DCP SOUTH BCP

Contact the organization

DCP SOUTH BCP Public Service

27/09/2026

ದಿನಾಂಕ 26-09-2026 ಗಿರಿನಗರ ಪೋಲಿಸ್ ಠಾಣಾ ಸರಹದ್ದಿನಲ್ಲಿ ಸೆಪ್ಟೆಂಬರ್ 2026 ರ ಮಾಸಿಕ #ಜನಸಂಪರ್ಕ ಸಭೆಯನ್ನು ಆಯೋಜಿಸಿ ಠಾಣಾ ಸರಹದ್ದಿನ ನಾಗರೀಕರ ಸಲಹೆ & ಸಮಸ್ಯೆಗಳನ್ನು ಇತರ ಇಲಾಖೆಗಳ & ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಆಲಿಸಿ, ಪರಿಹಾರೋಪಾಯಗಳನ್ನು ಚರ್ಚಿಸಿ ಕೈಗೊಳ್ಳುವ ಕ್ರಮದ ಬಗ್ಗೆ ಭರವಸೆಯನ್ನು ನೀಡಲಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ವಿ ವಿ ಪುರ, ಗಿರಿನಗರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್,ಬನಶಂಕರಿ ಸಂಚಾರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್, ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ಭಾಗವಹಿಸಿದ್ದರು

ಬೆಂಗಳೂರು ನಗರದ ಪೊಲೀಸ್ ಠಾಣೆಗಳ ಮುಂದೆ ವರ್ಷಗಳಿಂದ ನಿಂತಿದ್ದ ಹಳೆಯ ಹಾಗೂ ವಾರಸುದಾರರಿಲ್ಲದ ವಾಹನಗಳ ತೆರವು ಕಾರ್ಯಾಚರಣೆ ಈಗ ಚುರುಕುಗೊಂಡಿದೆ!​...
17/09/2026

ಬೆಂಗಳೂರು ನಗರದ ಪೊಲೀಸ್ ಠಾಣೆಗಳ ಮುಂದೆ ವರ್ಷಗಳಿಂದ ನಿಂತಿದ್ದ ಹಳೆಯ ಹಾಗೂ ವಾರಸುದಾರರಿಲ್ಲದ ವಾಹನಗಳ ತೆರವು ಕಾರ್ಯಾಚರಣೆ ಈಗ ಚುರುಕುಗೊಂಡಿದೆ!

​ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಹಯೋಗದೊಂದಿಗೆ ಜಾಗವನ್ನು ನಿಗದಿಪಡಿಸಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಂದಾಯ ಇಲಾಖೆಯು ಇದರ ವಿಸ್ತರಣೆಗಾಗಿ 26 ಎಕರೆ ಜಾಗವನ್ನು ಒದಗಿಸಿದೆ.

ದಿನಾಂಕ 16-09-2026 ರಂದು ಜಯನಗರ ಪೊಲೀಸ್ ಠಾಣೆ ಮುಂಭಾಗದಿಂದ ಸುಮಾರು 111 ಹಳೆ ವಾಹನಗಳನ್ನು ಯಶಸ್ವಿಯಾಗಿ ತೆರವುಗೊಳಿಸಿ, ರಾಗಿಗುಡ್ಡದಲ್ಲಿ GBA ನಿಗದಿಪಡಿಸಿರುವ ಅಧಿಕೃತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

​ಸಾರ್ವಜನಿಕರ ಸುಗಮ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲು ಮತ್ತು ಠಾಣೆಗಳ ಆವರಣವನ್ನು ಸ್ವಚ್ಛವಾಗಿಡಲು ನಮ್ಮ ಈ ಹೆಜ್ಜೆ ನಿರಂತರವಾಗಿ ಮುಂದುವರಿಯಲಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
​

ಬೆಂಗಳೂರು ನಗರದ ಪೊಲೀಸ್ ಠಾಣೆಗಳ ಸುತ್ತಮುತ್ತ ವರ್ಷಗಳಿಂದ ನಿಂತು ಅನಗತ್ಯವಾಗಿ ಸ್ಥಳಾಕ್ರಮಿಸಿಕೊಂಡಿದ್ದ 11,341 ವಾಹನಗಳ ಸ್ಥಳಾಂತರ ಕಾರ್ಯಕ್ಕೆ ...
17/09/2026

ಬೆಂಗಳೂರು ನಗರದ ಪೊಲೀಸ್ ಠಾಣೆಗಳ ಸುತ್ತಮುತ್ತ ವರ್ಷಗಳಿಂದ ನಿಂತು ಅನಗತ್ಯವಾಗಿ ಸ್ಥಳಾಕ್ರಮಿಸಿಕೊಂಡಿದ್ದ 11,341 ವಾಹನಗಳ ಸ್ಥಳಾಂತರ ಕಾರ್ಯಕ್ಕೆ ಇಂದು ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರು ಜಯನಗರ ಪೊಲೀಸ್ ಠಾಣೆಯಿಂದ ಚಾಲನೆ ನೀಡಿದ್ದಾರೆ. ಇದರ ಜೊತೆಗೆ ಜಯನಗರ ಪೊಲೀಸ್ ಠಾಣೆ ಮುಂಭಾಗದಿಂದ ಸುಮಾರು 111 ಹಳೆ ವಾಹನಗಳನ್ನು ತೆರವುಗೊಳಿಸಿ ರಾಗಿಗುಡ್ಡದಲ್ಲಿ ಜಿಬಿಎ ನಿಗದಿಪಡಿಸಿರುವ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಸಿಂಗ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಶಾಸಕ ಸಿ.ಕೆ. ರಾಮಮೂರ್ತಿ, ಜಿಬಿಎ ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಹಾಗೂ ಇತರರು ಉಪಸ್ಥಿತರಿದ್ದರು. ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ನಮ್ಮ ಈ ಹೆಜ್ಜೆ.
​

ದಕ್ಷಿಣ ವಿಭಾಗದ ಬನಶಂಕರಿ ಠಾಣೆ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.  ​🔹 145 ಗ್ರ...
09/09/2026

ದಕ್ಷಿಣ ವಿಭಾಗದ ಬನಶಂಕರಿ ಠಾಣೆ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
​🔹 145 ಗ್ರಾಂ ಚಿನ್ನಾಭರಣ & 19 ಗ್ರಾಂ ಬೆಳ್ಳಿ
🔹 ₹26.15 ಲಕ್ಷ ನಗದು
🔹 12 ದ್ವಿಚಕ್ರ ವಾಹನಗಳು & 1 ಕಾರು
ಒಟ್ಟು ₹59.91 ಲಕ್ಷ ಮೌಲ್ಯದ ಸ್ವತ್ತು ಜಪ್ತಿ.
​ಉತ್ತಮ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆಗಳು.
​

ಮಾದಕ ವಸ್ತು ಜಾಲದ ವಿರುದ್ಧ ನಮ್ಮ ದಕ್ಷಿಣ ವಿಭಾಗದ ಪೊಲೀಸರ ಭರ್ಜರಿ ಬೇಟೆ!  ​ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಸುಮಾರು ₹18...
09/09/2026

ಮಾದಕ ವಸ್ತು ಜಾಲದ ವಿರುದ್ಧ ನಮ್ಮ ದಕ್ಷಿಣ ವಿಭಾಗದ ಪೊಲೀಸರ ಭರ್ಜರಿ ಬೇಟೆ!
​ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಸುಮಾರು ₹18.26 ಕೋಟಿ ಮೌಲ್ಯದ 9 ಕೆ.ಜಿ 127 ಗ್ರಾಂ M**A ಅನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿಯಿಂದ ತಂದು ನಗರದಲ್ಲಿ ಪೆಡ್ಲಿಂಗ್ ಮಾಡುತ್ತಿದ್ದ ಐವರಿ ಕೋಸ್ಟ್ ಮೂಲದ ವಿದೇಶಿ ಪ್ರಜೆಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
​ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಈ ಬೃಹತ್ ಜಾಲವನ್ನು ಪತ್ತೆಹಚ್ಚಿದ ನಮ್ಮ ಗಿರಿನಗರ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ಶ್ಲಾಘನೀಯ.
​ಮಾದಕ ಮುಕ್ತ ಬೆಂಗಳೂರಿಗಾಗಿ ನಮ್ಮ ಕಠಿಣ ಕ್ರಮಗಳು ಮುಂದುವರಿಯಲಿವೆ.
​

SMJ Group of Institutions ನ BBUL ಜೈನ್ ವಿದ್ಯಾಲಯ ಮತ್ತು CB ಭಂಡಾರಿ ಜೈನ್ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ 'ಬಿಯಾಂಡ್ ಬ್ಯಾಡ್ಜಸ್' (Be...
06/09/2026

SMJ Group of Institutions ನ BBUL ಜೈನ್ ವಿದ್ಯಾಲಯ ಮತ್ತು CB ಭಂಡಾರಿ ಜೈನ್ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ 'ಬಿಯಾಂಡ್ ಬ್ಯಾಡ್ಜಸ್' (Beyond Badges) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅತ್ಯಂತ ಸಂತಸ ತಂದಿತು.

​ಸಮಾಜದ ಶಾಂತಿ ಮತ್ತು ಭದ್ರತೆಗಾಗಿ ಹಗಲಿರುಳು ಶ್ರಮಿಸುವ ನಮ್ಮ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಗೌರವಿಸಿದ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇಂತಹ ಸನ್ಮಾನಗಳು ಕರ್ತವ್ಯನಿಷ್ಠೆಗೆ ಮತ್ತಷ್ಟು ಸ್ಫೂರ್ತಿ ನೀಡುತ್ತವೆ.
​

ದಿನಾಂಕ 04-09-2026 ರಂದು ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎಂ. ವಿ. ಶ್ರೀಶಾನಂದ ಅವರ ಉಪಸ್ಥಿತಿಯಲ್ಲಿ ಹಾಗೂ ಬೆಂಗಳೂರು ...
05/09/2026

ದಿನಾಂಕ 04-09-2026 ರಂದು ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎಂ. ವಿ. ಶ್ರೀಶಾನಂದ ಅವರ ಉಪಸ್ಥಿತಿಯಲ್ಲಿ ಹಾಗೂ ಬೆಂಗಳೂರು ನಗರ ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ ಸಿ. ವಂಶಿ ಕೃಷ್ಣ, ಐಪಿಎಸ್ ಅವರ ಸಮ್ಮುಖದಲ್ಲಿ ಆಯೋಜಿಸಲಾಗಿದ್ದ "Custodial Interrogation & Salient Features of Investigation" ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ.

​ತನಿಖೆಯ ಸೂಕ್ಷ್ಮತೆಗಳು ಹಾಗೂ ಕಾನೂನುಬದ್ಧ ವಿಚಾರಣಾ ಪ್ರಕ್ರಿಯೆಗಳ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳ ಮಾರ್ಗದರ್ಶನ ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅತ್ಯಂತ ಉಪಯುಕ್ತವಾಗಿತ್ತು. ವಿ.ವಿ. ಪುರಂ ಕಾನೂನು ಕಾಲೇಜು ಹಾಗೂ ಸಹಕರಿಸಿದ ಎಲ್ಲ ಅಧಿಕಾರಿಗಳಿಗೆ ಧನ್ಯವಾದಗಳು.
​

24/08/2026

ದಿನಾಂಕ 22-08-2026 ಬನಶಂಕರಿ ಪೋಲಿಸ್ ಠಾಣಾ ಸರಹದ್ದಿನಲ್ಲಿ ಆಗಸ್ಟ್ 2026 ರ ಮಾಸಿಕ #ಜನಸಂಪರ್ಕ ಸಭೆಯನ್ನು ಆಯೋಜಿಸಿ ಠಾಣಾ ಸರಹದ್ದಿನ ನಾಗರೀಕರ ಸಲಹೆ & ಸಮಸ್ಯೆಗಳನ್ನು ಇತರ ಇಲಾಖೆಗಳ & ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಆಲಿಸಿ, ಪರಿಹಾರೋಪಾಯಗಳನ್ನು ಚರ್ಚಿಸಿ ಕೈಗೊಳ್ಳುವ ಕ್ರಮದ ಬಗ್ಗೆ ಭರವಸೆಯನ್ನು ನೀಡಲಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಜಯನಗರ, ಬನಶಂಕರಿ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್, ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ಭಾಗವಹಿಸಿದ್ದರು

ದಿನಾಂಕ  22-08-2026 ಬನಶಂಕರಿ ಪೋಲಿಸ್ ಠಾಣಾ ಸರಹದ್ದಿನಲ್ಲಿ ಆಗಸ್ಟ್ 2026 ರ  ಮಾಸಿಕ  #ಜನಸಂಪರ್ಕ ಸಭೆಯನ್ನು ಆಯೋಜಿಸಿ ಠಾಣಾ ಸರಹದ್ದಿನ ನಾಗರೀ...
22/08/2026

ದಿನಾಂಕ 22-08-2026 ಬನಶಂಕರಿ ಪೋಲಿಸ್ ಠಾಣಾ ಸರಹದ್ದಿನಲ್ಲಿ ಆಗಸ್ಟ್ 2026 ರ ಮಾಸಿಕ #ಜನಸಂಪರ್ಕ ಸಭೆಯನ್ನು ಆಯೋಜಿಸಿ ಠಾಣಾ ಸರಹದ್ದಿನ ನಾಗರೀಕರ ಸಲಹೆ & ಸಮಸ್ಯೆಗಳನ್ನು ಇತರ ಇಲಾಖೆಗಳ & ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಆಲಿಸಿ, ಪರಿಹಾರೋಪಾಯಗಳನ್ನು ಚರ್ಚಿಸಿ ಕೈಗೊಳ್ಳುವ ಕ್ರಮದ ಬಗ್ಗೆ ಭರವಸೆಯನ್ನು ನೀಡಲಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಜಯನಗರ, ಬನಶಂಕರಿ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್, ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ಭಾಗವಹಿಸಿದ್ದರು

10/08/2026

ಗಿರಿನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ರಿಪಬ್ಲಿಕ್-ಆಪ್ ಐವರಿ ದೇಶದ ಪ್ರಜೆಯ ಬಂಧನ. ಆರೋಪಿಯಿಂದ ₹12 ಕೋಟಿ ಮೌಲ್ಯದ 5 ಕೆ.ಜಿ 179 ಗ್ರಾಂ ಎಂಡಿಎಂಎ (M**A) ವಶಪಡಿಸಿಕೊಳ್ಳಲಾಗಿದೆ.
​ಚೂಡಿದಾರ್ ಡ್ರೆಸ್ ಪೀಸ್‌ಗಳ ಒಳಗೆ ಮಾದಕ ವಸ್ತುವನ್ನು ಬಚ್ಚಿಟ್ಟು ದೆಹಲಿಯಿಂದ ತರಿಸಿ ಸ್ಥಳೀಯ ಪೆಡ್ಲರ್‌ಗಳಿಗೆ ಸರಬರಾಜು ಮಾಡುತ್ತಿದ್ದ ಜಾಲವನ್ನು ನಮ್ಮ ತಂಡ ಬೇಧಿಸಿದೆ.
​ಈ ಕಾರ್ಯಾಚರಣೆ ನಡೆಸಿದ ವಿ.ವಿ.ಪುರಂ ಉಪ-ವಿಭಾಗದ ಎ.ಸಿ.ಪಿ, ಗಿರಿನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಗಳು.
​ BENGALURU CITY POLICE

Address

TeeNamShree Circle(South End Circle), Jayanagara
Bangalore
560004

Website

Alerts

Be the first to know and let us send you an email when DCP SOUTH BCP posts news and promotions. Your email address will not be used for any other purpose, and you can unsubscribe at any time.

Contact The Organization

Send a message to DCP SOUTH BCP:

Shortcuts

Share