Aam Aadmi Party Belgaum

Aam Aadmi Party Belgaum Follow us on Twitter , follow us on Instagram@aapbelagavi

http://donate.aamaadmiparty.o

As a party born out of a historic anti-corruption movement, the Aam Aadmi Party holds itself to the highest standards of probity. People were tired of the status quo, nepotistic, dynastic, corrupt, criminal and communal nature of our politics, and AAP’s emergence was a breath of fresh air in this backdrop. There are several reasons that make the Aam Aadmi Party unique and synonymous with the idea of honest and alternative politics in India:

ದಿನಾಂಕ 20 ಆಗಸ್ಟ್ 2025 ಮಾಧ್ಯಮ ಪ್ರಕಟಣೆಯ ಕೃಪೆಗಾಗಿ *ಒಳ ಮೀಸಲಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಸ್ವಾಗತಾರ್ಹ – ಮುಖ್ಯಮಂತ್ರಿ ಚಂದ್ರು*ಪ...
20/08/2025

ದಿನಾಂಕ 20 ಆಗಸ್ಟ್ 2025
ಮಾಧ್ಯಮ ಪ್ರಕಟಣೆಯ ಕೃಪೆಗಾಗಿ

*ಒಳ ಮೀಸಲಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಸ್ವಾಗತಾರ್ಹ – ಮುಖ್ಯಮಂತ್ರಿ ಚಂದ್ರು*

ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಒಳಗೆ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಎಡಗೈ ಪಂಗಡದವರ 35 ವರ್ಷಗಳ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದ್ದು , ಮಂತ್ರಿಮಂಡಲ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

" ಈ ಮೂಲಕ ಎಲ್ಲಾ ಹೋರಾಟಗಾರರಿಗೂ ಪಕ್ಷದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತಿದೆ. ಸದಾಶಿವ ವರದಿ ಆಯೋಗವನ್ನು ಯಥಾವತ್ತಾಗಿ ಅಳವಡಿಸದ ಕಾರಣದಿಂದ ಅಲೆಮಾರಿ ಹಾಗೂ ಇನ್ನಿತರ ಧ್ವನಿ ಇಲ್ಲದ ಸಣ್ಣ ಸಣ್ಣ ಜಾತಿಗಳಿಗೆ ಒಳ ಮೀಸಲಾತಿಯ ಲಾಭ ದಕ್ಕುವುದಿಲ್ಲವೆಂಬ ಭಾವನೆಯೂ ಸಹ ಇದೆ "

" ಮುಂಬರುವ ದಿವಸಗಳಲ್ಲಿ ಬಾಕಿ ಇರುವ ಎಲ್ಲ ನೇಮಕಾತಿಗಳು, ಮುಂಬಡ್ತಿಗಳು ವೇಗದಲ್ಲಿ ಆಗಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಬಲೀಕರಣ ಗೊಳ್ಳಲು ಸರ್ಕಾರವು ಪರಿಶಿಷ್ಟರಿಗೆ ಮೀಸಲಿಟ್ಟಿರುವ ಹಣವನ್ನು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರವಾಗಿ ಬದಲಾವಣೆಗಳನ್ನು ತರಲು ಬಳಸಬೇಕಿದೆ .ಈ ಸಮಾಜದ ಮಕ್ಕಳಿಗೆ ವಿಶ್ವ ಗುಣಮಟ್ಟದ ಆಧುನಿಕ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವಂತಹ ಯೋಜನೆಗಳು ಜಾರಿಯಾಗಬೇಕಿದೆ" ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ವಂದನೆಗಳೊಂದಿಗೆ
ಜಗದೀಶ್ ವಿ.ಸದಂ
ರಾಜ್ಯ ಮಾಧ್ಯಮ ಸಂಚಾಲಕರು ಸಂಪರ್ಕ : 9591199556
9380029038

The Times of India Namma Belgaum (ನಮ್ಮ ಬೆಳಗಾವಿ) tarunbharath Belagavi Smart City Limited Deccan Herald Allaboutbelgaum Vijay Patil Numan Khanapuri Matin Nadaf Sonia D'Souza Vijay Karnataka Marvelous belgaum RizzMak Rizwanahmed Khadirsha Makandar Belgaum Market

05/08/2025 ರಂದು ಮಚ್ಚೆ ಪಟ್ಟಣ ಪಂಚಾಯತ್‌ನ ಹಜರತ್ ಟಿಪ್ಪು ಸುಲ್ತಾನ್ ನಗರದಲ್ಲಿ  ಸಭೆ   (ಜನತಾ ಕಿ ದಿಲ್ ಕಿ ಬಾತ್) ಕಾರ್ಯಕ್ರಮ ಯಶಸ್ವಿಯಾಗಿ ...
12/08/2025

05/08/2025 ರಂದು ಮಚ್ಚೆ ಪಟ್ಟಣ ಪಂಚಾಯತ್‌ನ ಹಜರತ್ ಟಿಪ್ಪು ಸುಲ್ತಾನ್ ನಗರದಲ್ಲಿ ಸಭೆ (ಜನತಾ ಕಿ ದಿಲ್ ಕಿ ಬಾತ್) ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸೌತ್ ಅಸೆಂಬ್ಲಿ ಅಲ್ಪಸಂಖ್ಯಾತರ ಅಧ್ಯಕ್ಷರಾದ ಶ್ರೀ ಅಸ್ಲಾಂ ತಹಸೀಲ್ದಾರ್ ಅವರ ನೇತೃತ್ವದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಸಂಪೂರ್ಣವಾಗಿ ಆಲಿಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖ ಸದಸ್ಯರು:
ಶಬ್ಬೀರ್ ಮುಲ್ಲಾ ಸರ್, ನಿಜಾಮುದ್ದೀನ್ ಸಾಬ್, ನಜೀರ್ ಯಾರಗಟ್ಟಿ ಸಾಬ್, ಶಫಿ ದಾವಣಗಿ್ರಿ ಸಾಬ್, ದಸ್ತಗೀರ್ ಮುಲ್ಲಾ ಸಾಬ್, ಹಾಗೂ ಆಯೇಶಾ ಮ್ಯಾಡಂ.

ಜನರು ತಿಳಿಸಿದ ಹಲವು ಸಮಸ್ಯೆಗಳಲ್ಲಿ ಒಂದು ಪ್ರಮುಖ ಸಮಸ್ಯೆಯಾಗಿದ್ದ — ಬೀದಿ ದೀಪಗಳ ಕೊರತೆ — ಇಂದು ಯಶಸ್ವಿಯಾಗಿ ಪರಿಹಾರಗೊಂಡಿದೆ.
ಇದು ಸಾರ್ವಜನಿಕರ ಹಿತಕ್ಕಾಗಿ ಮಾಡಿದ ಮಹತ್ವದ ಹೆಜ್ಜೆಯಾಗಿದ್ದು, ಈ ಸಾಧನೆಗೆ ಸೌತ್ ಅಸೆಂಬ್ಲಿ ಅಲ್ಪಸಂಖ್ಯಾತರ ಸಂಪೂರ್ಣ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

#ಹಜರತ್ತಿಪ್ಪುಸುಲ್ತಾನನಗರ #ಜನತಾಕಿದಿಲ್ಕಿಬಾತ್ #ಸೌಥ್ಅಸೆಂಬ್ಲಿಅಲ್ಪಸಂಖ್ಯಾತ #ಜನಸೇವೆಯದಾರಿಗೆ #ಬೀದಿದೀಪಪರಿಹಾರ

05/08/2025
05/08/2025

🔵 ಮಹಲ್ಲಾ ಸಭಾ – “ಜನತಾ ಕೀ ದಿಲ್ ಕೀ ಬಾತ್” | ಬೆಳಗಾವಿ ದಕ್ಷಿಣ ವಿಧಾನಸಭೆ 🔵

ಇಂದು AAP ಅಲ್ಪಸಂಖ್ಯಾತ ವಿಭಾಗ, ಬೆಳಗಾವಿ ವತಿಯಿಂದ ಮಚ್ಚೆ ಪಟ್ಟಣ ಪಂಚಾಯತ್‌ನ ಹಜರತ್ ಟಿಪ್ಪು ಸುಲ್ತಾನ್ ನಗರದಲ್ಲಿ ಮಹಲ್ಲಾ ಸಭಾ – “ಜನತಾ ಕೀ ದಿಲ್ ಕೀ ಬಾತ್” ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವು ಶ್ರೀ ಅಸ್ಲಂ ತಹಶೀಲ್ದಾರ್ (ದಕ್ಷಿಣ ವಿಧಾನಸಭೆ ಅಲ್ಪಸಂಖ್ಯಾತ ಅಧ್‌ಯಕ್ಷರು) ಅವರ ಸಕ್ರಿಯ ನೇತೃತ್ವದಲ್ಲಿ ನೆರವೇರಿದ್ದು,
ಶ್ರೀ ಅಬ್ದುಲ್ ತವ್ವಾಫ್ ಶೇಖ್ (ರಾಜ್ಯ ಅಲ್ಪಸಂಖ್ಯಾತ ಉಪಾಧ್ಯಕ್ಷರು) ಮತ್ತು
ಶ್ರೀ ಬಸೀರ್ ಅಹಮದ್ ಜಮಾದಾರ (ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷರು, ಬೆಳಗಾವಿ) ಇವರ ಗೌರವಾನ್ವಿತ ಹಾಜರಾತಿಯಿಂದ ಕಾರ್ಯಕ್ರಮಕ್ಕೆ ಮತ್ತಷ್ಟು ಶೋಭೆ ತಂದಿತು.
ಸ್ಥಳೀಯ ನಾಗರಿಕರು ತಮ್ಮ ನಿತ್ಯದ ಸಮಸ್ಯೆಗಳನ್ನು ಧೈರ್ಯವಾಗಿ ತಿಳಿಸಿಕೊಂಡು ಪರಿಹಾರಕ್ಕೆ ಆಗ್ರಹಿಸಿದರು. ನಮ್ಮ ತಂಡ ಅವರುಗಳ ಕುಂದು-ಕೊರತೆಗಳನ್ನು ಆಲಿಸಿ ಇವುಗಳ ಮೇಲೆ ಭೂಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಲು ಭರವಸೆ ನೀಡಿತು.

AAP ಅಲ್ಪಸಂಖ್ಯಾತ ವಿಭಾಗ – ಬೆಳಗಾವಿ, ಪ್ರತಿಯೊಂದು ವಾರ್ಡ್ ಹಾಗೂ ಪ್ರತಿಯೊಂದು ಮಹಲ್ಲಾದವರೆಗೆ ತಲುಪುತ್ತಾ ಭ್ರಷ್ಟಾಚಾರರಹಿತ ಹಾಗೂ ಜನಕೇಂದ್ರಿತ ರಾಜಕಾರಣವನ್ನು ಬೆಂಬಲಿಸಲು ಬದ್ಧವಾಗಿದೆ.

💪 ನಾವು ಒಟ್ಟಾಗಿ ಜನರ ಧ್ವನಿಯನ್ನು ಬಲಪಡಿಸಿ ಉತ್ತಮ ಬೆಳಗಾವಿಯನ್ನು ಸೋಣ.

ಜೈ ಹಿಂದ್ | ಜೈ ಭೀಮ್ | ಜೈ ಸಂವಿಧಾನ

24/07/2025

Watch MLA Cruz as he speaks on the govt budget 2025-26

19/07/2025
15 ಜುಲೈ 2025 ಮಾಧ್ಯಮ ಪ್ರಕಟಣೆಯ ಕೃಪೆಗಾಗಿ *ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಶ್ಲಾಘಿಸಿದ ಮುಖ್ಯಮಂತ್ರಿ ಚಂದ್ರು*" ಸಾವಿರಕ್ಕೂ ಹೆಚ್ಚು ದಿವಸ...
15/07/2025

15 ಜುಲೈ 2025
ಮಾಧ್ಯಮ ಪ್ರಕಟಣೆಯ ಕೃಪೆಗಾಗಿ

*ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಶ್ಲಾಘಿಸಿದ ಮುಖ್ಯಮಂತ್ರಿ ಚಂದ್ರು*

" ಸಾವಿರಕ್ಕೂ ಹೆಚ್ಚು ದಿವಸಗಳ ಕಾಲದ ದೇವನಹಳ್ಳಿಯ ರೈತರ ಹೋರಾಟ ಕೊನೆಗೂ ಜಯ ಸಿಕ್ಕಿದೆ. ರೈತ ಶಕ್ತಿ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಇತ್ತೀಚಿನ ದಿನಮಾನಗಳಲ್ಲಿ ಈ ಹೋರಾಟ ಸಾಕ್ಷಿಭೂತವಾಗಿದೆ. ಇವರುಗಳ ಹೋರಾಟದಲ್ಲಿ ಆಮ್ ಆದ್ಮಿ ಪಕ್ಷವು ನಿರಂತರವಾಗಿ ಜೊತೆಯಲ್ಲಿತ್ತು. ಶಾಂತಿಯುತ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ರೈತ ಹೋರಾಟಗಾರರ ಭಾವನೆಗಳಿಗೆ ಗೌರವ ನೀಡಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣ ಹಿಂಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಮೂಲಕ ಶ್ಲಾಘನೆ ವ್ಯಕ್ತಪಡಿಸುತ್ತಿದ್ದೇನೆ" ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಮುಂದುವರೆದು ಮಾತನಾಡಿದ ಮುಖ್ಯಮಂತ್ರಿ ಚಂದ್ರು " ಕೈಗಾರಿಕೆಗಳ ಅಭಿವೃದ್ಧಿಯ ನೆಪದಲ್ಲಿ ತಲೆತಲಾಂತರದಿಂದ ಕೃಷಿ ಬದುಕನ್ನೇ ಅನುಸರಿಸಿಕೊಂಡು, ಫಲವತ್ತಾದ ಬೆಳೆಗಳನ್ನು ಬೆಳೆಯುತ್ತಿದ್ದ ದೇವನಹಳ್ಳಿಯ ಚನ್ನರಾಯಪಟ್ಟಣದ ಸಾವಿರಾರು ಎಕರೆ ಇಂದು ರಿಯಲ್ ಎಸ್ಟೇಟ್ ಮಾಫಿಯಾಗಳ ಕಪಿಮುಷ್ಠಿಯಿಂದ ಹೊರ ಬಿದ್ದಿದೆ. ಇನ್ನು ಮುಂದಾದರು ಯಾವುದೇ ಸರ್ಕಾರಗಳು ಬರಡು ಭೂಮಿಗಳನ್ನು ಆಯ್ಕೆ ಮಾಡಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗಗಳನ್ನು ನೀಡಬೇಕು. ರೈತರ ಈ ಶಾಂತಿಯುತ ಹೋರಾಟ ನಮ್ಮ ದೇಶಕ್ಕೆ ಮಾದರಿಯಾಗಿದೆ. ಯಾವುದೇ ರಕ್ತಪಾತಗಳಿಲ್ಲದೆ ಕೊನೆಗೂ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ಆಮ್ ಆದ್ಮಿ ಪಕ್ಷವು ಸದಾಕಾಲ ಕೈಗಾರಿಕೆಗಳ ಅಭಿವೃದ್ಧಿಯ ನೆಪದಲ್ಲಿ ಫಲವತ್ತಾದ ಕೃಷಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಇಂತಹ ಕುತಂತ್ರಗಳಿಗೆ ವಿರೋಧವನ್ನು ವ್ಯಕ್ತಪಡಿಸುತ್ತದೆ. ರೈತ ಹೋರಾಟದಲ್ಲಿ ಸದಾಕಾಲ ಜೊತೆಯಲ್ಲಿ ಇರುತ್ತದೆ " ಎಂದು ತಿಳಿಸಿದರು.

ವಂದನೆಗಳೊಂದಿಗೆ,
ಜಗದೀಶ್ ವಿ .ಸದಂ
ರಾಜ್ಯ ಮಾಧ್ಯಮ ಸಂಚಾಲಕರು ಸಂಪರ್ಕ 9591199556
9380029038

The Times of India Allaboutbelgaum Pudhari Deccan Herald Vijay Karnataka Marvelous belgaum

12/07/2025

Address

Belgaum
590002

Alerts

Be the first to know and let us send you an email when Aam Aadmi Party Belgaum posts news and promotions. Your email address will not be used for any other purpose, and you can unsubscribe at any time.

Contact The Organization

Send a message to Aam Aadmi Party Belgaum:

Share