್ರಹಿಸಿದರು

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಗಾಂಧಿನಗರ ನಾರಾಯಣಸ್ವಾಮಿ, ಎ.ಆರ್.ಬಾಬು, ಕಾರ್ಯದರ್ಶಿಗಳಾದ ಎಂ.ಭೀಮರಾಜ್, ವೀರಭದ್ರ, ಶಿವಾನಂದ್, ಕಲ್ಪನಾ, ಅಮರನಾರಾಯಣ, ಕೇಶವರಾವ್, ವಿ.ಮಂಜುಳ, ಲೋಕೇಶ್ವರಿ, ರಾಜಮ್ಮ, ಶಿವರಾಜ್ ಮತ್ತಿತರರು ಭಾಗವಹಿಸಿದ್ದರು

 #ತಾಯಂದಿರ_ದಿನದ_ಶುಭಾಶಯಗಳುಸಮಾಜದ ಕಣ್ಣು ಮತ್ತು ಪ್ರತಿ ಹೋರಾಟದ ಸ್ಫೂರ್ತಿಯಾಗಿರುವ ತಾಯಂದಿರು ನಿಜವಾದ ಶ್ರಮಜೀವಿಗಳು. ತನ್ನ ನಿಸ್ವಾರ್ಥ ಸೇವೆಯ...
10/05/2026

#ತಾಯಂದಿರ_ದಿನದ_ಶುಭಾಶಯಗಳು

ಸಮಾಜದ ಕಣ್ಣು ಮತ್ತು ಪ್ರತಿ ಹೋರಾಟದ ಸ್ಫೂರ್ತಿಯಾಗಿರುವ ತಾಯಂದಿರು ನಿಜವಾದ ಶ್ರಮಜೀವಿಗಳು. ತನ್ನ ನಿಸ್ವಾರ್ಥ ಸೇವೆಯಿಂದ ಕುಟುಂಬವನ್ನು ಸಲಹುತ್ತಾ, ಸಮಾಜದ ಏಳಿಗೆಗೆ ಪೂರಕವಾಗಿ ನಿಲ್ಲುವ ತಾಯಂದಿರ ಗೌರವಾರ್ಥವಾಗಿ CPIM ಮುಳಬಾಗಿಲು ತಾಲ್ಲೂಕು ಸಮಿತಿಯು ಸಮಸ್ತ ತಾಯಂದಿರಿಗೂ 'ತಾಯಂದಿರ ದಿನ'ದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ. ಶೋಷಣೆಮುಕ್ತ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುವ ಮತ್ತು ಕಷ್ಟಕಾಲದಲ್ಲಿ ಧೈರ್ಯ ತುಂಬುವ ಪ್ರತಿಯೊಬ್ಬ ತಾಯಿಯ ಶಕ್ತಿಯು ನಮಗೆ ಎಂದೆಂದಿಗೂ ಮಾದರಿಯಾಗಲಿ
💐✨🙏

ುಳಬಾಗಿಲು_ತಾಲ್ಲೂಕು_ಸಮಿತಿ

#ಸಿಪಿಐಎಂ_ಮುಳಬಾಗಿಲು

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ  #ಜೋಸೆಪ್_ವಿಜಯ್ (ದಳಪತಿ ವಿಜಯ್) ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಬೆಳ್ಳಿತೆರೆ...
10/05/2026

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ #ಜೋಸೆಪ್_ವಿಜಯ್ (ದಳಪತಿ ವಿಜಯ್) ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಬೆಳ್ಳಿತೆರೆಯಿಂದ ಜನಸೇವೆಯತ್ತ ಹೆಜ್ಜೆ ಇಟ್ಟಿರುವ ಅವರ ಈ ಹೊಸ ಪಯಣವು ಯಶಸ್ವಿಯಾಗಲಿ. ರಾಜ್ಯದ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಜನರ ಕಲ್ಯಾಣಕ್ಕಾಗಿ ಅವರು ಕೈಗೊಳ್ಳುವ ನಿರ್ಧಾರಗಳು ತಮಿಳುನಾಡಿನ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಲಿ ಎಂದು ಹಾರೈಸುತ್ತೇವೆ. ಅವರ ನೇತೃತ್ವದಲ್ಲಿ ರಾಜ್ಯವು ಪ್ರಗತಿಯ ಹೊಸ ಎತ್ತರಕ್ಕೆ ಏರಲಿ ಎಂದು ಆಶಿಸುತ್ತಾ, ಜೋಸೆಪ್ ವಿಜಯ್ ರವರಿಗೆ ಶುಭಾಶಯಗಳು 💐🚩✨


#ಸಿಪಿಐಎಂ_ಮುಳಬಾಗಿಲು
#ಮುಳಬಾಗಿಲು

ಕರ್ನಾಟಕ ಪ್ರಾಂತ ರೈತ ಸಂಘದ ಮುಳಬಾಗಿಲು ತಾಲೂಕು ಸಮಿತಿ ಸಭೆಯು ಪುಣ್ಯಹಳ್ಳಿ ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ರೈತರಿಗೆ ಅರಣ್ಯ ಇಲಾಖೆಯವರ...
10/05/2026

ಕರ್ನಾಟಕ ಪ್ರಾಂತ ರೈತ ಸಂಘದ ಮುಳಬಾಗಿಲು ತಾಲೂಕು ಸಮಿತಿ ಸಭೆಯು ಪುಣ್ಯಹಳ್ಳಿ ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ರೈತರಿಗೆ ಅರಣ್ಯ ಇಲಾಖೆಯವರು ನೀಡುತ್ತಿರುವ ಕಿರುಕುಳದ ವಿರುದ್ಧ ಹೋರಾಟ ನಡೆಸಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು. 2025-26ನೇ ಸಾಲಿನ ಸದಸ್ಯತ್ವವನ್ನು ಈ ತಿಂಗಳ 15ರ ಒಳಗೆ ಮಾಡಲು ನಿರ್ಣಯಿಸಲಾಯಿತು. ಈ ಸಭೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಟಿ. ಆರ್. ಸೂರ್ಯನಾರಾಯಣ ಅವರು ಭಾಗವಹಿಸಿದ್ದರು.

#ಸಿಪಿಐಎಂ_ಮುಳಬಾಗಿಲು


🚩 CPIM ಮುಳಬಾಗಿಲು ತಾಲ್ಲೂಕು ಸಮಿತಿ ವತಿಯಿಂದ ಎಲ್ಲಾ ತಾಯಂದಿರಿಗೂ 'ತಾಯಂದಿರ ದಿನ'ದ ಹಾರ್ದಿಕ ಶುಭಾಶಯಗಳು! 🌷 ಪ್ರತಿಯೊಂದು ಮನೆಯ ಬೆಳಕಾಗಿ, ಇಡ...
10/05/2026

🚩 CPIM ಮುಳಬಾಗಿಲು ತಾಲ್ಲೂಕು ಸಮಿತಿ ವತಿಯಿಂದ ಎಲ್ಲಾ ತಾಯಂದಿರಿಗೂ 'ತಾಯಂದಿರ ದಿನ'ದ ಹಾರ್ದಿಕ ಶುಭಾಶಯಗಳು! 🌷 ಪ್ರತಿಯೊಂದು ಮನೆಯ ಬೆಳಕಾಗಿ, ಇಡೀ ಸಮಾಜದ ಬಹುದೊಡ್ಡ ಶಕ್ತಿಯಾಗಿ ನಿಲ್ಲುವ ತಾಯಿಯ ನಿಸ್ವಾರ್ಥ ಪ್ರೀತಿ, ತ್ಯಾಗ ಮತ್ತು ಹೋರಾಟಕ್ಕೆ ನಮ್ಮ ಹೃತ್ಪೂರ್ವಕ ನಮನಗಳು. ಎಲ್ಲಾ ಅಮ್ಮಂದಿರಿಗೂ ಹ್ಯಾಪಿ ಮದರ್ಸ್ ಡೇ! ❤️💐✊

#ಸಿಪಿಐಎಂ_ಮುಳಬಾಗಿಲು

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ನಿಯೋಜಿತ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಟಿವಿಕೆ (ತಮಿಳಗ ವೆಟ್ರಿ ಕಳಗಂ) ...
08/05/2026

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ನಿಯೋಜಿತ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್ ಅವರು ಇಂದು ಚೆನ್ನೈನಲ್ಲಿರುವ CPIM ರಾಜ್ಯ ಸಮಿತಿ ಕಚೇರಿಗೆ ಭೇಟಿ ನೀಡಿದರು. ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ್ತು ಮೈತ್ರಿಗೆ CPIM ನಾಯಕರು ಹಾಗೂ ಕಾರ್ಯಕರ್ತರು ನೀಡಿದ ಬೆಂಬಲ ಮತ್ತು ಸಹಕಾರಕ್ಕಾಗಿ ಅವರು ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಿದರು. ಸಿಪಿಐಎಂನ ಹಿರಿಯ ಮುಖಂಡರೊಂದಿಗೆ ಮಾತುಕತೆ ನಡೆಸಿದ ವಿಜಯ್, ಮುಂಬರುವ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕಾಗಿ ಎಡಪಕ್ಷಗಳ ಸೈದ್ಧಾಂತಿಕ ಮಾರ್ಗದರ್ಶನ ಮತ್ತು ಸಹಕಾರ ಅಗತ್ಯ ಎಂದು ಆಶಯ ವ್ಯಕ್ತಪಡಿಸಿದರು.

#ಸಿಪಿಐಎಂ_ಮುಳಬಾಗಿಲು

 #ಜನ್ಮದಿನದ_ಶುಭಾಶಯಗಳುತತ್ವಜ್ಞಾನಿಗಳು ಜಗತ್ತನ್ನು ವಿವಿಧ ರೀತಿಯಲ್ಲಿ ಅರ್ಥೈಸಿದ್ದಾರೆ; ಆದಾಗ್ಯೂ, ಮುಖ್ಯ ವಿಷಯವೆಂದರೆ ಅದನ್ನು ಬದಲಾಯಿಸುವುದು...
05/05/2026

#ಜನ್ಮದಿನದ_ಶುಭಾಶಯಗಳು
ತತ್ವಜ್ಞಾನಿಗಳು ಜಗತ್ತನ್ನು ವಿವಿಧ ರೀತಿಯಲ್ಲಿ ಅರ್ಥೈಸಿದ್ದಾರೆ; ಆದಾಗ್ಯೂ, ಮುಖ್ಯ ವಿಷಯವೆಂದರೆ ಅದನ್ನು ಬದಲಾಯಿಸುವುದು.
-ಕಾರ್ಲ್ ಮಾರ್ಕ್ಸ್
The philosophers have only interpreted the world, in various ways; the point, however, is to change it.
-Karl Marx

Address

Mulbagal
563131

Website

Alerts

Be the first to know and let us send you an email when CPIM Mulbagal posts news and promotions. Your email address will not be used for any other purpose, and you can unsubscribe at any time.

Share