29/05/2026
ಭಾರತೀಯ ಜನತಾ ಪಾರ್ಟಿ ಹಾವೇರಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಜಿಲ್ಲಾ ಕೋರ್ ಕಮೀಟಿ ಸಭೆ ಜರುಗಿತು.
ಸಭೆಯಲ್ಲಿ ಜಿಲ್ಲೆಯ ಸಂಘಟನಾತ್ಮಕ ವಿಷಯ ಕುರಿತು ಹಾಗೂ ಜಿಲ್ಲೆಯಲ್ಲಿ ರೈತರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಕುರಿತು ಚರ್ಚಿಸಲಾಯಿತು.
ಜಿಲ್ಲಾಧ್ಯಕ್ಷರಾದ ಶ್ರೀ ವೀರುಪಾಕ್ಷಪ್ಪ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯಮಂತ್ರಿಗಳು ಹಾಗೂ ಲೋಕಸಭಾ ಸದಸ್ಯರಾದ ಶ್ರೀ ಬಸವರಾಜ ಬೊಮ್ಮಾಯಿ ಯವರು ಹಾಗೂ ಮಾಜಿ ಸಚಿವರಾದ ಶ್ರೀ ಬಿ ಸಿ ಪಾಟೀಲ ರವರು ಹಾಗೂ ಮಾಜಿ ಶಾಸಕರಾದ ಶ್ರೀ ಶಿವರಾಜ ಸಜ್ಜನರ, ಶ್ರೀ ಅರುಣಕುಮಾರ ಪೂಜಾರ್, ಶ್ರೀ ಡಿ ಎಂ ಸಾಲಿ , ಹಾವೇರಿ ವಿಧಾನಸಭಾ ಮುಖಂಡರಾದ ಶ್ರೀ ಗವಿಸಿದ್ದಪ್ಪ ದ್ಯಾಮಣ್ಣವರ, ರಾಷ್ಟ್ರೀಯ ಪರಿಷತ ಸದಸ್ಯರಾದ ಶ್ರೀ ಮಂಜುನಾಥ ಓಲೇಕಾರ, ರಾಜ್ಯ ಉಪಾಧ್ಯಕ್ಷರಾದ ಡಾ || ಬಸವರಾಜ ಕೆಲಗಾರ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ | ಶೋಭಾ ನಿಸ್ಸಿಮಗೌಡ್ರ, ವಿಭಾಗ ಸಹ ಪ್ರಭಾರಿಗಳಾದ ಶ್ರೀ ಜಯತೀರ್ಥ ಕಟ್ಟಿ, ಸಹ ಪ್ರಭಾರಿ ಶ್ರೀ ಭೋಜರಾಜ ಕರೊದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸಂತೋಷ ಆಲದಕಟ್ಟಿ , ಶ್ರೀ ಏನ್ ಪಿ ಚಾವಡಿ, ಶ್ರೀ ಸಿದ್ದಪ್ಪ ಚಿಕ್ಕಬಿದರಿ, ಹಾಗೂ ನಂಜುಂಡೆಷ ಕಳ್ಳೆರ ಉಪಸ್ಥಿತರಿದ್ದರು