28/03/2023
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 27ನೇ ಬೋಳೂರು ವಾರ್ಡಿನ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಸ್ಮಶಾನದ ಬಳಿ ಇರುವ ಪಾರ್ಕ್ ಅಭಿವೃದ್ಧಿ ಕಾಮಗಾರಿಗಳಿಗೆ 25 ಲಕ್ಷ ವಿಶೇಷವನ್ನು ಒದಗಿಸಿದೆ.
ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಂಗಳೂರು ದಕ್ಷಿಣದ ಶಾಸಕರಾದ ವೇದವ್ಯಾಸ ಕಾಮತ್ ಅವರೊಂದಿಗೆ ಮೂಡದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ರವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಬೋಳೂರು ಮಹಾನಗರ ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ ,ಮಾಜಿ ಮೀನುಗಾರಿಕಾ ನಿಗಮದ ಅಧ್ಯಕ್ಷರು ನಿತಿನ್ ಕುಮಾರ್ , ಜಿಲ್ಲಾ ಹಿಂದುಳಿದ ಮೋರ್ಚದ ಅಧ್ಯಕ್ಷರು ರಘುವೀರ್, ಬೋಳೂರು ಜಾರಂದಾಯ ದೈವಸ್ಥಾನದ ಗೌರವ ಅಧ್ಯಕ್ಷರಾದ ವಿಶ್ವನಾಥ ಕೋಟ್ಯಾನ್, ಅದ್ಯಕ್ಷರಾದ ಶ್ರೀಧರ್ , ಬೋಳೂರು ಮೊಗವೀರ ಮಹಾಸಭಾ ಅಧ್ಯಕ್ಷರು ಯಶವಂತ್ ಮೆಂಡನ್ , ಅಕ್ಷಯ ಯುವಜನ ಸಂಘದ ಅಧ್ಯಕ್ಷ ಯೋಗೀಶ್ ಸಾಲ್ಯಾನ್, ಜಾರಂದಾಯ ದೈವಸ್ಥಾನದ ಪ್ರಮುಖರಾದ ಚಂದ್ರಕಾಂತ್ ,ಬಲರಾಜ್ ಕೋಟ್ಯಾನ್, ರಾಮ , ವೆಂಕಟೇಶ್ ದಾಸ್,ವೀರವಿನಾಯಕ ಜನಸೇವಾ ಟ್ರಸ್ಟ್ ಅಧ್ಯಕ್ಷರು ಕಿಶೋರ್ ಶೆಟ್ಟಿ. ಪ್ರಮುಖರಾದ ರಾಹುಲ್ ಶೆಟ್ಟಿ, ಪದ್ಮನಾಭ ಪುತ್ರನ್ , ಉಮಾಶಂಕರ್ , ದಿನೇಶ್ ಕರ್ಕೇರ , ಸಂದೀಪ್ ಕೋಟ್ಯಾನ್ , ರಾಜೇಶ್ , ಅರುಣ್ ಮೆಂಡನ್ , ಗಣೇಶ್ ನಾಡಾರ್ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.