SDPI - Bantwal Assembly Constituency

  • Home
  • SDPI - Bantwal Assembly Constituency

SDPI - Bantwal Assembly Constituency Contact information, map and directions, contact form, opening hours, services, ratings, photos, videos and announcements from SDPI - Bantwal Assembly Constituency, Political Party, .

20/09/2024
ಮುನ್ಸೂಚಿಸದೆ ಜಮಾಯಿಸಿ, ಗಲಭೆಗೆ ಯತ್ನಿಸಿದ ಭಜರಂಗದಳ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಯಾಕಿಲ್ಲ? ಎಸ್ ಡಿ ಪಿ ಐ ಪ್ರಶ್ನೆಬಂಟ್ವಾಳ : 2024 ಸೆಪ...
17/09/2024

ಮುನ್ಸೂಚಿಸದೆ ಜಮಾಯಿಸಿ, ಗಲಭೆಗೆ ಯತ್ನಿಸಿದ ಭಜರಂಗದಳ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಯಾಕಿಲ್ಲ? ಎಸ್ ಡಿ ಪಿ ಐ ಪ್ರಶ್ನೆ

ಬಂಟ್ವಾಳ : 2024 ಸೆಪ್ಟೆಂಬರ್ 16 :- ದುರುದ್ದೇಶಪೂರಿತ ಸಂಚನ್ನು ಹೂಡಿ ಪೊಲೀಸ್ ಇಲಾಖೆಗೆ ಯಾವುದೇ ಅನಮತಿ, ಮುನ್ಸೂಚನೆ ನೀಡದೆ ಬಿ.ಸಿ ರೋಡ್ ಪೇಟೆ ಬಳಿ ಜಮಾಯಿಸಿ, ಗಲಭೆಗೆ ಯತ್ನಿಸಿದ ಭಜರಂಗದಳ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಯಾಕೆ ಕೈಗೊಳ್ಳಲಿಲ್ಲ ? ಎಂದು SDPI ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್ ಎಚ್ ಸರಕಾರ ಮತ್ತು ಪೊಲೀಸರಿಗೆ ಪ್ರಶ್ನಿಸಿದ್ದಾರೆ.

'ಪದೇ ಪದೇ ದ.ಕ ಜಿಲ್ಲೆಯ ಶಾಂತಿಯನ್ನು ಹದಗೆಡುವ ಭಜರಂಗದಳ ಯಾಕೆ ಸರಕಾರಕ್ಕೆ ಕಂಟಕವಾಗಿ ಕಾಣುತ್ತಿಲ್ಲ? ಇಂದು ಅವರು ಕೇವಲ ಜಮಾಯಿಸಿದ್ದು ಮಾತ್ರವಲ್ಲದೆ ಬಹಿರಂಗ ಬೆದರಿಕೆಗಳು, ಪೊಲೀಸರೊಂದಿಗೆ ನೂಕು ನುಗ್ಗಲು, ಅವಾಚ್ಯ ಶಬ್ದಗಳ ನಿಂದನೆಗಳಂತಹ ಕುಕೃತ್ಯಗಳು ಮಾಡಿದ್ದಾರೆ. ಯಾಕೆ ಸರಕಾರ ಕಣ್ಣಿದ್ದೂ ಕುರುಡರಂತೆ ವರ್ತಸುತ್ತಿದೆ ?’ ಎಂದೂ ಪ್ರಶ್ನಿಸಿದ್ದಾರೆ.

'SP, DYSP ಗಳಂತಹ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಬ್ಯಾರಿಕೇಡ್ ತೆರವು, ರಸ್ತೆ ಬಂದ್, ಅವಾಚ್ಯ ನಿಂದನೆಗಳು, ಅಮಾಯಕ ದಾರಿಹೋಕರಿಗೆ ಉಪಟಳದಂತಹ ಕೃತ್ಯಗಳು ಎಸೆಯುವಾಗ ಪೊಲೀಸರ ಮೌನ ನಿಜಕ್ಕೂ ಅಸಮಾಧಾನ ತಂದಿದೆ' ಎಂದು ಅವರು ಹೇಳಿದ್ದಾರೆ.

'ಶರಣ್ ಪಂಪ್ವೆಲ್ ನ ಬಹಿರಂಗ ಬೆದರಿಕೆ ಹೇಳಿಕೆಗಳು, ದಾಳಿ ಮಾತುಗಳು ತಾಂಡವವಾಡುತ್ತಿರುವಾಗ ಸರಕಾರಕ್ಕೆ ಆತ ಆರೋಪಿಯಾಗಿ ಕಂಡಿಲ್ಲ. ಆತನನ್ನು ಬಂಧಿಸಲೂ ಸಾಧ್ಯವಾಗಿಲ್ಲ. ಹೊರತು ಅದಕ್ಕೆ ಪ್ರತ್ಯುತ್ತರ ನೀಡಿದ ತನ್ನದೇ ಪಕ್ಷದ ಕಾರ್ಯಕರ್ತ ಸರಕಾರಕ್ಕೆ ಆರೋಪಿಯಾಗಿ ಕಂಡದ್ದು ಅಂಜಿಕೆಗೆ ನಿದರ್ಶನ' ಎಂದಿದ್ದಾರೆ.

ಇಂದಿನ ಪ್ರತಿಭಟನೆ, ಜನಜಂಗುಳಿಯನ್ನು ನಿಗ್ರಹಿಸುವಲ್ಲಿ ಸ್ಥಳೀಯ ಪೊಲೀಸರಿಗಿದ್ದಷ್ಟು ಆಸಕ್ತಿ ದ.ಕ ಜಿಲ್ಲಾ ವರಿಷ್ಠಾಧಿಕಾರಿಗಿರಲಿಲ್ಲ ಎಂದು ಭಾಸವಾಗುತ್ತಿದೆ. ವರಿಷ್ಠಾಧಿಕಾರಿ ಬಯಸಿದ್ದರೆ ಈ ದುಷ್ಟರನ್ನು ಹೆಡೆಮುರಿಕಟ್ಟಬಹುದಿತ್ತು. ಬಿಸಿ ರೋಡ್ ನಲ್ಲಿ ಯಾವುದೇ ಗೊಂದಲ, ಭೀತಿ ಉಂಟಾಗುತ್ತಿರಲಿಲ್ಲ' ಎಂದೂ ಅಭಿಪ್ರಾಯಟ್ಟಿದ್ದಾರೆ.

'ಒಬ್ಬರ ಸವಾಲನ್ನು ಸ್ವೀಕರಿಸುವ ನೆಪವನ್ನು ಇಟ್ಟುಕೊಂಡು ಇಡೀ ಬಂಟ್ವಾಳ - ಬಿಸಿರೋಡ್ ನ ಶಾಂತಿಯನ್ನ ಕದಡಲು ಹೊರಟಿರುವ ಶರಣ್ ಪಂಪ್ವೆಲ್ ಮತ್ತು ಆತನ ತಂಡವನ್ನು ಗೃಹ ಇಲಾಖೆ ನಿಗಾದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಅನಾಹುತಗಳಿಗೆ ಪೊಲೀಸ್ ಇಲಾಖೆ ಮತ್ತು ಸರಕಾರ ಕಾರಣಕರ್ತರಾಗಬಹುದು. ಕಾನೂನು ಪಾಲಕರಾದ ಪೊಲೀಸರು ತಾರತಮ್ಯ ತೋರದೆ ಸಮಾಜದ ಶಾಂತಿ ಕಾಪಾಡುವಲ್ಲಿ ಶ್ರಮಿಸಿ' ಎಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

13/09/2024

SDPI ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ವಿಳಂಬದ ವಿರುದ್ಧ ಪ್ರತಿಭಟನೆ ಮತ್ತು ರಸ್ತೆ ತಡೆಯ ಒಂದು ಪ್ರೋಮೊ ವಿಡಿಯೋ (02:11)

13/09/2024
ಎಸ್ ಡಿ ಪಿ ಐ ಬಂಟ್ವಾಳ ವತಿಯಿಂದ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ವಿಳಂಬದ ವಿರುದ್ಧ ಹೆದ್ದಾರಿ ತಡೆದು ಪ್ರತಿಭಟನೆಎಸ್ ಡಿ ಪಿ ಐ ಬಂಟ್ವಾಳ...
12/09/2024

ಎಸ್ ಡಿ ಪಿ ಐ ಬಂಟ್ವಾಳ ವತಿಯಿಂದ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ವಿಳಂಬದ ವಿರುದ್ಧ ಹೆದ್ದಾರಿ ತಡೆದು ಪ್ರತಿಭಟನೆ

ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ವಿಳಂಬದ ವಿರುದ್ಧ ನಾರಾಯಣ ಗುರು ಸರ್ಕಲ್ ಬಿ ಸಿ ರೋಡಿನಲ್ಲಿ ಬೃಹತ್ ಪ್ರತಿಭಟನೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಾಹುಲ್ ಎಸ್ ಎಚ್ ನೇತೃತ್ವದಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ "ಜನರು ಸಂಚರಿಸಲು ಸಮಸ್ಯೆಯಾಗುತ್ತಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ ಮೌನವಾಗಿ ಉಳಿಯುವ ಬದಲು ಈ ಅವ್ಯವಸ್ಥೆಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕೆಂದರು."

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಎಸ್ ಮಾತನಾಡಿ "ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿ ಹೊಂದುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಹೆದ್ದಾರಿ ಪ್ರಾಧಿಕಾರ ಕಡೆಗಣಿಸುತ್ತಿದೆ, ಲಕ್ಷಾಂತರ ರೂಪಾಯಿ ತೆರಿಗೆಯ ರೂಪದಲ್ಲಿ ಪಡೆಯುವ ಸರ್ಕಾರ ಸಮರ್ಪಕವಾದ ರಸ್ತೆಯನ್ನು ಕೊಡಲು ವಿಫಲವಾಗಿದೆ" ಎಂದರು.

ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ್ದ ಬಂಟ್ವಾಳ ಪುರಸಭೆಯ ಉಪಾಧ್ಯಕ್ಷ ಮೂನಿಷ್ ಆಲಿ ಮಾತನಾಡಿ "ರಸ್ತೆ ಕಾಮಗಾರಿ ಮಾಡುವಾಗ ಕೆಲವೊಂದು ಮಾನದಂಡಗಳನ್ನು ಪಾಲಿಸಬೇಕು, ಅದರಲ್ಲಿ ಮುಖ್ಯವಾಗಿ ವಾಹನ ಸುಗಮ ಸಂಚಾರಕ್ಕೆ ಸರ್ವಿಸ್ ರಸ್ತೆ ಮಾಡದೇ ಜನರನ್ನು ವಂಚಿಸುತ್ತಿದೆ. ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಟೆಂಡರ್ ತೆಗೆಯುವ ಜನರ ಹಿಂದಿನ ಕೆಲಸ ಕಾರ್ಯಗಳ ಬಗ್ಗೆ ನೋಡುವ ಬದಲಿಗೆ, ಅವರ ಪಕ್ಷ ಮತ್ತು ಕುಟುಂಬದ ಹಿನ್ನೆಲೆಯನ್ನು ತಿಳಿದು ಬಿಜೆಪಿ ಸರ್ಕಾರ ಟೆಂಡರ್ ನೀಡುತ್ತಿರುವುದು ನಾಚಿಕೆಯ ಸಂಗತಿಯಾಗಿದೆ. ನಮ್ಮ ಜಿಲ್ಲೆಗೆ ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿಗಳು ಭೇಟಿ ಕೊಡುವುದಾದರೆ ಕೂಡಲೇ ಎಚ್ಚೆತ್ತು ಕೊಳ್ಳುವ ಹೆದ್ದಾರಿ ಪ್ರಾಧಿಕಾರ ರಾತ್ರಿ ಬೆಳಗಾಗುವುದರೊಳಗೆ ರಸ್ತೆಯ ಹೊಂಡಗಳನ್ನು ಸರಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಾಗ, ಸಾಮಾನ್ಯ ಜನರಿಗೆ ತೊಂದರೆಯಾಗುವಾಗ ಯಾಕೆ ಸರಿಪಡಿಸಲಾಗುವುದಿಲ್ಲ" ಎಂದು ಟೀಕಿಸಿದರು.

ಮನವಿ ಸ್ವೀಕರಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಥವಾ KNR ಸಂಸ್ಥೆಯ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಬೇಕೆಂದು ಆಗ್ರಹಿಸಿ ರಸ್ತೆ ತಡೆ ನಡೆಸಲಾಯಿತು. KNR ಸಂಸ್ಥೆಯ ಇಂಜಿನಿಯರ್ ಬಂದು ಮನವಿ ಸ್ವೀಕರಿಸಿದ ನಂತರ ಸಮಾರೋಪ ಭಾಷಣ ಮಾಡಿದ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಾಹುಲ್ ಎಸ್ ಎಚ್ "20 ದಿವಸಗಳ ಒಳಗೆ ಸರ್ವಿಸ್ ರಸ್ತೆಯನ್ನು ಡಾಮರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಕೆ ಆಗುವವರೆಗೂ ರಸ್ತೆ ತಡೆ ಮಾಡಲಿದ್ದೇವೆ" ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ತಲಪಾಡಿ,‌ ಶಾಕೀರ್ ಅಳಕೆಮಜಲು‌, ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಮುಷ್ತಾಕ್ ತಲಪಾಡಿ,ಕೊಳ್ನಾಡು ಬ್ಲಾಕ್ ಅಧ್ಯಕ್ಷರಾದ ಕಲಂದರ್ ಪರ್ತಿಪ್ಪಾಡಿ, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರ್,‌ ಕಲ್ಲಡ್ಕ ಬ್ಲಾಕ್ ಅಧ್ಯಕ್ಷರಾದ ಸತ್ತಾರ್ ಕಲ್ಲಡ್ಕ, ಸರಪಾಡಿ ಬ್ಲಾಕ್ ಅಧ್ಯಕ್ಷರಾದ ಹೈದರ್ ಕಾವಳಕಟ್ಟೆ, ಬಂಟ್ವಾಳ ಪುರಸಭಾ ಸಮಿತಿ ಉಪಾಧ್ಯಕ್ಷ ಯೂಸುಫ್ ಆಲಡ್ಕ, ಪಕ್ಷದ ಕಾರ್ಯಕರ್ತರು,‌ ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Address


Telephone

+919858788988

Website

Alerts

Be the first to know and let us send you an email when SDPI - Bantwal Assembly Constituency posts news and promotions. Your email address will not be used for any other purpose, and you can unsubscribe at any time.

Contact The Organization

Send a message to SDPI - Bantwal Assembly Constituency:

  • Want your organization to be the top-listed Government Service?

Share