11/05/2020
ಆತ್ಮೀಯ...ನನ್ನ ಮಲೆನಾಡಿಗರೆ..ಕರೊನಾ ಎಂಬಾ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿದೆ. ಅದರಲ್ಲಿ ನಮ್ಮ ಮಲೆನಾಡು ಹೊರತಾಗಿಲ್ಲ. ಹಾಗೇ ನಮಗೆ ಉದ್ಯೋಗದ ನೆಲೆಯಾಗಿದ್ದ ಬೆಂಗಳೂರು ಕೂಡ ನಿಬ್ಬೆರಗಾಗಿದೆ. ಗೆಳೆಯರೇ ದೇಶದಲ್ಲಿ ಯಾವುದೇ ಪ್ರಾಕೃತಿಕ ವಿಕೋಪ ಸೇರಿದಂತೆ ಯಾವುದೇ ಹಾನಿಯಾದರು ಬೆಂಗಳೂರಿಗರು ತಕ್ಷಣ ಸಹಾಯಕ್ಕೆ ಬರುತ್ತಿದ್ದರು. ಅದೂ ನಿಮಗೂ ಗೊತ್ತಿದೆ. ಈಗ ದೇಶವೇ ಲಾಕ್ ಡೌನ್ ಆಗಿ ಕಷ್ಟ ಎದುರಿಸುತ್ತಿದೆ. ಹಿಂದೆ ಹಿಂದಿನ ವರ್ಷ ಅತಿಯಾದ ಮಳೆಯಿಂದ ರಾಜ್ಯವೆಲ್ಲ ಕಷ್ಟದಲ್ಲಿ ಇದ್ದಾಗ ಇದೆ ಬೆಂಗಳೂರಿನ ಸಹೃದಯರು ನಿಮ್ಮ ಸಹಾಯಕ್ಕೆ ಬಂದಿದ್ದರು. ಬರೀ ನಮ್ಮ ಮಲೆನಾಡಿಗಲ್ಲ ಇಡೀ ಕರ್ನಾಟಕಕ್ಕೆ ತಮ್ಮ ಕೈಲಾದ ಸಹಾಯ ಮಾಡಿದ್ರು.ಕೆಲವರ ಭಾವನೆಯಲ್ಲಿರುವಂತೆ ಬೆಂಗಳೂರಿನ ಎಲ್ಲರೂ ಶ್ರೀಮಂತರಲ್ಲ,ಅತೀ ಬಡವರು ಇದ್ದಾರೆ.ಆದಿನ ನಾನು ಮಲೆನಾಡಿಗರಿಗೆ ಸಹಾಯ ಹಸ್ತ ಚಾಚಿದಾಗ ಕೇವಲ 2 ದಿನದಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಮೊತ್ತದ ಆಹಾರ ಸಾಮಾಗ್ರಿ, ಬಟ್ಟೆ,ಔಷಧಿ,ಮುಂತಾದವನ್ನು ಹಿಂದೆ ಮುಂದೆ ಯೋಚಿಸದೆ ನನ್ನ ಕಚೇರಿ ಮುಂದೆ ತಂದಿಟ್ಟರು. ತಂದವರು ಯಾರು ಶ್ರೀಮಂತರಲ್ಲ, ಹೃದಯ ಶ್ರೀಮತಿಕೆ ಇರುವ ತಳ್ಳುವಗಾಡಿಯಲ್ಲಿ ಹಣ್ಣು,ತರಕಾರಿ ಮಾರುವವರು, ಟ್ರೈಲರ್, ಅಂಗವಿಕಲರು, ಆಟೋ,ಟೆಂಪೋಚಾಲಕರು, ಗಾರೆ ಕೆಲಸದವರು, ಹಾಲು,ಪೇಪರ್ ಹಾಕುವವರು. ಟಿ ಅಂಗಡಿಯವರು, ಹೂ ಕಟ್ಟಿ ಮಾರುವವರು, ಹೀಗೆ...ಹಲವಾರು ತಂದೆ ತಾಯಂದಿರು ಕೈಯಲಾದಷ್ಟು ನೀಡಿದರು. ಮಲೆನಾಡಿಗರೆ.. ಈಗ ಈಗ ಅದೇ ತಂದೆ ತಾಯಂದಿರು ಊಟಕ್ಕೆ ಒದ್ದಾಡುತ್ತಿದ್ದಾರೆ. ಲಾಕ್ ಡೌನ್ ನಿಂದ ನಿಮಗೂ ತೊಂದರೆ ಆಗಿದೆ ಆದ್ರೆ ಊಟಕ್ಕೆ ಆಗುವಷ್ಟು ಭತ್ತ ತರಕಾರಿ,ಬೆಳೆದಿರುತ್ತೇವೆ. ಬೆಂಗಳೂರಿನ ಪರಿಸ್ಥಿತಿ ಹ್ಯಾಗಿದೆ ಅಂದ್ರೆ ಜನರ ಜೀವನ ಮೂರಬಟ್ಟೆ ಆಗಿದೆ.ಮನೆಗಳ ಬಾಡಿಗೆ ಕಟ್ಟದಿದ್ರೆ ಮಾಲೀಕರು ಬಿಡುತ್ತಿಲ್ಲ, ಕರೆಂಟ್ ನೀರಿನ ಬಿಲ್ ನಿಲ್ಲುತ್ತಿಲ್ಲ, ಸಾಲಗಾರರ ಕಾಟ ತಪ್ಪುತ್ತಿಲ್ಲ, ಸರ್ಕಾರಗಳು ಕೊಡುವ ಭರವಸೆಗಳು ಮೂಗಿಗೆ ತುಪ್ಪ ಸವರಿದಂತೆ ಇದೆ ಅಷ್ಟೇ. ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದೆ ಕೆಲವು ಸಂಘ ಸಂಸ್ಥೆಯವರು ಕೊಡುವ ಆಹಾರ ಪದಾರ್ಥಗಳನ್ನು ನೋಡುವ ಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನ ಗೆಳೆಯರೇ ಬೆಂಗಳೂರಿನಲ್ಲಿ ಮಲೆನಾಡಿನ ಹತ್ತಾರು ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಪ್ರತಿಯೊಬ್ಬರು ಮಲೆನಾಡಿಗರೆ ಇದ್ದಾರೆ. ಅವರು ಕಷ್ಟದಲಿದ್ದಾರೆ, ಹಾಗೇ ಹಿಂದೆ ಸಹಾಯ ಮಾಡಿದ ಬೆಂಗಳೂರಿನ ಜನ ಯಾರಿಗೆ ಎಂದು ಯೋಚನೆ ಮಾಡದೆ ನೀಡಿದ್ದರು.ಈಗ ಇಲ್ಲಿರುವ ನಿಮ್ಮ ಸ್ನೇಹಿತರ ಕಷ್ಟಕ್ಕೆ ನೀವು ಸ್ಪಂದಿಸಬಹುದೇ? ಅವರಿಗೆ ನಿಮ್ಮ ಯಾವುದೇ ಬಟ್ಟೆ ಔಷಧಿ, ಹಣದ ಅವಶ್ಯಕತೆ ಇಲ್ಲ. ಅವರಿಗೆ ದಿನಸಿ ತರಕಾರಿಗಳು ಬೇಕಾಗಿವೆ. ಅವರು ಹಿಂದೆ ನೀಡಿದ ಸಹಾಯಕ್ಕೆ ಪ್ರತಿಫಲ ಕೇಳುತ್ತಿಲ್ಲ. ಹಿಂದೆ ಕೊಟ್ಟವರು ಗೊತ್ತಿಲ್ಲ.. ತೆಗೆದುಕೊಂಡವರು ಗೊತ್ತಿಲ್ಲ.. ನಾವು ಸೇತುವೆಯಷ್ಟೇ.ನಾವು ನಮ್ಮ ಬೆಂಗಳೂರಿನ ಗೆಳೆಯರೊಂದಿಗೆ ಕೊಪ್ಪದ ಗೆಳೆಯರನ್ನು ಸೇರಿಸಿಕೊಂಡು ಖಾಂಡ್ಯ, ಬಾಳೆಹೊನ್ನೂರು ಮಾಗುಂಡಿ, ಕಳಸ, ಪ್ರದೇಶದಲ್ಲಿ ನಾವೇ ನಿಂತು ಸಾಮಾಗ್ರಿ ವಿತರಿಸಿದ್ದೆವು.. ಈಗ ನಮ್ಮ ಮಲೆನಾಡಿಗರ ಸರದಿ.. ನನ್ನ ಈ ಯೋಚನೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ... ಕರೆ ಮಾಡಿ..ಪ್ರವೀಣ್. ಅಧ್ಯಕ್ಷ ಆಸರೆ ಸಮಾಜ ಸೇವಾ ಟ್ರಸ್ಟ್. ಅಧ್ಯಕ್ಷ ವಿಶ್ವ ಒಕ್ಕಲಿಗರ ಮಹಾವೇದಿಕೆ ಬಸವನಗುಡಿ.ಬೆಂಗಳೂರು.9036588017