Harsha Vardhan S JDs

  • Home
  • Harsha Vardhan S JDs

Harsha Vardhan S  JDs 📍 ದೇವನಹಳ್ಳಿಯ ಧ್ವನಿ | ಜನಸೇವಕ
🛡️ ಜೆಡಿ(ಎಸ್) ನಿಷ್ಠಾವಂತ ಕಾರ್ಯಕರ್ತ
🤝 ಅಭಿವೃದ್ಧಿಯೇ ನಮ್ಮ ಗುರಿ
📩 ನಿಮ್ಮ ಸಮಸ್ಯೆಗಳಿದ್ದರೆ DM ಮಾಡಿ

ಅವಮಾನ ಮಾಡಿದ ವಿಧಿಯೇ ಬಹುಮಾನವನ್ನೂ ಕೊಟ್ಟಿದೆ...ನೀವು ಜೈಲು ಪಾಲಾದಾಗ ನಿಮ್ಮ ಪಕ್ಷದವರಷ್ಟೇ ನಾವೂ ವ್ಯಥೆ ಪಟ್ಟಿದ್ದೆವು... ತಾಳ್ಮೆಗೆ ಫಲ ಸಿಕ್...
03/06/2026

ಅವಮಾನ ಮಾಡಿದ ವಿಧಿಯೇ ಬಹುಮಾನವನ್ನೂ ಕೊಟ್ಟಿದೆ...

ನೀವು ಜೈಲು ಪಾಲಾದಾಗ ನಿಮ್ಮ ಪಕ್ಷದವರಷ್ಟೇ ನಾವೂ ವ್ಯಥೆ ಪಟ್ಟಿದ್ದೆವು...

ತಾಳ್ಮೆಗೆ ಫಲ ಸಿಕ್ಕಿದೆ...

ನಿಮ್ಮಿಂದ ಕರ್ನಾಟಕಕ್ಕೆ ಒಳ್ಳೆಯದಾಗಲಿ...💐

02/06/2026

ಇವರದ್ದು ಹಿಟ್ಲರ್ ಮನಸ್ಥಿತಿಯ ಆಡಳಿತ.. ದಪ್ಪ ಚರ್ಮದ ಸರ್ಕಾರ ಇದು - ನಿಖಿಲ್ ಕುಮಾರಸ್ವಾಮಿ | Nikhil Gowda

31/05/2026

ಈ ಸಲಾನು ಕಪ್ ನಮ್ದೇ🏆 🏆🏏

ಆರ್’ಸಿಬಿ ಐಪಿಎಲ್-2026 ಚಾಂಪಿಯನ್ಸ್ 👑

ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ ತಂಡಕ್ಕೆ ಅಭಿನಂದನೆಗಳು. 💐💐

ಗುಜರಾತ್ ವಿರುದ್ಧ ನಡೆದ ಫೈನಲ್‌ನಲ್ಲಿ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅವರ ಕ್ಲಾಸ್ ಬ್ಯಾಟಿಂಗ್ ಮತ್ತು ಕ್ಯಾಪ್ಟನ್ ರಜತ್ ಪಾಟೀದಾರ್ ಅವರ ಅದ್ಭುತ ನಿರ್ವಹಣೆ, ತಂಡದ ಆಟಗಾರರ ಸಂಘಟಿತ ಪ್ರದರ್ಶನದಿಂದ ಆರ್’ಸಿಬಿ ತಂಡ ಅರ್ಹವಾಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸು ಮತ್ತೆ ನನಸಾಗಿದೆ.

Royal Challengers Bengaluru Virat Kohli

ಅಕ್ಕರೆ, ತ್ಯಾಗ ಮತ್ತು ನಿಸ್ವಾರ್ಥ ಪ್ರೀತಿಯ ಮತ್ತೊಂದು ಹೆಸರೇ ಅಪ್ಪ-ಅಮ್ಮ. ನನ್ನ ಬದುಕಿನ ಪ್ರತಿ ಹೆಜ್ಜೆಯಲ್ಲೂ, ಪ್ರತಿ ಯಶಸ್ಸಿನಲ್ಲೂ ನಿಮ್ಮ ಮ...
31/05/2026

ಅಕ್ಕರೆ, ತ್ಯಾಗ ಮತ್ತು ನಿಸ್ವಾರ್ಥ ಪ್ರೀತಿಯ ಮತ್ತೊಂದು ಹೆಸರೇ ಅಪ್ಪ-ಅಮ್ಮ. ನನ್ನ ಬದುಕಿನ ಪ್ರತಿ ಹೆಜ್ಜೆಯಲ್ಲೂ, ಪ್ರತಿ ಯಶಸ್ಸಿನಲ್ಲೂ ನಿಮ್ಮ ಮಾರ್ಗದರ್ಶನ ಮತ್ತು ಆಶೀರ್ವಾದ ಅಡಗಿದೆ. ನನ್ನ ಪ್ರೀತಿಯ ಅಪ್ಪ-ಅಮ್ಮನಿಗೆ 35ನೇ ವಿವಾಹ ವಾರ್ಷಿಕೋತ್ಸವದ ಅನಂತ ಶುಭಾಶಯಗಳು. 💖

ಕಳೆದ 35 ವರ್ಷಗಳಿಂದ ನೀವು ಒಬ್ಬರಿಗೊಬ್ಬರು ನೀಡಿದ ಪ್ರೀತಿ, ತೋರಿದ ವಿಶ್ವಾಸ ಮತ್ತು ಕಷ್ಟ-ಸುಖಗಳಲ್ಲಿ ಜೊತೆಯಾಗಿ ಸವೆಸಿದ ದಾರಿ ನಮ್ಮೆಲ್ಲರ ಬಾಳಿಗೆ ಅತ್ಯುತ್ತಮ ಪಾಠ. ನಿಮ್ಮ ಈ ಸುಂದರ ಬಾಂಧವ್ಯ ಹೀಗೆಯೇ ನೂರ್ಕಾಲ ನಗುನಗುತ್ತಾ ಸಾಗಲಿ.

ನಮ್ಮ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಹಾಜನತೆಯ ಸೇವೆ ಮಾಡಲು ನೀವು ನನಗೆ ತುಂಬಿದ ಧೈರ್ಯ ಮತ್ತು ಸಂಸ್ಕಾರಕ್ಕೆ ನಾನು ಸದಾ ಚಿರಋಣಿ. ದೇವರು ನಿಮಗೆ ಆಯುರಾರೋಗ್ಯ, ಸುಖ-ಶಾಂತಿ ಕರುಣಿಸಿ, ನಿಮ್ಮ ನಗು ಮುಖ ಸದಾ ಹೀಗೆಯೇ ಇರಲಿ ಎಂದು ನಾವೆಲ್ಲರೂ ಬೇಡಿಕೊಳ್ಳುತ್ತೇವೆ.
ನಿಮ್ಮ ಪ್ರೀತಿಯ ಮಗ, ಸೊಸೆ ಹಾಗೂ ಮೊಮ್ಮಗಳು,
ಹರ್ಷವರ್ಧನ್ ಎಸ್., ಲಕ್ಷ್ಮಿ ಮತ್ತು ಮಾನ್ವಿ

Manjula Sudarshan ಸುದರ್ಶನ್ ರೆಡ್ಡಿ ಡಿ.ಎನ್.

ದಿನಾಂಕ : 29-05-2026 ರಂದು, ನಮ್ಮ ನೆಚ್ಚಿನ ನಾಯಕರಾದ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ನಿಕಟ ಪೂರ್ವ ಶಾಸಕರು ಶ್ರೀ ಎಲ್. ಎನ್. ನಿಸರ್ಗ ನಾರಾ...
30/05/2026

ದಿನಾಂಕ : 29-05-2026 ರಂದು, ನಮ್ಮ ನೆಚ್ಚಿನ ನಾಯಕರಾದ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ನಿಕಟ ಪೂರ್ವ ಶಾಸಕರು ಶ್ರೀ ಎಲ್. ಎನ್. ನಿಸರ್ಗ ನಾರಾಯಣಸ್ವಾಮಿ ರವರು, ಜೆಡಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀ ಕೆ. ವಿ. ಮಂಜುನಾಥ್ ರವರು ಹಾಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಶ್ರೀ ಎಸ್. ಮಹೇಶ್ ಅವರ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಇಂದು ವಿಶ್ವ ಹಿಂದೂ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ "ಗಣ್ಯರೊಂದಿಗೆ ಸಂವಾದ ಮತ್ತು ಧರ್ಮ ರಕ್ಷಾ ಕಾರ್ಯಕ್ರಮ"ದಲ್ಲಿ ಭಾಗವಹಿಸುವ ಸೌಭಾಗ್ಯ ದೊರೆಯಿತು.

ಈ ವಿಶೇಷ ವೇದಿಕೆಯಲ್ಲಿ ವಿಹಿಂಪ ಅಖಿಲ ಭಾರತೀಯ ವಿಶೇಷ ಸಂಪರ್ಕ ಪ್ರಮುಖ್ ಶ್ರೀ ಸಂಜಯ್ ಧವಳೇಕರ್ ಜಿ, ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಶ್ರೀ ಮಂಜುನಾಥ್ ಸ್ವಾಮಿ ಹಾಗೂ ಪ್ರಾಂತ ಸಹ ವಿಶೇಷ ಪ್ರಮುಖ್ ಶ್ರೀ ಮುನಿರಾಜ್ ಅವರ ನೇತೃತ್ವದಲ್ಲಿ ನಮ್ಮ ಧರ್ಮದ ರಕ್ಷಣೆ, ಸಾಂಸ್ಕೃತಿಕ ಮೌಲ್ಯಗಳ ಜಾಗೃತಿ ಮತ್ತು ಸಮಾಜದ ಪ್ರಗತಿಯ ಕುರಿತು ಅತ್ಯಂತ ಅರ್ಥಪೂರ್ಣವಾದ ಸಂವಾದ ನಡೆಯಿತು.

ನಮ್ಮ ಹಿರಿಯ ನಾಯಕರೊಂದಿಗೆ ಹೆಜ್ಜೆ ಹಾಕುತ್ತಾ, ಸಮಾಜದ ಗಣ್ಯರೊಂದಿಗೆ ಇಂತಹ ಶ್ರೇಷ್ಠ ಚಿಂತನೆಗಳನ್ನು ವಿನಿಮಯ ಮಾಡಿಕೊಂಡಿದ್ದು ನನ್ನಲ್ಲಿ ಹೊಸ ಪ್ರೇರಣೆ ಹಾಗೂ ಧನ್ಯತಾಭಾವವನ್ನು ಮೂಡಿಸಿದೆ. ನಮ್ಮ ನಾಯಕರ ಬೆಂಬಲ ಹಾಗೂ ಮಾರ್ಗದರ್ಶನದಲ್ಲಿ ಸಮಾಜದ ಒಳಿತಿಗಾಗಿ ಸದಾ ಶ್ರಮಿಸೋಣ.

#ಧರ್ಮರಕ್ಷಾ #ವಿಶ್ವಹಿಂದೂಪರಿಷತ್ #ಸಂವಾದ #ದೇವನಹಳ್ಳಿವಿಧಾನಸಭಾಕ್ಷೇತ್ರ

29/05/2026

⚖️ ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕುಮಾರಣ್ಣನವರತ್ತ ಬೊಟ್ಟು ಮಾಡ್ತಿರೋದ್ಯಾಕೆ? ಮೇಕೆದಾಟು ಯೋಜನೆಯ ಅಸಲಿ ಸತ್ಯ ಜನರಿಗೂ ತಿಳಿಯಲಿ.

⁠ ⁠

28/05/2026

ಬಿಡದಿ ರೈತರ ಹೆಸರಿನಲ್ಲಿ ಕುಮಾರಸ್ವಾಮಿ ವಿರುದ್ಧ ವಿಷ ಕಾರುತ್ತಿರುವವರಿಗೆ ರೈತನಿಂದಲೇ ಸಿಕ್ತು ತಕ್ಕ ಶಾಸ್ತಿ!



27/05/2026

ಫೈನಲ್’ಗೆ ಲಗ್ಗೆ ಇಟ್ಟ ಆರ್'ಸಿಬಿ 🏏 ತಂಡಕ್ಕೆ ಅಭಿನಂದನೆಗಳು.

ಐಪಿಎಲ್-2026 ಕ್ವಾಲಿಫೈಯರ್- 1 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 92 ರನ್ನುಗಳ ಬೃಹತ್ ಅಂತರದಲ್ಲಿ‌ ಮಣಿಸಿ ಭರ್ಜರಿಯಾಗಿ ಫೈನಲ್ ಪ್ರವೇಶಿಸಿದೆ.


, , RCBvGT

26/05/2026

ಅಂದು ಕುಮಾರಣ್ಣನಿಂದ ಸಾಲ ಮನ್ನಾ... ಇಂದು ಕಾಂಗ್ರೆಸ್‌ನಿಂದ ಜಮೀನಿಗೆ ಕನ್ನ!

Address


Alerts

Be the first to know and let us send you an email when Harsha Vardhan S JDs posts news and promotions. Your email address will not be used for any other purpose, and you can unsubscribe at any time.

  • Want your organization to be the top-listed Government Service?

Share