Competative Exam Mission

Competative Exam Mission Contact information, map and directions, contact form, opening hours, services, ratings, photos, videos and announcements from Competative Exam Mission, Landmark & historical place, Sulikunte, Bangarapet.

ಕನ್ನಡದ ಆಸ್ತಿ - ಮಾಸ್ತಿಯವರ ಜನುಮದಿನವಿಂದು 🙏 #ಜನ್ಮದಿನ  #ಕನ್ನಡಆಸ್ತಿ  #ಮಾಸ್ತಿ  #ವಿಶೇಷ
06/06/2018

ಕನ್ನಡದ ಆಸ್ತಿ - ಮಾಸ್ತಿಯವರ ಜನುಮದಿನವಿಂದು 🙏

#ಜನ್ಮದಿನ #ಕನ್ನಡಆಸ್ತಿ #ಮಾಸ್ತಿ #ವಿಶೇಷ

02/05/2018

#ಕನ್ನಡ_ವ್ಯಾಕರಣದ_50_ಪ್ರಶ್ನೆಗಳು:
- Nagesh S N
==============================
ತಿರುಮಲೆ ರಾಜಮ್ಮನವರ ಕಾವ್ಯನಾಮ ಯಾವುದು?
A. ಪಾರ್ವತಿ
B. ಭಾವನಾ
C. ಚಂದನಾ
D. ಭಾರತಿ
D✅

ಕುಡುಕರ ಭಾಷೆಯಂತೆ ಕಾವ್ಯ ರಚಿಸಿದ ಕವಿ ಯಾರು?
A. ಅ.ನ.ಕೃ
B. ಜೆ.ಪಿ.ರಾಜರತ್ನಂ
C. ಬಿ.ಜಿ.ಎಲ್.ಸ್ವಾಮಿ
D. ರಾಶಿ
B✅

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಎಂದು ಹೇಳಿದ ಕವಿ
A. ಕೆ.ಎಸ್.ನರಸಿಂಹಸ್ವಾಮಿ
B. ಚನ್ನವೀರ ಕಣವಿಯವರ
C. ತ.ರಾ.ಸು
D. ಡಿ.ವಿ.ಜಿ
D✅

ರನ್ನನ ಕುಲಕಸಬು ಯಾವುದು?
A. ಕಲ್ಲು ಒಡೆಯುವುದು
B. ವ್ಯಾಪಾರ ಮಾಡುವುದು
C. ಬಳೆ ಮಾರುವುದು
D. ಹಣ್ಣು ಮಾರುವುದು
C✅

ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ ಎಂದ ಕವಿ ಯಾರು ?
A. ಡಾ.ಡಿ.ಎಸ್.ಕರ್ಕಿ
B. ಈಶ್ವರ ಸಣಕಲ್ಲ
C. ಬಸವರಾಜ ಕಟ್ಟೀಮನಿ
D. ಬಸವರಾಜ ಬೆಟಗೇರಿ
B✅

ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದರೇನು ಫಲ ಎಂದ ದಾಸರು
A. ಕನಕದಾಸರು
B. ವ್ಯಾಸರಾಯರು
C. ತುಳಸಿದಾಸರು
D. ಪುರಂದರದಾಸರು
D✅

ಕನ್ನಡದಲ್ಲಿ ದ್ವಿವಚನವಿದೆ ಎಂದು ಹೇಳಿದ ಕವಿ
A. ರನ್ನ
B. ಕುವೆಂಪು
C. ತೀ.ನಂ.ಶ್ರೀ
D. ಕನಕದಾಸರು
C✅

ಹಸಿವಾದೊಡೆ ಕೆರೆ ಹಳ್ಳ ಭಾವಿಗಳುಂಟು ಎಂದು ಹೇಳಿದವರಾರು?
A. ಅಕ್ಕಮಹಾದೇವಿ
B. ಅಲ್ಲಮಪ್ರಭು
C. ಅಂಡಯ್ಯ
D. ಅತ್ತಿಮಬ್ಬೆ
A ✅

ಕುಮಾರವ್ಯಾಸ ಭಾರತವು ಮೊದಲು ಎಷ್ಟು ಪರ್ವಗಳನ್ನು ಹೊಂದಿದೆ?
A. 5
B. 10
C. 15
D. 20
B✅

ಚಿತ್ತವಿಲ್ಲದ ಗುಡಿಯ ಸುತ್ತಿದಡೆ ಫಲವೇನು? ಎಂದು ಹೇಳಿದ ಕವಿ?
A. ಬಸವಣ್ಣನವರು
B. ಕೆ.ಎಸ್.ನಿಸಾರ ಅಹಮದ್
C. ಕನಕದಾಸರು
D. ಸರ್ವಜ್ಞ
D✅

ಕರುಣಾಳು ಬಾ ಬೆಳಕೇ ಮುಸುಕಿದಿ ನೀ ಮಬ್ಬಿನಲಿ ಎಂದ ಕವಿ?
A. ಬಿ.ಎಂ.ಶ್ರೀ
B. ತಿ.ನಂ.ಶ್ರೀ
C. ಕೆ.ಎಸ್.ನರಸಿಂಹಸ್ವಾಮಿ
D. ಕುವೆಂಪು
A✅

ಪಾಂಚಾಲಿ ಇದು ಯಾರ ಹೆಸರು?
A. ಸೀತೆ
B. ಮಂಡೋದರಿ
C. ದ್ರೌಪದಿ
D. ಅಹಲ್ಯ
C✅

ಗೀಗೀ ಪದದ ಮೇಳದಲ್ಲಿ ಎಷ್ಟು ಜನ ಗಾಯಕರಿರುತ್ತಾರೆ?
A. ಎರಡರಿಂದ ಮೂರು
B. ಮೂರರಿಂದ ನಾಲ್ಕು
C. ನಾಲ್ಕರಿಂದ ಐದು
D. ಐದರಿಂದ ಆರು
B✅

ದುಶ್ಯಂತನು ಶಾಕುಂತಲೆಗೆ ನೀಡಿದ್ದ ಉಂಗುರವು ಯಾವ ಪ್ರಾಣಿಯ ಹೊಟ್ಟೆಯಲ್ಲಿ ದೊರಕಿತು?
A. ಮೀನು
B. ಸಿಂಹ
C. ಹುಲಿ
D. ಚಿರತೆ
A✅

ಕಣ್ವ ಮಹಾಮುನಿಗಳ ಸಾಕು ಮಗಳು ಯಾರು?
A. ರಾಧೆ
B. ಗಿರಿಜಾ
C. ದ್ರಾಕ್ಷಾಯಣಿ
D. ಶಕುಂತಲೆ
D✅✅

"ಚಾಡಿಕೋರ" ಎಂಬುದು ------ ನಾಮ.
a) ತದ್ದಿತಾಂತ
b) ಕೃದಂತ
c) ಭಾವನಾಮ
d) ಕೃದಂತ ಭಾವ
A✅

ಹಗಲು ಕನಸು ಎಂಬುದು ಸಮಾಸ.
a) ಕರ್ಮಧಾರಯ
b) ಅಂಶಿ
c) ತತ್ಪುರುಷ
d) ದ್ವಿಗು
C✅

"ಕೆಳದುಟಿ" ಎಂಬುದು _ಸಮಾಸ.
a) ಅಂಶಿ
b) ದ್ವಂದ್ವ
c) ದ್ವಿಗು
d) ಕರ್ಮಧಾರೆಯ
A✅

"ಕಥೆಹೇಳು" ಎಂಬುದು _ ಸಮಾಸ.
a) ದ್ವಿಗು
b) ಬಹುವ್ರೀಹಿ
c) ಅಂಶಿ
d) ಕ್ರಿಯಾ
D✅

______ ಎಂಬುದು ಅವಧಾರಣೆಯಿಂದ ಕೂಡಿದ ಪದ.
a) ನಾನು
b) ನಾನೂ
c) ನಾನೇ
d) ನಾನೋ
C✅

ಆ ಸುದ್ದಿಯನ್ನು ಕೇಳಿ ನಾನು ಮೈಸೂರಿಗೆ ಕೂಡಲೆ ಹಿಂತಿರುಗಿದೆನು ಇಲ್ಲಿ ಕೂಡಲೇ ಎಂಬುದು.
a) ಅನುಸರ್ಗಾವ್ಯಯ
b) ಸಾಮಾನ್ಯಾವ್ಯಯ
c) ಸಂಬಂಧ ಸೂಚಕಾವ್ಯಯ
d) ಭಾವಸೂಚಕಾವ್ಯಯ
B✅

ಆಹಾ, ನೀರು ಅಮೃತದಂತಿದೆ ಇಲ್ಲಿ ಆಹಾ ಎಂಬುದು?
a) ಸಾಮಾನ್ಯಾವ್ಯಯ
b) ಅನುಸರ್ಗಾವ್ಯಯ
c) ಸಂಬಂಧ ಸೂಚಕಾವ್ಯಯ
d) ಭಾವಸೂಚಕಾವ್ಯಯ
C✅

ಈ ವಾಕ್ಯದಲ್ಲಿ ಮಗು ಕುಣಿಯುತ್ತಾ ಬೀದಿಗೆ ಹೋಯಿತು. ಇಲ್ಲಿ ಕುಣಿಯುತ್ತಾ -------- ಪದ.
a) ನಾಮಪದ
b) ಕ್ರಿಯಾಪದ
c) ಸಾಪೇಕ್ಷ ಕ್ರಿಯಾಪದ
d) ನಾಮ ಪ್ರಕೃತಿ
C✅

ನೀವು ಬುದ್ದಿವಂತರಾಗಿ ಬಾಳಿ ಇಲ್ಲಿ "ಬುದ್ದಿವಂತರಾಗಿ" ಎಂಬುದು ...
a) ನಾಮಪದ
b) ಕ್ರಿಯಾಪದ
c) ಕ್ರಿಯಾ ವಿಶೇಷಣ
d) ಭಾವನಾಮ
C✅

"ಅಂಥದು" ಎಂಬ ಪದ ವಾಚಕ.
a) ಸಂಖ್ಯಾವಾಚಕ
b) ಪರಿಮಾಣ ವಾಚಕ
c) ಪ್ರಕಾರ ವಾಚಕ
d) ದಿಗ್ವಾಚಕ
C✅

ಕೈಕಾಲು ಮೂಡಿತೋ ನಭಕೆ ಈ ವಾಕ್ಯದಲ್ಲಿರುವ ಅಲಂಕಾರ?
ಅ. ಉಪಮಾ
ಬ. ಉತ್ಪ್ರೇಕ್ಷೆ
ಕ. ಅರ್ಥಂತರನ್ಯಾಸ
ಡ. ದೃಷ್ಟಾಂತ
B✅

ಸರ್ವಜ್ಞನು ಕಾವ್ಯದ ಯಾವ ಪ್ರಕಾರಕ್ಕೆ ಪ್ರಸಿದ್ಧನಾಗಿದ್ದಾನೆ?
ಅ. ಷಟ್ಪದಿ
ಬ. ರಗಳೆ
ಕ. ದಾಸರಪದ
ಡ. ತ್ರಿಪದಿ
D✅

ಮೈಯೆಲ್ಲಾ ಕಣ್ಣಾಗಿ ಎಂದರೆ?
ಅ.ದೇಹದಲ್ಲೆಲ್ಲಾ ಕಣ್ಣು
ಬ.ಬಹಳ ನಿದ್ದೆಗೆಟ್ಟುಕೊಂಡು
ಕ.ತುಂಬಾ ಜಾಗರೂಕನಾಗಿರು
ಡ.ಬಹಳ ಧೈರ್ಯವಾಗಿರು
C✅

ಕನ್ನಡಿತಿ ಎಂಬಲ್ಲಿ ....ಸಂಧಿ ಇದೆ?
ಅ.ಆಗಮ
ಬ.ಆದೇಶ
ಕ.ಲೋಪ
ಡ.ಸವರ್ಣದೀರ್ಘ
C✅

ಮಂದಾನಿಲ ರಗಳೆಯ ಲಕ್ಷಣ?
ಅ. ನಾಲ್ಕು ಮಾತ್ರೆಯ ನಾಲ್ಕು ಗಣಗಳು
ಬ. ನಾಲ್ಕು ಮಾತ್ರೆಯ ಐದು ಗಣಗಳು
ಕ. ಮೂರು ಮಾತ್ರೆಯ ಎಂಟು ಗಣಗಳು
ಡ. ಐದು ಮಾತ್ರೆಯ ನಾಲ್ಕು ಗಣಗಳು
A✅

ಬಹುವ್ರೀಹಿ ಸಮಾಸಕ್ಕೆ ನಿದರ್ಶನ?
ಅ.ಮುಂಬಾಗಿಲು
ಬ.ಅರಮನೆ
ಕ. ಕೆಂದಾವರೆ
ಡ.ನಾಲ್ಮೊಗ
D✅

ಮುಮ್ಮಡಿ ರಚನೆಯಲ್ಲಿನ ಮೂರು ರೂಪ?
ಅ. ಸಂಬಂಧಸೂಚಕ ವಿಶೇಷಣ
ಬ. ಗುಣಾತ್ಮಕ ವಿಶೇಷಣ
ಕ. ಸಂಖ್ಯಾ ವಿಶೇಷಣ
ಡ. ಪರಿಮಾಣಾತ್ಮಕ ವಿಶೇಷಣ
C✅

ಇದು ಭವಿಷ್ಯತ್ ಕಾಲದ ವಾಕ್ಯ?
ಅ.ಮಕ್ಕಳು ಶಾಲೆಗೆ ಹೋಗುವರು
ಬ.ಮಕ್ಕಳು ಶಾಲೆಗೆ ಹೋದರು
ಕ. ಮಕ್ಕಳು ಶಾಲೆಗೆ ಹೋಗುವವರು
ಡ.ಮಕ್ಕಳು ಶಾಲೆಗೆ ಹೋಗರು
A✅

ಙ,ಞ,ಣ,ನ,ಮ ಅಕ್ಷರಗಳಿಗೆ ಈ ಹೆಸರಿದೆ?
ಅ.ಅಲ್ಪ ಪ್ರಾಣಗಳು
ಬ.ಅನುನಾಸಿಕಗಳು
ಕ.ಮಹಾಪ್ರಾಣಗಳು
ಡ.ಸಂಧ್ಯಾಕ್ಷರಗಳು.
B✅

'ಅತ್ತಣಿಂ' ಇದು ಯಾವ ವಿಭಕ್ತಿಗೆ ಉದಾಹರಣೆ------?
ಎ)ಷಷ್ಠಿ
ಬಿ)ಪಂಚಮಿ
ಸಿ)ಚತುಥಿ೯
ಡಿ)ದ್ವಿತಿಯಾ
B✅

'ಆಧ್ಯಾತ್ಮ' ಸಂಧಿ ತಿಳಿಸಿ?
ಎ)ವೃದ್ಧಿಸಂಧಿ
ಬಿ)ಅನುನಾಸಿಕ ಸಂಧಿ
ಸಿ)ಶ್ಚುತ್ವಸಂಧಿ
ಡಿ)ಯಣ್ ಸಂಧಿ
D✅

'ವಿದ್ಯುಲೇಪನ' ಈ ಪದವನ್ನು ಬಿಡಿಸಿ ಬರೆದಾಗ------?
ಎ)ವಿದ್ಯುತ್ +ಲೇಪನ
ಬಿ)ವಿದ್ಯು+ಆಲೇಪನ
ಸಿ)ವಿದ್ಯುತ್+ ಉಲ್ಲೇಪನ
ಡಿ)ವಿದ್ಯು+ಲೇಪನ
A✅

ರಾಮನು ಮನೆಯಿಂದ ಹೊರಗೆ ಬಂದು ಕಾವೇರಿಯಲ್ಲಿ ಸ್ನಾನ ಮಾಡಿದ. ಈ ವಾಕ್ಯದಲ್ಲಿ ರೂಢನಾಮ ಯಾವುದು,?
ಎ)ರಾಮ
ಬಿ)ಮನೆ
ಸಿ)ಹೊರಗೆ
ಡಿ)ಸ್ನಾನ
B✅

ಈ ಕೆಳಗಿನ ಪದಗಳಲ್ಲಿ ಅನ್ವಥ೯ನಾಮ ಯಾವುದು?
ಎ)ಜಯಣ್ಣ
ಬಿ)ಪವ೯ತ
ಸಿ)ವಿದ್ವಾಂಸ
ಡಿ)ಭಾರತ
C✅

'ಮುಖ್ಯೋಪಾಧ್ಯಾಯರು' ತಮ್ಮ ಕಾಯ೯ವನ್ನು
ಯಶಸ್ವಿಯಾಗಿ ಪೂರೈಸಿದರು. ಈ ವಾಕ್ಯದಲ್ಲಿ ಆತ್ಮಾಥ೯ಕ ಸವ೯ನಾಮ-------?
ಎ)ಮುಖ್ಯೋಪಾಧ್ಯಾಯರು
ಬಿ)ತಮ್ಮ
ಸಿ)ಕಾಯ೯
ಡಿ)ಯಶಸ್ವಿ
B✅

'ಪೆಮ೯ರ್' ಎಂಬುದು----?
ಎ)ಕ್ರಿಯಾ ಸಮಾಸ
ಬಿ)ದ್ವಿಗು ಸಮಾಸ
ಸಿ)ಕಮ೯ಧಾರೆಯ ಸಮಾಸ
ಡಿ)ತತ್ಪುರುಷ ಸಮಾಸ
C✅

"ತ,ಥ,ದ,ಧ,ಲ,ಸ" ಈ ವಣೋ೯ತ್ಪತ್ತಿಗಳ ಸ್ಥಾನ----?
ಎ)ದಂತ್ಯ
ಬಿ)ತಾಲವ್ಯ
ಸಿ)ಕಂಠ
ಡಿ)ಅನುನಾಸಿಕ
A✅

ಗುರು ಶಬ್ಧದ ಸ್ತ್ರೀಲಿಂಗ?
ಎ)ಗುರಿ
ಬಿ)ಗುವ್ರ
ಸಿ)ಗುರುತ್ರಿ
ಡಿ)ಗುರ್ವೀ
D✅

ಕೂಸು ಮಲಗಿದೆ ಇದರಲ್ಲಿರುವ ಲಿಂಗ---—?
ಎ)ನಪುಸಂಕಲಿಂಗ
ಬಿ)ಪುನ್ನಪುಂಸಕಲಿಂಗ
ಸಿ)ನಿತ್ಯ ನಪುಂಸಕಲಿಂಗ
ಡಿ)ಸತ್ಯ ನಪುಂಸಕಲಿಂಗ
C✅

DEATH CERTIFICATE ಸಂವಾದಿಯಾದ ಕನ್ನಡ ಶಬ್ಧ----?
ಎ)ಮೃತಪತ್ರ
ಬಿ)ಮ್ರತ್ಯಪತ್ರ
ಸಿ)ಮೃತ್ಯುಪತ್ರ
ಡಿ)ಮ್ರತ್ಯು ಪತ್ರ
A✅

ಇದರಲ್ಲಿ ಯಾವುದು ಸರಿ,?
ಎ)ವಿವಿಧತಾ
ಬಿ)ವಿವಿಧತೆ
ಸಿ)ವೈವಿಧ್ಯ
ಡಿ)ವೈವಿಧ್ಯತೆ
D

ಪೂಜ್ಯ ಇದರ ವಿರುದ್ಧ ಪದ?
ಎ)ಭೋಜ್ಯ
ಬಿ)ತ್ಯಾಜ್ಯ
ಸಿ)ವಾಜ್ಯ
ಡಿ)ರಾಜ್ಯ
B✅

ಐಹಿಕ ಇದರ ವಿರುದ್ಧ ಪದ?
ಎ)ಪಾರಮಾಥಿ೯ಕ
ಬಿ)ಇಹಿಕ
ಸಿ)ಭೂಮಿ
ಡಿ)ಜಗತ್ತು
A✅

ಜಂಗಮ ಪದದ ವಿರುದ್ಧ ಪದ?
ಎ)ಬ್ರಾಹ್ಮಣ
ಬಿ)ದಲಿತ
ಸಿ)ಪಂಚಮ
ಡಿ)ಸ್ಥಾವರ
D✅
==============================
#ಪ್ರಾಚಿನ_ಇತಿಹಾಸ :
- Nagesh S N
==============================

1.ಹರಪ್ಪ ನಾಗರಿಕತೆಯಲ್ಲಿ ಶಿವಲಿಂಗದ ಕಲ್ಲಿನ ವಿಗ್ರಹ ಎಲ್ಲಿ ದೊರೆತಿದೆ?
1.ಲೋಥಾಲ
2.ಕಾಲಿಬಂಗನ್
3.ರಾಖಿಘರಿ
4.ದೋಲವೀರಾ
B✅✅✅💐💐

2.ವೇದಕಾಲದ ಶ್ರೇಷ್ಠ ಇಬ್ಬರು ಬ್ರಹ್ಮವಾದಿನಿಯರು?
1.ಗಾರ್ಗಿ,ಮೈತ್ರೇಯಿ
2.ಉಷಾ,ಉಮಾ
3.ನಂದಿಕಾ,ನಯನ
4.ಗೀತಾ,ಸೀತಾ
A✅✅💐💐

3.ಗೌತಮ ಬುದ್ಧನ ಜೀವನದ ನಾಲ್ಕು ಘಟ್ಟಗಳಲ್ಲಿ ಪ್ರಥಮ ಘಟ್ಟ?
1.ಜ್ಞಾನೋದಯ
2.ಮಹಾಪರಿತ್ಯಾಗ
3.ಮಹಾಪರಿನಿರ್ವಾಣ
4.ಪ್ರಥಮ ಉಪದೇಶ
B✅✅💐💐

4.ಹಲ್ಮಿಡಿ ಶಾಸನವು ಯಾವ ರಾಜನ ಬಗ್ಗೆ ವಿವರಿಸುತ್ತದೆ?
1.ಮಯೂರ ವರ್ಮ
2.ಕನಿಷ್ಕ
3.ಸಮುದ್ರ ಗುಪ್ತ
4.ಕಾಕುತ್ಸವರ್ಮ
D✅✅💐💐

5.ತಾಳಗುಂದ ಶಾಸನ ಯಾವ ಜಿಲ್ಲೆಯಲ್ಲಿ ಕಂಡುಬರುತ್ತಿದೆ?
1.ಹಾಸನ
2.ರಾಯಚೂರು
3.ಶಿವಮೊಗ್ಗ
4.ಬಾಗಲಕೋಟೆ
C✅✅💐

6.ಬೇಲೂರು ಶಾಸನ ಯಾರ ಬಗ್ಗೆ ವಿವರಿಸುತ್ತದೆ?
1.ಕದಂಬರು
2.ಹೊಯ್ಸಳರು
3.ಚೋಳರು
4.ಚಾಲುಕ್ಯರು
B✅✅💐💐

7.ವೇದಕಾಲದಲ್ಲಿ ಹಿರಣ್ಯ ಎಂದರೆ?
1.ಮಹಾಗುರು
2.ಹತ್ತಿ
3.ಮಹರ್ಷಿ
4.ಚಿನ್ನ
D✅✅💐💐

8.ಮೌರ್ಯರ ಆಡಳಿತದಲ್ಲಿ ನಗರಗಳ ಮೇಲಿನ ಕರವಾಗಿದೆ?
1.ತೈತ
2.ಬಾಗ
3.ಬಲಿ
4.ಸೇನಾಭಕ್ತಂ
A✅✅✅👌💐💐

9.ಸಮುದ್ರ ಗುಪ್ತನ ನಾಣ್ಯಗಳು ಏನನ್ನು ತಿಳಿಸುತ್ತವೆ?
1.ಆಡಳಿತ
2.ಕ್ರಿಡೆ
3.ಸಂಗೀತ
4.ಸಾಮಾಜಿಕ ಜೀವನ
C✅✅💐💐

10.ಮಧುರೈಕ್ಕಾಂಜಿ ಕೃತಿಯ ಕರ್ತೃ?
1.ಅಗತ್ತಿಯರ್
2.ಬುಧುಮಿಶ್ರಮ
3.ಸತನರ
4.ಮಾಂಗುಡಿ ಮರುರ್ದ
D✅✅💐💐

11.ಶಾತವಾಹನರ ನಾಣ್ಯ ಯಾವುದು?
1.ಸುವರ್ಣ
2.ದಿನಾರ
3.ಗಡ್ಯಾಣಕ
4.ಹೊನ್ನು
A✅✅💐💐

12.ಕೆಳಗಿನವುಗಳಲ್ಲಿ ಯಾವುದು ವರ್ದನರ ಕಾಲದ ತೆರಿಗೆ ಅಲ್ಲ?
1.ಬಾಗ
2.ಬಲಿ
3.ಹಿರಣ್ಯ
4.ಸೇನಾಭಕ್ತಂ
D✅✅💐💐

13.ನಲಂದಾ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ?
1.ರಾಜಪಾಲ
2.ಕವಿಪಾಲ
3.ಧರ್ಮಪಾಲ
4.ಕರ್ಮಪಾಲ
C✅✅✅💐💐

14.3ನೇ ಆಂಗ್ಲೋ-ಮರಾಠ ಯುದ್ಧ ಯಾವಾಗ ನಡೆಯಿತು?
1.1815
2.1817
3.1915
4.1822
B✅✅💐💐

15.1857 ರ ಸ್ವಾತಂತ್ರ್ಯ ಸಂಗ್ರಾಮವನ್ನು ಯಾವ ಕದನದ ಶತಾಬ್ಧಿ ಎನ್ನುವರು?
1.ಜಲಿಯನ್ ವಾಲಾಬಾಗ
2.ಅಸಹಕಾರಚಳುವಳಿ
3.ಪ್ಲಾಸಿ ಕದನ
4.ಬಕ್ಸಾರ ಕದನ
C✅✅💐💐

16."ಬಹದ್ದೂರಿ" ಎಂಬ ಚಿನ್ನದ ನಾಣ್ಯವನ್ನು ಯಾರು ಜಾರಿಗೆ ತಂದರು?
1.ಶ್ರೀಕೃಷ್ಣದೇವರಾಯ
2.ಟಿಪ್ಪು
3.ಕನಿಷ್ಕ
4.ಹೈದರಾಲಿ
D✅✅💐💐

17.ರೆಗ್ಯುಲೆಟಿಂಗ್ ಆಕ್ಟ ಯಾವಾಗ ಜಾರಿಗೆ ಬಂದಿತು?
1.1773
2.1777
3.1765
4.1700
A✅✅✅💐💐

18.ಪಲ್ಲವರ ಲಾಂಛನ ಯಾವುದು?
1.ವರಾಹ
2.ನವಿಲು
3.ಸಿಂಹ
4.ನಂದಿ
D✅✅💐💐

19.ಕನ್ನಡದ ಮೊದಲ ತ್ರಿಪದಿ ಶಾಸನ?
1.ಹಲ್ಮಿಡಿ ಶಾಸನ
2.ಕಪ್ಪೆಅರಬಟ್ಟನ ಶಾಸನ
3.ತಾಳಗುಂದ ಶಾಸನ
4.ಮಸ್ಕಿಶಾಸನ
B✅✅💐💐

20.ವೇದಕಾಲದಲ್ಲಿ ಸಪ್ತಸಿಂಧೂ ಎಂದು ಯಾವ ನದಿಗೆ ಕರೆಯುತ್ತಿದ್ದರು?
1.ಕಾವೇರಿ
2.ನರ್ಮದಾ
3.ಸರಸ್ವತಿ
4.ರಾವಿ
C✅✅💐💐

21.ಸೋಮ ಮತ್ತು ಸುರ ಎಂಬ ಎರಡು ಪ್ರಸಿದ್ಧ ಪಾನೀಯವು ಯಾರ ಕಾಲದಲ್ಲಿತ್ತು?
1.ವೇದಕಾಲ
2.ಹರಪ್ಪನರು
3.ಆರ್ಯರು
4.ಜೈನರು
A✅✅💐💐

22.ಬುದ್ಧನು ತನ್ನ ಪ್ರಥಮ ಉಪದೇಶ ಎಲ್ಲಿ ನೀಡಿದನು?
1.ಬಿಹಾರ
2.ಕಾಶ್ಮೀರ
3.ಸಾಂಚಿ
4.ಸಾರಾನಾಥ
D✅✅✅💐💐

23. ಭಾರತದ ಸಿಜರ್ ಎಂದು ಯಾರನ್ನು ಕರೆಯುತ್ತಾರೆ?
1.
2.ಸಮದ್ರಗುಪ್ತ
3.ಕನಿಷ್ಕ
4.ಇಮ್ಮುಡಿ ಪುಲಿಕೇಶಿ
C✅✅💐💐

24. ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ ಯಾವುದು?
1.13 ನೇ ಬಂಡೆಗಲ್ಲು ಶಾಸನ
2.ಹಲ್ಮಿಡಿಶಾಸನ
3.ಕಪ್ಪೆಅರಬಟ್ಟನ ಶಾಸನ
4.ತಾಳಗುಂದ ಶಾಸನ
A✅✅✅💐💐

25.ಅಮಿತ್ರಘಾತ್ ಎಂಬ ಬಿರುದನ್ನು ಹೊಂದಿದವರು?
1.ಅಶೋಕ
2.ಬಿಂಬಸಾರ
3.ಕನಿಷ್ಕ
4.ಅಮೋಘವರ್ಷ
B✅

02/05/2018

CWG # Gold Coast # India 3rd rank #
==============================

ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರೆ: 66 ಪದಕಗಳೊಂದಿಗೆ 3ನೇ ಸ್ಥಾನ ಪಡೆದ ಭಾರತ
==========

ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ 21ನೇ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾನವಾರ ತೆರೆ ಬಿದ್ದಿದ್ದು, 26 ಚಿನ್ನಗಳೊಂದಿಗೆ ಒಟ್ಟು 66 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಮೂರನೇ ಸ್ಥಾನ ಪಡೆದಿದೆ.

ಕ್ರೀಡಾಕೂಟದಲ್ಲಿ ಆಷ್ಟ್ರೇಲಿಯಾ 80 ಚಿನ್ನದ ಪದ ಸೇರಿದಂತೆ ಒಟ್ಟು 197 ಪದಕಗಳೊಂದಿಗೆ ಮೊದಲ ಸ್ಥಾನವನ್ನು ಪಡೆದರೆ, ಇಂಗ್ಲೆಂಡ 45 ಚಿನ್ನ ಸೇರಿ ಒಟ್ಟು 136 ಪದಕಗಳೊಂದಿಗೆ ಎರಡನೆಯ ಸ್ಥಾನವನ್ನು ಪಡೆದಿದೆ.

ಇನ್ನು ಮೂರನೇ ಸ್ಥಾನದಲ್ಲಿರುವ ಭಾರತ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚಿನ ಪದಕಗಳನ್ನು ಪಡೆದಿದೆ.

ಕ್ರೀಡಾಕೂಟದ ಕೊನೆಯ ದಿನವಾದ ಇಂದು, ಸೈನಾ ನೆಹ್ವಾಲ್ ಅವರು ಒಲಂಪಿಕ್ ಬೆಳ್ಳಿ ಪದಕ ವಿಜೇತೆ ಹಾಗೂ ವಿಶ್ವದ ಮೂರನೇ ಶ್ರೇಯಾಂಕಿತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧು ಅವರನ್ನು ಮಣಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಈ ವರ್ಷದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದವರು

ಸೈನಾ ನೆಹ್ವಾಲ್ - ಮಹಿಳಾ ಸಿಂಗಲ್ಸ್(ಬ್ಯಾಡ್ಮಿಂಟನ್)

ನೀರಾಜ್ ಚೋಪ್ರಾ - ಪುರುಷರ ಜಾವೆಲಿನ್ ಥ್ರೋ

ಭಾರತ - ಮಿಶ್ರ ತಂಡ(ಬ್ಯಾಡ್ಮಿಂಟನ್)

ಗೌರವ್ ಸೋಲಂಕಿ - ಪುರುಷರ 52 ಕೆಜಿ

ವಿಕಾಸ್ ಕೃಷ್ಣನ್ - ಪುರುಷರ 75 ಕೆಜಿ

ಎಮ್ಸಿ ಮೇರಿ ಕೋಮ್ - ಮಹಿಳಾ 45-48 ಕೆಜಿ

ಜಿತು ರಾಯ್ - ಪುರುಷರ 10 ಮಿ ಏರ್ ಪಿಸ್ತೋಲ್

ಅನೀಶ್ - ಪುರುಷರ 25 ಮೀ ರಾಪಿಡ್ ಫೈರ್ ಪಿಸ್ತೋಲ್

ಸಂಜೀವ್ ರಜಪೂತ್ - ಪುರುಷರ 50 ಮೀ ರೈಫಲ್ 3 ಸ್ಥಾನಗಳು

ಮನು ಭೇಕರ್ - ಮಹಿಳಾ 10 ಮಿ ಏರ್ ಪಿಸ್ತೋಲ್

ಹೀನಾ ಸಿಧು - ಮಹಿಳಾ 25 ಮಿ ಪಿಸ್ತೋಲ್

ತೇಜಸ್ವಿಣಿ ಸಾವಂತ್ - ಮಹಿಳೆಯರ 50 ಮೀ ರೈಫಲ್ 3 ಸ್ಥಾನಗಳು

ಶ್ರೇಯಾಸಿ ಸಿಂಗ್ - ಮಹಿಳಾ ಡಬಲ್ ಟ್ರಾಪ್

ಭಾರತ - ಪುರುಷರ ತಂಡ

ಮಣಿಕಾ ಬತ್ರಾ - ಮಹಿಳಾ ಸಿಂಗಲ್ಸ್

ಭಾರತ - ಮಹಿಳಾ ತಂಡ

ಸತೀಶ್ ಕುಮಾರ್ ಶಿವಲಿಂಗಮ್ - ಪುರುಷರ 77 ಕೆಜಿ

ವೆಂಕತ್ ರಾಹುಲ್ ರಾಗಲಾ - ಪುರುಷರ 85 ಕಿ.ಗ್ರಾಂ

ಚಾನು ಸೈಕೋಮ್ ಮಿರಾಬಾಯ್ - ಮಹಿಳಾ 48 ಕೆಜಿ

ಸಂಜಿತಾ ಚಾನು ಖುಮುಕ್ಚಮ್ - ಮಹಿಳಾ 53 ಕೆಜಿ

ಪುನಾಮ್ ಯಾದವ್ - ಮಹಿಳಾ 69 ಕೆಜಿ

ಸುಮಿತ್ - ಪುರುಷರ ಫ್ರೀಸ್ಟೈಲ್ 125 ಕೆಜಿ

ರಾಹುಲ್ ಅವೇರ್ - ಪುರುಷರ ಫ್ರೀಸ್ಟೈಲ್ 57 ಕೆಜಿ

ಬಜರಂಗ - ಪುರುಷರ ಫ್ರೀಸ್ಟೈಲ್ 65 ಕೆಜಿ

ಸುಶೀಲ್ ಕುಮಾರ್- ಪುರುಷರ ಫ್ರೀಸ್ಟೈಲ್ 74 ಕೆಜಿ

ವಿನೆಶ್ - ಮಹಿಳಾ ಫ್ರೀಸ್ಟೈಲ್ 50 ಕೆಜಿ

===================================

19/02/2018

*ಭೂಗೋಳಶಾಸ್ತ್ರ.*
₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹
1) ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು ಯಾವುದು?
* ಮೃತ ಸಮುದ್ರ.

2) ಪ್ರಪಂಚದ ಭೂಖಂಡಗಳಲ್ಲಿ ದೊಡ್ಡದು ಯಾವುದು?
* ಏಷ್ಯಾ.

3) ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ ಸಂಖ್ಯೆ ಎಷ್ಟು?
* 48.

4) ಏಷ್ಯ ಮತ್ತು ಆಫ್ರಿಕಾ ಖಂಡಗಳ ಗಡಿಯು ಸಾಮಾನ್ಯವಾಗಿ ಯಾವ ಕಾಲುವೆಯ ಮುಖಾಂತರ ಹಾಯ್ದು ಹೋಗುತ್ತದೆ?
* ಸೂಯೇಜ್ ಕಾಲುವೆ.

5) "ವೈಪರೀತ್ಯಗಳ ಖಂಡ" ಎಂದು ಯಾವ ಖಂಡವನ್ನು ಕರೆಯುತ್ತಾರೆ?
* ಏಷ್ಯಾ.

6) ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?
* ಮಾಸಿನ್ ರಾಮ್. (ಮೇಘಾಲಯ).

7) "ಮಾಸಿನ್ ರಾಮ್" ಅತಿಹೆಚ್ಚು ಮಳೆ ಅಂದರೆ ಎಷ್ಟು ಸೆಂ.ಮೀ ಪಡೆಯುತ್ತದೆ?
* 1187 ಸೆಂ.ಮೀ.

8) ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತಿರ್ಣ ಸುಮಾರು ----- ಮಿಲಿಯನ್ ಚ.ಕಿ.ಮೀ.ಗಳು?
* 44.

9) ಪ್ರಪಂಚದ ಮೇಲ್ಮೈ ವಿಸ್ತಿರ್ಣದಲ್ಲಿ ಏಷ್ಯಾ ಖಂಡ ----- ಭಾಗದಷ್ಟಾಗಿದೆ?
* ಶೇ.33.

10) ಯುರೋಪ್ ಮತ್ತು ಏಷ್ಯಗಳನ್ನು ಒಟ್ಟುಗೂಡಿಸಿ ----- ಎನ್ನುವರು?
* ಯೂರೆಷ್ಯ.

11) ಏಷ್ಯಾ ಖಂಡವು ಮೂರು ಕಡೆ ------ & ಒಂದು ಕಡೆ ------- ಭಾಗದಿಂದಾವರಿಸಿದೆ?
* ಸಾಗರಗಳು & ಭೂಭಾಗ.

12) ಏಷ್ಯಾ ಖಂಡದ ಉತ್ತರಕ್ಕೆ ಯಾವ ಸಾಗರವಿದೆ?
* ಆಕ್ಟಿರ್ಕ್.

13) ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಯಾವ ಸಾಗರವಿದೆ?
* ಪೆಸಿಫಿಕ್.

14) ಏಷ್ಯಾ ಖಂಡದ ದಕ್ಷಿಣದಲ್ಲಿ ಯಾವ ಸಾಗರವಿದೆ?
* ಹಿಂದೂ ಮಹಾಸಾಗರ.

15) ಏಷ್ಯಾ ಖಂಡದ ಪಶ್ಚಿಮಕ್ಕೆ ಯಾವ ಖಂಡವಿದೆ?
* ಯುರೋಪ್.

16) ಬಾಕ್ಸೈಟ್ ------ ಲೋಹ.
* ಕಬ್ಬಿಣೇತರ.

17) ಪ್ರಪಂಚದಲ್ಲಿ ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ರಾಷ್ಟ್ರ ಯಾವುದು?
* ಚೀನಾ.

18) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ ಯಾವುದು?
* ಮಾಲ್ಡೀವ್ಸ್.

19) "ಮಂಚೂರಿಯ" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಚೀನಾ.

20) ಪ್ರಪಂಚದಲ್ಲೇ ಅತಿಹೆಚ್ಚು "ಪೆಟ್ರೋಲಿಯಂ" ಉತ್ಪಾದಿಸುವ ದೇಶ ಯಾವುದು?
* ಸೌದಿ ಅರೇಬಿಯ.

21) ಏಷ್ಯಾ ಖಂಡದಲ್ಲಿ ಸುಮಾರು ----- ಬಿಲಿಯನ್ ಜನಸಂಖ್ಯೆಯಿದೆ?
* 4.2.

22) ಪ್ರಮುಖ ಕೈಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನುಳ್ಳ ಪ್ರದೇಶಕ್ಕೆ -------- ಎನ್ನುವರು.
* ಕೈಗಾರಿಕಾ ಪ್ರದೇಶ.

23) "ಕಹೀನ್" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
* ಜಪಾನ್.

24) ಹೂಗ್ಲಿ : ಕೊಲ್ಕತ್ತಾ ಪ್ರದೇಶ :: ಮುಂಬಯಿ : ------.
* ಪುಣೆ ಪ್ರದೇಶ.

25) ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ ಯಾವುದು?
* ಟಿಬೆಟ್.
By RBS

26) ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿ ಯಾವುದು?
* ಕ್ಯಾಸ್ಪಿಯನ್ ಸಮುದ್ರ.

27) Petra ಎಂದರೆ ------.
* ಕಲ್ಲು.

28) Oleum ಎಂದರೆ -----.
* ತೈಲ.

29) "ವುಹಾನ್" ಕೈಗಾರಿಕಾ ಪ್ರದೇಶ ಯಾವ ರಾಷ್ಟ್ರದಲ್ಲಿದೆ?
* ಚೀನಾ.

30) ಪ್ರಪಂಚದಲ್ಲೇ ಆಳವಾದ ಸರೋವರ ಯಾವುದು?
* ಬೈಕಲ್ ಸರೋವರ.

31) "ಬೈಕಲ್ ಸರೋವರ" ಎಲ್ಲಿದೆ?
* ದಕ್ಷಿಣ ಸೈಬೀರಿಯಾ.

32) "ಪ್ರಪಂಚದ ಮೇಲ್ಚಾವಣೆ" ಎಂದು ಯಾವುದನ್ನು ಕರೆಯಲಾಗಿದೆ?
* ಟಿಬೆಟ್.

33) ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು ಯಾವುದು?
* ಮೌಂಟ್ ಎವರೆಸ್ಟ್.

34) ಮೌಂಟ್ ಎವರೆಸ್ಟ್ ನ ಎತ್ತರವೇಷ್ಟು?
* 8848 ಮೀ.

35) ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಯಾವ ಪರ್ವತ ಸರಣಿಗಳಲ್ಲಿವೆ?
* ಕಾರಾಕೊರಂ.

36) "ಹಾನ್ಶಿನ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಜಪಾನ್.

37) ಪೆಟ್ರೋಲಿಯಂ ಶಬ್ದ ಯಾವ ಭಾಷೆಯ ಎರಡು ಪದಗಳಿಂದ ಸಂಯೋಜಿತವಾದದ್ದು?
* ಲ್ಯಾಟಿನ್.

38) ಸಮಶೀತೋಷ್ಣ ವಲಯದ ಹುಲ್ಲುಗಾವಲನ್ನು ------- ಎನ್ನುವರು?
* ಸ್ಟೆಪ್ಪಿ.

39) ಟಂಡ್ರ ಸಸ್ಯವರ್ಗವು ಯಾವ ಕರಾವಳಿಯ ಉದ್ದಕ್ಕೂ ಕಿರಿದಾದ ಭಾಗದಲ್ಲಿ ಕಂಡು ಬರುತ್ತದೆ?
* ಆಕ್ಟಿರ್ಕ್.

40) ಏಷ್ಯಾ ಖಂಡದಲ್ಲಿ ಯಾವ ಮಾರುತಗಳಿಂದ ಬೇಸಿಗೆಯಲ್ಲಿ ಹೆಚ್ಚು ಮಳೆಯಾಗುತ್ತದೆ?
* ನೈರುತ್ಯ ಮಾನ್ಸೂನ್.

41) ಏಷ್ಯಾದ ಜನರ ಪ್ರಮುಖ ವೃತ್ತಿ ಯಾವುದು?
* ವ್ಯವಸಾಯ.

42) ಚೀನಾದ ನೈರುತ್ಯಕ್ಕೆ ಯಾವ ಪ್ರಸ್ಥಭೂಮಿಯಿದೆ?
* ಯುನ್ನಾನ್.

43) "ಶಾನ್ ಪ್ರಸ್ಥಭೂಮಿ" ಯಾವ ರಾಷ್ಟ್ರದಲ್ಲಿದೆ?
* ಮಯನ್ಮಾರ್.

44) ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ದೇಶ ಯಾವುದು?
* ಭಾರತ.

45) "ಅಮುರ್" ನದಿ ಯಾವ ದೇಶದಲ್ಲಿ ಕಂಡು ಬರುವುದು?
* ರಷ್ಯಾ.

46) "ಹ್ಯಾಂಗ್ ಹೊ" ನದಿ ಯಾವ ದೇಶದಲ್ಲಿ ಕಂಡು ಬರುವುದು?
* ಚೀನಾ.

47) ಏಷ್ಯಾದ ಪ್ರಮುಖ ಆಹಾರ ಬೆಳೆಗಳು ಯಾವು?
* ಭತ್ತ ಮತ್ತು ಗೋಧಿ.

48) ಏಷ್ಯಾ ಖಂಡದಲ್ಲಿಯೇ ಭತ್ತ ಉತ್ಪಾದಿಸುವ ಪ್ರಮುಖ ದೇಶಗಳು ಯಾವು?
* ಚೀನಾ ಮತ್ತು ಭಾರತ.

49) ಪ್ರಪಂಚದಲ್ಲಿ ಎರಡನೆಯ ಪ್ರಮುಖ ಕಬ್ಬು ಉತ್ಪಾದಿಸುವ ರಾಷ್ಟ್ರ ಯಾವುದು?
* ಭಾರತ.

50) "ಚಾಂಗ್ ಜಿಯಾಂಗ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಚೀನಾ.

51) "ಐಸೆ ಕೊಲ್ಲಿ" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
* ಜಪಾನ್.

23/01/2018

*===ಮಾಹಿತಿ ವೇದಿಕೆ===*

*ಎಸ್.ಬಿ.ಐನಿಂದ 9,000 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ*

*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಶುಕ್ರವಾರ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕ್ಲರ್ಕ್ ದರ್ಜೆಯ ಒಟ್ಟು 9,000 ಜೂನಿಯರ್ ಅಸೋಸಿಯೇಟ್ ಹುದ್ದೆ (ಗ್ರಾಹಕ ಸೇವೆ ಮತ್ತು ಸೇಲ್ಸ್) ಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.*

*ಆಸಕ್ತರು ಇಂದಿನಿಂದಲೇ (ಜನವರಿ 20) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.* *ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರಲಿದೆ.*

*ಹುದ್ದೆಗಳಲ್ಲಿ ಮೀಸಲಾತಿಗಳೂ ಇವೆ. ಶೇಕಡಾ 4ರಷ್ಟು ಹುದ್ದೆಗಳನ್ನು ವಿಶೇಷ ಚೇತನರಿಗೆ ಕಾಯ್ದಿರಿಸಲಾಗಿದ್ದು, ನೇರ ನೇಮಕಾತಿಗೂ ಅವಕಾಶವಿದೆ.*

*ಖಾಲಿ ಹುದ್ದೆ ಮತ್ತು ಅರ್ಹತೆ*

*ಒಟ್ಟು 9,000 ಜೂನಿಯರ್ ಅಸೋಸಿಯೇಟ್ ಹುದ್ದೆಗಳು ಖಾಲಿ ಇವೆ.*

*ಶೈಕ್ಷಣಿಕ ವಿದ್ಯಾರ್ಹತೆ: ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಅಥವಾ ಅದಕ್ಕೆ ಸರಿಸಮಾನಾದ ವಿದ್ಯಾರ್ಹತೆಯನ್ನು ಹೊಂದಿರಬೇಕು. ಈಗಾಗಲೇ ಎಸ್.ಬಿ.ಐ ನಲ್ಲಿ ಕ್ಲರ್ಕ್ ಆಗಿ ಅಥವಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.*

*ವಯೋಮಿತಿ, ಆಯ್ಕೆ ಪ್ರಕ್ರಿಯೆ*

*ಗರಿಷ್ಠ 28 ವರ್ಷವನ್ನು ಮೀರಿರಬಾರದು. ಇನ್ನು ಸರಕಾರ ನಿಯಮಗಳ ಪ್ರಕಾರ ಕೆಲವು ವಿಶೇಷ ವ್ಯಕ್ತಿಗಳಿಗೆ 20 ವರ್ಷಗಳವರೆಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.*

*ಆಯ್ಕೆ ಪ್ರಕ್ರಿಯೆ: ಆನ್ಲೈನ್ ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ನಡೆಯಲಿದೆ. ನಂತರ ಭಾಷಾ ಪರೀಕ್ಷೆ ನಡೆಯಲಿದೆ. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಭಾಷಾ ಪರೀಕ್ಷೆ ನಡೆಯಲಿದೆ.*

*ಪೂರ್ವಭಾವಿ ಪರೀಕ್ಷೆ ವಿವರ*

*ಪೂರ್ವಭಾವಿ ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳು ಇರಲಿವೆ. ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಮೂರು ವಿಭಾಗದ ಪ್ರಶ್ನೆಗಳನ್ನು ಇರಲಿದ್ದು ಒಂದು ಗಂಟೆ ಸಮಯಾವಕಾಶದಲ್ಲಿ ಉತ್ತರಿಸಬೇಕಾಗುತ್ತದೆ.*
*ಇಂಗ್ಲೀಷ್ ಭಾಷೆ (30 ಪ್ರಶ್ನೆಗಳು): 30 ಅಂಕ*
*ನ್ಯೂಮೆರಿಕಲ್ ಅಬಿಲಿಟಿ (ಸಂಖ್ಯಾತ್ಮಕ ಸಾಮರ್ಥ್ಯ - 35 ಪ್ರಶ್ನೆಗಳು): 35 ಅಂಕ*
*ರೀಸನಿಂಗ್ ಅಬಿಲಿಟಿ (ತಾರ್ಕಿಕ ಸಾಮರ್ಥ್ಯ - 35 ಪ್ರಶ್ನೆಗಳು): 35 ಅಂಕ*

*ಮುಖ್ಯ ಪರೀಕ್ಷೆ ವಿವರಗಳು*

*ಪರೀಕ್ಷೆಯ ಅವಧಿ 2 ಗಂಟೆ 40 ನಿಮಿಷಗಳು*
*ಸಾಮಾನ್ಯ ಮತ್ತು ಆರ್ಥಿಕ ಜ್ಞಾನ (50 ಪ್ರಶ್ನೆಗಳು): 50 ಅಂಕ*
*ಸಾಮಾನ್ಯ ಇಂಗ್ಲೀಷ್ (40 ಪ್ರಶ್ನೆಗಳು): 40 ಅಂಕ*
*ಕ್ಯಾಂಟಿಟೇಟಿವ್ ಆಪ್ಟಿಟ್ಯೂಡ್ (50 ಪ್ರಶ್ನೆಗಳು): 50 ಅಂಕ*
*ರೀಸನಿಂಗ್ ಅಬಿಲಿಟಿ ಮತ್ತು ಕಂಪ್ಯೂಟ್ ಅಪ್ಟಿಟ್ಯೂಡ್ (50 ಪ್ರಶ್ನೆಗಳು): 50 ಅಂಕ*
*ತಪ್ಪು ಉತ್ತರಗಳಿಗೆ 1/4 ಋಣಾತ್ಮಕ ಅಂಕಗಳು ಇರಲಿವೆ.*

*ಅರ್ಜಿ ಸಲ್ಲಿಸುವುದು ಹೇಗೆ?*

*ಎಸ್.ಬಿ.ಐನ ಅಧಿಕೃತ ವೆಬ್ಸೈಟ್ sbi.co.in ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ನಂತರ ನೋಂದಣಿ ಶುಲ್ಕವನ್ನು ಪಾವತಿಸಬೇಕು. ಎಲ್ಲಾ ಪ್ರಕ್ರಿಯೆಗಳನ್ನು ಆನ್ಲೈನ್ ನಲ್ಲೇ ನಡೆಸಬೇಕಾಗಿದೆ.*

*ಅಂತಿಮ ದಿನಾಂಕ*

*ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 10*
*ಪೂರ್ವಭಾವಿ ಪರೀಕ್ಷೆ: ಮಾರ್ಚ್/ ಏಪ್ರಿಲ್*
*ಮುಖ್ಯ ಪರೀಕ್ಷೆ: ಮೇ 12 (ತಾತ್ಕಾಲಿಕ)*

*===ಮಾಹಿತಿ ವೇದಿಕೆ===*

05/10/2017

🌻ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು🌻
========================

🌹ಸೋಲಿಗರು - ಕರ್ನಾಟಕ

🌹ಮುಂಡರು - ಜಾರ್ಖಂಡ್,

🌹ಶಾಂಪೆನ್ - ಅಂಡಮಾನ್ &ನಿಕೋಬಾರ್,

🌹ಲೂಸಾಯಿ - ಮಿಜೋರಾಮ್,

🌹ಚುಟಿಯಾ - ಆಸ್ಸೋಮ್,

🌹ಮೀನಾ - ರಾಜಸ್ಥಾನ,

🌹ಸಂತಾಲರು - ಪಶ್ಚಿಮ ಬಂಗಾಳ,

🌹ಬಿಲ್ಲರು - ಗುಜರಾತ್,

🌹ಮುರಾರಿ - ಮಧ್ಯಪ್ರದೇಶ,

🌹ಜರ್ವಾ - ಅಂಡಮಾನ್ ನಿಕೋಬಾರ್,

🌹ಕೊಂಡರು - ಓರಿಸ್ಸಾ,

🌹ಕಾಶಿ - ಮೇಘಾಲಯ,

🌹ನಾಗಾ- ನಾಗಾಲ್ಯಾಂಡ್,

🌹ವುರ್ಲಿ - ಕೇರಳ,

🌹ವರ್ಲಿ - ಮಹಾರಾಷ್ಟ್ರ,

🌹ತೋಡರು - ತಮಿಳುನಾಡು,

🌹ಗೊಂಡರು - ಮಧ್ಯಪ್ರದೇಶ,

🌹ಚಂಚು - ಆಂಧ್ರಪ್ರದೇಶ,

🌹ಲೆಪ್ಚಾ - ಸಿಕ್ಕೀಂ

🌹ಗಡ್ಡಿ - ಹಿಮಾಚಲ ಪ್ರದೇಶ,

🌿🌿🌿🌿🌿🌿🌿🌿🌿🌿🌿

17/08/2017
18/06/2017

* #ಪ್ರಸಿದ್ಧ #ವ್ಯಕ್ತಿಗಳು* ಮತ್ತು
*ಅವರ #ಬಿರುದುಗಳು*

1.ಇಂದಿರಾ ಗಾಂಧಿ
=ಪ್ರೀಯದರ್ಶಿನಿ

2. ಬಾಲಗಂಗಾಧರ ತಿಲಕ್
=ಲೋಕಮಾನ್ಯ

3. ಸುಭಾಸ್ ಚಂದ್ರ ಬೋಸ್
=ನೇತಾಜಿ

4. ಲಾಲ ಬಹದ್ದೂರ್ ಶಾಸ್ತ್ರೀ
=ಶಾಂತಿದೂತ

5. ಸರದಾರ್ ವಲ್ಲಬಾಯಿ ಪಟೇಲ್
=ಉಕ್ಕಿನ ಮನುಷ್ಯ, ಸರದಾರ್

6. ಜವಾಹರಲಾಲ ನೆಹರು
=ಚಾಚಾ

7. ರವೀಂದ್ರನಾಥ ಟ್ಯಾಗೋರ್
=ಗುರುದೇವ

8. ಎಂ. ಎಸ್. ಗೋಳಲ್ಕರ್
=ಗುರೂಜಿ

9. M.K.ಗಾಂಧಿ
=ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ

10. ಸರೋಜಿನಿ ನಾಯ್ಡು
=ಭಾರತದ ಕೋಗಿಲೆ.

11. ಪ್ಲಾರೆನ್ಸ್ ನೈಟಿಂಗೇಲ್
=ದೀಪಧಾರಣಿ ಮಹಿಳೆ

12.ಖಾನ್ ಅಬ್ದುಲ್ ಗಫಾರ್ ಖಾನ್
=ಗಡಿನಾಡ ಗಾಂಧಿ

13. ಜಯಪ್ರಕಾಶ ನಾರಾಯಣ
=ಲೋಕನಾಯಕ

14. ಪಿ.ಟಿ.ಉಷಾ
=ಚಿನ್ನದ ಹುಡುಗಿ

15. ಸುನೀಲ್ ಗವಾಸ್ಕರ್
=ಲಿಟಲ್ ಮಾಸ್ಟರ್

16. ಲಾಲಾ ಲಜಪತರಾಯ
=ಪಂಜಾಬಿನ ಕೇಸರಿ

17. ಷೇಕ್ ಮಹ್ಮದ್ ಅಬ್ಧುಲ್
=ಕಾಶ್ಮೀರ ಕೇಸರಿ

18. ಸಿ. ರಾಜಗೋಪಾಲಾಚಾರಿ
=ರಾಜಾಜಿ

19. ಸಿ. ಎಫ್. ಆಂಡ್ರೋಸ್
=ದೀನಬಂಧು

20. ಟಿಪ್ಪು ಸುಲ್ತಾನ
=ಮೈಸೂರ ಹುಲಿ

21. ದಾದಾಬಾಯಿ ನವರೋಜಿ
=ರಾಷ್ಟ್ರಪಿತಾಮಹ
(ಭಾರತದ ವಯೋವೃದ್ಧ)

22. ರವೀಂದ್ರನಾಥ ಟ್ಯಾಗೋರ್ =ರಾಷ್ಟ್ರಕವಿ.

23. ಡಾ ಶ್ರೀಕೃಷ್ಣ ಸಿಂಗ್
=ಬಿಹಾರ ಕೇಸರಿ

24. ಟಿ ಪ್ರಕಾಶಂ
=ಆಂಧ್ರ ಕೇಸರಿ

25. ಚಿತ್ತರಂಜನ್ ದಾಸ್
=ದೇಶಬಂಧು

26. ಶೇಖ್ ಮುಜಿಬತ್ ರಹಮಾನ್
=ಬಂಗಬಂಧು

27. ಕರ್ಪೂರಿ ಠಾಕೂರ್
=ಜನ ನಾಯಕ

28. ಪುರುಷೋತ್ತಮ್ ದಾಸ್ ಟಂಡನ್
=ರಾಜಶ್ರೀ

29. ಡಾ. ರಾಜೇಂದ್ರ ಪ್ರಸಾದ್
=ದೇಶ ರತ್ನ ಮತ್ತು ಅಜಾತಶತ್ರು

30. ಮದನ ಮೋಹನ ಮಾಳವೀಯ
=ಮಹಾಮಾನ

31. ಮೇಜರ್ ಜನರಲ್ ರಾಜಿಂದರ್ ಸಿಂಗ್
=ಗುಬ್ಬಚ್ಚಿ(Sparrow)

32. ಚಂದ್ರಶೇಖರ್
=ಯುವ ಟರ್ಕ್ (Young Turk)

33. ಚೌಧರಿ ದೇವಿಲಾಲ
=ತೌ(Tau)

34. ಭಗತ್ ಸಿಂಗ್
=ಶಹೀದ್ ಇ ಅಜಾಮ್

35. ಮದರ್ ತೆರೇಸಾ
=ತಾಯಿ

36. ಅಮೀರ್ ಖುಸ್ರೋ
=ಹಿಂದುಸ್ಥಾನದ ಗಿಳಿ

37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್
=ಲಾಲ್, ಬಾಲ್, ಪಾಲ್

38. ಡಾ ಅನುಗ್ರಹ ನಾರಾಯಣ ಸಿಂಗ್
=ಬಿಹಾರದ ವಿಭೂತಿ

39. ಜಗಜೀವನ್ ರಾಮ್
=ಬಾಬುಜಿ

40. ಸಮುದ್ರ ಗುಪ್ತ
=ಭಾರತದ ನೆಪೋಲಿಯನ್

41. ಮಹಾಕವಿ ಕಾಳಿದಾಸ
=ಭಾರತದ ಶೇಕ್ಸ್ಪಿಯರ್

42. ಚಾಣಕ್ಯ
=ಭಾರತದ ಮ್ಯಾಕೆವೇಲಿ

43.ಜೈನುಲ್ ಅಬ್ದಿನ್
=ಕಾಶ್ಮೀರದ ಅಕ್ಬರ್

44. ರವಿಶಂಕರ್ ಮಹಾರಾಜ್
=ಗುಜರಾತದ ಪಿತಾಮಹ

45. ದುಂಡಿರಾಜ್ ಗೋವಿಂದ ಫಾಲ್ಕೆ
=ಭಾರತೀಯ ಚಲನಚಿತ್ರದ ಪಿತಾಮಹ

46. ರಾಜಾರಾಮ್ ಮೋಹನ್ ರಾಯ್
=ಭಾರತದ ನವೋದಯದ ದೃವತಾರೆ

47. ಕಪಿಲ್ ದೇವ್
=ಹರಿಯಾಣದ ಸುಂಟರಗಾಳಿ (ಹರಿಕೇನ್)

48. ಧ್ಯಾನ್ ಚಂದ್
=ಹಾಕಿಯ ಜಾದೂಗಾರ (ಮಾಂತ್ರಿಕ)

49.ಕೆ.ವಿ. ಪುಟ್ಟಪ್ಪ
=ಕುವೆಂಪು

50. ದೇಶ ಪ್ರೀಯ
=ಯತೀಂದ್ರ ಮೋಹನ್ ಸೇನ್ ಗುಪ್ತ

10/06/2017

🔘ಭಾರತದಲ್ಲಿ ಪ್ರಸಿದ್ಧ ಸ್ಥಳಗಳ ಪಟ್ಟಿ🔘

ಅಜಂತಾ ಔರಂಗಾಬಾದ್ -(ಮಹಾರಾಷ್ಟ್ರ)

ಅಮರನಾಥ ಗುಹೆ -ಕಾಶ್ಮೀರ

ಅಕ್ಬರನ ಗೋರಿ ಸಿಕನರಾ-, ಆಗ್ರಾ

ಅಂಬರ್ ಪ್ಯಾಲೇಸ್ ಜೈಪುರ -( ಬಾಂಬೆ )

ಆನಂದ್ ಭವನ್ -ಅಲಹಾಬಾದ್

ಭಾಕ್ರಾ ಡ್ಯಾಮ್ -ಪಂಜಾಬ್

ಬಿಬಿ ಡಾ ಮಾಕ್ಬ್ರಾ -ಔರಂಗಬಾದ್

ಬಿರ್ಲಾ ಪ್ಲಾನೆಟೋರಿಯಂ- ಕಲ್ಕತ್ತಾ

ಕಪ್ಪು ಪಗೋಡಾ ಕೊನಾರ್ಕ್ -(ಒರಿಸ್ಸಾ)

ಬೃಹದೀಶ್ವರ ದೇವಸ್ಥಾನ, -ತಂಜಾವೂರ್

ಬ್ರಿಂಡಬಾನ್ ಗಾರ್ಡನ್ಸ್ -ಮೈಸೂರು

ಬುಲಂದ್ ದರ್ವಾಜಾ -ಫತೇಪುರ್ ಸಿಕ್ರಿ

ಚಾರ್ಮಿನರ್ -ಹೈದರಾಬಾದ್

ಚೀನಾ ಕೇಶವ ದೇವಾಲಯ -ಬೇಲೂರು

ಭಾರತದ ಚಿಲ್ಕಾ ಸರೋವರದ ಈಸ್ಟ್ ಕೋಸ್ಟ್ ಹತ್ತಿರ-ಭುವನೇಶ್ವರ್

ದಾಲ್ ಲೇಕ್- ಶ್ರೀನಗರ

ದಿಲ್ವಾರ ದೇವಸ್ಥಾನ ಮೌಂಟ್ ಅಬು
-Rajstan

ಎಲಿಫೆಂಟಾ ಗುಹೆಗಳು -ಬಾಂಬೆ

ಎಲ್ಲೋರಾ ಗುಹೆಗಳು -ಔರಂಗಾಬಾದ್

ಗೇಟ್ವೇ ಆಫ್ ಇಂಡಿಯಾ -ಬಾಂಬೆ

ಗೋಲ್ಡನ್ ಟೆಂಪಲ್ -ಅಮೃತಸರ

ಗೋಲ್ ಗುಂಬಜ್ -ಬಿಜಾಪುರ

ಹ್ಯಾಂಗಿಂಗ್ ಗಾರ್ಡನ್ಸ್ -ಬಾಂಬೆ

ಹವಾ ಮಹಲ್ (ಸ್ಥಳ
ಗಾಳಿ) ಜೈಪುರ

ಹೌರಾ ಗ್ರಿಡ್ಜ್ -ಕಲ್ಕತ್ತಾ

ಐಲ್ಯಾಂಡ್ ಪ್ಯಾಲೇಸ್ -ಉದೈಪುರ್

ಇಮಾದ್-ಉದ್-ದೌಲಾಹ್ಸ್
- ಆಗ್ರಾ

ಜಗನ್ನಾಥ ದೇವಾಲಯ -ಪುರಿ

ಜಹಜ್ ಮಹಲ್ -ಮಾಂಡು, ಎಂ.ಪಿ. (ಜಾಯ್ ನಗರ)

ಜೈ ಸ್ತಂಭ (ಟವರ್ ಆಫ್
ವಿಕ್ಟರಿ) -ಚಿತ್ತೋರಗಢ

ಜಾಮಾ ಮಸೀದಿ -ದೆಹಲಿ

ಜಂತರ್ ಮಂತರ್ -ನವದೆಹಲಿ

ಜೋಗ್ (ಗೆರ್ಶೋಪ್ಪಾ) -ಕರ್ನಾಟಕದ ಜಲಪಾತ

ಕೈಲಾಸ ದೇವಾಲಯ -ಎಲ್ಲೋರಾ

ಕನ್ಯಾಕುಮಾರಿ ದೇವಾಲಯ -ಕನ್ಯಾಕುಮಾರಿ

ಖಜುರಾಹೊ -ಎಂ.ಪಿ.

ಕೀರ್ತಿ ಸ್ಟಂಬಾ (ಗೋಪುರ
ಜಯ) ಚಿತ್ತೋರಗಢ

ಕಾರ್ನಾರ್ಕ್ -ಒರಿಸ್ಸಾ

ಲಕ್ಷ್ಮಿ ವಿಲಾಸ್ ಪ್ಯಾಲೇಸ್ -ಬರೋಡಾ

ಲಾಲ್ ಬಾಗ್ ಗಾರ್ಡನ್ -ಬೆಂಗಳೂರು

ಲಾಲ್ಗಢ್ ಅರಮನೆ -ಬಿಕನೇರ್

ಮಹಾಬಲೇಶ್ವರ ದೇವಾಲಯ -ಉಜ್ಜಯಿನಿ (ಎಂ.ಪಿ.)

ಮಹೇಶ್ಮುರಿ (ಟ್ರಿಮೂರ್ತಿ) ಎಲಿಫೆಂಟಾ ಗುಹೆಗಳು

ಮಲಬಾರ್ ಹಿಲ್ -ಬಾಂಬೆ

ಮ್ಯಾನ್ ಮಂದಿರ್ ಪ್ಯಾಲೇಸ್ -ಗ್ವಾಲಿಯರ್ ಕೋಟೆ

ಮಾರ್ಬಲ್ ರಾಕ್ಸ್ -ಜಬಲ್ಪುರ್

ಮರೀನಾ ಬೀಚ್ -ಮದ್ರಾಸ್

ಮಿನಾಕ್ಷಿ ದೇವಸ್ಥಾನ -ಮಧುರೈ

ಮೌಂಟ್. ಗಿರ್ನರ್ (ಜೈನ ದೇವಾಲಯ) -ಜುನಾಗಢ್

ನಾಗಿನ್ ಲೇಕ್ -ಶ್ರೀನಗರ

ನಿಶತ್ ಬಾಗ್ -ಶ್ರೀನಗರ

ಪದ್ಮನಾಭ ದೇವಸ್ಥಾನ -ತಿರುವನಂತಪುರ

ಪಾಲಿಟಾನ -ಜುನಾಗಢ್

ಪಂಚ್ ಮಹಲ್ -ಫತೇಪುರ್ ಸಿಕ್ರಿ

ಪಿಚೋಲಾ ಸರೋವರ -ಉದೈಪುರ್

ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸರ್ -ಬಾಂಬೆ

ಕುತಾಬ್ ಮಿನಾರ್ -ದೆಹಲಿ

ರಾಜ್ ಘಾಟ್ -ನವ ದೆಹಲಿ

ರಾಷ್ಟ್ರಪತಿ ಭವನ್- ನವದೆಹಲಿ

ದೆಹಲಿಯ -ಕೆಂಪು ಕೋಟೆ

ಸಾಂಚಿ ಸ್ತೂಪ ಸಾಂಚಿ (ಭೋಪಾಲ್)

ಸಹರ್ -ಬಾಂಬೆ

ಸಾರನಾಥ ದೇವಾಲಯ -ವಾರಣಾಸಿ

ಸಿದಿ ಸಯ್ಯಿದ್ ಮಸೀದಿ -ಅಹಮದಾಬಾದ್

ಶಾಲಿಮಾರ್ ಬಾಗ್ -ಶ್ರೀನಗರ

ಶಾಹಿ ಚಶ್ಮಾ -ಶ್ರೀನಗರ

ಶಾಂತಿ ವಾನಾ -ನವ ದೆಹಲಿ

ಶೋರ್ ದೇವಾಲಯ -ಮಹಾಬಲಿಪುರಂ

ಸೋಮನಾಥ ದೇವಸ್ಥಾನ- ಗುಜರಾತ್

ಗೋಮಟೆಗಳು ಪ್ರತಿಮೆ -ಕರ್ನಾಟಕ

ಉಗ್ರ ಪ್ರತಿಮೆ ನರಸಿಂಹ -ಹಂಪಿ

ಸುಂದರ್ಬನ್ಸ್- ಪಶ್ಚಿಮ ಬಂಗಾಳ

ಸೂರ್ಯ ದೇವಾಲಯ -ಕೊನಾರ್ಕ್

ತಾಜ್ ಮಹಲ್ -ಆಗ್ರಾ

ತ್ರಿಪಾಟಿ ದೇವಸ್ಥಾನ -ಆಂಧ್ರ ಪ್ರದೇಶ

ಸೈಲೆನ್ಸ್ ಗೋಪುರ- ಬಾಂಬೆ

ವಿಕ್ಟೋರಿಯಾ ಮೆಮೋರಿಯಲ್ -ಕಲ್ಕತ್ತಾ

ವಿಕ್ಟೋರಿಯಾ ಗಾರ್ಡನ್- ಬಾಂಬೆ

ವಿಜಯ್ ಘಾಟ್ -ನವ ದೆಹಲಿ

🌕

🔘ಭಾರತದಲ್ಲಿ ವಿಶ್ವ ಪರಂಪರೆ ತಾಣಗಳ & ನೈಸರ್ಗಿಕ ಪಟ್ಟಿ

ಕಾಜಿರಂಗಾ ರಾಷ್ಟ್ರೀಯ ಉದ್ಯಾನ (1985)

ಕಿಯೊಲಾಡಿಯೊ ನ್ಯಾಷನಲ್ ಪಾರ್ಕ್ (1985)

ಮನಸ್ ವನ್ಯಜೀವಿ ಧಾಮ (1985)

ನಂದಾ ದೇವಿ ಮತ್ತು ಹೂವಿನ ಕಣಿವೆ ರಾಷ್ಟ್ರೀಯ ಉದ್ಯಾನವನಗಳು
(1988)

ಸುಂದರ್ಬನ್ಸ್ ರಾಷ್ಟ್ರೀಯ ಉದ್ಯಾನ (1987)

ಆಗ್ರಾ ಕೋಟೆ (1983)

ಅಜಂತಾ ಗುಹೆಗಳು (1983)

ಸಾಂಚಿಯ ಬೌದ್ಧ ಸ್ಮಾರಕಗಳು (1989)

ಚಂಪಾನೇರ್-ಪಾವಗಡ್ ಆರ್ಕಿಯಾಲಾಜಿಕಲ್ ಪಾರ್ಕ್
(2004)

ಛತ್ರಪತಿ ಶಿವಾಜಿ ಟರ್ಮಿನಸ್ (ಹಿಂದೆ ವಿಕ್ಟೋರಿಯಾಟರ್ಮಿನಸ್) (2004)

ಗೋವಾದ ಚರ್ಚುಗಳು ಮತ್ತು ಕಾನ್ವೆಂಟ್ಗಳು (1986)

ಎಲಿಫೆಂಟಾ ಗುಹೆಗಳು (1987)

ಎಲ್ಲೋರಾ ಗುಹೆಗಳು (1983)

ಫತೇಪುರ್ ಸಿಕ್ರಿ (1986)

ಗ್ರೇಟ್ ಲಿವಿಂಗ್ ಚೋಳ ದೇವಾಲಯಗಳು (1987)

ಹಂಪಿ (1986) ನಲ್ಲಿ ಸ್ಮಾರಕಗಳ ಗುಂಪು

ಮಹಾಬಲಿಪುರಂನಲ್ಲಿ ಸ್ಮಾರಕಗಳ ಸಮೂಹ (1984)

ಪಟ್ಟದಕಲ್ಲು (1987) ನಲ್ಲಿ ಸ್ಮಾರಕಗಳ ಸಮೂಹ

ಹುಮಾಯೂನ್ ಸಮಾಧಿ, ದೆಹಲಿ (1993)

ಖಜುರಾಹೊ ಗ್ರೂಪ್ ಆಫ್ ಮಾನ್ಯೂಮೆಂಟ್ಸ್ (1986)

ಬೋಧಗಯಾದಲ್ಲಿ ಮಹಾಬೋಧಿ ದೇವಾಲಯ ಸಂಕೀರ್ಣ(2002)

ಮೌಂಟೇನ್ ರೈಲ್ವೇಸ್ ಆಫ್ ಇಂಡಿಯಾ (1999)

ಕುತುಬ್ ಮಿನಾರ್ ಮತ್ತು ಅದರ ಸ್ಮಾರಕಗಳು, ದೆಹಲಿ (1993)

ರೆಡ್ ಫೋರ್ಟ್ ಕಾಂಪ್ಲೆಕ್ಸ್ (2007)

ಭೀಮ್ಬೆಟ್ಕಾದ ರಾಕ್ ಶೆಲ್ಟರ್ಸ್ (2003)

ಸೂರ್ಯ ದೇವಾಲಯ, ಕೋನಾರ್ಕ್ (1984)

ತಾಜ್ ಮಹಲ್ (1983)

ಜಂತರ್ ಮಂತರ್, ಜೈಪುರ (2010)

🌕

09/06/2017

🐉🛍🛍🛍🛍🛍🛍🛍🛍🐉

*ಮಾಹಿತಿ ವೇದಿಕೆ*✍🙏

*ಮುಂದೆ ಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳು*✍

🐲 *KAS ಪ್ರಾಥಮಿಕ ಪರೀಕ್ಷಾ ದಿನಾಂಕ 20-08-2017 ಹಾಗೂ ಮುಖ್ಯ ಪರೀಕ್ಷೆಯು ನವೆಂಬರ್ ತಿಂಗಳಲ್ಲಿ ನಡೆಯುವ ಸಾದ್ಯತೆ ಇದೆ*

🐲 *SBI ಸ್ಪೆಷಲ್ ಮ್ಯಾನೇಜರ್ ಎಕ್ಸಿಕ್ಯುಟಿವ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ 18-06-2017*

🐲 *ದೇನಾ ಬ್ಯಾಂಕ್ 300 ಪ್ರೊಬೇಷನರಿ ಆಫೀಸರ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ 11-06-2017*

🐲 *ಕಂಬೈಂಡ್ ಮೆಡಿಕಲ್ ಸರ್ವೀಸ್ ಪರೀಕ್ಷಾ ದಿನಾಂಕ 13-08-2017*

🐲 *IAS/IFS ಪೂರ್ವ ಭಾವಿ ಪರೀಕ್ಷೆ 18-06-2017*

🐲 *IAS ಮುಖ್ಯ ಪರೀಕ್ಷೆ ಅಕ್ಟೋಬರ್ 2017*

🐲 *IFS ಮುಖ್ಯ ಪರೀಕ್ಷೆ ಡಿಸೆಂಬರ್ 2017*

🐲 *ಕೇಂದ್ರೀಯ ಮೀಸಲು ಪೊಲೀಸ್ ಪಡೆ -219 ಎ.ಎಸ್.ಎಐ ಹುದ್ದೆಗಳ ಲಿಖಿತ ಪರೀಕ್ಷಾ ದಿನಾಂಕ 16-07-2017*

🐲 *ಕೇಂದ್ರೀಯ ಮೀಸಲು ಪಡೆ -240 ಎಸ್.ಐ/ಎ.ಎಸ್.ಐ ಹುದ್ದೆಗಳ ಲಿಖಿತ ಪರೀಕ್ಷೆ - 30-07-2017*

🌸🙏🙏🙏🙏🙏🙏🙏🙏🌸

09/06/2017

#ಭಾರತದ ಸಂವಿಧಾನ:-📖📖
ಸಂವಿಧಾನಕ್ಕೆ ಸಂಬಂಧಿಸಿದ 110 ಪ್ರಶ್ನೋತ್ತರಗಳು

💦ಫಜಲ್ ಅಲಿ ಆಯೋಗ ವರದಿ ಸಲ್ಲಿಸಿದ್ದು ಯಾವಾಗ?
➡1955 ರಲ್ಲಿ.

💦ಭಾಷೆ ಆಧಾರದ ಮೇಲೆ ಮೊದಲ ರಚನೆಯಾದ ರಾಜ್ಯ ಯಾವುದು?
➡ಆಂಧ್ರಪ್ರದೇಶ.

💦15 ನೇ ರಾಜ್ಯವಾಗಿ ರಚನೆಯಾದದ್ದು ಯಾವುದು?
➡ ಗುಜರಾತ್ (1960).

💦29 ನೇ ರಾಜ್ಯವಾಗಿ ತೆಲಂಗಾಣ ರಚನೆಯಾದದ್ದು ಯಾವಾಗ?
➡ಜೂನ್ 2, 2014.

💦ಭಾರತ ದೇಶವು ಯಾವ ಪೌರತ್ವ ಹೊಂದಿದೆ?
➡ಏಕ ಪೌರತ್ವ.

💦ಭಾರತದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಎಷ್ಟು?
➡6.

💦ಪೌರತ್ವ ಕಾಯ್ದೆ ಜಾರಿಗೆ ಬಂದದ್ದು ಯಾವಾಗ? ➡1955, ಡಿಸೆಂಬರ್ 30

💦ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು?
➡1) ಅಮೇರಿಕಾ.2) ಸ್ವಿಟ್ಜರ್ಲ್ಯಾಂಡ್.

💦ಕೇಂದ್ರ ಮಂತ್ರಿ ಮಂಡಲ ರಚನೆಯಾಗುವ ಪದ್ದತಿಗೆ ----- ಎನ್ನುವರು.
➡ಸಂಸದೀಯ ಪದ್ದತಿ.

💦ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ?
➡340.

💦ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯೋಮಿತಿ ತಿಳಿಸಿ?
➡62 ವರ್ಷ

💦ನಮ್ಮ ರಾಜ್ಯದ ಉಚ್ಚ ನ್ಯಾಯಾಲಯ ಎಲ್ಲಿದೆ?
➡ಬೆಂಗಳೂರಿನ ಮಹಾನಗರದಲ್ಲಿ

💦ಸರ್ವೋಚ್ಚ ನ್ಯಾಯಾಲಯದ ಒಟ್ಟು ನ್ಯಾಯಾಧೀಶರ ಸಂಖ್ಯೆ ಎಷ್ಟು?
➡31

💦ಭಾರತದಲ್ಲಿರುವ ಉಚ್ಚ ನ್ಯಾಯಾಲಯಗಳ ಸಂಖ್ಯೆ ಎಷ್ಟು?
➡24.

💦ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ ----- ನ್ಯಾಯಾಲಯಗಳಿವೆ?
➡ಉಚ್ಚ.

💦ವಿಧಾನ ಪರಿಷತ್ತಿನ ಸದಸ್ಯರಿಗೆ ಕನಿಷ್ಠ ಎಷ್ಟು ವರ್ಷ ಆಗಿರಬೇಕು.
➡30

💦ರಾಜ್ಯಪಾಲರ ಅರ್ಹತೆ ಬಗ್ಗೆ ತಿಳಿಸುವ ವಿಧಿ ಯಾವುದು?
➡157.

💦ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಯಾರು?
➡ಮುಖ್ಯಮಂತ್ರಿ / ಪ್ರಧಾನಮಂತ್ರಿ.

💦ರಾಜ್ಯಪಾಲರನ್ನು ಯಾರು ನೇಮಕ ಮಾಡುವವರು ಯಾರು?
➡ರಾಷ್ಟ್ರಪತಿಗಳು.

💦ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
➡ಆಸ್ಟ್ರೇಲಿಯಾ.

💦ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
➡ಬ್ರಿಟನ್.

💦ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
➡ಅಮೆರಿಕಾ.

💦ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ?
➡ರಷ್ಯಾ ಕ್ರಾಂತಿ (1917).

💦ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು?
➡ಕಲ್ಕತ್ತ ಹೈಕೋರ್ಟ್

💦ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯಯಾವುದು?
➡ಹರಿಯಾಣ

💦ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?
➡39+1.

💦ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?
➡ಮಂಜುಳಾ ಚೆಲ್ಲೂರ್.

💦 ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?
➡1884

💦ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?
➡217

💦ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?
➡61 ನೇ ವಿಧಿ.

💦ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?
➡ಲೋಕಸಭೆಯ ಸ್ಪಿಕರ್

💦ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?
➡3 ಸಲ

💦ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?
➡ಅರ್ಟಾನಿ ಜನರಲ್

💦ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?
➡ಅರ್ಟಾನಿ ಜನರಲ್

💦 ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?
➡ಪಂಜಾಬ್.

💦ರಾಷ್ಟ್ರಪತಿಗಳು ವಾಸಿಸುವ ಸ್ಥಳ ಯಾವುದು?
➡ಹೈದ್ರಾಬಾದ್

💦ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?
➡4

💦 ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?
➡12.

💦ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?
➡26 ನವೆಂಬರ್ 1949

💦ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ?
➡100

💦ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
➡ಅಮೆರಿಕಾ

💦 ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?
➡ಗೋಲಕನಾಥ ಪ್ರಕರಣ

💦. ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?
➡ಸರ್ದಾರ್ ವಲ್ಲಭಭಾಯಿ ಪಟೇಲ್.

💦.1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?
➡44 ನೇ ತಿದ್ದುಪಡಿ.

💦. ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?
➡ಡಾ.ಅಂಬೇಡ್ಕರ್.

💦ಅಂಬೇಡ್ಕರ್ ರವರು ಯಾವ ಅನುಚ್ಛೇದವನ್ನು "ಸಂವಿಧಾನದ ಹೃದಯ ಮತ್ತು ಆತ್ಮ" ಎಂದಿದ್ದಾರೆ?
➡ಅನಚ್ಛೇದ-32

💦ಷೆರ್ಷರಿಯೋ ಇದೊಂದು __________.
➡ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್

💦ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?
➡ಸುಪ್ರೀಂಕೋರ್ಟ್.

💦ವೇಮರ್ ಸಂವಿಧಾನದಿಂದ ಎರವಲು ಪಡೆದಿದ್ದು ಏನು?
➡ತುರ್ತು ಪರಿಸ್ಥಿತಿ.(ಜರ್ಮನಿ).

💦ರಷ್ಯಾದಿಂದ ಪಡೆದ ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು?
➡ 10.

💦ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ?
➡44 ನೇ ( 1978 ).

💦ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು? ➡ಸರ್ಷಿಯೋರರಿ.

💦ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ?
➡ 3 ಭಾಗಗಳು

💦5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ? ➡ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ.

💦"ಪಕ್ಷಾಂತರ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
➡1985 ರಲ್ಲಿ.

💦ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು?
➡ಅಶೋಕ್ ಮೇಹ್ತಾ.

💦40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ? ➡ಪಂಚಾಯತ್ ರಾಜ್ ವ್ಯವಸ್ಥೆಗೆ.

💦ವಾರ್ಷಿಕ ಆಯವ್ಯಯ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು?
➡112.

💦ಭಾರತದ ಒಕ್ಕೂಟದ ಮುಖ್ಯಸ್ಥರು ಯಾರು? ➡ರಾಷ್ಟ್ರಪತಿ.

💦ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಯಾರು?
➡ಉಪ ರಾಷ್ಟ್ರಪತಿ.

💦ಅತಿ ಹೆಚ್ಛು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು?
➡ಉತ್ತರಪ್ರದೇಶ.

💦ಸಂಸತ್ತಿನ ಹಣಕಾಸು ಸಮಿತಿಯಲ್ಲಿ ಅತ್ಯಂತ ದೊಡ್ಡ ಹಣಕಾಸು ಸಮಿತಿ ಯಾವುದು?
➡ಅಂದಾಜು ವೆಚ್ಚ ಸಮಿತಿ.

💦ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು?
➡ರಾಜ್ಯಪಾಲರು.

💦ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ?
➡1921 ರಲ್ಲಿ.

💦ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು?
➡ಲೋಕಸಭೆಯ ಸ್ಪೀಕರ್.

💦ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ?
➡ಸಂಸತ್ತಿನ ಅಧಿವೇಶನದ ಮೊದಲ ಗಂಟೆ.

💦76 ನೇ ವಿಧಿ ಯಾರಿಗೆ ಸಂಬಂಧಿಸಿದೆ?
➡ಅಟಾರ್ನಿ ಜನರಲ್.

💦ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು?
➡54 ನೇ.

💦ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ?
➡333.

💦ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ?
➡ 25-28.

💦324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?
➡ಚುನಾವಣೆ ಆಯೋಗಕ್ಕೆ.

💦ಪಂಚಾಯತ್ ರಾಜ್ ವ್ವವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು?
➡29.

💦371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ?
➡ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ.

💦ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂ ಎಲ್ ಎ ಗಳು ಭಾಗವಹಿಸುವದಿಲ್ಲ?
➡ಉಪರಾಷ್ಟ್ರಪತಿಯ.

💦ಸಂಸತ್ತಿನ ಮೇಲ್ಮನೇ ಯಾವುದು?
➡ರಾಜ್ಯಸಭೆ.

💦ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು?
➡ಸಾರ್ವಜನಿಕ ಲೆಕ್ಕಪತ್ರ ಸಮಿತಿ.

💦ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು? ➡ರಾಷ್ಟ್ರಪತಿ.

💦ಸಂಸತ್ತು ------ ಒಳಗೊಂಡಿದೆ?
➡ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ.

💦ಯು ಪಿ ಎಸ್ ಸಿ ಮತ್ತು ಎಸ್ ಪಿ ಎಸ್ ಸಿ ಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು?
➡315.

💦ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸುಎಷ್ಟು?
➡35.

💦ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು?
➡ಸಾರ್ವಜನಿಕ ಉದ್ದಿಮೆಗಳ ಸಮಿತಿ.

💦ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಖ್ಯ ಕಾರ್ಯವೇನು?
➡ಸಿಎಜಿ ವರದಿಯನ್ನು ಪರಿಶೀಲಿಸುವುದು.

💦44 ನೇ ತಿದ್ದುಪಡಿಯಾದದ್ದು ಯಾವಾಗ?
➡1978 ರಲ್ಲಿ.

💦ಅಂದಾಜು ವೆಚ್ಚ ಸಮಿತಿಯ ಸದಸ್ಯರ ಒಟ್ಟು ಸಂಖ್ಯೆ ಎಷ್ಟು?
➡30.

💦ಶಾಸನಸಭೆ ಕರೆಯುವುದು, ಮುಂದೂಡುವುದು ಮತ್ತು ವಿಸರ್ಜಿಸುವುದು ಯಾರು?
➡ರಾಜ್ಯಪಾಲರು.

💦ಸಂಸತ್ತು ಮಾಡಿದ ಕಾನೂನುಗಳನ್ನು ಮರುಪರಿಶೀಲಿಸುವಅಧಿಕಾರ ---- ಗೆ ಇದೆ?
➡ ಸುಪ್ರೀಂಕೋರ್ಟ್.

💦ಜಂಟಿ ಅಧಿವೇಶನಕ್ಕೆ ಸಂಬಂಧಿಸಿದ ವಿಧಿ ಯಾವುದು?
➡108.

💦ಯು ಪಿ ಎಸ್ ಸಿ ಸದಸ್ಯರನ್ನು ನೇಮಕ ಮಾಡುವವರು ಯಾರು?
➡ರಾಷ್ಟ್ರಪತಿ.

💦ರಾಜ್ಯಸಭೆಯ ಅಧ್ಯಕ್ಷರು ಯಾರು?
➡ಉಪರಾಷ್ಟ್ರಪತಿ.

💦75 ನೇ ವಿಧಿ ಸಂಬಂಧಿಸಿರುವುದು ---- ಗೆ?
➡ಪ್ರಧಾನ ಮಂತ್ರಿ

💦ಲೋಕಸಭೆಯನ್ನು ---- ಎನ್ನುವರು
➡ಸಂಸತ್ತಿನ ಕೆಳಮನೆ.

💦ನ್ಯಾಯ ನಿರ್ಣಯ ನೀಡುವುದು ಯಾವುದು?
➡ ನ್ಯಾಯಾಂಗ.

💦ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು?
➡5 ವರ್ಷ

💦ಕರ್ನಾಟಕದ ವಿಧಾನ ಪರಿಷತ್ ನ ಸದಸ್ಯರ ಸಂಖ್ಯೆ ಎಷ್ಟು?
➡75.

💦 ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
➡ಹೊಸದಿಲ್ಲಿ

💦ಲೋಕ ಅದಾಲತ್ ಎನ್ನುವುದು ಒಂದು -----. ➡ಜನತಾ ನ್ಯಾಯಾಲಯ.

💦ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು? ➡ಸರ್ವೋಚ್ಚ ನ್ಯಾಯಾಲಯ.

💦ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು.
➡ ಕಾನೂನುಗಳು.

💦ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು ------ ಎನ್ನುವರು.
➡ಏಕಸದನ ಪದ್ದತಿ.

💦ಸುವರ್ಣಸೌಧ ಎಲ್ಲಿದೆ?
➡ಬೆಳಗಾವಿ.

💦75 ನೇ ವಿಧಿ ಸಂಬಂಧಿಸಿರುವದು ------ಗೆ.
➡ಪ್ರಧಾನ ಮಂತ್ರಿ.

💦ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ?
➡1929.

💦ಕೇಂದ್ರ ಮಂತ್ರಿ ಮಂಡಲ ----- ಗೆ ಬದ್ದವಾಗಿರುತ್ತದೆ.
➡ಲೋಕಸಭೆಗೆ.

💦ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು? ➡ಉಪರಾಷ್ಟ್ರಪತಿ.

💦ರಾಷ್ಟ್ರಪತಿಯವರ ಅಧಿಕಾರಾವಧಿ ಎಷ್ಟು?
➡5 ವರ್ಷ (56 ನೇ ವಿಧಿ).

💦ಅವಿರೋದವಾಗಿ ಆಯ್ಕೃಯಾದ ಏಕೈಕ ರಾಷ್ಟ್ರಪತಿ ಹಾಗೂ ಲೋಕಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಏಕೈಕ ಸಭಾಪತಿ ಯಾರು?
➡ನೀಲಂ ಸಂಜೀವರೆಡ್ಡಿ

💦ರಾಷ್ಟ್ರಪತಿ ನಿಲಯಂ ಎಲ್ಲಿದೆ?
➡ಹೈದರಾಬಾದ್.

💦ಭಾರತದ ಸಂಸತ್ತಿನ ಎರಡು ಸದನಗಳು ಯಾವು?
➡1) ಲೋಕಸಭೆ.2) ರಾಜ್ಯಸಭೆ.

💦ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟು?
➡250.

💦2010 ರಲ್ಲಿ 21ಎ ವಿಧಿಯ ಮೂಲಕ ಯಾವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಜಾರಿಗೊಳಿಸಲಾಯಿತು?
➡ಶಿಕ್ಷಣದ ಹಕ್ಕು

Address

Sulikunte
Bangarapet
563114

Telephone

+91 97432 28802

Website

Alerts

Be the first to know and let us send you an email when Competative Exam Mission posts news and promotions. Your email address will not be used for any other purpose, and you can unsubscribe at any time.

Share