DIPR Karnataka

DIPR Karnataka Official Page of Department of Information and Public Relations, Government of Karnataka DIPR Karnataka

ರಾಜ್ಯದಲ್ಲಿ ಉದ್ಯಮಗಳ ಬೆಳವಣಿಗೆಗೆ ಉತ್ತೇಜನ ನೀಡಲು ಸರ್ಕಾರವು ಉದ್ಯೋಗ ನಿಧಿ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಇದರಡಿ ರಾಜ್ಯದ ಅತ್ಯಂತ ಹಿಂದ...
20/08/2026

ರಾಜ್ಯದಲ್ಲಿ ಉದ್ಯಮಗಳ ಬೆಳವಣಿಗೆಗೆ ಉತ್ತೇಜನ ನೀಡಲು ಸರ್ಕಾರವು ಉದ್ಯೋಗ ನಿಧಿ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಇದರಡಿ ರಾಜ್ಯದ ಅತ್ಯಂತ ಹಿಂದುಳಿದ 10 ಜಿಲ್ಲೆಗಳಲ್ಲಿ ಹೊಸ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ, ಪ್ರತಿ ಉದ್ಯೋಗಿಗೆ ತಿಂಗಳಿಗೆ ₹2,500 ರಂತೆ 2 ವರ್ಷಗಳ ಕಾಲ ಪ್ರೋತ್ಸಾಹಧನ ನೀಡಿ ಒಟ್ಟು ಒಂದು ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.

When entrepreneurship grows, new opportunities follow.

Through Udyoga Nidhi, the Government of Karnataka is encouraging entrepreneurs to create new jobs in the state's most backward districts, taking economic opportunities beyond established centres. By supporting new employment and enterprise, the initiative aims to promote balanced regional growth and build stronger local economies across Karnataka.

ಭಾರತ್ ಜೋಡೋ ಯುವ ಸಂಘದ ಸದಸ್ಯತ್ವ ನೋಂದಣಿ ಆರಂಭವಾಗಿದೆ. ರಾಜ್ಯದ 16 ರಿಂದ 35 ವರ್ಷ ವಯಸ್ಸಿನ ಅರ್ಹ ಯುವಜನರು ತಮ್ಮ ವಿವರಗಳೊಂದಿಗೆ ನೋಂದಣಿ ಮಾಡ...
19/08/2026

ಭಾರತ್ ಜೋಡೋ ಯುವ ಸಂಘದ ಸದಸ್ಯತ್ವ ನೋಂದಣಿ ಆರಂಭವಾಗಿದೆ. ರಾಜ್ಯದ 16 ರಿಂದ 35 ವರ್ಷ ವಯಸ್ಸಿನ ಅರ್ಹ ಯುವಜನರು ತಮ್ಮ ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳುವ ಮೂಲಕ ಬದಲಾವಣೆಯ ಭಾಗವಾಗಿ.

Membership registration for Bharat Jodo Yuva Sangha is now open. Eligible youth aged 16 to 35 years across Karnataka can register with their details and be a part of the change.

ರೈತ ಮಿತ್ರ - ರೈತನಿಗೆ ಬೆನ್ನೆಲುಬು, ಕೃಷಿಗೆ ಹೊಸ ಬಲಸಣ್ಣ ರೈತರ ಕೃಷಿ ವೆಚ್ಚ ಕಡಿಮೆ ಮಾಡಿ, ಆಧುನಿಕ ಯಂತ್ರೋಪಕರಣಗಳು ಕೈಗೆಟುಕುವಂತೆ ಮಾಡಲು ‘ರ...
19/08/2026

ರೈತ ಮಿತ್ರ - ರೈತನಿಗೆ ಬೆನ್ನೆಲುಬು, ಕೃಷಿಗೆ ಹೊಸ ಬಲ

ಸಣ್ಣ ರೈತರ ಕೃಷಿ ವೆಚ್ಚ ಕಡಿಮೆ ಮಾಡಿ, ಆಧುನಿಕ ಯಂತ್ರೋಪಕರಣಗಳು ಕೈಗೆಟುಕುವಂತೆ ಮಾಡಲು ‘ರೈತ ಮಿತ್ರ’ ಯೋಜನೆಯಡಿ ಟ್ರ್ಯಾಕ್ಟರ್, ರೋಟವೇಟರ್, ಟಿಲ್ಲರ್ ಹಾಗೂ ಸೀಡ್ ಡ್ರಿಲ್‌ಗಳನ್ನು ಬಾಡಿಗೆಗೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ. 3 ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಬಾಡಿಗೆ ಶುಲ್ಕದ ಮೇಲೆ ಶೇ.50ರಷ್ಟು ಸಬ್ಸಿಡಿ ನೀಡಲು ಸರ್ಕಾರ ನಿರ್ಧರಿಸಿದೆ.

Access to the right equipment can make farming more efficient and reduce the burden on small farmers.

Through the Raitha Mitra initiative, the Government of Karnataka is supporting small farmers with easier access to essential farm machinery on rental. With a 50% subsidy for eligible farmers owning up to 3 acres, the initiative aims to make mechanised farming more affordable and support better agricultural outcomes.

ಶುದ್ಧ ಮತ್ತು ಸುರಕ್ಷಿತ ಆಹಾರ ಸೇವಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಹೋಟೆಲ್, ರೆಸ್ಟೋರೆಂಟ್‌ ಅಥವಾ ಬೇಕರಿಗಳಲ್ಲಿ ನೈರ್ಮಲ್ಯದ ಕೊರತೆ ಕಂಡ...
18/08/2026

ಶುದ್ಧ ಮತ್ತು ಸುರಕ್ಷಿತ ಆಹಾರ ಸೇವಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಹೋಟೆಲ್, ರೆಸ್ಟೋರೆಂಟ್‌ ಅಥವಾ ಬೇಕರಿಗಳಲ್ಲಿ ನೈರ್ಮಲ್ಯದ ಕೊರತೆ ಕಂಡುಬಂದರೆ ಸುಮ್ಮನಿರಬೇಡಿ. ಈ QR ಕೋಡ್ ಸ್ಕ್ಯಾನ್ ಮಾಡಿ, ತಕ್ಷಣವೇ ನಿಮ್ಮ ದೂರನ್ನು ದಾಖಲಿಸಿ.

Clean and safe food is every citizen’s right. If you notice unhygienic practices at a hotel, restaurant or bakery, scan the QR code to report the issue and register your complaint instantly.

‘ವಿದ್ಯಾರ್ಥಿ ಸಹಾಯ ಹಸ್ತ’ - ಗ್ರಾಮೀಣ ಮಕ್ಕಳ ಕನಸುಗಳಿಗೆ ಹೊಸ ಭರವಸೆಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಓದಿದ ವಿದ್ಯಾರ್...
18/08/2026

‘ವಿದ್ಯಾರ್ಥಿ ಸಹಾಯ ಹಸ್ತ’ - ಗ್ರಾಮೀಣ ಮಕ್ಕಳ ಕನಸುಗಳಿಗೆ ಹೊಸ ಭರವಸೆ

ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಓದಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಈಗಿರುವ 15% ಗ್ರಾಮೀಣ ಮೀಸಲಾತಿಯೊಳಗೆ 7.5% ಮೀಸಲಾತಿ ನೀಡುವ ಮೂಲಕ, ಪ್ರತಿಭೆಗೆ ಅವಕಾಶ ನೀಡಿ ಉಜ್ವಲ ಭವಿಷ್ಯಕ್ಕೆ ದಾರಿ ತೋರಿಸುವ ಮಹತ್ವದ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ.

Every student deserves an opportunity to pursue their aspirations, regardless of where they come from.

Through the Vidyarthi Sahayahasta initiative, the Government of Karnataka is creating greater access to professional education for students from rural government schools. The 7.5% reservation within the existing rural quota will help create a more level playing field for eligible students pursuing professional courses.

ಗುಣಮಟ್ಟದ ಆಹಾರ ಹಾಗೂ ಆರೋಗ್ಯಕರ ಜೀವನಕ್ಕಾಗಿ ಸರ್ಕಾರ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿದೆ. ಹೋಟೆಲ್‌ ಮತ್ತು ರೆಸ...
17/08/2026

ಗುಣಮಟ್ಟದ ಆಹಾರ ಹಾಗೂ ಆರೋಗ್ಯಕರ ಜೀವನಕ್ಕಾಗಿ ಸರ್ಕಾರ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿದೆ. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸ್ವಚ್ಛತೆ, ಗುಣಮಟ್ಟದ ಆಹಾರ, ಸುರಕ್ಷಿತ ನೀರು ಹಾಗೂ ಆರೋಗ್ಯಕರ ಅಡುಗೆ ಪದ್ಧತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಸಸ್ಯಾಹಾರ ಮತ್ತು ಮಾಂಸಾಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು, ಸಿಬ್ಬಂದಿ ಸ್ವಚ್ಛ ಸಮವಸ್ತ್ರ ಧರಿಸಬೇಕು ಹಾಗೂ ಆಹಾರ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ಆದೇಶಿಸಿದೆ.

ಸಾಲದ ಸುಳಿಯಲ್ಲಿದ್ದ ಕೊಪ್ಪಳದ ರೇಣುಕಾ ಅವರಿಗೆ 'ಗೃಹಲಕ್ಷ್ಮಿ' ಹಣ ಹೊಸ ಬದುಕು ನೀಡಿದೆ. ಅವರ ಬದುಕಿನಲ್ಲಿದ್ದ ಭೀತಿಯನ್ನು ಕಳೆದು, ಮಗುವಿನ ಭವಿಷ...
16/08/2026

ಸಾಲದ ಸುಳಿಯಲ್ಲಿದ್ದ ಕೊಪ್ಪಳದ ರೇಣುಕಾ ಅವರಿಗೆ 'ಗೃಹಲಕ್ಷ್ಮಿ' ಹಣ ಹೊಸ ಬದುಕು ನೀಡಿದೆ. ಅವರ ಬದುಕಿನಲ್ಲಿದ್ದ ಭೀತಿಯನ್ನು ಕಳೆದು, ಮಗುವಿನ ಭವಿಷ್ಯವನ್ನು ರೂಪಿಸಲು ಗ್ಯಾರಂಟಿ ಯೋಜನೆಗಳು ನೆರವಾಗಿದೆ. ರೇಣುಕಾ ಅವರಂತೆ ಇಂದು ರಾಜ್ಯದ ಕೋಟ್ಯಂತರ ಜನರು ಈ ಕಲ್ಯಾಣ ಯೋಜನೆಗಳಿಂದಾಗಿ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

#ಯುವಕರ್ನಾಟಕ_ನವಭಾರತ

16/08/2026

ರತ್ನಮ್ಮನವರಂತೆ ರಾಜ್ಯದ ಲಕ್ಷಾಂತರ ಹಿರಿಜೀವಗಳಿಗೆ ಗ್ಯಾರಂಟಿ ಯೋಜನೆಗಳು ಇಳಿವಯಸ್ಸಿನಲ್ಲಿ ದೊಡ್ಡ ಆಸರೆಯಾಗಿವೆ. ಔಷಧ ಖರೀದಿಗಿರಲಿ, ಮನೆಯ ಖರ್ಚಿಗಿರಲಿ, ಇಂದು ಅವರು ಯಾರ ಮುಂದೆಯೂ ಕೈಚಾಚುವ ಅಗತ್ಯವಿಲ್ಲ. ಈ ಮೂಲಕ ಸ್ವಾತಂತ್ರ್ಯದ ಆಶಯಗಳನ್ನು ಪ್ರತಿಯೊಬ್ಬರ ಮನೆಮನ ತಲುಪಿಸುವಲ್ಲಿ ಕರ್ನಾಟಕ ಸರ್ಕಾರವು ಯಶಸ್ವಿಯಾಗಿದೆ.

#ಯುವಕರ್ನಾಟಕ_ನವಭಾರತ

ನವ ಭಾರತದ ನಿರ್ಮಾಣಕ್ಕೆ ಯುವಕರ ಆಲೋಚನೆ ಮತ್ತು ಕೌಶಲ್ಯವೇ ಅಡಿಪಾಯ!ಎಂಜಿನಿಯರಿಂಗ್ ಮುಗಿಸಿ ಕೆಲಸ ಸಿಗದೆ ಕಂಗಾಲಾಗಿದ್ದ  ಸುಪ್ರೀತ್ ಅವರಿಗೆ 'ಯುವ...
16/08/2026

ನವ ಭಾರತದ ನಿರ್ಮಾಣಕ್ಕೆ ಯುವಕರ ಆಲೋಚನೆ ಮತ್ತು ಕೌಶಲ್ಯವೇ ಅಡಿಪಾಯ!

ಎಂಜಿನಿಯರಿಂಗ್ ಮುಗಿಸಿ ಕೆಲಸ ಸಿಗದೆ ಕಂಗಾಲಾಗಿದ್ದ ಸುಪ್ರೀತ್ ಅವರಿಗೆ 'ಯುವನಿಧಿ' ಯೋಜನೆ ಹೊಸ ದಾರಿ ತೋರಿದೆ. ಹೆತ್ತವರ ಮೇಲೆ ಅವಲಂಬಿತರಾಗದೆ, ಸ್ವತಂತ್ರವಾಗಿ ಬದುಕುವ ಸ್ವಾತಂತ್ರ್ಯವನ್ನು ನೀಡಿದೆ. ಯುವ ಸಮುದಾಯವನ್ನು ಆರ್ಥಿಕವಾಗಿ ಹಾಗೂ ಕೌಶಲ್ಯಾಧಾರಿತ ಶಿಕ್ಷಣದ ಮೂಲಕ ಸಶಕ್ತಗೊಳಿಸುವ ಮೂಲಕ 'ಯುವ ಕರ್ನಾಟಕ' ನಿರ್ಮಾಣದ ಕನಸನ್ನು ಸಾಕಾರಗೊಳಿಸಲಾಗುತ್ತಿದೆ.

#ಯುವಕರ್ನಾಟಕ_ನವಭಾರತ

16/08/2026

ರೇಷ್ಮಾರಂತೆ ಉನ್ನತ ಶಿಕ್ಷಣದ ಕನಸನ್ನು ಕಟ್ಟಿಕೊಂಡಿರುವ ಲಕ್ಷಾಂತರ ಯುವ ಜನರಿಗೆ ಯುವನಿಧಿ ಗ್ಯಾರಂಟಿ ಯೋಜನೆಯು ಆರ್ಥಿಕ ಸ್ವಾತಂತ್ರ್ಯವನ್ನು ತುಂಬಿದೆ. 70,000ಕ್ಕೂ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ನಿರ್ಧಾರದ ಮೂಲಕ ನಿರುದ್ಯೋಗದ ಸಮಸ್ಯೆಗೆ ಮುಕ್ತಿ ಹಾಗೂ ಭಾರತ್‌ ಜೋಡೋ ಯುವ ಸಂಘದ ಮೂಲಕ ಅವರ ಸರ್ವಾಂಗೀಣ ಬೆಳವಣಿಗೆಗೆ ಸರ್ಕಾರವು ಮುಂದಾಗಿದೆ. ಈ ಮೂಲಕ ಸ್ವಾತಂತ್ರ್ಯದ ಆಶಯಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ.

#ಯುವಕರ್ನಾಟಕ_ನವಭಾರತ

Address

No 17, Vartha Soudha, Bhagawan Mahaveer Road (Infantry Road)
Bangalore
560001

Alerts

Be the first to know and let us send you an email when DIPR Karnataka posts news and promotions. Your email address will not be used for any other purpose, and you can unsubscribe at any time.

Shortcuts

Share