Anjuman Khidmath e Islam Hospet

Anjuman Khidmath e Islam Hospet In this page you will get the information about the Muslim's of hospet and news about Anjuman khidmath-e-Islam committee.

ಆತ್ಮೀಯರೇಇಂದು ದಿನಾಂಕ *31/08/2023* ರಂದು ವಿಜಯನಗರ ಜಿಲ್ಲೆ ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ  ವತಿಯಿಂದ ಉಚಿತವಾಗಿ ಮೂರು ತಿಂಗಳು...
31/08/2023

ಆತ್ಮೀಯರೇ

ಇಂದು ದಿನಾಂಕ *31/08/2023* ರಂದು ವಿಜಯನಗರ ಜಿಲ್ಲೆ ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ವತಿಯಿಂದ ಉಚಿತವಾಗಿ ಮೂರು ತಿಂಗಳು ಅಂಜುಮನ್ *ಕಂಪ್ಯೂಟರ್ ಇನ್ಸಿಟೂಟ್* ಸ್ಥಾಪಿಸಲಾಯಿತು.

ಈ ನಿಟ್ಟಿನಲ್ಲಿ ಮೂರು ತಿಂಗಳು ಅಂಜುಮನ್ ಕಂಪ್ಯೂಟರ್ ಇನ್ಸಿಟೂಟ್ ನಲ್ಲಿ ಸುಮಾರು *200 ಕ್ಕಿಂತ ಹೆಚ್ಚು* ವಿದ್ಯಾರ್ಥಿಗಳು ಸದುಪಯೋಗ ಪಡೆದು ಕೊಂಡರು ಈ ನಿಟ್ಟಿನಲ್ಲಿ ಇಂದು ಅಂಜುಮನ್ ಶಾದಿ ಮಹಾಲಿನಲ್ಲಿ ಪರೀಕ್ಷೆಯನ್ನು ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷರಾದ ಜನಾಬ್ *ಹೆಚ್ ಎನ್ ಎಫ್ ಇಮಮ್ ನಿಯಾಜಿ* ಹಾಗೂ ಉಪಾಧ್ಯಕ್ಷರಾದ *ಎಂ.ಎಂ ಫೈರೋಜ್ ಖಾನ್ ಸಾಬ್*, ಹಾಗೂ ಕಮಿಟಿಯ ಕಾರ್ಯದರ್ಶಿಯಾದ *ಆಫೀಜ್ ಅಬೂಬಕ್ಕರ್ ಅಶ್ರಫಿ*, ಕಮಿಟಿಯ ಸದಸ್ಯರು ಹಾಗೂ ಶಿಕ್ಷಣ ಸಮಿತಿಯ ಅಧ್ಯಕ್ಷರಾದ *ಸದ್ದಾಂ ಹುಸೇನ್*. ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಇಂದು ದಿನಾಂಕ 29/08/2023 ರಂದು ವಿಜಯನಗರ ಜಿಲ್ಲೆ ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ *ಹೆಚ್ ಎನ್ ಎಫ್ ಇಮಾಮ್ ನಿಯಾಜಿ*...
30/08/2023

ಇಂದು ದಿನಾಂಕ 29/08/2023 ರಂದು ವಿಜಯನಗರ ಜಿಲ್ಲೆ ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ *ಹೆಚ್ ಎನ್ ಎಫ್ ಇಮಾಮ್ ನಿಯಾಜಿ* ರವರು ಹಾಗೂ ಕಮಿಟಿಯ ಕಾರ್ಯದರ್ಶಿಯಾದ *ಅಬೂಬಕ್ಕರ್ ಅಶ್ರಫಿ* ರವರು ಸೇರಿ ಅಂಜುಮನ್ ಶಾದಿ ಹಾಲ್ ಆವರಣದಲ್ಲಿ ನಡೆಯುತ್ತಿರುವ ಕೆಲಸಗಳನ್ನು ಪರಿಶೀಲಿಸಿದರು.

ಇಂದು ಹೊಸಪೇಯ ಅಂಜುಮನ್ ಖಿದ್ಮತೆ ಇಸ್ಲಾಂ (ರಿ) ಕಮಿಟಿ ವತಿಯಿಂದ 76 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು ಇದೇ ಸಂಧರ್ಭದಲ್ಲಿ ಅಂಜುಮನ್ ...
15/08/2023

ಇಂದು ಹೊಸಪೇಯ ಅಂಜುಮನ್ ಖಿದ್ಮತೆ ಇಸ್ಲಾಂ (ರಿ) ಕಮಿಟಿ ವತಿಯಿಂದ 76 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು ಇದೇ ಸಂಧರ್ಭದಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ ಹೆಚ್.ಎನ್.ಎಫ್.ಇಮಾಮ್ ನಿಯಾಜಿ ಅವರು ಧ್ವಜಾರೋಹಣ ನೇರವರಿಸಿದರು ಹಾಗೂ ಕಾರ್ಯದರ್ಶಿಯಾದ ಅಬೂಬಕ್ಕರ್ ಅಫೀಸಾಬ್.ಜಂಟಿ ಕಾರ್ಯದರ್ಶಿಯಾದ ಡಾ.ದುರ್ವೇಶ್ ಮೈನುದ್ದೀನ್ ಹಾಗೂ ಸದ್ಯಸರುಗಳಾದ ಸದ್ದಮ್ ಹುಸೇನ್.ಮೊಹಮ್ಮದ್ ಮೋಸಿನ್.ಮನ್ಸೂರ್. ಅವರು ಹಾಗೂ ಸಮಾಜದ ಹಿರಿಯರು ಹಾಗೂ ವಿದ್ಯಾರ್ಥಿಗಳು ಹಾಗೂ ಮಕ್ಕಳು ಭಾಗವಹಿಸಿದ್ದರು

*ಅಂಜುಮನ್ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭ.* ಇಂದು ದಿನಾಂಕ *02/06/2023* ರಂದು ಹೊಸಪೇಟೆ ನಗರದ ಅಂಜುಮನ್ ಶಾದಿಮಹಲ್ ಕಛೇರಿ ಆವರಣದಲ್ಲಿ ಸ್ಥಳ...
02/06/2023

*ಅಂಜುಮನ್ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭ.*

ಇಂದು ದಿನಾಂಕ *02/06/2023* ರಂದು ಹೊಸಪೇಟೆ ನಗರದ ಅಂಜುಮನ್ ಶಾದಿಮಹಲ್ ಕಛೇರಿ ಆವರಣದಲ್ಲಿ ಸ್ಥಳೀಯ *ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ವತಿಯಿಂದ ಅಂಜುಮನ್ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭದ ಉಧ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.*

ಅಂಜುಮನ್ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರ ವನ್ನು ದಾನಿಗಳು, ಸಮಾಜಸೇವಕರು ಹಾಗು ಪ್ರಿಯದರ್ಶಿನಿ ಹೋಟೆಲ್ ಮಾಲೀಕರಾದ *ಶ್ರೀನಿವಾಸ್ ರಾವ್* ರವರು ಉಧ್ಘಾಟಿಸಿ ಮಾತನಾಡಿ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ಯಾವುದಕ್ಕೂ ಪ್ರಯೋಜನಕ್ಕೆ ಬಾರದಂತಾಗಲಿದೆ ಎನ್ನುವ ಮಾತಿದೆ. ಹೀಗಾಗಿ ಗ್ರಾಮೀಣ ಹಾಗು ನಗರ ಭಾಗದ ಎಲ್ಲಾ ಧರ್ಮ, ಜಾತಿ, ಲಿಂಗ - ಭೇದ ಭಾವವಿಲ್ಲದೇ ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಅಂಜುಮನ್ *ಸಂಸ್ಥೆಯು ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಆರಂಭಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.* ಇಂತಹ ಸಮಾಜಮುಖಿ ಕೆಲಸಗಳಿಗೆ ಎಂದಿಗೂ ನಮ್ಮಿಂದ ಸಹಾಯ ಸಹಕಾರ ಇರುತ್ತದೆ ಎಂದು ಅವರು ಹೇಳಿದರು.

ಉಧ್ಘಾಟನಾ ಕಾರ್ಯಕ್ರಮವನ್ನು ಉಧ್ದೇಶಿಸಿ ಅಂಜುಮನ್ ಕಮಿಟಿಯ ಅಧ್ಯಕ್ಷರಾದ *ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿ* ರವರು ಮಾತನಾಡಿ ಕಮಿಟಿಯು ಈಗಾಗಲೇ ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಹೊಸಪೇಟೆ ಭಾಗದ ಎಸ್. ಎಸ್ .ಎಲ್. ಸಿ ಮುಗಿಸಿದ ಎಲ್ಲಾ ಜಾತಿ ಧರ್ಮಗಳ ಬಡ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ಉಚಿತ ಕಂಪ್ಯೂಟರ್ ತರಬೇತಿ ಕೊಡಿಸಬೇಕೆನ್ನುವ ಮಹದಾಸೆಯು ಸಂಸ್ಥೆಯು ಹೊಂದಿದ್ದು, ಹೀಗಾಗಿ ಬಡ ವಿಧ್ಯಾರ್ಥಿಗಳ ಬದುಕು ರೂಪಿಸುವ ಸಲುವಾಗಿ ಬೇಸಿಕ್ ಕಂಪ್ಯೂಟರ್, ಇಂಗ್ಲೀಷ್ ಮತ್ತು ಕನ್ನಡ ನುಡಿ ಟೈಪಿಂಗ್ , ಎಮ್ ಎಸ್ ವರ್ಡ್ ,ಎಮ್ ಎಸ್ ಎಕ್ಸೆಲ್ , ಇಂತಹ ತರಬೇತಿ ನೀಡಲು ಸಂಸ್ಥೆಯು ಮುಂದಾಗಿದೆ. ಕಮಿಟಿಯು ಕಂಪ್ಯೂಟರ್ ತರಬೇತಿಯನ್ನು ಅಚ್ಚುಕಟ್ಟಾಗಿ ನೀಡುವ ಮೂಲಕ ವಿದ್ಯಾರ್ಥಿಗಳ ಬದುಕು ಬದಲಿಸುವ ಕೆಲಸ ಮಾಡಲಿದೆ. ಹಾಗಾಗಿ ಎಸ್ ಎಸ್ ಎಲ್ ಸಿ ನಂತರದ ಎಲ್ಲಾ ವಿಧ್ಯಾರ್ಥಿಗಳು ತರಬೇತಿಯ ಸದಾವಕಾಶವನ್ನು ಪಡೆದುಕೊಳ್ಳಲು ಕರೆ ನೀಡಿದರು. ಹಾಗೂ ಹಚ್ಚಿನ ಮಾಹಿತಿಗಾಗಿ ಅಂಜುಮನ್ ಕಚೇರಿಗೆ ಸಂಪರ್ಕಸಿಲು ತಿಳಿಸದರು,

ಈ ಕಾರ್ಯಕ್ರಮದಲ್ಲಿ ಸಮಾಜಸೇವಕರು ಹಾಗು ದಾನಿಗಳಾದ ಅತೀಕ್ ಅಹಮದ್ , ರವಿಶಂಕರ್ , ಶಾಹೀದ್ ,ಹೈದರ್ ಅಲಿ, ತನ್ವೀರ್ , ಸತ್ಯನಾರಾಯಣ , ಹಾಗು ಅಂಜುಮನ್ ಕಮಿಟಿಯ
*ಉಪಾಧ್ಯಕ್ಷರಾದ ಎಮ್ ಫಿರೋಜ್ ಖಾನ್, ಕಾರ್ಯದರ್ಶಿಗಳಾದ ಎಮ್.ಡಿ.ಅಬೂಬಕ್ಕರ್, ಖಾಜಾಂಚಿಗಳಾದ ಜಿ. ಅನ್ಸರ್ ಭಾಷ, ಸಹಕಾರ್ಯದರ್ಶಿಗಳಾದ ಡಾ.ಎಮ್.ಡಿ.ದುರ್ವೇಶ್ ಮೈನುದ್ದಿನ್ ಹಾಗು ಸದ್ಯಸರುಗಳಾದ ಕೋತ್ವಾಲ್ ಮೊಹಮ್ಮದ್ ಮೋಸಿನ್ ಅಡ್ವಕೇಟ್ ಸದ್ದಾಮ್ ಹುಸೇನ್, ಎಲ್. ಗುಲಾಮ್ ರಸೂಲ್* ಹಾಗೂ
ಸಮುದಾಯದ ಹಿರಿಯ ಮುಖಂಡರು ಭಾಗವಹಿಸಿದ್ದರು.

22/04/2023
Eidgah cleaning work in progress, work inspecting by President and Anjuman members
04/04/2023

Eidgah cleaning work in progress, work inspecting by President and Anjuman members

Anjuman Computer training classes will be starting soon.
04/04/2023

Anjuman Computer training classes will be starting soon.

ಇಂದು ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ವತಿಯಿಂದ ನಗರದ ಗುಲಾಬ್ ಶಾ ಖಾದ್ರಿ ದರ್ಗಾದಿಂದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿಯ...
28/03/2023

ಇಂದು ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ವತಿಯಿಂದ ನಗರದ ಗುಲಾಬ್ ಶಾ ಖಾದ್ರಿ ದರ್ಗಾದಿಂದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿಯ ವರೆಗೆ ಸಂವಿಧಾನ ಬದ್ದವಾಗಿ ಅಲ್ಪಸಂಖ್ಯಾತರಿಗೆ ನೀಡಿರುವ 4% 2B ಮೀಸಲಾತಿ ರದ್ದುಮಾಡಿರುವ ಬಿ.ಜೆ.ಪಿ. ಸರ್ಕಾರದ ವಿರುದ್ಧಬೃಹತ್ ಪ್ರತಿಭಟನೆ ಮಾಡಲಾಯಿತು ‌ಹಾಗೂ ತಹಸಲ್ದಾರ್ ಅವರಿಗೆ ಮನವಿ ಮಾಡಲಾಯಿತು ಇದೇ ಸಂದರ್ಭದಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ ಹೆಚ್.ಎನ್.ಎಫ್.ಇಮಾಮ್ ನಿಯಾಜಿ ಅವರು ಹಾಗೂ ಖಜಾಂಚಿಯಾದ ಅನ್ಸರ್ ಬೈ ಉಪಾಧ್ಯಕ್ಷರಾದ ಫೈರೋಜ್ ಖಾನ್‌‌ ಕಾರ್ಯದರ್ಶಿಯಾದ ಅಬೂಬಕ್ಕರ್ ಅಫೀಸಾಬ್.ಜಂಟಿಕಾರ್ಯದರ್ಶಿ ಡಾ ದುರ್ವೇಶ್ ಮೈನುದ್ದೀನ್ .ಸದ್ಯಸರುಗಳಾದ ಮೊಹಮ್ಮದ್ ಮೋಸಿನ್.ಸದ್ದಮ್ ಹುಸೇನ್.ಗುಲಾಮ್ ರಸೂಲ್. ಮನ್ಸೂರ್. ಖದೀರ್.ಅಬ್ದುಲ್ ಖಾದರ್ ಅವರು ಹಾಗೂ ಸಾವಿರಾರು ಮುಸ್ಲಿಂ ಸಮುದಾಯದ ಹಿರಿಯರು ಹಾಗೂ ಯುವಕರು ಭಾಗವಹಿಸಿದ್ದರು

Free Pediatric Camp, on Saturday 04.03.23Timing 9.30am to 3.00pm
02/03/2023

Free Pediatric Camp, on Saturday 04.03.23

Timing 9.30am to 3.00pm

ಇಂದು ದಿನಾಂಕ 08/02/2023 ರಂದು ಹೊಸಪೇಟೆಯ  #ಅಂಜುಮನ್_ಆಸ್ಪತ್ರೆಯಲ್ಲಿ ನೂತನವಾಗಿ ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಲು* ಮುಖ್ಯ ಅತಿಥಿಯನ್ನಾಗಿ...
08/02/2023

ಇಂದು ದಿನಾಂಕ 08/02/2023 ರಂದು ಹೊಸಪೇಟೆಯ #ಅಂಜುಮನ್_ಆಸ್ಪತ್ರೆಯಲ್ಲಿ ನೂತನವಾಗಿ ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಲು* ಮುಖ್ಯ ಅತಿಥಿಯನ್ನಾಗಿ ಮಾಜಿ ನಗರಸಭೆ ಹಾಗೂ ಹುಡಾ ಅಧ್ಯಕ್ಷರಾದ ೊಟ್ರೇಶ್ ಅವರು ಹಾಗೂ ವೀರಶೈವ ಸಮಾಜದ ಕಾರ್ಯದರ್ಶಿಯಾದ #ರವಿಶಂಕರ್ ಅವರು ಹಾಗೂ #ಡಾಕ್ಟರ್_ಸಾಲೆಹಾ ರವರು ರಿಬ್ಬಿನ್ ಕತ್ತರಿಸುವ ಮೂಲಕ ಆಸ್ಪತ್ರೆಯನ್ನು ಉದ್ಘಾಟಿಸಿದರು ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ *ನೂತನವಾಗಿ ಮಕ್ಕಳ ವೈದ್ಯರಾಗಿ #ಡಾಕ್ಟರ್_ಕುಸುಮಾ ಅವರು ತಮ್ಮ ಸೇವೆಯನ್ನು ಸಲ್ಲಿಸಲು ಆಗಮಿಸಿದ್ದಾರೆ* ಹಾಗೂ *ಹೆರಿಗೆ ಚಿಕಿತ್ಸೆಯನ್ನು ನೀಡಲು #ಡಾಕ್ಟರ್_ಅತಿಕಾ ರವರು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.*

ಇದೇ ಸಂದರ್ಭದಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಂ (ರಿ) ಕಮಿಟಿ ಅಧ್ಯಕ್ಷರಾದ *ಜನಾಬ್ ಾಮ್_ನಿಯಾಜಿ ರವರು ಮಾತನಾಡಿ ಎಲ್ಲಾ ಸಮಾಜದ ಜನರಿಗೆ ಒಂದು ಕಡಿಮೆ ದರದಲ್ಲಿ ನಮ್ಮ ಅಂಜುಮನ್ ಸಂಸ್ಥೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಲಾಗುತ್ತದೆ ಎಂದು ಮಾತನಾಡಿದರು

ಇದೇ ಸಂದರ್ಭದಲ್ಲಿ ಅಂಜುಮನ್ ಆಸ್ಪತ್ರೆಯ ಅಧ್ಯಕ್ಷರಾದ ಡಾಕ್ಟರ್ ದುರ್ಬೇಶ್ ಮೈನುದ್ದಿನ್ ಹಾಗೂ ಅಂಜುಮನ್ ಕಮಿಟಿಯ ಉಪಾಧ್ಯಕ್ಷರಾದ ಎಂ.ಎಂ ಫೈರೋಜ್ ಖಾನ್ ಸಾಬ್ ಹಾಗೂ ಕಮಿಟಿಯ ಕಾರ್ಯದರ್ಶಿಯಾದ ಅಬೂಬಕ್ಕರ್ ಅಶ್ರಫಿ ಮತ್ತು ಕಮಿಟಿಯ ಖಜಾಂಚಿಯಾದ ಬಿ ಅನ್ಸರ್ ಬಾಷ ಅಶ್ರಫಿ ಹಾಗೂ ಕಮಿಟಿಯ ಸದಸ್ಯರಾದ ಅಡ್ವಕೇಟ್ ಸದ್ದಾo ಹುಸೇನ್, ಗುಲಾಮ್ ರಸೂಲ್, ಅಡ್ವಕೇಟ್ ಮೋಸಿನ್, ಮನ್ಸೂರ್, ರವರು ಉಪಸ್ಥಿತರಿದ್ದರು.

Child care consultancy starting from:*8th February 2023 Wednesday* ByAnjuman Hospital,JP Nagar, Hosapete
06/02/2023

Child care consultancy starting from:
*8th February 2023 Wednesday*

By
Anjuman Hospital,
JP Nagar, Hosapete

Address

Hospet
583201

Telephone

+919448386771

Website

Alerts

Be the first to know and let us send you an email when Anjuman Khidmath e Islam Hospet posts news and promotions. Your email address will not be used for any other purpose, and you can unsubscribe at any time.

Share