Bandepalya PS BCP

Bandepalya PS BCP Bandepalya PS
Phone No-08022942236

14/06/2026
2026ನೇ ಸಾಲಿನ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡೇಪಾಳ್ಯ ಊರ ಹಬ್ಬದ ಪಲ್ಲಕ್ಕಿ ಉತ್ಸವದ ಅಂಗವಾಗಿ ವಿಶೇಷ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋ...
13/06/2026

2026ನೇ ಸಾಲಿನ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡೇಪಾಳ್ಯ ಊರ ಹಬ್ಬದ ಪಲ್ಲಕ್ಕಿ ಉತ್ಸವದ ಅಂಗವಾಗಿ ವಿಶೇಷ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಅಧಿಕಾರಿ ಹಾಗೂ ಸಿಬ್ಬಂದಿಗಳ ಹಾಜರಾತಿ ಪಡೆದು, ಕರ್ತವ್ಯವನ್ನು ಜಾಗರೂಕತೆಯಿಂದ ಹಾಗೂ ಶಿಸ್ತುಬದ್ಧವಾಗಿ ನಿರ್ವಹಿಸುವ ಕುರಿತು ಅಗತ್ಯ ಸೂಚನೆಗಳು ಮತ್ತು ಮಾರ್ಗದರ್ಶನ ನೀಡಲಾಯಿತು. DCP Electronic City BCP Karnataka State Police BENGALURU CITY POLICE

12/06/2026

ಇಂದು ಸೆಂಟ್ ಜಾನ್ಸ್ ಆಡಿಟೋರಿಯಂನಲ್ಲಿ ಪೋಕ್ಸೋ (POCSO) ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯೋಜಿಸಲಾದ ಕಾರ್ಯಾಗಾರದಲ್ಲಿ ಬಂಡೇಪಾಳ್ಯ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ಸುರಕ್ಷತೆ, ಮಕ್ಕಳ ಹಕ್ಕುಗಳು ಹಾಗೂ ಪೋಕ್ಸೋ ಕಾಯ್ದೆಯ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. DCP Electronic City BCP BENGALURU CITY POLICE Karnataka State Police

"Stop Child Labour, Start Child Education." DCP Electronic City BCP ACP Electronic City Sub division BCP
12/06/2026

"Stop Child Labour, Start Child Education." DCP Electronic City BCP ACP Electronic City Sub division BCP

ಮೋಹನ್ ಕುಮಾರ್ ರವರು Pai Showroom ಹತ್ತಿರ ಸುಮಾರು ₹57,000/- ಮೌಲ್ಯದ Samsung A57 ಮೊಬೈಲ್ ಕಳೆದುಕೊಂಡಿದ್ದು, 112 ಸಹಾಯವಾಣಿಗೆ ಕರೆ ಮಾಡಿ...
10/06/2026

ಮೋಹನ್ ಕುಮಾರ್ ರವರು Pai Showroom ಹತ್ತಿರ ಸುಮಾರು ₹57,000/- ಮೌಲ್ಯದ Samsung A57 ಮೊಬೈಲ್ ಕಳೆದುಕೊಂಡಿದ್ದು, 112 ಸಹಾಯವಾಣಿಗೆ ಕರೆ ಮಾಡಿದರು. ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಹೊಯ್ಸಳ-217 ಉಸ್ತುವಾರಿ ಅಧಿಕಾರಿಗಳಾದ ಶ್ರೀ ಶ್ರೀನಿವಾಸ್ D.H. ರವರು ಸುತ್ತಮುತ್ತಲಿನ CCTV ದೃಶ್ಯಾವಳಿಗಳನ್ನು ಪರಿಶೀಲಿಸಿ ಮೊಬೈಲ್ ಅನ್ನು ಪತ್ತೆ ಹಚ್ಚಿ, ವಾರಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದರು. DCP Electronic City BCP BENGALURU CITY POLICE

ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್ ಅನ್ನು ಸಾರ್ವಜನಿಕರು ನೀಡಿದ ದೂರನ್ನು ಸ್ವೀಕರಿಸಿ ksp app (E-Lost) ...
10/06/2026

ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್ ಅನ್ನು ಸಾರ್ವಜನಿಕರು ನೀಡಿದ ದೂರನ್ನು ಸ್ವೀಕರಿಸಿ ksp app (E-Lost) CEIR ಪೋರ್ಟಲ್ ನಲ್ಲಿ ದೂರು ದಾಖಲಿಸಲಾಗಿತ್ತು, ಈ ದಿನ ಪತ್ತೆಯಾದ ಮೊಬೈಲ್ ಅನ್ನು ಠಾಣೆಯಲ್ಲಿ ಸಂಬಂಧ ಪಟ್ಟ ವಾರಸುದಾರರಿಗೆ ಹಿಂತಿರುಗಿಸಲಾಯಿತು. DCP Electronic City BCP ACP Electronic City Sub division BCP

09/06/2026

ಈ ದಿನ ಶ್ರೀ ನಾರಾಯಣ್ ಎಂ. IPS, ಡಿಸಿಪಿ ಇ-ಸಿಟಿ ವಿಭಾಗ ರವರು ಬಂಡೇಪಾಳ್ಯ ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ ನಡೆಸಿದರು. ಪರಿವೀಕ್ಷಣೆ ಬಳಿಕ ಠಾಣೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದರು DCP Electronic City BCP BENGALURU CITY POLICE Karnataka State Police

09/06/2026

“ನಾಗರಿಕರ ಸುರಕ್ಷತೆ
ನಮ್ಮ ಪ್ರಥಮ ಆದ್ಯತೆ”

ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು‌ ನೆಮ್ಮದಿಯ ವಾತಾವರಣವನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಗುರಿಯಾಗಿದ್ದು, ರಾಜ್ಯದ ಇತಿಹಾಸದಲ್ಲೆ ನಾವೊಂದು ವಿನೂತನ ಹಾಗೂ ದಿಟ್ಟ ಹೆಜ್ಜೆಯನ್ನು ಇರಿಸಿದ್ದೇವೆ.

ರೌಡಿ ಗ್ಯಾಂಗ್‌ಗಳು, ಹ್ಯಾಬಿಚ್ಯುಯಲ್ ಅಫೆಂಡರ್ಸ್‌ಗಳ ಮೇಲೆ ನಿರಂತರ ನಿಗಾ ಇಡಲು ಪ್ರತಿ ಪೊಲೀಸ್ ವೃತ್ತದಲ್ಲೂ ವಿಶೇಷ ರೌಡಿ ನಿಗ್ರಹ ಪಡೆ ಇನ್ನು ಮುಂದೆ ಕಾರ್ಯಾಚರಣೆ ನಡೆಸಲಿದೆ. ಬೆದರಿಕೆ, ದೌರ್ಜನ್ಯ, ಸುಲಿಗೆ ಮತ್ತು ಬಲವಂತದಿಂದ ಹಣ ವಸೂಲಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಿದೆ. ಇಂತಹ ಸಮಾಜ ವಿರೋಧಿ, ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಶೂನ್ಯ ಸಂವೇದನಾ ನೀತಿ ನಮ್ಮದಾಗಿದ್ದು, ರೌಡಿಸಂ ಅನ್ನು ಬೇರುಸಹಿತ ಕಿತ್ತಸೆದು ನಾಡನ್ನು ಶಾಂತಿಯ ತೋಟವಾಗಿಸಲು ನಾವು ಕಟಿಬದ್ಧರಾಗಿದ್ದೇವೆ.

ಸುರಕ್ಷಿತ ಸಮಾಜ ನಿರ್ಮಾಣದ ಸಂಕಲ್ಪ ನಮ್ಮದು, ಇದಕ್ಕೆ ನಿಮ್ಮೆಲ್ಲರ ಸಹಕಾರವೂ ಇರಲಿ.

- ಮುಖ್ಯಮಂತ್ರಿ ಶ್ರೀ DK Shivakumar

Address

Bandepalya PS
Bangalore
560068

Website

Alerts

Be the first to know and let us send you an email when Bandepalya PS BCP posts news and promotions. Your email address will not be used for any other purpose, and you can unsubscribe at any time.

Share