14/08/2022
"ಒಬ್ಬ ವ್ಯಕ್ತಿಗೆ ಸಹಾಯ ಮಾಡುವುದರಿಂದ ಜಗತ್ತು ಬದಲಾಗದೇ ಇರಬಹುದು, ಆದರೆ ಒಂದು ಸಹಾಯವು ಒಬ್ಬ ವ್ಯಕ್ತಿಯ ಜಗತ್ತನ್ನೇ ಬದಲಾಯಿಸಬಹುದು."
ರಾಷ್ಟ್ರೀಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳಡಿ ವಿವಿಧ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಿರುವ ವ್ಯಕ್ತಿಗಳಿಗೆ ಪಿಂಚಣಿ ಒದಗಿಸಲು ಉದ್ದೇಶವಿದ್ದಲ್ಲಿ ಈ ಕೆಳಗಿನ ಲಿಂಕ್ ನಲ್ಲಿರುವ ಮಾರ್ಗಸೂಚಿಯಂತೆ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಒದಗಿಸಲು ಸಹಾಯ ಮಾಡಲು ಈ ವೇದಿಕೆ ಬಳಸಿಕೊಳ್ಳಲು ಕೋರಿದೆ. ಪಿಂಚಣಿ ಮಂಜೂರಿ ಆಗಿ ಆಧಾರ್ ಲಿಂಕ್ ಆಗದ ಕಾರಣ ಪಿಂಚಣಿ ನಿಂತು ಹೋಗಿದ್ದರೆ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ ತೆರೆಸುವ ಬಗ್ಗೆ ಸಂಬಂಧಪಟ್ಟವರಿಗೆ ಮಾರ್ಗದರ್ಶನ ನೀಡಿ ಪಿಂಚಣಿ ಪಡೆಯುವಲ್ಲಿ ಸಹಾಯಮಾಡಿ.
ಹೊಸದಾಗಿ ಪಿಂಚಣಿಯನ್ನು ಪಡೆಯಲು ಅರ್ಹರಿದ್ದು ಈ ಬಗ್ಗೆ ಅರ್ಜಿ ಸಲ್ಲಿಸದೆ ಇದ್ದಲ್ಲಿ ಅಂತಹವರಿಂದ ಶುಲ್ಕರಹಿತ ಸಂಖ್ಯೆ 155245 ಗೆ ಕರೆ ಮಾಡಿಸಿ "ಹಲೋ ಕಂದಾಯ ಸಚಿವರೇ" ಯೋಜನೆಯ ಮೂಲಕ ಕೇವಲ 72 ಗಂಟೆಯೊಳಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರ ಪಡೆದುಕೊಳ್ಳಲು ಪ್ರೇರೇಪಿಸಲು ಕೋರಿದೆ. ವಿವಿಧ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಜಿದಾರರಿಗೆ ಇರಬೇಕಾದ ಅರ್ಹತೆ ಹಾಗೂ ಅಗತ್ಯ ದಾಖಲೆಗಳನ್ನು ಈ ಕೆಳಗಿನ ಲಿಂಕ್ ಮುಖಾಂತರ ತಿಳಿದುಕೊಳ್ಳುವುದು.
https://drive.google.com/file/d/1EaPBRYGfbaRNDKnGmKlX9gjWHJxQbM4z/view?usp=sharing
ಡಿಸಿ ಮಿತ್ರ ಸಮಾಜಕ್ಕೆ ನೇತ್ರ.
#ಡಿಸಿಮಿತ್ರ #ಉತ್ತರಕನ್ನಡ #ಕರ್ನಾಟಕ