17/05/2023
ರಾಜ್ಯದಲ್ಲಿ ಬಿಜೆಪಿ 65 ಸ್ಥಾನಕ್ಕೆ ಸೀಮಿತವಾಗಲು ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಅನೇಕ ಕಾರಣಗಳನ್ನು ವಿಷ್ಲೇಷಣೆ ಮಾಡುತ್ತಿದ್ದಾರೆ. ಜೊತೆಗೆ ಈ ಸೊಲನ್ನು ಒಂದಿಷ್ಟು ಜನರ ಕುತ್ತಿಗೆಗೆ ಕಟ್ಟುವ ಪ್ರಯತ್ನಗಳು ಜೋರಾಗಿ ನಡೆಯುತ್ತಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ಸ್ವಲ್ಪ ಹೊತ್ತು ಪಕ್ಕಕ್ಕೆ ಹಾಸನದ ಈ ಭಾರಿಯ ಹಾಗು ಕಳೆದ ಚುನಾವಣೆಗಳಲ್ಲಿ ಪಡೆದ ಮತಗಳ ವಿಶ್ಲೇಷಣೆ ಮಾಡುವ.
ಹಾಸನ
2018ರಲ್ಲಿ:- ಬಿಜೆಪಿ-63,348, ಜೆಡಿಎಸ್-50,342, ಕಾಂಗ್ರೆಸ್-38,101
2023 ರಲ್ಲಿ ಬಿಜೆಪಿ 75,110, ಜೆಡಿಎಸ್- 84,005 ಕಾಂಗ್ರೆಸ್ -4,241
ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಕಳೆದ ಚುನಾವಣೆಗಿಂತೆ ಈ ಭಾರಿ ಹೆಚ್ಚು ಮತ ಗಳಿಸಿದ್ದರು. ಅಂದರೆ ಇವರ ಮೇಲೆ ಮತದಾರರಿಗೆ ಯಾವುದೇ ಅಸಮಧಾನ ಇರಲಿಲ್ಲ, ಬದಲಿಗೆ ಹೆಚ್ಚು ಪ್ರೀತಿ ಇತ್ತು. ಇಲ್ಲಿ ಇವರು ಸೋತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಸೋಲು ಗೆಲುವಿನ ಲೆಕ್ಕಾಚಾರ ಮಾಡುವ ಗಣಿತದಲ್ಲಿ. ಅದನ್ನು ಒಂದಷ್ಟು ಕಾಣದ ಕೈಗಳು ನಿಭಾಯಿಸುತ್ತಿದ್ದವು. ಹಾನಸದಲ್ಲಿ ಕಳೆದ ಭಾರಿ ಮೂರನೇ ಸ್ಥಾನದಲ್ಲಿ ಇದ್ದ ಕಾಂಗ್ರೆಸ್ 38 ಸಾವಿರ ಮತಗಳನ್ನು ಪಡೆದಿತ್ತು, ಆದರೆ ಈ ಭಾರಿ ಕೇವಲ 4 ಸಾವಿರ. ಈ ಎರಡೂ ಪಕ್ಷಗಳ ಮತಗಳು ಕಳೆದ ಭಾರಿಗಿಂತ ಈ ಭಾರಿ ಇಷ್ಟು ಕಮ್ಮಿ ಆಗಿದ್ದು ಮತ್ತು ಅದು ಆ ಕ್ಷೇತ್ರಗಳ ಬಿಜೆಪಿಯ ಪ್ರಭಲ ವಿರೋದಿ ಪಕ್ಷದ ಬುಟ್ಟಿಗೆ ಹೋಗಿದ್ದು ಹೇಗೆ? ಯಾರು ಇದನ್ನು ಮಾಡಿದ್ದು/ಮಾಡಿಸಿದ್ದು?
ಮೇಲ್ನೋಟಕ್ಕೆ ಈ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಲವು ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಂಡವು ಎಂದು ಅನಿಸಿದರೂ ಇನ್ನಾವುದೋ ಕಾಣದ ಕೈ ಒಂದು ಈ ಮತಗಳನ್ನು ಹೊಂದಿಸಿ ಬಿಜೆಪಿಗೆ ಮುಳುವಾಗುವಂತೆ ನೋಡಿಕೊಂಡಿತು ಎನ್ನುವುದು ಹೆಚ್ಚು ಸೂಕ್ತ. ರಾಜಕಾರಣದಲ್ಲಿ ಕನಿಷ್ಟ ಜ್ನಾನ ಇರುವವರಿಗೆ ಈ ಸೂಕ್ಷ್ಮ ಸ್ಪಷ್ಟವಾಗಿ ಕಾಣಿಸುತ್ತದೆ. ಜನಸಾಮಾನ್ಯರಿಗೆ ಅಥವ ಬೇರೆ ಯಾರಿಗೇ ಆದರೂ ಸೋಲು ಗೆಲುವುಗಳೆ ಮುಖ್ಯವಾಗುತ್ತಾವೆಯೇ ಹೊರತು ಅದರೆ ಹಿಂದಿರುವ ಗಣಿತ ಮತ್ತು ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ಗಮನವೂ ಇರುವುದಿಲ್ಲ , ಆಸಕ್ತಿಯೂ ಇರುವುದಿಲ್ಲ. ಈ ಎರಡು ಕ್ಷೇತ್ರದ ಚುನಾವಣ ಫಲಿತಾಂಶವನ್ನು ವಿಷ್ಲೇಶಣೆ ಮಾಡಿದರೆ ಕರ್ನಾಟಕದಲ್ಲಿ ಬಿಜೆಪಿಗೆ ಇವತ್ತು ಈ ಸೋಲು ಯಾಕಾಯಿತು ಎಂಬುದರ ಒಂದು ಕಲ್ಪನೆ ಸಿಗುತ್ತದೆ. ಹೌದು ಬೇರೆ ಕಾರಣಗಳೂ ಇರಬಹುದು., ಇದೇ ಎಂದೇ ಒಪ್ಪಿಕೊಳ್ಳೋಣ. ಆದರೆ ಅವುಗಳಲೆಲ್ಲವನ್ನೂ ಚುನಾವಣೆಯ ಗಣಿತಕ್ಕೆ ಹೊಂದಸಿ, ಕೂಡಿಸಿ ಕಳೆದು, ಬಾಗಿಸಿ ಬಗ್ಗಿಸಿ ಕಾಂಗ್ರೆಸ್ ಬುಟ್ಟಿಗೆ ಹಾಕಿಸಿದ್ದು/ಹಾಕಿದ್ದು ಯಾರು? ಈ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಒಬ್ಬ ಪಧಾದಿಕಾರಿಯಾಗಿ ನಾನೂ ಜವಾಬ್ಧಾರನೇ, ಆದರೆ ಈ ಸೋಲಿಗೆ ಕೇವಲ ಯಾರೀ ಒಂದಿಬ್ಬರೇ ಕಾರಣ ಎಂದು ವಿಶ್ಲೇಷಣೆ ಮಾಡಿ ಹಣೆಪಟ್ಟಿ ಅಂಟಿಸುವ ಮೊದಲು ನಾನು ಈಗ ಹೇಳಿದ ಸಾದ್ಯತಗಳ ಬಗ್ಗೆಯೂ ಒಮ್ಮೆ ಯೋಚಿಸಿ ನಂತರ ಅಭಿಪ್ರಾಯಕ್ಕೆ ಬನ್ನಿ .
ಸತ್ಯಮೇಯ ಜಯತೆ.