Sdpi alady

Sdpi alady Contact information, map and directions, contact form, opening hours, services, ratings, photos, videos and announcements from Sdpi alady, Political Party, .

22/12/2019

ಅಲ್ ಹಮ್ದುಲಿಲ್ಲಾಹ್ *ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಲಾಡಿ ವಲಯ ಇದರ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್...
16/12/2019

ಅಲ್ ಹಮ್ದುಲಿಲ್ಲಾಹ್ *ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಲಾಡಿ ವಲಯ ಇದರ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಎರಡನೇ‌ ವರ್ಷದ ಅಂಗವಾಗಿ‌ ಬೃಹತ್ ‌ರಕ್ತದಾನ ಶಿಬಿರದ ಸಮಾರೋಪ ಸಮಾರಂಭ ಎನ್.ಎಫ್.ಸಿ ಆಫೀಸ್‌ನಲ್ಲಿ ನಿನ್ನೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನ ವಹಿಸಿದಂತಹ ಬದ್ರೀಯಾ ಜುಮಾ ಮಸೀದಿ ಆಲಾಡಿಯ ಖತೀಬರಾದ ಬಹು || ರೀಯಾಝ್ ಪೈಝಿ ಇವರ ದುಆ ಆಶಿರ್ವಾದದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.ಕಾರ್ಯಕ್ರಮಕ್ಕೆ ಆಗಮಿಸಿದಂತಹ ಗಣ್ಯರನ್ನು ‌ರಹೀಂ ಆಲಾಡಿ ಸ್ವಾಗತಿಸಿದರು. ಅಧ್ಯಕ್ಷೀಯ ಭಾಷಣ ಮಾಡಿದ ಖತೀಬರಾದಂತಹ ರೀಯಾಝ್ ಪೈಝಿಯವರು ರಕ್ತದಾನದ ಶ್ರೇಷ್ಠತೆಯನ್ನು ವಿವರಿಸಿದರು ಮತ್ತು ಈ ಕಾರ್ಯಕ್ರಮವನ್ನು ಆಯೋಜಿಸಿದಂತಹ ವ್ಯಕ್ತಿಗಳಿಗೆ ದುಆ ಮಾಡಿದರು. ಅದೇ ರೀತಿ ‌ಮುಖ್ಯ ಭಾಷಣ ಮಾಡಿದಂತಹ ಡಾ|| ಹಸನಬ್ಬ ರವರು ರಕ್ತದಾನ ಯಾಕೆ ಮಾಡಬೇಕು? ರಕ್ತದಾನ ಮಾಡಿದರೆ‌‌ ಉಪಯೋಗ ಏನು? ಮತ್ತು ಯಾರು ರಕ್ತದಾನ ಮಾಡಬಹುದು ಎಂಬುದರ ಬಗ್ಗೆ ಬಹಳ ಸ್ಪಷ್ಟವಾಗಿ ವಿವರಿಸಿಕೊಟ್ಟರು. ಕಾರ್ಯಕ್ರಮದ ಮುಂದಕ್ಕೆ ಮಾತನಾಡಿದಂತಹ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದಂತಹ ಯೂಸುಫ್ ಆಲಡ್ಕರವರು ಅವರ ಕಿರಿಯ ವಯಸ್ಸಿನಲ್ಲಿ ಉಂಟಾದಂತಹ ರಕ್ತದ ಅವಶ್ಯಕತೆ ಬಗ್ಗೆ ಒಂದು ಘಟನೆಯನ್ನು ವಿವರಿಸಿದರು ಮತ್ತು ಕೊನೆಯದಾಗಿ ಎಸ್.ಡಿ.ಟಿ‌.ಯು ಪ್ರಧಾನ ಕಾರ್ಯದರ್ಶಿ ಮಲಿಕ್ ಕೊಳಕೆ ಇವರು ಎಸ್.ಡಿ.ಪಿ.ಐ ಆಲಾಡಿ ವಲಯದ ಸೋಶಿಯಲ್ ವರ್ಕ್ ಮತ್ತು ಸಜೀಪ ಮುನ್ನೂರು ಗ್ರಾಮದ ಜನರಿಗಾಗಿ‌ ಮಾಡಿದಂತಹ ಹೋರಾಟಗಳ ಬಗ್ಗೆ ಮತ್ತು ರೇಚಕ ಸ್ಥಾವರ ಹೋರಟ ಮಾಡಿದಂತಹ ವಿಷಯ ಮೀಡಿಯಾದಲ್ಲಿ ಬಂದದನ್ನು ಅಭಿನಂದಿಸಿ ಧನ್ಯವಾದ ಭಾಷಣವನ್ನು ಕೊನೆಗೊಳಿಸಿದರು. ವೇದಿಕೆಯಲ್ಲಿ ಪಾಪ್ಯುಲರ್‌ ಪ್ರಂಟ್ ಆಫ್ ಇಂಡಿಯಾ ವಲಯ ಅಧ್ಯಕ್ಷ ಖಾದರ್ ಉದ್ದೋಟು, ಎಸ್.ಡಿ.ಪಿ.ಐ ಆಲಾಡಿ‌ ಯುನಿಟ್ ಅಧ್ಯಕ್ಷ ಶರೀಫ್ ಕೊಪ್ಪಳ, ಬದ್ರೀಯ ಜುಮಾ ಮಸೀದಿ ಆಲಾಡಿಯ ಅಧ್ಯಕ್ಷರಾದ‌ ರೈಮಾನ್ ಕೆ.ಎಮ್ , ನೂರುಲ್ ಹುದಾ ಮದ್ರಸಾದ ಉಸ್ತಾದರು‌, ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾದಂತಹ‌ ಮಜೀದ್ ರವರು ಉಪಸ್ಥಿತಿ ಇದ್ದರು.*

14/12/2019
ಸಾರ್ವಜನಿಕರು ಭಾಗವಹಿಸಿ ಬಂದು ಸಹಕರಿಸಬೇಕಾಗಿ ವಿನಂತಿ
03/12/2019

ಸಾರ್ವಜನಿಕರು ಭಾಗವಹಿಸಿ ಬಂದು ಸಹಕರಿಸಬೇಕಾಗಿ ವಿನಂತಿ

Address


Website

Alerts

Be the first to know and let us send you an email when Sdpi alady posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sdpi alady:

  • Want your organization to be the top-listed Government Service?

Share