ಭರವಸೆಯ ಬೆಳಕು ಬಸವರಾಜ್ ಕೊರವರ್

  • Home
  • India
  • Dharwad
  • ಭರವಸೆಯ ಬೆಳಕು ಬಸವರಾಜ್ ಕೊರವರ್

ಭರವಸೆಯ ಬೆಳಕು ಬಸವರಾಜ್ ಕೊರವರ್ ಜನಸೇವಕ �ನಮ್ಮ ಗುರಿ ಅನ್ಯಾಯದ ಬೀಗ ಒಡೆದು ನ್ಯಾಯದ ಗುಡಿ ಪ್ರವೇಶ ಮಾಡುವುದು�

ಧಾರವಾಡ ತಾಲೂಕಿನ ಕೋಟೂರ್ ಗ್ರಾಮದಲ್ಲಿ ಇಂದು ಗುರುಹಿರಿಯರು,ಯುವ ಮಿತ್ರರರೊಂದಿಗೆ ದೇಶ ಮೊದಲು, ದೇಶಕ್ಕಾಗಿ ಮೋದಿಜಿ, ಧಾರವಾಡಕ್ಕೆ ಮತ್ತೊಮ್ಮೆ ಪ್...
05/05/2024

ಧಾರವಾಡ ತಾಲೂಕಿನ ಕೋಟೂರ್ ಗ್ರಾಮದಲ್ಲಿ ಇಂದು ಗುರುಹಿರಿಯರು,ಯುವ ಮಿತ್ರರರೊಂದಿಗೆ ದೇಶ ಮೊದಲು, ದೇಶಕ್ಕಾಗಿ ಮೋದಿಜಿ, ಧಾರವಾಡಕ್ಕೆ ಮತ್ತೊಮ್ಮೆ ಪ್ರಹ್ಲಾದ ಜೋಶಿಜಿ ಅವರ ಗೆಲುವಿಗಾಗಿ ಶ್ರಮಿಸಲು ಜನ ಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ್ ಕೊರವರ್,ಉಪಾಧ್ಯಕ್ಷರಾದ ನಾಗರಾಜ್ ಕಿರಣಗಿ,ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷೆ ಶ್ರೀಮತಿ ಸವೀತಾ ಅಮರಶಟ್ಟಿ,ರವರ ಮಾರ್ಗದರ್ಶನ ದಲ್ಲಿ ಸಭೆಯನ್ನು ಚರ್ಚಿಸಲಾಯಿತು.

ಧಾರವಾಡ ತಾಲೂಕಿನ ಬೇಲೂರು ಗ್ರಾಮದಲ್ಲಿ ಇಂದು ಗುರುಹಿರಿಯರು,ಯುವ ಮಿತ್ರರರೊಂದಿಗೆ ದೇಶ ಮೊದಲು, ದೇಶಕ್ಕಾಗಿ ಮೋದಿಜಿ, ಧಾರವಾಡಕ್ಕೆ ಮತ್ತೊಮ್ಮೆ ಪ್...
05/05/2024

ಧಾರವಾಡ ತಾಲೂಕಿನ ಬೇಲೂರು ಗ್ರಾಮದಲ್ಲಿ ಇಂದು ಗುರುಹಿರಿಯರು,ಯುವ ಮಿತ್ರರರೊಂದಿಗೆ ದೇಶ ಮೊದಲು, ದೇಶಕ್ಕಾಗಿ ಮೋದಿಜಿ, ಧಾರವಾಡಕ್ಕೆ ಮತ್ತೊಮ್ಮೆ ಪ್ರಹ್ಲಾದ ಜೋಶಿಜಿ ಅವರ ಗೆಲುವಿಗಾಗಿ ಶ್ರಮಿಸಲು ಜನ ಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ್ ಕೊರವರ್ ರವರ ಮಾರ್ಗದರ್ಶನ ದಲ್ಲಿ ಸಭೆಯನ್ನು ಚರ್ಚಿಸಲಾಯಿತು.

ಧಾರವಾಡ ತಾಲೂಕಿನ ಮದಿಕೊಪ್ಪ ಗ್ರಾಮದಲ್ಲಿ ಇಂದು ಗುರುಹಿರಿಯರು,ಯುವ ಮಿತ್ರರರೊಂದಿಗೆ ದೇಶ ಮೊದಲು, ದೇಶಕ್ಕಾಗಿ ಮೋದಿಜಿ, ಧಾರವಾಡಕ್ಕೆ ಮತ್ತೊಮ್ಮೆ ...
20/04/2024

ಧಾರವಾಡ ತಾಲೂಕಿನ ಮದಿಕೊಪ್ಪ ಗ್ರಾಮದಲ್ಲಿ ಇಂದು ಗುರುಹಿರಿಯರು,ಯುವ ಮಿತ್ರರರೊಂದಿಗೆ ದೇಶ ಮೊದಲು, ದೇಶಕ್ಕಾಗಿ ಮೋದಿಜಿ, ಧಾರವಾಡಕ್ಕೆ ಮತ್ತೊಮ್ಮೆ ಪ್ರಹ್ಲಾದ ಜೋಶಿಜಿ ಅವರ ಗೆಲುವಿಗಾಗಿ ಶ್ರಮಿಸಲು ಜನ ಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ್ ಕೊರವರ್,ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷೆ ಶ್ರೀಮತಿ ಸವೀತಾ ಅಮರಶಟ್ಟಿ,ನೀವೃತ್ತ ಪೊಲೀಸ್ ಅಧಿಕಾರಿ ಶ್ರೀ ಮುರಗೋಡ ಸರ್ ರವರ ಮಾರ್ಗದರ್ಶನ ದಲ್ಲಿ ಸಭೆಯನ್ನು ಚರ್ಚಿಸಲಾಯಿತು.

ಮದುವೆಯ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು 💐
18/04/2024

ಮದುವೆಯ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು 💐

ಧಾರವಾಡ ತಾಲೂಕಿನ ಹೆಬ್ಬಳ್ಳಿ  ಗ್ರಾಮದಲ್ಲಿ ಮಂಗಳವಾರ ಗುರುಹಿರಿಯರನ್ನು, ಯುವ ಮಿತ್ರರನ್ನು ಹಾಗೂ ವಿಶೇಷವಾಗಿ ಬಿಜೆಪಿ ಹಳೆಯ ಕಾರ್ಯಕರ್ತರನ್ನು ವಿ...
16/04/2024

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಮಂಗಳವಾರ ಗುರುಹಿರಿಯರನ್ನು, ಯುವ ಮಿತ್ರರನ್ನು ಹಾಗೂ ವಿಶೇಷವಾಗಿ ಬಿಜೆಪಿ ಹಳೆಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶ ಮೊದಲು, ದೇಶಕ್ಕಾಗಿ ಮೋದಿಜಿ, ಧಾರವಾಡಕ್ಕೆ ಮತ್ತೊಮ್ಮೆ ಪ್ರಹ್ಲಾದ ಜೋಶಿಜಿ ಅವರ ಗೆಲುವಿಗಾಗಿ ಶ್ರಮಿಸಲು ಜನ ಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ್ ಕೊರವರ್ ನೇತೃತ್ವದಲ್ಲಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷೆ ಶ್ರೀ ಮತಿ ಸವಿತಾ ಅಮರಾಶೆಟ್ಟಿ,ನಿಂಬಣ್ಣ ನೈಕರ್,ಮಹೇಶ್ ಜೋಶಿ,ಭೀಮಣ್ಣ ರಾಮದುರ್ಗ,ದೊಡ್ಡಕಲಪ್ಪ ದೇಸಾಯಿ,ಎಲಪ್ಪ ಧಾರವಾಡ,ವಾಸುದೇವ್ ಸುರ್ಕೋಡ್,ಚಂದ್ರು ಸುಣಗಾರ,ಬಸವರಾಜ್ ಲಕ್ಕಮ್ಮನವರ,ಬಸವರಾಜ್ ಹಡಪದ್, ಬಸವರಾಜ್ ಹೆಬ್ಬಾಳ್ ಮತ್ತು ಗ್ರಾಮದ ಗುರು ಹಿರಿಯರು ಹಾಜರಿದ್ದರು.

ಧಾರವಾಡ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಗೂಂಡಾ ಕಾಯ್ದೆಯಡಿ ರೌಡಿಶೀಟರ್ ಗಡಿಪಾರು ಮಾಡಲು ಒತ್ತಾಯಿಸಿ ನೂರಾರು ಆಟೋ ಚಾಲಕರು ಧಾ...
27/03/2024

ಧಾರವಾಡ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಗೂಂಡಾ ಕಾಯ್ದೆಯಡಿ ರೌಡಿಶೀಟರ್ ಗಡಿಪಾರು ಮಾಡಲು ಒತ್ತಾಯಿಸಿ ನೂರಾರು ಆಟೋ ಚಾಲಕರು ಧಾರವಾಡದ ಜನಜಾಗೃತಿ ಸಂಘ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಕೊರವರ,
ವಿದ್ಯಾನಗರಿ ಧಾರವಾಡದಲ್ಲಿ ಪುಂಢರು ಹಾವಳಿ ವಿಪರೀತ ಹೆಚ್ಚಿದೆ. ಹಲವರಂತೂ ಗ್ಯಾಂಗ್ ಕಟ್ಟಿಕೊಂಡು ರಾಜಾರೋಷವಾಗಿ ಅಂಧಾ ದರ್ಬಾರ್ ನಡೆಸುತ್ತಿದ್ದಾರೆ. ಇನ್ನು ಕೆಲವು ಮರಿ ಪುಢಾರಿಗಳು, ರೌಡಿಶೀಟರ್ ಗಳು ಪೊಲೀಸರ ಭಯವಿಲ್ಲದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ, ಹಲ್ಲೆ ನಡೆಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಧಾರವಾಡ ನಗರದ ಮೂರು ಸ್ಟೇಶನ್ ವ್ಯಾಪ್ತಿಯಲ್ಲಿ ಹಲವಾರು ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿವೆ. ಇದರಿಂದಾಗಿ ಧಾರವಾಡ ನಗರದಲ್ಲಿ ಮೇಲ್ನೋಟಕ್ಕೆ ಕಾನೂನು ಸುವ್ಯವಸ್ಥೆ ಕುಸಿದಂತೆ ಕಂಡು ಬರುತ್ತಿದ್ದು ಸಾರ್ವಜನಿಕರು ನಿರ್ಭಯವಾಗಿ ಓಡಾಡಲು ಹೆದರುವಂತಾಗಿದೆ‌ ಎಂದು ಹೇಳಲು ನಮಗೆ ಬೇಸರವಾಗುತ್ತಿದೆ ಎಂದರು.
ಅಮಾಯಕರ ಜೀವರಕ್ಷಣೆ ಮಾಡುವುದು ಹಾಗೂ ನೈತಿಕ ಪೊಲೀಸಗಿರಿಗೆ ಬ್ರೇಕ್ ಹಾಕುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಆಗ್ರಹಿಸಿದರು.
ಜನಜಾಗೃತಿ ಸಂಘ್ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ,
ಧಾರವಾಡದ ವಿದ್ಯಾ ಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲ್ಯಾಣ ನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ರೈಲ್ವೆ ಬ್ರಿಜ್ ಬಳಿಯಿರುವ ಅಭಿಮಾನ್ ವೈನ್ಸ್ ನಲ್ಲಿ ಪ್ರತಿ ನಿತ್ಯ ಪುಂಢರು ಪುಟ್ ಪಾತ್ ಮೇಲೆ ನಡೆದು ರೈಲು ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ದಿನನಿತ್ಯ ಪುಂಢರ ಉಪಟಳ ನೀಡುತ್ತಿದ್ದಾರೆ.
ವಿಶೇಷವಾಗಿ ಹೊರ ಜಿಲ್ಲೆಯ ಪ್ರಯಾಣಿಕರಿಗೆ, ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರಿಗೆ ಅಲ್ಲಿ ಸಂಚಾರಕ್ಕೆ ವಿಪರೀತ ತೊಂದರೆ ಆಗುತ್ತಿದೆ. ಹಲವು ಬಾರಿ ಅಲ್ಲಿ ಚಾಕು ತೋರಿಸಿ ಹೆದರಿಸಿ ಬೆದರಿಸಿ ಹಣ ವಸೂಲಿ, ಮೊಬೈಲ್ ಫೋನ್ ಕಸಿದು ಪರಾರಿ, ಹಣ‌ನೀಡದಿದ್ದರೆ ಹಲ್ಲೆ ಯಂತಹ ಪ್ರಕರಣ ಸಹ ನಡೆದಿವೆ. ಮಾ. 22ರಂದು ರಾತ್ರಿ ಹತ್ತು ಗಂಟೆ ಸುಮಾರಿಗೆ ಮಂಗಳೂರು ಮೂಲದ ಪಾದಚಾರಿ ಮೇಲೆ ಅಪರಿಚಿತ ಪುಂಢರ ತಂಡ ಬೀರ್ ಬಾಟಲಿನಿಂದ ಹಲ್ಲೆ ನಡೆಸಿ 112 ಪೊಲೀಸರು ಘಟನಾ ಸ್ಥಳಕ್ಕೆ
ಬಂದ ಮೇಲೆ ಅಲ್ಲಿಂದ ಕಾಲು ಕಿತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅದೇ ರೀತಿ
ಮಾ. 23ರಂದು ಧಾರವಾಡ ಹೆಬ್ಬಳ್ಳಿ ಅಗಸಿಯ ಸಾಗರ ಪಾನ್ ಶಾಪ್ ಮಾಲೀಕ ಪ್ರಸಾದ ಶೆಟ್ಟಿ ಯವರ
ಮೇಲೆ ರೌಡಿಶೀಟರ್ ಗಳಾದ ನವೀನ ಶಲವಡಿ, ಸತೀಶ ಗೋಕಾವಿ ಹಾಗೂ ಅಭಿಜಿತ್ ಹುಡೇದ ಹಾಗೂ ಅವರ ಗ್ಯಾಂಗ್ ಅನಗತ್ಯವಾಗಿ ಗಲಾಟೆ ಮಾಡಿದೆ‌. ಅಲ್ಲದೆ, ಹಲವಾರು ಗಾಜಿನ ಬಾಟಲುಗಳಿಂದ ದಾಳಿ ನಡೆಸಿದೆ. ಆದರೆ ಅವರು ತಪ್ಪಿಸಿಕೊಂಡ ಪರಿಣಾಮ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಆದರೂ ಅವರಿಗೆ ಕೊಲೆ ಬೆದರಿಕೆ ಹಾಕಿದ ಪರಿಣಾಮ ಜೀವ ರಕ್ಷಣೆ ಕೋರಿ ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದಾದ ಬಳಿಕ ಮಧ್ಯರಾತ್ರಿ ಆಲೂರು ವೆಂಕಟರಾಯರ ವೃತದಲ್ಲಿ ನಿಂತು ಇದೇ ಗ್ಯಾಂಗ್ ರಸ್ತೆಯಲ್ಲಿ ಹಾದು ಹೋಗುವ ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದೆ.
ಆ ಬಳಿಕ ಮಾ. 24ರ ಬೆಳಗಿನ ಜಾವ ಧಾರವಾಡ ಹೊಸ ಬಸ್ ನಿಲ್ದಾಣ ಬಳಿಯಿರುವ ಚಹಾ ಅಂಗಡಿಯಲ್ಲಿ ಗಲಾಟೆ ಮಾಡಿ ಹಲವರಿಗೆ ಮನಬಂದಂತೆ ಥಳಿಸಿಲು ಆರಂಭಿಸಿದ್ದಾರೆ. ಆಗ ಕಕ್ಕಾಬಿಕ್ಕಿಯಾಗಿ ಕೆಲವರು ಓಡಿ ಹೋಗಿ ರಕ್ಷಣೆಗೆ ಅಂಗಲಾಚಿದ್ದಾರೆ. ಆಗ ಅಲ್ಲಿಯೇ ಸ್ಥಳದಲ್ಲಿ ಇದ್ದ ಆಟೋ ಚಾಲಕ ಮುಕ್ತುಂಸಾಬ ಸಲಿಕೆ ಜಗಳ ಬಿಡಿಸಲು ಹೋದಾಗ ಅವರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಇದರಿಂದಾಗಿ ಮುಕ್ತುಂಸಾಬ ಸಲಿಕೆ ಅವರ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರ ತೆಲೆಗೆ ಸುಮಾರು ಹದಿನೇಳು ಹೊಲಿಗೆ ಬಿದ್ದಿವೆ‌. ಕೊನೆಗೆ ಅವರು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದು ರಾತ್ರಿ ಹೊರಬಂದಿದ್ದಾರೆ.
ಧಾರವಾಡ ಹೊಸ ಬಸ್ ನಿಲ್ದಾಣದ ಆಟೋ ಚಾಲಕ ಮುಕ್ತುಂಸಾಬ ಸಲಿಕೆ ಮೇಲಿನ ಮಾರಣಾಂತಿಕ ಹಲ್ಲೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಈ ಕುರಿತು ಅವರ ಸಂಬಂಧಿಕರು ಕೂಡ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ದಾಖಲು ಮಾಡಿದ್ದಾರೆ.
ಆದರೆ ಧಾರವಾಡದ ಪೊಲೀಸರು ಅವರಿಬ್ಬರ ಮೇಲೆ ರೌಡಿಶೀಟರ್ ಇದ್ದರೂ ಕೂಡ ಕೆಲವೇ ದಿನಗಳ ಹಿಂದೆಯಷ್ಟೇ ಒಬ್ಬ ಕೊಲೆ ಪ್ರಕರಣದಲ್ಲಿ ಹಾಗೂ ಇನ್ನೊಬ್ಬ ಮತ್ತೊಂದು ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆ ಹೊಂದಿದ ಮಾಹಿತಿ ಇದ್ದರೂ ಅವರಿಗೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ
ಅವರ ಮೇಲೆ ಕೊಲೆಗೆ ಯತ್ನದಂತಹ ಗಂಭೀರವಾದ ಸೆಕ್ಷನ್ ಹಾಕದೆ ಸ್ಟೇಶನ್ ಬೇಲ್ ನೀಡುವ ಮೂಲಕ ನೂರಾರು ಆಟೋ ಚಾಲಕರಿಗೆ ಹಾಗೂ ವಿಶೇಷವಾಗಿ ಹುಬ್ಬಳ್ಳಿ ಧಾರವಾಡ ಅವಳಿನಗರದ ಸಾರ್ವಜನಿಕರಿಗೆ ಯಾವ ಸಂದೇಶ ರವಾನೆ ಮಾಡಲು ಬಯಸಿದ್ದಾರೆ ಎಂಬ ಯಕ್ಷಪ್ರಶ್ನೆ ನಮಗೆ ಕಾಡುತ್ತಿದೆ.
ಪರಿಸ್ಥಿತಿ ಹೀಗೆ ಮುಂದುವರೆದರೆ ಪುಂಢರಿಗೆ, ರೌಡಿಶೀಟರ್ ಗಳಿಗೆ ಪೊಲೀಸರ ಬಗ್ಗೆ ಭಯವಿಲ್ಲದಂತಾಗಿ ಕಾನೂನು ಸುವ್ಯವಸ್ಥೆ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ.
ಹೀಗಾಗಿ ಈ ಇಬ್ಬರ ಮೇಲೆ ಗೂಂಡಾ ಕಾಯಿದೆ ಅಡಿ ಧಾರವಾಡದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸುತ್ತೇವೆ.
ಇದರ ಜೊತೆಗೆ ಧಾರವಾಡದಲ್ಲಿ ಗಾಂಜಾ ಅವ್ಯಾಹತವಾಗಿ ಮಾರಾಟವಾಗುತ್ತಿದ್ದು, ಹಲವಡೆ ಅಕ್ರಮ ಇಸ್ಪೀಟು ಕ್ಲಬ್ ತಲೆ ಎತ್ತಿವೆ. ಮಟ್ಕಾ, ಓಸಿ ದಂಧೆಗಳು ಎಗ್ಗಿಲ್ಲದಂತೆ ಸಾಗಿವೆ. ಇದರಿಂದಾಗಿ ಸಾವಿರಾರು ಬಡಕುಟುಂಬಗಳು ಬೀದಿಗೆ ಬೀಳುತ್ತಿವೆ.
ಈ ಹಿನ್ನೆಲೆಯಲ್ಲಿ ತಾವು ಇವುಗಳನ್ನು ಗಂಭೀರವಾಗಿ ಪರಿಗಣಿಸಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪೊಲೀಸರಿಗೆ ಹಾಗೂ ಧಾರವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.

ಪ್ರತಿಭಟನೆಯಲ್ಲಿ ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ
ರಾಘವೇಂದ್ರ ಶೆಟ್ಟಿ, ಸುರೇಶ ಕೋರಿ, ಶಿವರಾಜ‌ ಮೋತಿ,
ಆಟೋ ಚಾಲಕರ ಸಂಘದ ಮುಖಂಡರಾದ ಜೀವನ ಹುತ್ಕರಿ, ಮಲ್ಲೇಶ ಅಂಬಿಗೇರ,
ನವೀನ ಸುಬೇದಾರ, ಪ್ರಕಾಶ ದೇವಾಂಗ, ಮುನೀರ ಪಟೇಲ,
ಖಾಜಾ ಚೌಧರಿ,
ಜಾಫರ್ ರಾಟಿಮನಿ, ಲಕ್ಷ್ಮಣ ಜಮನಾಳ, ಫ್ರಾನ್ಸಿಸ್ ಸಕ್ರಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಕೆ ಐ ಎ ಡಿ ಬಿಯ ಬಹುಕೋಟಿ ಹಗರಣ ಬಗೆದಷ್ಟು ಆಳ ಎಂಬಂತಾಗಿದೆ.ನಿವೃತ್ತ ವಿಶೇಷ ಭೂ ಸ್ವಾಧೀನ ಅಧಿಕಾರಿ ವ್ಹಿ.ಡಿ. ಸಜ್ಜನ ಇವರು 9-7-2021 ರಿಂದ 30-...
27/01/2024

ಕೆ ಐ ಎ ಡಿ ಬಿಯ ಬಹುಕೋಟಿ ಹಗರಣ ಬಗೆದಷ್ಟು ಆಳ ಎಂಬಂತಾಗಿದೆ.

ನಿವೃತ್ತ ವಿಶೇಷ ಭೂ ಸ್ವಾಧೀನ ಅಧಿಕಾರಿ ವ್ಹಿ.ಡಿ. ಸಜ್ಜನ ಇವರು 9-7-2021 ರಿಂದ 30-4-2022 ರವರೆಗೆ ಒಟ್ಟು ಒಂಬತ್ತು ತಿಂಗಳ ಅವಧಿಯಲ್ಲಿ ಒಟ್ಟು 506 ಕಡತಗಳಿಗೆ ಭೂ ಪರಿಹಾರ ಹಂಚಿಕೆ ಮಾಡಿದ್ದಾರೆ.

ಅದರ ಒಟ್ಟು ಮೊತ್ತ 138 ಕೋಟಿಗೂ ಅಧಿಕ ಆರ್ ಟಿ ಜಿ ಎಸ್ ಮಾಡಿದ್ದಾರೆ. ಅದರಲ್ಲಿ 20 ಕೋಟಿ ಅಕ್ರಮ ಎಸಗಿರುವುದು ಈಗಾಗಲೇ ಸಿಐಡಿ ತನಿಖೆ ಪ್ರಗತಿ ಹಂತದಲ್ಲಿದೆ.

ಇವತ್ತು ನಮಗೆ ಮತ್ತೆ 40 ಕೋಟಿಗೂ ಅಧಿಕ ದಾಖಲೆಗಳು ದೊರೆತಿವೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಆರೋಪಿಸಿದರು.

ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಈವರೆಗೆ 506 ಕಡತಗಳ ಪೈಕಿ ಕೇವಲ 170 ಕಡತಗಳನ್ನು ಮಾತ್ರ ತನಿಖೆಗೆ ನೀಡಿ ಉಳಿದ ಕಡತಗಳನ್ನು ಕೆ ಐ ಎ ಡಿಬಿ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ
ಉನ್ನತ ಮಟ್ಟದ ತನಿಖೆಗೆ ಹಾಜರುಪಡಿಸದೇ ಜಾಣಕುರುಡುತನ ತೋರಿಸಿರುವುದು ಏಕೆ ಎಂಬುದು ನಮ್ಮ ಪ್ರಶ್ನೆ ಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವ್ಹಿ.ಡಿ. ಸಜ್ಜನ ನಿವೃತ್ತಿ ಹೊಂದುವ ದಿನಾಂಕದಂದೆ ರೂ. 36,73,34,868/ ಮೊತ್ತದ ಕೆಲಗೇರಿ, ಮುಮ್ಮಿಗಟ್ಟಿ, ಕೋಟೂರ, ಬೇಲೂರ, ಉಣಕಲ್ಲ, ಗೋಕುಲ ಹಾಗೂ ಮುಳವಾಡ ಗ್ರಾಮದ ಜಮೀನುಗಳ ಕಡತಗಳಿಗೆ ಸಹಿ ಮಾಡಿದ್ದು ದಾಖಲೆಗಳಿಂದ ಸ್ಪಷ್ಟವಾಗಿ ಕಂಡುಬಂದಿದೆ.

ಕಳೆದ 8 ರಿಂದ 10 ವರ್ಷದ ಹಿಂದೆಯೇ ಪರಿಹಾರ ಪಡೆದಿದ್ದರೂ 2021-2022 ರಲ್ಲಿ ಮತ್ತೆ ನಮ್ಮ ರೈತರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ, ಪರಿಹಾರ ಪಡೆದುಕೊಂಡ ಬಗ್ಗೆ ನಮಗೆ ಮಾಹಿತಿಯೇ ಇಲ್ಲವೆಂದು ಕೆಲವು ರೈತರು ಅಳಲು ತೋಡಿಕೊಂಡರು.

ಈ‌ ಬಗ್ಗೆ ದಾಖಲೆ ಪರಿಶೀಲಿಸುವ ವೇಳೆ ಐ.ಡಿ.ಬಿ.ಐ. ಬ್ಯಾಂಕಿನಲ್ಲಿಯೇ ಇನ್ನೂ 14 ಖೊಟ್ಟಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ರೂ. 28,79,63,453,- ಹಣವನ್ನು ಆರ್ ಟಿ ಜಿ ಎಸ್ ಮಾಡಿರುವುದು ಕಂಡು ಬಂದಿದೆ.

*ಅವುಗಳ ವಿವರ ಇಂತಿದೆ*
೧ ಮಾಳಯ್ಯ ಗಂಗಯ್ಯ ಸಂಬಾಳಮಠ ಉಣಕಲ್ಲ ಹೆಸರಿನಲ್ಲಿ
ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 3,72,60,952 /

೨ ಮಹದೇವ ಬಸಪ್ಪ ಚಲವಾದಿ ಮುಳವಾಡ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 60,80,000/-

೩ ಬಸವರಾಜ ರುದ್ರಪ್ಪ ಹೆಬಸೂರ , ಉಣಕಲ್ಲ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 1,14,13265/-

೪ ವಿನಾಯಕ ಶಂಕರರಾವ ನಾಯಕ ಉಣಕಲ್ಲ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 13,53,227/-

೫ ರಾಜೇಶ್ವರಿ ಬಸಲಿಂಗಪ್ಪ ಯರಗಟ್ಟಿ ಉಣಕಲ್ಲ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 18,88,224/-

೬ ಶಾಂತಾಬಾಯಿ ಖಾನಾಪುರ ಮುಮ್ಮಿಗಟ್ಟಿ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 57,61,734 /-

೭ ಶಾಂತಿಲಾಲ ಧನರಾಜ ಜೈನ ಗೋಕುಲ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 4,10,26,907/-

೮ ಶಾಂತಿಲಾಲ ಧನರಾಜ ಜೈನ ಗೋಕುಲ, ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 2,96,34,624/-

೯ ಸೂರಜ ಬಾಬು ಗೌಡ ಇಟಿಗಟ್ಟಿ
ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 2,84,62,500/-

೧೦ ನಾಗಪ್ಪ ಯಲ್ಲಪ್ಪ ಬೆಳ್ಳೇರಿ ಗೋಕುಲ
ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 2,58,05,000/-

೧೧ ಕೃಷ್ಣಪ್ಪ ಯಲ್ಲಪ್ಪ ಬೆಳ್ಳೆರಿ ಗೋಕುಲ
ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 2,91,85,000/-

೧೨ ಗುರುಶಾಂತ ವೀರಪ್ಪ ವಳಸಂಗಿ ಉಣಕಲ್ಲ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 2,08,87,020/-

೧೩ ಶಿವರಾಜ ದ್ಯಾಮಣ್ಣ ದಾಂಡೇಲಿ ಗೋಕುಲ 2,88,60,000/ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ /-

೧೪ ಫಕ್ಕೀರಪ್ಪ ಯಲ್ಲಪ್ಪ ಬಿಜಾಪುರ ಗೋಕುಲ 2,,03,45,000
ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ /-

ಒಟ್ಟು 28,79,63,453/-
ಐ.ಡಿ.ಬಿ.ಐ. ಬ್ಯಾಂಕ್‌ನಲ್ಲಿ ಆದ ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ಆಗಲೇಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಬಸವರಾಜ ಕೊರವರ ತಿಳಿಸಿದರು.

ಇದರಲ್ಲಿರುವ ರೈತ ನಾಗಪ್ಪ ಯಲ್ಲಪ್ಪಾ ಬೆಳ್ಳೇರಿ, ಕೃಷ್ಣಪ್ಪ ಯಲ್ಲಪ್ಪ ಬೆಳ್ಳೇರಿ ಸಾಕಿನ ಹುಬ್ಬಳ್ಳಿ ಗೋಕುಲದ ರೈತ ಸಹೋದರರು 15-04-2010
ರಲ್ಲಿ ಮೊದಲ ಬಾರಿ ಪರಿಹಾರ ಪಡೆದಿದ್ದಾರೆ.

ನಾಗಪ್ಪ ಯಲ್ಲಪ್ಪ ಬೆಳ್ಳೇರಿ ಎಂಬ ರೈತ 04-09-2019ರಲ್ಲಿಯೇ ಮರಣ ಹೊಂದಿದ್ದಾರೆ.

ಆದರೆ ಇವರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ 25-04-2022ರಲ್ಲಿ ಮತ್ತೆ ಹಣ ಪಡೆದಿದ್ದಾರೆ.

ಕೃಷ್ಣಪ್ಪ ಯಲ್ಲಪ್ಪ ಬೆಳ್ಳೇರಿ ಹೆಸರಿನಲ್ಲಿ ಕೂಡ ಎರಡನೇ ಬಾರಿಗೆ ಪರಿಹಾರ ನೀಡಲಾಗಿದೆ. ಈ ಬಗ್ಗೆ ಅವರಿಗೆ ಈವರೆಗೆ ಮಾಹಿತಿ ಇರಲಿಲ್ಲ. ನಾವು ದಾಖಲೆ ಪರಿಶೀಲನೆ ನಡೆಸಿದಾಗ ಇದು ಬಯಲಿಗೆ ಬಂದಿದೆ ಎಂದು ದಾಖಲೆ ತೋರಿಸಿದರು.

ಇದಲ್ಲದೆ, ದಿನಾಂಕ: 30-04-2022 ರಂದು ಒಂದೇ ದಿನ ಇನ್ನೂ ಕೆಲವೊಂದು ಬ್ಯಾಂಕುಗಳಾದ ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಹಾಗೂ ಮುಳವಾಡದ ಕೆಲವೊಂದು ಬ್ಯಾಂಕುಗಳಾದ ಮಹಾಲಕ್ಷ್ನಿ ಕೋ.ಆಪರೇಟಿವ್ ಸೊಸೈಟಿ ವಿಜಯಪುರ ಹಾಗೂ ಇತರೆ ಬ್ಯಾಂಕುಗಳಲ್ಲಿ ಸರಿಸುಮಾರು ರೂ. 11 ಕೋಟಿಗೂ ಅಧಿಕ ಹಗರಣ ನಡೆದಿದೆ.

ಕರ್ನಾಟಕ ರಾಜ್ಯ ಪತ್ರದಲ್ಲಿ ಕೆಎಲ್‌ಆರ್ ಸರಕಾರ, ಕರ್ನಾಟಕ ಸರಕಾರ ಅಂತಾ ಅಧಿಸೂಚನೆಯಲ್ಲಿ ಒಳಗೊಂಡಿರುವಂತಹ ಉದ್ಯಾನ ವನ, ರಸ್ತೆ, ಸರಕಾರದ ಜಮೀನುಗಳಿಗೆ ಕೂಡ ಖೊಟ್ಟಿ ದಾಖಲೆ ಸೃಷ್ಟಿಸಿ ಪರಿಹಾರ ಪಾವತಿಸಿದ್ದು ದಾಖಲೆಗಳಿಂದ ಕಂಡುಬಂದಿವೆ ಎಂದು ದೂರಿದರು.

ಇದರಲ್ಲಿ ತಹಶೀಲ್ದಾರ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಮತ್ತು ಹಿರಿಯ ಅಧಿಕಾರಿಗಳು ಕೂಡ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಇದು ಉನ್ನತ ಮಟ್ಟದಲ್ಲಿ ತನಿಖೆಯಾದಲ್ಲಿ ಮಾತ್ರ ಬಹಿರಂಗವಾಗಲಿದೆ ಎಂದು ಒತ್ತಾಯಿಸಿದರು.

ಈ ಹಗರಣದಲ್ಲಿ ಕೇಂದ್ರ ಕಚೇರಿಯ ವಿಶೇಷ ಜಿಲ್ಲಾಧಿಕಾರಿಗಳನ್ನು ಮತ್ತು ಲೆಕ್ಕಪರಿಶೋಧಕರನ್ನು ಉನ್ನತ ತನಿಖೆಗೆ ಒಳಪಡಿಸಲೇಬೇಕು.

ಈ ಬಹುಕೋಟಿ ಹಗರಣದಿಂದ ಸರಕಾರಕ್ಕೆ ನೂರಾರು ಕೋಟಿ ನಷ್ಟವನ್ನುಂಟು ಮಾಡಿ ಇದೇ ದುಡ್ಡಿನಿಂದ ಹಲವು ಏಜೆಂಟರು ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಪಾಸ್ತಿಗಳನ್ನು ಮಾಡಿದ್ದು, ತನಿಖೆಗೆ ಮುನ್ನವೇ ಹೆದರಿ,ಈಗಾಗಲೇ ಬೇರೆಯವರ ಹೆಸರಿಗೆ ವರ್ಗಾಯಿಸಿದ್ದು ಕೂಡ ನಮಗೆ ದಾಖಲೆಗಳು ಲಭ್ಯವಾಗಿವೆ ಎಂದರು.

ಕಳೆದ ಒಂದುವರೆ ವರ್ಷದಿಂದ ನಾವು ನಿರಂತರವಾಗಿ ತೀವ್ರ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರಕಾರ ಈವರೆಗೆ ಸಕರಾತ್ಮಕವಾಗಿ ಸ್ಪಂದಿಸಿಲ್ಲ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಿಮಿನಲ್ ಮೊಖದ್ದಮೆ ದಾಖಲಿಸಿ ಅವರಿಂದ ಸಂಸ್ಥೆಗೆ ಆದ ಎಲ್ಲಾ ಹಣವನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು‌

ಒಂದು ವೇಳೆ ನಮಗೆ ನ್ಯಾಯ ದೊರಕದೇ ಇದ್ದ ಪಕ್ಷದಲ್ಲಿ ನಾವೇ ಅನಿವಾರ್ಯವಾಗಿ ಕಾನೂನು ಹೋರಾಟ ಮಾಡಬೇಕಾಗುತ್ತದೆ‌ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಎಚ್ಚರಿಸಿದರು.

ಈ‌ ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಹಾಗೂ ಗೋಕುಲ್ ಗ್ರಾಮದ ನೋಂದರೈತರಾದ ಕೃಷ್ಣಪ್ಪ ಯಲ್ಲಪ್ಪ ಬೆಳ್ಳೇರಿ, ಮೃತ ರೈತ ನಾಗಪ್ಪ ಬೆಳ್ಳೇರಿ ಮಗ ಸಂಜೀವ ನಾಗಪ್ಪ ಬೆಳ್ಳೇರಿ, ಉಪಸ್ಥಿತರಿದ್ದರು.
#ಜನಜಾಗೃತಿಸಂಘ #ಬಸವರಾಜಕೋರವಾರಗೆಳೆಯರಾಬಳಗ

ಹುಟ್ಟುಹಬ್ಬದ ದಿನದಂದು ಶುಭ ಕೋರಿದ ಎಲ್ಲಾ ಗುರು ಹಿರಿಯರಿಗೂ ಭಂದು ಮಿತ್ರರಿಗೂ ಅನಂತ್ ಅನಂತ ಧನ್ಯವಾದಗಳು....-ಬಸವರಾಜ್ ಕೊರವರ್
19/01/2024

ಹುಟ್ಟುಹಬ್ಬದ ದಿನದಂದು ಶುಭ ಕೋರಿದ ಎಲ್ಲಾ ಗುರು ಹಿರಿಯರಿಗೂ ಭಂದು ಮಿತ್ರರಿಗೂ ಅನಂತ್ ಅನಂತ ಧನ್ಯವಾದಗಳು....

-ಬಸವರಾಜ್ ಕೊರವರ್

10/11/2023

ಸತ್ಯಮೇವ ಜಯತೇ..
ಪಿಎಸ್ಐ ನೇಮಕ ಮರುಪರೀಕ್ಷೆ ಹೈಕೋರ್ಟ್ ಆದೇಶ,
ಪಿಎಸ್ಐ ಹಗರಣ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ಜನಜಾಗೃತಿ ಸಂಘದ ವತಿಯಿಂದ ತುಂಬು ಹೃದಯದ ಧನ್ಯವಾದಗಳು.
#ಭರವಸೆಯಬೆಳಕು

Address

Dharwad

Telephone

+919380746801

Website

Alerts

Be the first to know and let us send you an email when ಭರವಸೆಯ ಬೆಳಕು ಬಸವರಾಜ್ ಕೊರವರ್ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಭರವಸೆಯ ಬೆಳಕು ಬಸವರಾಜ್ ಕೊರವರ್:

Share